ಮಂಡ್ಯ ಜಿಲ್ಲೆಯು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ರೂಪದಲ್ಲಿ ಬಹಳ ಪ್ರಸಿದ್ಧವಾಗಿದೆ. ಮಂಡ್ಯವನ್ನು ಸಕ್ಕರೆ ನಾಡು ಎಂದೂ ಕರೆಯುತ್ತಾರೆ. ಇಲ್ಲಿ ಕಬ್ಬಿನ ಬೆಳೆ ಅಧಿಕವಿದೆ. ಪ್ರವಾಸಿಗರ ದೃಷ್ಠಿಯಿಂದ ಮಂಡ್ಯ ಜಿಲ್ಲೆಯು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. 2016ರಲ್ಲಿ ನಡೆದ ಪುರಾತತ್ವ ಸವೇಕ್ಷಣದಲ್ಲಿ ಇಲ್ಲಿನ ಜೈನ ಧರ್ಮಕ್ಕೆ ಸಂಬಂಧಿಸಿದಂತಹ 13 ಫೀಟ್ ಎತ್ತರದ ಬಾಹುಬಲಿ ಮೂರ್ತಿ ದೊರೆತಿದೆ. ಈ ಮೂರ್ತಿಯು ಜೈನಧರ್ಮದ ಪ್ರಥವ ತೀರ್ಥಂಕರ ಆಧಿನಾಥನ ಮಗನದ್ದು ಎನ್ನಲಾಗುತ್ತದೆ.

ದಾರಿಯಾ ದೌಲತಾ ಬಾದ್
PC: Ahmad Faiz Mustafa
ಮಂಡ್ಯ ಪ್ರವಾಸವನ್ನು ನೀವು ಇಲ್ಲಿನ ಐತಿಹಾಸಿಕ ತಾಣವಾಗಿರುವ ದಾರಿಯಾ ದೌಲತಾ ಬಾದ್‌ನಿಂದ ಆರಂಭಿಸಬಹುದು. ಇದು ಟಿಪ್ಪು ಸುಲ್ತಾನನ ಮಹಲ್ ಆಗಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇದೆ. ಇದೊಂದು ಐತಿಹಾಸಿಕ ಸ್ಮಾರಕವಾಗಿದೆ. ಈ ಸ್ಮಾರಕದಲ್ಲಿ ಸಾಗುವನಿ ಮರವನ್ನು ಹೆಚ್ಚಾಗಿ ಬಳಸಲಾಗಿದೆ. ಈ ಮಹಲ್‌ನ ನಿರ್ಮಾಣದ ಕಾರ್ಯವನ್ನು ಹೈದರ್ ಆಲಿ ಪ್ರಾರಂಭಿಸಿದನು. ಹಾಗೂ ಅದರ ಪೂರ್ಣ ನಿರ್ಮಾಣವನ್ನು ಟಿಪ್ಪು ಸುಲ್ತಾನ್ ೧೭೮೪ರಲ್ಲಿ ಮಾಡಿದನು.

ರಂಗನಾಥಸ್ವಾಮಿ ದೇವಾಲಯ
ಇಲ್ಲಿನ ಧಾರ್ಮಿಕ ತಾಣಗಳಲ್ಲಿ ಅತ್ಯಂತ ಹಳೇಯ ರಂಗನಾಥ ಸ್ವಾಮಿ ದೇವಾಲಯವೂ ಒಂದು. ಕಾವೇರಿ ನದಿ ಸಮೀಪದಲ್ಲಿರುವ ಈ ಮಂದಿರವು ವಿಷ್ಣುವಿನ ರಂಗನಾಥ ಸ್ವಾಮಿ ರೂಪಕ್ಕೆ ಸಮರ್ಪಿತವಾಗಿದೆ. ಈ ದೇವಸ್ಥಾನವು ದಕ್ಷಿಣದ ಪಂಚರಂಗ ಕ್ಷೇತ್ರಗಳಲ್ಲಿ ಒಂದಾಗಿದೆ.

ಕೃಷ್ಣ ರಾಜ ಸಾಗರ ಅಣೆಕಟ್ಟು
ಮಂಡ್ಯದ ಪ್ರಮುಖ ಆಕರ್ಷಣೀಯ ತಾಣಗಳಲ್ಲಿ ನೀವು ಕೃಷ್ಣರಾಜ ಸಾಗರ ಹಾಗೂ ಅಲ್ಲಿನ ಉದ್ಯಾನವನ್ನು ನೋಡಬಹುದು. ಶ್ರೀರಂಗ ಪಟ್ಟಣದಿಂದ ಇದು ಸುಮಾರು ೧೨ ಕಿ.ಮೀ ದೂರದಲ್ಲಿದೆ. ಈ ಅಣೆಕಟ್ಟನ್ನು ಕೃಷ್ಣಾ ನದಿಗೆ ನಿರ್ಮಿಸಲಾಗಿದೆ. ಇದು ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷೀಸುತ್ತದೆ. ಹೆಚ್ಚಾಗಿ ಮಳೆಗಾಲದಲ್ಲಿ ಈ ಅಣೆಕಟ್ಟಿನ ಸೌಂದರ್ಯ ನೋಡಲು ಸುಂದರವಾಗಿರುತ್ತದೆ.

ಶಿವನಸಮುದ್ರ ಫಾಲ್ಸ್
ಮಂಡ್ಯದಲ್ಲಿ ನೀವು ಶಿವನ ಸಮುದ್ರ ಜಲಪಾತವನ್ನು ನೋಡಬಹುದು. ಇದು ಜಾಲವಲ್ಲಿ ತಾಲೂಕಿನಲ್ಲಿದೆ. ಇದು ಇಲ್ಲನ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ. ಕಾವೇರಿನದಿಯಿಂದಾಗಿ ಈ ಜಲಪಾತ ಉಂಟಾಗಿದೆ. ಇದು ಸುಮಾರು ೯೮ ಫೀಟ್ ಎತ್ತರದಿಂದ ಧುಮ್ಮುಕ್ಕುತ್ತದೆ. ಇಲ್ಲಿಗೆ ಭೇಟಿ ನೀಡಬೇಕಾದರೆ ಮಳೆಗಾಲವೇ ಬೆಸ್ಟ್. ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿರುತ್ತದೆ.

ಗುಂಬಜ್ ಫೋರ್ಟ್
ಮಂಡ್ಯದಲ್ಲಿ ಈ ಎಲ್ಲಾ ಪ್ರದೇಶಗಳನ್ನಲ್ಲದೆ ಶ್ರೀರಂಗಪಟ್ಟಣದಲ್ಲಿನ ಗುಂಬಜ್ ಫೋರ್ಟ್‌ನ್ನು ನೋಡಬಹುದು. ಇದೊಂದು ಐತಿಹಾಸಿಕ ಸ್ಮಾರಕವಾಗಿದೆ. ಇಲ್ಲಿ ಟಿಪ್ಪು ಸುಲ್ತಾನ್ ಹೈದರ್ ಆಲಿ, ಹಾಗೂ ಟಿಪ್ಪುವಿನ ತಾಯಿಯ ಸಮಾಧಿ ಇದೆ. ಈ ಸಮಾಧಿಯನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದಂತೆ. ಟಿಪ್ಪುವಿನ ಮರಣಾನಂತರ ಟಿಪ್ಪುವನ್ನು ಕೂಡಾ ಅಲ್ಲೇ ಸಮಾಧಿ ಮಾಡಲಾಗಿದೆ.


Click it and Unblock the Notifications
















