Search
  • Follow NativePlanet
Share
» »ಮದುವೆಯಲ್ಲಿ ವಿಳಂಬವೇ ಹಾಗಾದರೆ ಈ ದೇವಾಲಯಕ್ಕೆ ತೆರಳಿ

ಮದುವೆಯಲ್ಲಿ ವಿಳಂಬವೇ ಹಾಗಾದರೆ ಈ ದೇವಾಲಯಕ್ಕೆ ತೆರಳಿ

ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷವಿರುತ್ತದೆ. ಅವುಗಳಿಂದ ಆ ದೇವಾಲಯ ಹಾಗು ದೇವತಾ ಮೂರ್ತಿ ಪ್ರಸಿದ್ಧಗೊಳ್ಳುತ್ತಿರುತ್ತಾರೆ. ಹಾಗೆಯೇ ವಿವಾಹ ಕೂಡ ಜೀವನದಲ್ಲಿ ಅತಿಮುಖ್ಯವಾದುದು. ಸರಿಯಾದ ವಯಸ್ಸಿನಲ್ಲಿ ವಿವಾಹವಾಗದೇ ಹೋದರೆ ತಂದೆ, ತಾಯಿಗಳು

ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷವಿರುತ್ತದೆ. ಅವುಗಳಿಂದ ಆ ದೇವಾಲಯ ಹಾಗು ದೇವತಾ ಮೂರ್ತಿ ಪ್ರಸಿದ್ಧಗೊಳ್ಳುತ್ತಿರುತ್ತಾರೆ. ಹಾಗೆಯೇ ವಿವಾಹ ಕೂಡ ಜೀವನದಲ್ಲಿ ಅತಿಮುಖ್ಯವಾದುದು. ಸರಿಯಾದ ವಯಸ್ಸಿನಲ್ಲಿ ವಿವಾಹವಾಗದೇ ಹೋದರೆ ತಂದೆ, ತಾಯಿಗಳು ವ್ಯಥೆ ಪಡುವುದುಂಟು. ಶೀಘ್ರವಾಗಿ ವಿವಾಹವಾಗಬೇಕು ಎಂದು ಹಲವಾರು ಪೂಜೆ, ಪುನಸ್ಕರವನ್ನು ಮಾಡಿರುತ್ತೀರಾ. ಆದರೂ ಕೂಡ ಕಂಕಣ ಭಾಗ್ಯ ಕೂಡಿ ಬಂದಿರುವುದಿಲ್ಲ.

ವಿವಾಹ ವಿಳಂಬ ಅನುಭವಿಸುತ್ತಿರುವವರು ತ್ವರಿತವಾಗಿ ವಿವಾಹವಾಗಬೇಕಾದರೆ ಈ ಶ್ವೇತರಾಯೇಶ್ವರ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ. ಈ ದೇವಾಲಯದ ಎಲ್ಲಿದೆ? ಈ ದೇವಾಲಯದ ವಿಶೇಷತೆ ಏನು? ಎಂಬ ಹಲವಾರು ಪ್ರಶ್ನೆಗಳನ್ನು ಲೇಖನದ ಮೂಲಕ ಮಾಹಿತಿಯನ್ನು ಪಡೆಯಿರಿ.

ಶ್ವೇತರಾಯೇಶ್ವರ ದೇವಾಲಯ

ಶ್ವೇತರಾಯೇಶ್ವರ ದೇವಾಲಯ

ಈ ದೇವಾಲಯದಲ್ಲಿ ಮುಖ್ಯವಾಗಿ ಮಹಾಶಿವನು ಶ್ವೇತರಾಯೇಶ್ವರನಾಗಿ ನೆಲೆಸಿದ್ದಾನೆ. ಅಷ್ಟೇ ಅಲ್ಲದೇ ನವಗ್ರಹಗಳಲ್ಲಿ ಒಂದಾದ ಬುಧ ಕೂಡ ಇಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದಾನೆ. ಈ ದೇವಾಲಯವು ಅತ್ಯಂತ ದೊಡ್ಡದಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ.

