Search
  • Follow NativePlanet
Share
» »ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?

ವಿನಾಯಕ ಅಲ್ಲ ವಿನಾಯಕಿ, ಇಲ್ಲಿನ ಹೆಣ್ಣು ಗಣೇಶನನ್ನು ನೋಡಿದ್ದೀರಾ?

ಗಣೇಶನ ಹೆಣ್ಣಿನ ರೂಪವನ್ನು ಯಾವತ್ತಾದರೂ ನೋಡಿದ್ದೀರಾ? ಈ ವಿನಾಯಕನನ್ನು ವಿನಾಯಕಿ ಎಂದು ಕರೆಯಲಾಗುತ್ತದೆ. ಇಲ್ಲಿ ಗಣೇಶ ಅಲ್ಲ ಗಣೇಶನಿ ಎನ್ನಲಾಗುತ್ತದೆ. ಅಂತಹದ್ದೊಂದು ದೇವಸ್ಥಾನ ತಮಿಳುನಾಡಿನಲ್ಲಿದೆ.

ಎಲ್ಲಿದೆ ಆ ದೇವಸ್ಥಾನ ?

ಎಲ್ಲಿದೆ ಆ ದೇವಸ್ಥಾನ ?

PC: Ssriram mt

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸುಚಿಂದ್ರಂನಲ್ಲಿರುವ ಸ್ತುನುಮಲಯನ್ ದೇವಾಲಯ ಎಂದೂ ಕರೆಯಲ್ಪಡುವ ತನುಮಲಯನ್ ದೇವಾಲಯವು ಒಂದು ಪ್ರಮುಖ ಹಿಂದೂ ದೇವಾಲಯವಾಗಿದೆ.

ತನುಮಲಯನ್ ದೇವಾಲಯ

ತನುಮಲಯನ್ ದೇವಾಲಯ

PC:Ssriram mt

ಕನ್ಯಾಕುಮಾರಿ ಜಿಲ್ಲೆಯ ತನುಮಲಯನ್ ದೇವಾಲಯದದಲ್ಲಿ ಈ ವಿನಾಯಕಿಯನ್ನು ನೀವು ನೋಡಬಹುದು. ಸುಖಸಾನದಲ್ಲಿ ಕುಳಿತಿರುವ ಅಡ್ಡ-ಕಾಲಿನ, ತೆಳ್ಳಗಿನ, ನಾಲ್ಕು ಕೈಗಳನ್ನು ಹೊಂದಿದ್ದು, ತನ್ನ ಮೇಲಿನ ಎಡಗೈಯಲ್ಲಿ ಯುದ್ಧ-ಕೊಡಲಿ ಮತ್ತು ಕೆಳಗಿನ ಎಡಗೈಯಲ್ಲಿ ಒಂದು ಶಂಖವನ್ನು ಹೊಂದಿದ್ದಾಳೆ. . ಇದು ಹೆಣ್ಣು ಆನೆ-ತಲೆಯ ದೇವತೆ, ವಿನಾಯಕಿ ಅಥವಾ ಗಣೇಶಿನಿ. ಗಣೇಶನಿ ಬಗ್ಗೆ ಹಿಂದೂ ಪುರಾಣದಲ್ಲಿ ಹೆಚ್ಚಿಗೆ ತಿಳಿಸಲಾಗಿಲ್ಲ.

ದಂತಕಥೆ

ದಂತಕಥೆ

PC:Ssriram mt

ಹಿಂದೂ ಪೌರಾಣಿಕ ದಂತಕಥೆಯ ಪ್ರಕಾರ ದೇವತೆಗಳ ರಾಜ ಇಂದ್ರನು ತನುಮಲಯನ್ ದೇವಾಲಯದ ಮುಖ್ಯ ಲಿಂಗ ಸ್ಥಳದಲ್ಲಿ ಶಾಪದಿಂದ ಬಿಡುಗಡೆಗೊಂಡನು. ಸುಚಿಂದ್ರಂನಲ್ಲಿರುವ ಈ ದೇವಾಲಯಕ್ಕೆ ಪ್ರತಿದಿನ ಮಧ್ಯರಾತ್ರಿಯಂದು "ಅರ್ಧಾಜಮ ಪೂಜೆ" ನಿರ್ವಹಿಸಲು ಇಂದ್ರನು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದನು ಎನ್ನಲಾಗುತ್ತದೆ.

17 ನೇ ಶತಮಾನದ ದೇವಸ್ಥಾನ

17 ನೇ ಶತಮಾನದ ದೇವಸ್ಥಾನ

PC:Sbgoplek

ಈ 17 ನೇ ಶತಮಾನದ ದೇವಸ್ಥಾನವು ವಾಸ್ತುಶಿಲ್ಪದ ವೈಭವದಿಂದ ಪ್ರಸಿದ್ಧವಾಗಿದೆ. ಏಳು ಅಂತಸ್ತಿನ ಬಿಳಿ ಗೋಪುರವು ದೂರದಿಂದ ಕಾಣುತ್ತದೆ. ಇದರ 40 ಮೀ ಮುಂಭಾಗವು ಅನೇಕ ಹಿಂದೂ ದೇವತೆಗಳ ಶಿಲ್ಪಗಳೊಂದಿಗೆ ಮುಚ್ಚಲ್ಪಟ್ಟಿದೆ .

