Search
  • Follow NativePlanet
Share
» »ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ...

ಪರಶುರಾಮನ ಪಾಪ ವಿಮೋಚನೆ ಮಾಡಿದ ಕುಂಡ; ಅಮವಾಸ್ಯೆ ದಿನ ಇಲ್ಲಿ ಸ್ನಾನ ಮಾಡಿದ್ರೆ...

ರಾಮೇಶ್ವರ ದೇವಾಲಯವು ತೀರ್ಥಹಳ್ಳಿಯಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಇದು ತುಂಗಾ ನದಿಯ ತೀರದಲ್ಲಿದೆ. ಈ ರಾಮೇಶ್ವರ ದೇವಾಲಯಕ್ಕೂ ಪರಶುರಾಮನಿಗೂ ಸಂಬಂಧವಿದೆ. ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ. ಪರಶುರಾಮನಿಗೂ ಇಲ್ಲಿನ ತೀರ್ಥದಲ್ಲಿ ಪಾಪ ಪರಿಹಾರವಾಗಿದೆಯಂತೆ. ಹಾಗಾದ್ರೆ ಬನ್ನಿ ಆ ಮಹಿಮಾನಿತ್ವ ಕ್ಷೇತ್ರದ ಬಗ್ಗೆ ತಿಳಿಯೋಣ.

ತೀರ್ಥ ಹಳ್ಳಿ ಹೆಸರು ಬಂದಿದ್ದು ಹೇಗೆ?

ತೀರ್ಥ ಹಳ್ಳಿ ಹೆಸರು ಬಂದಿದ್ದು ಹೇಗೆ?

PC:youtube

ಹಿಂದೆ ಇಲ್ಲಿನ ತುಂಗಾ ನದಿಯಲ್ಲಿ ಹಲವಾರು ತೀರ್ಥಗಳಿದ್ದವಂತೆ ಹಾಗಾಗಿ ತೀರ್ಥ ರಾಜಪುರ ಎಂದು ಕರೆಯಲಾಯಿತು. ಕ್ರಮೇಣ ಇದು ತೀರ್ಥ ಹಳ್ಳಿಯೆಂದಾಯಿತು.

ಪರಶುರಾಮನ ಕೊಡಲಿಯ ರಕ್ತದ ಕಲೆ ಹೋಗಿದ್ದು ಇಲ್ಲೇ

ಪರಶುರಾಮನ ಕೊಡಲಿಯ ರಕ್ತದ ಕಲೆ ಹೋಗಿದ್ದು ಇಲ್ಲೇ

PC:youtube

ತಂದೆಯ ಮಾತಿನಂತೆ ತಾಯಿಯ ತಲೆ ಕಡೆದ ಪರಶುರಾಮನ ಕೊಡಲಿಯ ರಕ್ತದ ಕಲೆ ಯಾವ ನದಿಯಲ್ಲಿ ತೊಳೆದರೂ ಹೋಗಿಲ್ಲವಂತೆ ಕೊನೆಗೆ ತುಂಗಾ ನದಿಯ ದಡದಲ್ಲಿ ಬಂದ ನಿಂತಾಗ ಆಕಸ್ಮಿಕವಾಗಿ ಕೊಡಲಿ ಬಿತ್ತಂತೆ. ಕೊಡಲಿಯನ್ನು ತೆಗೆದಾಗ ಅದರಲ್ಲಿದ್ದ ರಕ್ತದ ಕಲೆ ಸಂಪೂರ್ಣವಾಗಿ ಹೋಗಿತ್ತಂತೆ.

ಶಿವನನ್ನು ಪ್ರತಿಷ್ಠಾಪಿಸಿದ ಪರಶುರಾಮ

ಶಿವನನ್ನು ಪ್ರತಿಷ್ಠಾಪಿಸಿದ ಪರಶುರಾಮ


PC:youtube

ರಾಮೇಶ್ವರ ಸ್ವಾಮಿಯನ್ನು ಹಲವಾರು ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿದ್ದು,. ಪರಶುರಾಮನು ಪ್ರತಿಷ್ಠಾಪಿಸಿದ ಎನ್ನಲಾಗುತ್ತದೆ. ಪರಶುರಾಮ ನಿರ್ಮಿಸಿದ ಶಿವನ ಕ್ಷೇತ್ರ ಇದು ಹಾಗಾಗಿ ಇದನ್ನು ರಾಮೇಶ್ವರ ಎನ್ನಲಾಗುತ್ತದೆ.

ಕಂಬದ ಗಣಪ

ಕಂಬದ ಗಣಪ


PC:youtube

ಕಂಬದಲ್ಲಿ ಉದ್ಭವವಾಗಿರುವ ಗಣಪತಿ ಇದು. ಪ್ರಸಾದ ಕರುಣಿಸುವ ಕಂಬದ ಗಣಪ ಎನ್ನುತ್ತಾರೆ. ಭಕ್ತರು ಈ ಗಣಪನಲ್ಲಿ ಹೂವಿನ ಪ್ರಸಾದವನ್ನು ಪಡೆಯುತ್ತಾರೆ. ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ಹೂವಿನ ಪ್ರಸಾದಕ್ಕಾಗಿ ಬರುತ್ತಾರೆ.

