Search
  • Follow NativePlanet
Share
» »ತೆಲಂಗಾಣದಲ್ಲಿದೆ ವಿಷ್ಣುವಿಗೆ ಸಮರ್ಪಿತವಾದ ಪುರಾತನ ದೇವಾಲಯ..ಈ ವಾಸ್ತುಶಿಲ್ಪ ನೋಡಿ ಬೆರಗಾದವರೇ ಹೆಚ್ಚು!

ತೆಲಂಗಾಣದಲ್ಲಿದೆ ವಿಷ್ಣುವಿಗೆ ಸಮರ್ಪಿತವಾದ ಪುರಾತನ ದೇವಾಲಯ..ಈ ವಾಸ್ತುಶಿಲ್ಪ ನೋಡಿ ಬೆರಗಾದವರೇ ಹೆಚ್ಚು!

Ranganayaka Swami Temple History: ತೆಲಂಗಾಣದ ಶ್ರೀ ರಂಗನಾಯಕ ಸ್ವಾಮಿ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ದಕ್ಷಿಣ ಭಾರತದ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಶ್ರೀ ರಂಗನಾಯಕಸ್ವಾಮಿ ದೇವಾಲಯವು ವನಪರ್ತಿ ಜಿಲ್ಲೆಯ ಶ್ರೀರಂಗಾಪುರದಲ್ಲಿದೆ. ದಂತಕಥೆಯ ಪ್ರಕಾರ, ವಿಜಯನಗರದ ದೊರೆ ಶ್ರೀ ಕೃಷ್ಣದೇವರಾಯರು ಶ್ರೀರಂಗಪುರಂಗೆ ಭೇಟಿ ನೀಡಿದಾಗ ಅಲ್ಲಿನ ಶ್ರೀ ರಂಗನಾಯಕಸ್ವಾಮಿ ದೇವಾಲಯವನ್ನು ನೋಡಿ ಮೈಮರೆತಿದ್ದರು.

ದೇವಾಲಯವನ್ನು ನಿರ್ಮಿಸಿದ್ದು ಯಾರು?

ಈ ದೇವಾಲಯವನ್ನು 14 ನೇ ಶತಮಾನದಲ್ಲಿ ರಾಜ ಪ್ರತಾಪ್‌ ರುದ್ರ ಎಂಬ ಸ್ಥಳೀಯ ರಾಜ ನಿರ್ಮಿಸಿದರು ಎಂದು ನಂಬಲಾಗಿದೆ. ದೇವಾಲಯದ ಮುಖ್ಯ ದೇವರು ರಂಗನಾಥ. ರಂಗನಾಥ ಆದಿಶೇಷ ಸರ್ಪದ ಮೇಲೆ ಮಲಗಿರುವಂತೆ ಚಿತ್ರಿಸಲಾಗಿದೆ. ಈ ದೇವಾಲಯವು ಶಿವ, ಹನುಮಂತ ಮತ್ತು ಇತರ ದೇವತೆಗಳಿಗೆ ಸಮರ್ಪಿತವಾದ ಅನೇಕ ದೇವಾಲಯಗಳನ್ನು ಹೊಂದಿದೆ.

ವಾಸ್ತುಶಿಲ್ಪವು ಅದ್ಭುತ

ದೇವಾಲಯದ ವಾಸ್ತುಶಿಲ್ಪವು ಚೋಳ, ವಿಜಯನಗರ ಮತ್ತು ಕಾಕತೀಯ ಶೈಲಿಗಳನ್ನು ಒಳಗೊಂಡಂತೆ ವಿಭಿನ್ನ ಶೈಲಿಗಳ ಮಿಶ್ರಣವಾಗಿದೆ. ದೇವಾಲಯದ ಮುಖ್ಯ ಗೋಪುರ ಅಥವಾ ಗೇಟ್‌ವೇ ಗೋಪುರವು 196 ಅಡಿ ಎತ್ತರದ 11 ಅಂತಸ್ತಿನ ರಚನೆಯಾಗಿದೆ. ದೇವಾಲಯವು ಹಲವಾರು ಮಂಟಪಗಳು ಅಥವಾ ಕಂಬದ ಸಭಾಂಗಣಗಳನ್ನು ಹೊಂದಿದ್ದು, ಸಂಕೀರ್ಣವಾದ ಕೆತ್ತನೆಗಳು ಮತ್ತು ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ. ಈ ಸ್ಥಳವು ಹಸಿರು ಕಾಡುಗಳಿಂದ ಸುತ್ತುವರೆದಿದ್ದು, ಅಪಾರ ನೀರಿನ ಸಂಪತ್ತಿದೆ.

