Search
  • Follow NativePlanet
Share
» »ವಿಶ್ವದ ಅತ್ಯಂತ ಸುಂದರ ಪರ್ವತ ಪಟ್ಟಣಗಳು

ವಿಶ್ವದ ಅತ್ಯಂತ ಸುಂದರ ಪರ್ವತ ಪಟ್ಟಣಗಳು

ಪರ್ವತಗಳನ್ನು ಹೊಂದಿರುವ ವಿಶ್ವದ ಅತ್ಯಂತ ಸುಂದರ ನಗರಗಳು

ವಿಶ್ವದ ಅತ್ಯಂತ ಪರ್ವತ ಪಟ್ಟಣಗಳು ವಿಭಿನ್ನವಾದ ಸ್ಥಳಗಳನ್ನು ಇಷ್ಟ ಪಡುವವರಿಗೆ ಆಫ್ಬೀಟ್ ತಾಣಗಳಾಗಿದ್ದರೆ ಇನ್ನು ಕೆಲವರಿಗೆ ಈ ಸ್ಥಳಗಳು ಸ್ವರ್ಗ ಸದೃಶದಂತೆ ಕಾಣುತ್ತವೆ. ಇಂತಹ ಪರ್ವತಗಳಿರುವ ಹಳ್ಳಿಗಳ ಪ್ರದೇಶಗಳು ಶತಮಾನಗಳಿಂದಲೂ ಸಂರಕ್ಷಿಸಲಾಗಿದೆ ಮತ್ತು ನಿರ್ವಹಿಸುತ್ತಾ ಬಂದಿದ್ದಾರೆ. ಸುಂದರ ಪರ್ವತಗಳು, ಹಸಿರು ಕಣಿವೆಗಳು ಮತ್ತು ಸ್ಪಟಿಕ ಸ್ಪಷ್ಟವಾದ ನೀರಿನ ನೋಟಗಳು ಯಾರಿಗಾದರೂ ಕನಸಿನ ಲೋಕದಲ್ಲಿರುವಂತೆ ಕಲ್ಪನೆ ಮೂಡಿಸಲು ಸಾಕಾಗುತ್ತದೆ.

ಪರ್ವತದ ಆತ್ಮವು ಒಂದೇ ನೆಲದ ಮೇಲೆ ನೆಲೆಗೊಳ್ಳಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ! ಅದಕ್ಕಾಗಿಯೇ ಪ್ರಪಂಚದಾದ್ಯಂತದ ಅತ್ಯಂತ ಸುಂದರವಾದ ಪರ್ವತ ಪಟ್ಟಣಗಳ ಪಟ್ಟಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.

ಬ್ಯಾನ್ಫ್, ಕೆನಡಾ

ಬ್ಯಾನ್ಫ್, ಕೆನಡಾ

ಬ್ಯಾನ್ಫ್ ಕೆನಡಾದ ಅಲ್ಬರ್ಟಾದಲ್ಲಿರುವ ಒಂದು ಪಟ್ಟಣವಾಗಿದ್ದು ಇದು ಬ್ಯಾನ್ಫ್ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಸಿದೆ. ಇದು ಮೌಂಟ್ ರುಂಡಲ್ ನ ನೆಲೆಯಾಗಿದ್ದು ಇದು ಸಮುದ್ರ ಮಟ್ಟದಿದ ಸುಮಾರು 2,948 ಮೀಟರ್ ಎತ್ತರದಲ್ಲಿದ್ದು 2,998 ಮೀ ಎತ್ತರಕ್ಕೆ ಏರುವ ಮೌಂಟ್ ಕ್ಯಾಸ್ಕೇಡ್ ಅನ್ನು ಹೊಂದಿದೆ. ಈ ರಮಣೀಯ ಪಟ್ಟಣವು ಕೆನಡಾದ ಅತ್ಯಂತ ಪ್ರಸಿದ್ಧವಾದ ಸ್ಕೀ ರೆಸಾರ್ಟ್ ಪಟ್ಟಣಗಳಲ್ಲಿ ಒಂದಾಗಿರುತ್ತದೆ ಅದು, ಹಿಮದಿಂದ ಆವೃತವಾಗಿರಬಹುದು ಅಥವಾ ಆ ಸ್ಮರಣೀಯ ಪ್ರವಾಸವನ್ನು ನೀಡಲು ಸುತ್ತಮುತ್ತಲಿನ ಹಚ್ಚ ಹಸಿರಿನ ಸಮ್ಮೋಹನಗೊಳಿಸುವ ಪರಿಸರವಾಗಿರಬಹುದು ಒಟ್ಟಾಗಿ, ಇದು ವರ್ಷವಿಡೀ ಈ ಸ್ಥಳವನ್ನು ಸುಂದರವಾಗಿಡುತ್ತಾ ಅವಿಸ್ಮರಣೀಯ ಪ್ರವಾಸದ ಅನುಭವವನ್ನು ನೀಡುತ್ತದೆ.