ಹೂವಿನ ಪ್ರಸಾದವನ್ನು ಪಡೆಯುವುದು ಹೇಗೆ?

ಹೂವಿನ ಪ್ರಸಾದವನ್ನು ಪಡೆಯುವುದು ಹೇಗೆ?


PC:youtube

ಭಕ್ತರು ತಮ್ಮ ಕೆಲಸ ಆಗುತ್ತೋ ಇಲ್ಲವೂ ಎನ್ನುವುದನ್ನು ಕಂಬದ ಗಣಪನಲ್ಲಿ ಕಂಡುಕೊಳ್ಳುತ್ತಾರೆ. ಭಕ್ತರು ಗಣಪನಿಗೆ ಹೂವನ್ನು ಅರ್ಪಿಸುತ್ತಾರೆ. ಒಂದು ವೇಳೆ ಅವರ ಕೆಲಸ ಆಗುತ್ತದೆ ಎಂದಾದರೆ ದೇವರಿಗೆ ಅರ್ಪಿಸಲಾಗಿರುವ ಹೂವು ಕೆಳಗೆ ಬೀಳುತ್ತದೆ .

ಪಾಪ ಪರಿಹಾರವಾಗುತ್ತದೆ

ಪಾಪ ಪರಿಹಾರವಾಗುತ್ತದೆ


PC:youtube

ಅಮವಾಸ್ಯೆ ದಿನ ಇಲ್ಲಿನ ತುಂಗಾ ಕುಂಡದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತದಂತೆ. ಹಾಗಾಗಿ ಅಮವಾಸ್ಯೆ ಹಾಗೂ ಎಳ್ಳಮವಾಸ್ಯೆಯಂದು ಸಾಕಷ್ಟು ಮಂದಿ ಭಕ್ತರು ಈ ಕುಂಡದಲ್ಲಿ ಸ್ನಾನ ಮಾಡುತ್ತಾರೆ. ವಿಶೇಷ ಪೂಜೆ ನಡೆಯುತ್ತದೆ.

ಯಾವಾಗ ಭೇಟಿ ಮಾಡಬಹುದು

ಯಾವಾಗ ಭೇಟಿ ಮಾಡಬಹುದು


PC:youtube

ವರ್ಷದ ಎಲ್ಲಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ಉತ್ಸವಗಳು ಐದು ದಿನಗಳವರೆಗೆ ನಡೆದರೂ ಭಕ್ತರಿಗೆ ಮೂರು ದಿನಗಳು ಬಹಳ ಮುಖ್ಯವಾಗಿವೆ. ಎಳ್ಳು ಅಮಾವಾಸ್ಯೆಯ ದಿನ, ಶ್ರೀ ಶ್ರೀ ರಾಮೇಶ್ವರನ ಉತ್ಸವ ಮೂರ್ತಿಯನ್ನು ನದಿಯಬಳಿಗೆ ಕರೆದೊಯ್ಯುತ್ತದೆ ಮತ್ತು ಪವಿತ್ರ ಅಭಿಷೇಕವನ್ನು ವಿಗ್ರಹದ ಮೇಲೆ ಪರಶುರಾಮ ತೀರ್ಥದಲ್ಲಿ ನಡೆಸಲಾಗುತ್ತದೆ. ಇದರ ನಂತರ, ಭಕ್ತರು ಈ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಈ ಹಬ್ಬವು ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ಅಥವಾ ಜನವರಿ ಮೊದಲಾರ್ಧದಲ್ಲಿ ಬರುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಇತರ ನಗರಗಳಿಂದ ಸಾವಿರಾರು ಜನರನ್ನು ಆಗಮಿಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:youtube

ಬೆಂಗಳೂರಿನಿಂದ ತೀರ್ಥಹಳ್ಳಿಗೆ ನೇರವಾಗಿ ಅಷ್ಟೊಂದು ಬಸ್‌ಗಳಿಲ್ಲದ ಕಾರಣ ನೀವು ಶಿವಮೊಗ್ಗಕ್ಕೆ ಬರಬೇಕಾಗುತ್ತದೆ. ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಕಷ್ಟು ಬಸ್‌ಗಳಿವೆ. ಹಾಗಾಗಿ ನೀವು ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬರಬೇಕೆಂದಿದ್ದರೆ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ತೀರ್ಥಹಳ್ಳಿ ಬಸ್‌ ಹಿಡಿಯಿರಿ. ಶಿವಮೊಗ್ಗದಿಂದ ಸುಮಾರು ೬೧ ಕಿ.ಮೀ ದೂರದಲ್ಲಿದೆ ಈ ಕ್ಷೇತ್ರ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+