Search
  • Follow NativePlanet
Share
» »ಈ ದೇವಸ್ಥಾನಗಳಿಗೆ ಹೋದರೆ ನಿಮ್ಮ ವೀಸಾ ಸಮಸ್ಯೆಗಳು ಪರಿಹಾರವಾಗುತ್ತಂತೆ

ಈ ದೇವಸ್ಥಾನಗಳಿಗೆ ಹೋದರೆ ನಿಮ್ಮ ವೀಸಾ ಸಮಸ್ಯೆಗಳು ಪರಿಹಾರವಾಗುತ್ತಂತೆ

ಅನೇಕರಿಗೆ ತಾವು ವಿದೇಶದಲ್ಲಿ ದುಡಿಯಬೇಕು. ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಂಬಲವಿರುತ್ತದೆ. ಆದರೆ ವೀಸಾ ದೊರೆಯುವುದೇ ಸಮಸ್ಯೆಯಾಗುತ್ತದೆ. ಹೀಗಿರುವಾಗ ಅನೇಕ ದೇವಾಲಯಗಳಿಗೆ ಹೋಗಿ ವೀಸಾ ದೊರೆಯುವಂತೆ ದೇವರಿಗೆ ಕೈ ಮುಗಿದಿರುವಿರಿ. ನಮ್ಮ ದೇಶದಲ್ಲಿ ಕೆಲವು ವಿಶೇಷ ದೇವಾಲಯಗಳಿವೆ. ಅವುಗಳು ವೀಸಾಕ್ಕೆ ಫೇಮಸ್‌. ಆ ದೇವಾಲಯಗಳಿಗೆ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದರೆ ಖಂಡಿತ ವೀಸಾ ದೊರೆಯುತ್ತಂತೆ. ಹಾಗಾದ್ರೆ ಬನ್ನಿ ಆ ದೇವಾಲಯಗಳು ಯಾವುವು ಅನ್ನೋದನ್ನು ನೋಡೋಣ.

ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರಾ, ಪಂಜಾಬ್

ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರಾ, ಪಂಜಾಬ್

PC: BBC

ಪಂಜಾಬ್‌ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರಾವು 150 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾದ ಗುರುದ್ವಾರವಾಗಿದೆ. ಇದು ಪಂಜಾಬಿಗಳ ಪವಿತ್ರ ಕ್ಷೇತ್ರವಾಗಿದೆ. ವೀಸಾ ಸಮಸ್ಯೆಗಳೇನೇ ಇದ್ದರೂ ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಸಮಸ್ಯೆ ಪರಿಹಾರವಾಗುತ್ತದಂತೆ. ಇದು ಪಂಜಾಬ್‌ನ ತಾಹನ್ ಎಂಬ ಗ್ರಾಮದಲ್ಲಿ ನೆಲೆಗೊಂಡಿದೆ ಈ ಗುರುದ್ವಾರದಲ್ಲಿ ಆಗಮಿಸಿದರೆ ವಿವಾದಾತ್ಮಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಹಾಗಾಗಿ ಇತರ ರಾಜ್ಯಗಳಲ್ಲಿಂದಲೂ ಜನರು ಇಲ್ಲಿ ಪ್ರಾರ್ಥಿಸಲು ಬರುತ್ತಾರೆ.

ಆಟಿಕೆ ವಿಮಾನ ಅರ್ಪಿಸುತ್ತಾರೆ

ಆಟಿಕೆ ವಿಮಾನ ಅರ್ಪಿಸುತ್ತಾರೆ

PC: BBC

ಇಲ್ಲಿನ ದೇವಾಲಯದ ವಿಶೇಷವೆಂದರೆ ವಿದೇಶಕ್ಕೆ ಹೋಗ ಬಯಸುವವರು ಇಲ್ಲಿನ ದೇವರಿಗೆ ಆಟಿಕೆ ವಿಮಾನಗಳನ್ನು ನೀಡುತ್ತಾರೆ. ಹೀಗೆ ಆಟಿಕೆ ವಿಮಾನವನ್ನು ಅರ್ಪಿಸುವುದರಿಂದ ಅವರ ವಿದೇಶ ಪ್ರಯಾಣದ ಕನಸು ನನಸಾಗುತ್ತದಂತೆ. ಹಾಗಾಗಿ ಇಲ್ಲಿ ನೀವು ವಿಮಾನದ ರಾಶಿಯನ್ನೇ ಕಾಣಬಹುದು. ಇಲ್ಲಿಗೆ ಬರುವವರೆಲ್ಲರೂ ವಿದೇಶದ ಕನಸನ್ನೇ ಹೊತ್ತು ಬರುವವರು.