ಇನ್ಸ್‌ಬ್ರಕ್, ಆಸ್ಟ್ರಿಯಾ

ಇನ್ಸ್‌ಬ್ರಕ್, ಆಸ್ಟ್ರಿಯಾ

ಇನ್ಸಬ್ರಕ್ ಆಸ್ಟ್ರಿಯಾದ ಟೈರೋಲ್ ನ ಒಂದು ಪಟ್ಟಣವಾಗಿದ್ದು ಇಂದು ಇದು ವಿಶ್ವದ ಹೆಸರಾಂತ ಕ್ರೀಡಾ ಕೇಂದ್ರವಾಗಿದೆ. ಇಂದು ಈ ಸ್ಥಳವು ಸ್ಕಿಯಿಂಗ್ ಸೌಲಭ್ಯಗಳು ಮತ್ತು ವರ್ಷವಿಡೀ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಜಗತ್ತಿನ ಅತ್ಯುತ್ತಮ ಹಾಗೂ ಹೆಮ್ಮೆಯ ಚಳಿಗಾಲದ ಕ್ರೀಡಾ ಕೇಂದ್ರವೆನಿಸಿದೆ. ಕಾರ್ವೆಂಡಾಲ್ ಆಲ್ಪ್ಸ್‌ನಲ್ಲಿ ಉತ್ತರ ಸರಪಳಿಯೊಂದಿಗೆ, ಇದು ವಿಶ್ವದ ಅತ್ಯಂತ ಸುಂದರವಾದ ಪರ್ವತ ಪಟ್ಟಣಗಳ ಪಟ್ಟಿಯಲ್ಲಿದೆ ಏಕೆಂದರೆ, ಇಲ್ಲಿ ಕಾರ್ವೆಂಡಾಲ್ ಆಲ್ಪ್ಸ್ ಉತ್ತರದ ಲೈಮ್ ಸ್ಟೋನ್ ಆಲ್ಪ್ಸ್‌ನ ಅತಿದೊಡ್ಡ ಪರ್ವತ ಶ್ರೇಣಿಯಾಗಿದೆ. ಆ ಸುಂದರ ವರ್ಣರಂಜಿತ ಕಟ್ಟಡಗಳನ್ನು ವೀಕ್ಷಿಸಲು ಮರೆಯಬೇಡಿ.

ಶಿರಕಾವಾ-ಗೋ, ಜಪಾನ್

ಶಿರಕಾವಾ-ಗೋ, ಜಪಾನ್

ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವ ಶಿರಕಾವಾ - ಗೋ ಜಪಾನಿನ ಗಿಫು ಪ್ರಿಫೆಕ್ಚರ್‌ನ ಓನೋ ಜಿಲ್ಲೆಯಲ್ಲಿದೆ. ಜಪಾನಿಗಳ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯಾದ ಗ್ಯಾಸ್ಷೋ-ಜುಕುರಿ ಎಂದು ಕರೆಯಲ್ಪಡುವ ಪ್ರಸಿದ್ದ ಕಟ್ಟಡ ಶೈಲಿಯನ್ನು ಇದು ಪ್ರದರ್ಶಿಸುತ್ತದೆ. ಹಾಗೂ ಇದನ್ನು ಹಲವಾರು ಕಟ್ಟಡಗಳಲ್ಲಿಯೂ ಕಾಣಬಹುದಾಗಿದೆ. ಜನರು ಶಾಂತಿಗಾಗಿ ಪರ್ವತ ಪ್ರದೇಶಗಳನ್ನೇ ಏಕೆ ಹುಡುಕುತ್ತಾರೆ ಎಂಬುದಕ್ಕೆ ಈ ಸ್ಥಳವು ಒಂದು ಉತ್ತಮ ಉದಾಹರಣೆಯಾಗಿದೆ. ಆದ್ದರಿಂದ ನೀವು ನಗರದ ಸದ್ದು ಗದ್ದಲ ಹಾಗೂ ಸದಾನಿರತ ಜೀವನ ಶೈಲಿಯಿಂದ ಬೇಸತ್ತು ಇವೆಲ್ಲವುಗಳಿಂದ ದೂರವಿರಲು ಬಯಸುವಿರಾದಲ್ಲಿ ಶಿರಕಾವ ಗೋ ಒಂದು ಪರಿಪೂರ್ಣ ಸ್ಥಳವಾಗಿದೆ.