ಸಂಗೀತ ಕಂಬಗಳು

ಸಂಗೀತ ಕಂಬಗಳು

PC:Ssriram mt

ಈ ದೇವಾಲಯವು ವಾಸ್ತುಶಿಲ್ಪ ಹಾಗೂ ಕಲ್ಲಿನ ಕೆಲಸದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಒಂದೇ ಕಲ್ಲಿನಿಂದ ಕೆತ್ತಲಾದ ನಾಲ್ಕು ಸಂಗೀತ ಕಂಬಗಳು ಇಲ್ಲಿವೆ ಮತ್ತು ಇದು 18 ಅಡಿ (5.5 ಮೀ) ಎತ್ತರದಲ್ಲಿದೆ. ಇವುಗಳು ದೇವಾಲಯದ ಮೈದಾನದ ವಾಸ್ತುಶಿಲ್ಪ ಮತ್ತು ವಿನ್ಯಾಸದ ಪ್ರಮುಖ ಅಂಶಗಳಾಗಿವೆ.

22 ಅಡಿ ಆಂಜನೇಯ ವಿಗ್ರಹ

22 ಅಡಿ ಆಂಜನೇಯ ವಿಗ್ರಹ

PC:Ssriram mt

ಇಲ್ಲಿ ಆಂಜನೇಯನ(ಅಥವಾ ಹನುಮಾನ್), 22 ಅಡಿ(6.7 ಮೀ) ಎತ್ತರವಿರುವ ಒಂದು ಪ್ರತಿಮೆ ಇದೆ. ಇದನ್ನು ಒಂದು ಗ್ರಾನೈಟ್ ಬ್ಲಾಕ್‌ನಿಂದ ಕೆತ್ತಲಾಗಿದೆ. ಇದು ಭಾರತದಲ್ಲೇ ಅತಿ ಎತ್ತರವಾದ ಪ್ರತಿಮೆಗಳಲ್ಲಿ ಒಂದಾಗಿದೆ.

ಹೆಣ್ಣು ಗಣೇಶ

ಹೆಣ್ಣು ಗಣೇಶ

ಈ ದೇವಸ್ಥಾನವು ತನುಮಲಯನ್ ದೇವರಿಗೆ ಅರ್ಪಿತವಾಗಿದೆ. ಅಲ್ಲಿರುವುದು ಸಾಮಾನ್ಯ ವಿನಾಯಕನಲ್ಲ ಬದಲಾಗಿ ವಿನಾಯಕಿ. ಅಂದರೆ ಹುಡುಗಿ ಗಣೇಶ. ಹೆಣ್ಣು ಗಣೇಶ, ಗಣೇಶಾನಿ, ವಿನಾಯಕಿ ಹುಟ್ಟಿದ್ದು ಹೇಗೆ ಎಂಬುವುದು ವಿಷ್ಣುಧರ್ಮೋತ್ತರ ಪುರಾಣದಲ್ಲಿ ಕಥೆ ಇದೆ.

ಅಂಧಕಾಸುರ ಸಂಹಾರ

ಅಂಧಕಾಸುರ ಸಂಹಾರ

ಶಿವನು ಅಂಧಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ಅಂಧಕಾಸುರ ಎಷ್ಟು ಪ್ರಭಾವಿ ಎಂದರೆ ಆತನ ರಕ್ತದ ಒಮದೊಂದು ಹನಿ ನೆಲಸ ಮೇಲೆ ಬಿದ್ದರೆ ಅದರಿಂದ ರಾಕ್ಷಸ ಹುಟ್ಟಿಬರುತ್ತಾನೆ. ಈ ವಿಷ್ಯ ಶಿವನಿಗೆ ಗೊತ್ತಿರುತ್ತದೆ. ಅದಕ್ಕಾಗಿ ರಕ್ತವನ್ನು ನೆಕ್ಕಲು ವಿನಾಯಕಿಯನ್ನು ಸೃಷ್ಠಿಸಿದ ಎನ್ನಲಾಗುತ್ತದೆ.

ಹೋಗುವುದು ಹೇಗೆ ?

ಹೋಗುವುದು ಹೇಗೆ ?

ತಮಿಳುನಾಡು ಮತ್ತು ಇತರ ರಾಜ್ಯಗಳಿಂದ ಕನ್ಯಾಕುಮಾರಿ ಜಿಲ್ಲೆಗೆ ಉತ್ತಮ ಸಂಪರ್ಕ ಹೊಂದಿದೆ. ಅರುಲ್ಮಿಗು ಶ್ರೀ ತನುಮಲೈಯಿಲ್ ತಿರುಕ್ಕೋವಿಲ್ ನಗರ ಕೋವಲ್ ರಸ್ತೆಯು ಕನ್ಯಾಕುಮಾರಿಯಿಂದ 14 ಕಿ.ಮೀ ದೂರದಲ್ಲಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+