ಅಘೋರಾ ಅವತಾರ

ಅಘೋರಾ ಅವತಾರ

ಈ ಶ್ವೇತರಾಯೇಶ್ವರ ದೇವಾಲಯವು ಮುಖ್ಯವಾಗಿ "ಅಘೋರಾ ಮೂರ್ತಿ" ಎಂದು ಕರೆಯಲ್ಪಡುವ ಶಿವನ ವಿಶಿಷ್ಟವಾದ ಅವತಾರಕ್ಕೆ ಹೆಸರುವಾಸಿಯಾಗಿದ್ದಾನೆ. ಈ ಗ್ರಾಮದಲ್ಲಿನ ಮೂಖ್ಯವಾದ ದೇವರು ಕೂಡ ಆಗಿದ್ದಾನೆ. ಇಲ್ಲಿ ಅತ್ಯಂತ ಸುಂದರವಾದ ಕೆರೆಗಳನ್ನು ಕಾಣಬಹುದಾಗಿದೆ. ಈ ದೇವಾಲಯವು 3 ಕೆರೆಗಳನ್ನು ಹಾಗು 3 ದೇವತಾ ಮೂರ್ತಿಗಳನ್ನು ಹೊಂದಿದ್ದು, ಪ್ರಸಿದ್ಧಿ ಪಡೆದಿದೆ.

ವಿವಾಹ

ವಿವಾಹ

ವಿವಾಹದಲ್ಲಿ ವಿಳಂಬವಾಗುತ್ತಿದ್ದವರು ಹಾಗು ಕಾಯಿಲೆಗಳಂತಹ ಇನ್ನು ಹಲವಾರು ತೊಂದರೆಗಳಿಂದ ಮುಕ್ತರಾಗಲು ಈ ದೇವಾಲಯಕ್ಕೆ ಆನೇಕ ಭಕ್ತರು ಭೇಟಿ ನೀಡುತ್ತಾರೆ. ಇದರಿಂದಾಗಿ ತಮ್ಮ ಹಲವಾರು ಕಷ್ಟಗಳು ದೂರವಾಗಿ, ತ್ವರಿತವಾಗಿ ವಿವಾಹವಾಗುತ್ತದೆ ಎಂಬ ನಂಬಿಕೆ ಜನರದ್ದು.

ಮುಖ್ಯ ದೇವರಾಗಿ ಶಿವ

ಮುಖ್ಯ ದೇವರಾಗಿ ಶಿವ

ಕಾಶಿಗೆ ಸಮಾನವಾದ ಕಾವೇರಿ ನದಿ ದಡದಲ್ಲಿ 6 ದೇವಾಲಯಗಳಲ್ಲಿ ಈ ದೇವಾಲಯವಿದೆ. ಈ ಶ್ವೇತರಾಯೇಶ್ವರ ದೇವಾಲಯದಲ್ಲಿ ಮುಖ್ಯ ದೇವರಾಗಿ ಶಿವನನ್ನು ಆರಾಧಿಸಲಾಗುತ್ತದೆ. ಇಲ್ಲಿನ ಶಿವನದು ಉಗ್ರ ಸ್ವರೂಪವಾಗಿದ್ದು, ನಿಷ್ಟೆ-ಭಕ್ತಿಯಿಂದ ಇತನನ್ನು ಪೂಜಿಸುತ್ತಾರೆ.

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ

ದಂತಕಥೆಯ ಪ್ರಕಾರ ಇಲ್ಲಿ ಮಾರುತುವಾಸುರನ್ ಎಂಬ ಅಸುರನಿದ್ದನು. ಆತನ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನನ್ನು ಕುರಿತು ಘೋರವಾದ ತಪಸ್ಸನ್ನು ಮಾಡಿದನು. ಇದನ್ನು ಮೆಚ್ಚಿದ ಬ್ರಹ್ಮ ದೇವನು ಅಸುರನ ಮುಂದೆ ಪ್ರತ್ಯಕ್ಷವಾಗಿ ವರವನ್ನು ಪಡೆದ.

ಹಿಂಸೆ

ಹಿಂಸೆ

ವರವನ್ನು ಪಡೆದ ಅಸುರನು ಋಷಿಮುನಿಗಳನ್ನು ಮತ್ತು ಮುಗ್ಧ ಜನರನ್ನು ಹಿಂಸೆ ನೀಡಲು ಪ್ರಾರಂಭಿಸಿದ. ಇದರಿಂದ ಬೇಸತ್ತು ಅಸುರನ ಹಿಂಸೆಗೆ ಕೊನೆಹಾಡಬೇಕು ಎಂದು ಪರಮೇಶ್ವರನನ್ನು ವಿನಂತಿಸಿದರು. ಹಾಗಾಗಿ ಶಿವನು ತನ್ನ ಉಗ್ರವಾದ ರೂಪವನ್ನು ತಾಳಿ ಆ ಅಸುರನನ್ನು ಒಂದು ಮರದ ಬಳಿ ಕೊಂಡೊಯ್ಯುತ್ತಾನೆ, ತದನಂತರ ತನ್ನ ಘೋರವಾದ ರೂಪದಿಂದ ಆ ಅಸುರನನ್ನು ಸಂಹಾರ ಮಾಡುತ್ತಾನೆ.