ಶ್ರೀನಗರ, ಭಾರತ

ಶ್ರೀನಗರ, ಭಾರತ

ಶ್ರೀನಗರವು ಭಾರತದ ಜಮ್ಮು ಕಾಶ್ಮೀರದಲ್ಲಿರುವ ಒಂದು ಬೇಸಿಗೆಯ ತಾಣವಾಗಿದೆ. ದಾಲ್ ಸರೋವರದ ದಡದಲ್ಲಿರುವ ಶ್ರೀನಗರವು ಏಷ್ಯಾ ಖಂಡದ ಅತ್ಯಂತ ಸುಂದರ ಗಿರಿಧಾಮಗಳಲ್ಲೊಂದೆನಿಸಿದೆ. ಈ ನಗರವು ಅದರ ಸೌಂದರ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕಾಗಿ ಪ್ರಸಿದ್ದಿಯನ್ನು ಪಡೆದಿದೆ. ಮತ್ತು ಈ ಪಟ್ಟಣವು ಪರ್ವತಗಳು ಮತ್ತು ಸರೋವರಗಳಿಂದ ಆವರಿಸಲ್ಪಟ್ಟಿದ್ದು, ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ. ಆದುದರಿಂದ ಭಾರತದಲ್ಲಿರುವಾಗ ಶ್ರೀನಗರವು ಒಂದು ನೋಡಲೇ ಬೇಕೆನ್ನುವಂತಹ ಸ್ಥಳವಾಗಿದೆ.

ಜಿಸ್ಟಾಡ್, ಸ್ವಿಟ್ಜರ್ಲೆಂಡ್

ಜಿಸ್ಟಾಡ್, ಸ್ವಿಟ್ಜರ್ಲೆಂಡ್

ಜಿಸ್ಟಾಡ್ ಬರ್ನೀಸ್ ಹೈಲ್ಯಾಂಡ್ಸ್‌ನಲ್ಲಿರುವ ಒಂದು ಸಣ್ಣ ಆಲ್ಪೈನ್ ಪಟ್ಟಣವಾಗಿದೆ.ಈ ಪಟ್ಟಣವು ಐಷಾರಮಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ಇಲ್ಲಿಯ ಸುಂದರ ಪರ್ವತಗಳು ಮತ್ತು ನಂಬಲಸಾಧ್ಯವಾದ ಸುಂದರವಾದ ಶಿಖರಗಳು, ಸ್ಕಿಯಿಂಗ್ ಮತ್ತು ಹೈಕಿಂಗ್ ಮಾರ್ಗಗಗಳಿಗಾಗಿ ಪ್ರಸಿದ್ದಿಯನ್ನು ಪಡೆದಿದೆ. ಜೊಸ್ಟಾಡ್ ಜಗತ್ತಿನಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಏಕೆಂದರೆ ಇದು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಭೇಟಿ ನೀಡುವ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ ಹಾಗೂ ಇಲ್ಲಿ ಸ್ಪಾ ಚಿಕಿತ್ಸೆಗಳಿಂದ ಹಿಡಿದು ಊಟದವರೆಗೆ ಎಲ್ಲವನ್ನೂ ಒದಗಿಸುವ ಅತಿರಂಜಿತ ಐಷಾರಾಮಿ ಹೋಟೆಲ್‌ಗಳು ಮತ್ತು ಸ್ಕೀ ರೆಸಾರ್ಟ್‌ಗಳಿಗೆ ಹೆಸರುವಾಸಿಯಾಗಿದೆ.

ಜಿಸ್ಟಾಡ್ ಅನ್ನು ವಿಶ್ವದ ಅತ್ಯಂತ ಸುಂದರವಾದ ಪರ್ವತ ಪಟ್ಟಣಗಳಲ್ಲಿ ಒಂದೆಂದು ಪರಿಗಣಿಸಲು ಹಲವು ಕಾರಣಗಳಿವೆ - ಅದರ ಸುಂದರವಾದ ಪರ್ವತ ವೀಕ್ಷಣೆಗಳಿಂದ ಹಿಡಿದು ಅದರ ಪ್ರಭಾವಶಾಲಿ ವಾಸ್ತುಶಿಲ್ಪದವರೆಗೆ, ಈ ಸ್ಥಳವು ಎಲ್ಲರಿಗೂ ಬೇಕಾದದನ್ನು ಒದಗಿಸುತ್ತದೆ!

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+