ranganayakaswamitemple history

ರಂಗನಾಯಕ ಸ್ವಾಮಿ ದೇವಾಲಯದ ಇತಿಹಾಸ

ದೇವಾಲಯವು ಶತಶತಮಾನಗಳಿಂದಲೂ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಈ ದೇವಾಲಯವು 600 ವರ್ಷಗಳಷ್ಟು ಹಳೆಯದಾಗಿದೆ ಎಂದು ನಂಬಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಹಿಂದಿನದು ಎನ್ನಲಾಗಿದೆ. ಅಷ್ಟೇ ಅಲ್ಲ, ಕಲೆ, ಸಂಸ್ಕೃತಿ ಮತ್ತು ಧರ್ಮ ಹೀಗೆ ಅನೇಕ ಕಾರಣಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸೋದ್ಯಮದ ದೃಷ್ಟಿಯಲ್ಲಿ ಹೇಳುವುದಾದರೆ ರಂಗನಾಯಕ ಸ್ವಾಮಿ ದೇವಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ತಲೆಮಾರುಗಳಿಂದಲೂ ರಂಗನಾಯಕನ (ವಿಷ್ಣುವಿನ ಒಂದು ರೂಪ) ಆಶೀರ್ವಾದ ಪಡೆಯಲು ಬರುತ್ತಾರೆ. ಈ ದೇವಾಲಯವು ವೈಕುಂಠ ಏಕಾದಶಿ ಮತ್ತು ವಾರ್ಷಿಕ ಬ್ರಹೋತ್ಸದ ಮಂಗಳಕರ ದಿನಗಳಲ್ಲಿ ವಿಶೇಷವಾಗಿ ಪೂಜಿಸಲ್ಪಡುತ್ತದೆ. ಇದು ಯಾತ್ರಿಕರು ಮತ್ತು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ರಂಗನಾಥನನ್ನು ಪೂಜಿಸುವುದರಿಂದ ಭಕ್ತರಿಗೆ ಉತ್ತಮ ಆರೋಗ್ಯ, ಸಮೃದ್ಧಿ ಸಿಗಲಿದೆ.

ದರ್ಶನದ ಸಮಯ

ದೇವಸ್ಥಾನದಲ್ಲಿ ಬೆಳಗ್ಗೆ 5:30ರಿಂದ 12:00 ರವರೆಗೆ ಪೂಜೆಗಳು ನಡೆಯುತ್ತವೆ. ಮಧ್ಯಾಹ್ನ 12:00 ರಿಂದ 4:00 ರವರೆಗೆ ಶುಭ ಕಾರ್ಯಕ್ರಮಗಳು ನಡೆಯುತ್ತವೆ. ಪುನಃ ದೇವಸ್ಥಾನದ ಪೂಜೆಗಳು ಸಂಜೆ 4:00 ರಿಂದ ರಾತ್ರಿ 8:00 ರವರೆಗೆ ನಡೆಯುತ್ತವೆ.

ranganayakaswamitemple

ಹೋಗುವುದು ಹೇಗೆ?

ರಂಗನಾಯಕ ಸ್ವಾಮಿ ದೇವಸ್ಥಾನವು ವನಪರ್ತಿಯಿಂದ 24 ಕಿಮೀ, ಪೆಬ್ಬೈರ್‌ನಿಂದ 11 ಕಿಮೀ ಹಾಗೂ ಸಿಕಂದರಾಬಾದ್‌ನಿಂದ 176 ಕಿಮೀ ದೂರದಲ್ಲಿದೆ. ಇದು ರಸ್ತೆ ಮತ್ತು ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ರಸ್ತೆಯ ಮೂಲಕವಾದರೆ ಶ್ರೀ ರಂಗನಾಯಕ ಸ್ವಾಮಿ ದೇವಸ್ಥಾನಕ್ಕೆ RTC ಬಸ್‌ಗಳು ಲಭ್ಯವಿದೆ. ಮಹಬೂಬ್‌ನಗರದಿಂದ ನೇರ ಬಸ್‌ಗಳು ಮತ್ತು ಟ್ಯಾಕ್ಸಿಗಳು ಲಭ್ಯವಿವೆ. ರೈಲಿನ ಮೂಲಕ ಬರುವವರು ವನಪರ್ತಿ ಸಮೀಪದಲ್ಲಿರುವ ಜಡ್ಚೆರ್ಲಾ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ರಸ್ತೆ ಮಾರ್ಗವಾಗಿ 11 ಕಿ.ಮೀ ಕ್ರಮಿಸಬೇಕು. ರೈಲು ನಿಲ್ದಾಣದಿಂದ ದೇವಸ್ಥಾನಕ್ಕೆ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿವೆ. ಹತ್ತಿರದ ವಿಮಾನ ನಿಲ್ದಾಣವು ಹೈದರಾಬಾದ್‌ನಲ್ಲಿದೆ. ಅಲ್ಲಿಂದ ಜಡ್ಚೆರ್ಲಾಗೆ ಸುಲಭವಾಗಿ ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+