ಉತ್ಸವ

ಉತ್ಸವ

ಈ ಮಾಹಿಮಾನ್ವಿತವಾದ ದೇವಾಲಯದಲ್ಲಿ ಆನೇಕ ಉತ್ಸವಗಳನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಫೆಬ್ರವರಿ ತಿಂಗಳಿನಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ರಥೋತ್ಸವವನ್ನು ಸತತ 10 ದಿನಗಳ ಕಾಲ ಆಚರಿಲಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಈ ಉತ್ಸವಕ್ಕೆ ಭಕ್ತರು ಭಾಗವಹಿಸುತ್ತಾರೆ.

ದೇವತಾ ಮೂರ್ತಿ

ದೇವತಾ ಮೂರ್ತಿ

ಇಲ್ಲಿ ಇಂದ್ರ, ಆನೆ, ಬುಧ, ಸೂರ್ಯ ದೇವ ಮತ್ತು ಚಂದ್ರ ದೇವತಾ ಮೂರ್ತಿಗಳನ್ನು ಕೂಡ ಇಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಕಂಡುಬರುವ ಶಾಸನಗಳಲ್ಲಿ, ಹಿಂದಿನ ಚೋಳ ರಾಜರಾದ ಆದಿತ್ಯ ಚೋಳ ಮತ್ತು ರಾಜರಾಜ ಚೋಳ ಈ ದೇವಾಲಯಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ.

ದುರ್ಗಾ ಮತ್ತು ಕಾಳಿ ದೇವಾಲಯ

ದುರ್ಗಾ ಮತ್ತು ಕಾಳಿ ದೇವಾಲಯ

ದುರ್ಗಾ ಮತ್ತು ಕಾಳಿಗೆ ಸಂಬಂಧಿಸಿದಂತೆ ಹಲವಾರು ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ನಟರಾಜನ ಚಿತ್ರಣವು ಅದ್ಭುತವಾದ ಸೌಂದರ್ಯವನ್ನು ಹೊಂದಿದೆ. ಅಘೋರ ಮೂರ್ತಿಯಾದ ಶಿವನಿಗೆ ಭಾನುವಾರ ರಾತ್ರಿ ಆಚರಿಸಲಾಗುತ್ತದೆ. ಇಲ್ಲಿನ ನಟರಾಜನ ದೇವಾಲಯದ ಬಳಿ ವಿಷ್ಣು ದೇವಾಲಯವು ಕೂಡ ಕಾಣಬಹುದು.

ಎಲ್ಲಿದೆ ಈ ದೇವಾಲಯ?

ಎಲ್ಲಿದೆ ಈ ದೇವಾಲಯ?

ಅಸಲಿಗೆ ಈ ದೇವಾಲಯ ಇರುವುದು ತಮಿಳುನಾಡು ರಾಜ್ಯದಲ್ಲಿದೆ. ತಿರುವೆಂಕಾಡು ಎಂಬ ಪಟ್ಟಣದಲ್ಲಿನ ಸರ್‍ಕಾಜಿಯ ಸಮೀಪದಲ್ಲಿ ಈ ಶ್ವೇತರಾಯೇಶ್ವರ ದೇವಾಲಯವಿದೆ.

ಸಮೀಪ ವಿಮಾನ ನಿಲ್ದಾಣ

ಸಮೀಪ ವಿಮಾನ ನಿಲ್ದಾಣ

ಈ ದೇವಾಲಯಕ್ಕೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ದೇವಾಲಯಕ್ಕೆ ಸುಮಾರು 246 ಕಿ.ಮೀ ದೂರದಲ್ಲಿದೆ.

ಸಮೀಪದ ರೈಲ್ವೆ ನಿಲ್ದಾಣ

ಸಮೀಪದ ರೈಲ್ವೆ ನಿಲ್ದಾಣ

ಈ ದೇವಾಲಯಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ತಮಿಳುನಾಡಿನ ಕುಂಭಕೊಣಂ. ಇಲ್ಲಿಂದ ದೇವಾಲಯಕ್ಕೆ ಕೇವಲ 60 ಕಿ.ಮೀ ದೂರದಲ್ಲಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+