ಚಿಲ್ಕೂರ್‌ ಬಾಲಜಿ ದೇವಸ್ಥಾನ, ಹೈದರಾಬಾದ್

ಚಿಲ್ಕೂರ್‌ ಬಾಲಜಿ ದೇವಸ್ಥಾನ, ಹೈದರಾಬಾದ್

PC:Adityamadhav83

ಹೈದರಾಬಾದ್‌ನಲ್ಲಿರುವ ಚಿಲ್ಕೂರು ಬಾಲಜಿ ದೇವಸ್ಥಾನದಲ್ಲಿ ಸಾವಿರಾರು ಮಂದಿ ಭಕ್ತರು ತಮ್ಮ ವೀಸಾ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಹಾಗಾಗಿ ಇದನ್ನು ವೀಸಾ ಬಾಲಾಜಿ ಎಂದೂ ಕರೆಯುತ್ತಾರೆ. ಇದು ಯುಎಸ್ ಗೆ ವಿಸ್ಯಾ ಸಮಸ್ಯೆಗಳನ್ನು ಬಗೆಹರಿಸುವ ವಿಷಯದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಈ ದೇವಾಲಯವು ಹೈದರಾಬಾದ್‌ನ ಹಲವಾರು ಸಾಫ್ಟ್ವೇರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆಯುಎಸ್‌ಎ ವೀಸಾದ ಸಮಸ್ಯೆಯನ್ನು ಪರಿಹರಿಸಲಾಗಿದೆ.

ದೇವಾಲಯಕ್ಕೆ108 ಸುತ್ತು ಸುತ್ತಬೇಕು

ದೇವಾಲಯಕ್ಕೆ108 ಸುತ್ತು ಸುತ್ತಬೇಕು

PC: official site

ಒಂದು ವರ್ಷದಲ್ಲಿ ಲಕ್ಷಾಂತರ ಜನರು ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಸ್ಥಾನದ ವಿಶೇ‍ಷತೆ ಎಂದರೆ ಭಕ್ತರು ತಮ್ಮ ಬೇಡಿಕೆಯನ್ನು ದೇವರ ಮುಂದಿಟ್ಟು ದೇವಸ್ಥಾನಕ್ಕೆ 11 ಸುತ್ತು ಸುತ್ತಬೇಕು. ನಂತರ ತಮ್ಮ ಬೇಡಿಕೆ ಈಡೇರಿದ ನಂತರ108 ಸುತ್ತು ಸುತ್ತಬೇಕು. ಸಾಕಷ್ಟು ಮಂದಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಪ್ರತಿದಿನ ದೇವಸ್ಥಾನವು ಭಕ್ತರಿಂದ ತುಂಬಿರುತ್ತದೆ.

ಖದಿಯ ಹನುಮನ್ ದೇವಾಲಯ. ಅಹಮದಾಬಾದ್

ಖದಿಯ ಹನುಮನ್ ದೇವಾಲಯ. ಅಹಮದಾಬಾದ್

PC:Ms Sarah Welch

ವೀಸಾ ಹನುಮಾನ್ ಎಂದು ಕರೆಯಲ್ಪಡುವ ಅಹ್ಮದಾಬಾದ್‌ನ ಖದಿಯ ಹನುಮಾನ್ ದೇವಸ್ಥಾನವು ವೀಸಾ ಸಮಸ್ಯೆಯನ್ನು ಬಗೆಹರಿಸುವ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದ್ರೆ ವೀಸಾ ಸಮಸ್ಯೆ ಸರಿಪಡಿಸಬಹುದು. ಇಲ್ಲಿ ಪ್ರತೀ ಶನಿವಾರ ವೀಸಾ ಸಂಬಂಧಿ ಕೌನ್ಸೆಲಿಂಗ್‌ ನಡೆಯುತ್ತದೆ. ಇದರಲ್ಲಿ ಭಾಗವಹಿಸಲು ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ಭಜರಂಗಬಲಿ ದೇವಸ್ಥಾನ, ದೆಹಲಿ

ಭಜರಂಗಬಲಿ ದೇವಸ್ಥಾನ, ದೆಹಲಿ

PC:LASZLO ILYES

ವೀಸಾ ನೀಡುವ ದೇವಾಲಯ ಎಂದೇ ಪ್ರಸಿದ್ಧವಾಗಿದೆ. ದೆಹಲಿಯ ಭಜರಂಗಬಲಿ ದೇವಾಲಯವನ್ನು 2007 ರಲ್ಲಿ ಸ್ಥಾಪಿಸಲಾಯಿತು. ದೇವಾಲಯವು ಹನುಮಾನ್‌ಗೆ ಅರ್ಪಿಸಲಾಗಿದೆ. ಇಲ್ಲಿಗೆ ಬರುವ ಭಕ್ತರು ಬಿಳಿ ಪೇಪರ್‌ನಲ್ಲಿ ತಮ್ಮ ಇಷ್ಟಗಳನ್ನು ಬರೆಯುತ್ತಾರೆ. ಇದಲ್ಲದೆ ತಮ್ಮ ಆಶಯ ಈಡೇರಿದ ನಂತರ ಮತ್ತೆ ಹಿಂತಿರುಗಿ ದೇವಾಲಯದ ರೆಜಿಸ್ಟರ್‌ನಲ್ಲಿ ಹೆಸರು ಬರೆಯುವ ಒಂದು ನಿಯಮ ಕೂಡ ಇದೆ.

More News

Read more about: india travel temple hyderabad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+