Search
  • Follow NativePlanet
Share
» » ಮೌಂಟ್ ಅಬು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳು ಇವೆ...

ಮೌಂಟ್ ಅಬು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳು ಇವೆ...

ಮರಳಿನಿಂದ ಕೂಡಿರುವ ರಾಜಸ್ಥಾನದಲ್ಲಿ ಏಕೈಕ ಹಿಲ್ ಸ್ಟೇಷನ್ ಮೌಂಟ್ ಅಬು. ಇದು ಸಿರೋಹಿ ಎಂಬ ಜಿಲ್ಲೆಯಲ್ಲಿದೆ. ಮೌಂಟ್ ಅಬು ಸಮುದ್ರ ಮಟ್ಟದಿಂದ ಸುಮಾರು 1,220 ಮೀಟರ್ ಎತ್ತರದಲ್ಲಿರುವ ಅರಾವಳಿ ಪರ್ವತ ಶ್ರೇಣಿಯಲ್ಲಿದೆ. ರಾಜಸ್ಥಾನದಲ್ಲಿನ ಏಕೈಕ ಹಿಲ್ ಸ್ಟೇಷನ್ ಇದೇ ಆದ್ದರಿಂದ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲದೇ, ಅನೇಕ ಮಂದಿ ಶ್ರೀಮಂತರು ಇಲ್ಲಿಯೇ ತಮ್ಮ ಸ್ಥಿರ ನಿವಾಸವನ್ನು ಏರ್ಪಾಟು ಮಾಡಿಕೊಳ್ಳುವ ಸಲುವಾಗಿ ಆಸಕ್ತಿ ವಹಿಸುತ್ತಿದ್ದಾರೆ.

ಈ ಮೌಂಟ್ ಅಬು ಪ್ರಮುಖ ಪ್ರವಾಸಿ ಕೇಂದ್ರವಾಗಿಯೇ ಅಲ್ಲದೇ ಪುರಾಣಾತ್ಮಕವಾಗಿಯೂ ಕೂಡ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಅತ್ಯಂತ ಪ್ರಮುಖ ಪ್ರದೇಶಗಳಾದ ದಿಲ್ವಾರ್ ಜೈನ್ ದೇವಾಲಯ, ನಕ್ಕಿ ಲೇಕ್, ಸನ್ ಸೆಟ್ ಪಾಯಿಂಟ್, ಅಚಲೇಶ್ವರ ಮಹಾದೇವ್ ದೇವಾಲಯ, ಮೌಂಟ್ ಅಬು ಬಜಾರ್....

 1.ದಿಲ್ವಾರ್ ಜೈನ್ ದೇವಾಲಯ

1.ದಿಲ್ವಾರ್ ಜೈನ್ ದೇವಾಲಯ

PC:YOUTUBE

ಅದ್ಭುತವಾದ ಹಾಗು ವಿಶಿಷ್ಟವಾದ ನಿರ್ಮಾಣ ಶೈಲಿ, ಚರಿತ್ರೆ, ಫೋಟೋಗ್ರಾಫಿಗೆ ಅತ್ಯುತ್ತಮವಾದ ಪ್ರದೇಶ ಇದಾಗಿದೆ. ಜೈನ ಧರ್ಮದ ಭಕ್ತರು ಹೆಚ್ಚಾಗಿ ಈ ಪವಿತ್ರವಾದ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಪ್ರವೇಶ: ಉಚಿತ

ಭೇಟಿಗೆ ಸಮಯ: ವಾರದ ಎಲ್ಲಾ ಸಮಯದಲ್ಲಿಯು ಮಧ್ಯಾಹ್ನ 12 ಗಂಟೆಗಳಿಂದ ಸಂಜೆ 5 ಗಂಟೆಯವರೆಗೆ ಪ್ರವೇಶ ಮಾಡಬಹುದು.

ನೋಡಲು ಎಷ್ಟು ಸಮಯ ಬೇಕು?
ಸುಮಾರು ಒಂದು ಗಂಟೆಯ ಸಮಯ ಬೇಕು...

ಮೌಂಟ್ ಅಬು ನಿಂದ ಕೇವಲ 2.5 ಕಿ.ಮೀ ದೂರದಲ್ಲಿ ಈ ಜೈನ ದೇವಾಲಯದ ಸಮೂಹವಿದೆ. ಈ ದೇವಾಲಯವನ್ನು 1 ರಿಂದ 13 ಶತಮಾನದ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಗುರುತಿಸಲಾಗಿದೆ. ಅಮೃತಶಿಲೆಯಿಂದ ನಿರ್ಮಾಣ ಮಾಡಿರುವ ಈ ದೇವಾಲಯದಲ್ಲಿ ಅಪಾರ ಶಿಲ್ಪ ಸೌಂದರ್ಯವನ್ನು ಕಾಣಲು ಸಾವಿರ ಕಣ್ಣುಗಳು ಸಾಲದು.

 2.ನಕ್ಕಿ ಲೇಕ್

2.ನಕ್ಕಿ ಲೇಕ್

PC:YOUTUBE

ವಿಶೇಷತೆ...ಪ್ರಕೃತಿ ಸೌಂದರ್ಯವನ್ನು ಅಸ್ವಾಧಿಸಲು, ಫೋಟೋಗ್ರಾಫಿ, ವಿರಾಮಕ್ಕಾಗಿ...

ಪ್ರವೇಶ ಶುಲ್ಕ: ಪ್ರವೇಶ ಶುಲ್ಕ ಉಚಿತ..ಬೋಟಿಂಗ್ ಮಾಡಬೇಕಾದರೆ ಮಾತ್ರ ಸ್ವಲ್ಪ ಹಣವನ್ನು ಪಾವತಿಸಬೇಕು.

ಪ್ರವೇಶ ಸಮಯ: ವಾರದಲ್ಲಿ ಎಲ್ಲಾ ದಿನಗಳು ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ

ನೋಡಲು ಎಷ್ಟು ಸಮಯ ಬೇಕು?
ಸುಮಾರು ಒಂದು ಗಂಟೆಯ ಸಮಯ ಬೇಕು...

ಮೌಂಟ್ ಅಬು ಪ್ರದೇಶದಲ್ಲಿ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಈ ನಕ್ಕಿ ಸರೋವರವು ಕೂಡ ಒಂದು. ಭಾರತೀಯ ಹಿಂದೂ ಪುರಾಣಗಳ ಪ್ರಕಾರ ಈ ಸರೋವರವನ್ನು ದೇವತೆಗಳು ನಿರ್ಮಾಣ ಮಾಡಿದರು ಎಂದು ನಂಬಲಾಗಿದೆ. ಅದ್ದರಿಂದಲೇ ಇದಕ್ಕೆ ಆ ಹೆಸರು ಬಂದಿತಂತೆ. ಕುಟುಂಬ ಸಭ್ಯರು, ಸ್ನೇಹಿತರು ಇಲ್ಲಿ ಬೋಟಿಂಗ್ ಮಾಡುವುದು ಜೀವನದಲ್ಲಿ ಎಂದಿಗೂ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

 3.ಸೂರ್ಯಾಸ್ತ ಸಮಯದ ಪಾಯಿಂಟ್

3.ಸೂರ್ಯಾಸ್ತ ಸಮಯದ ಪಾಯಿಂಟ್

PC:YOUTUBE

ಟಿಕೆಟ್ ಫಿ...ಉಚಿತ

ಇಲ್ಲಿ ಫೋಟೋಗ್ರಾಫಿ ಕೂಡ ಮಾಡಬಹುದು.

ಪ್ರವೇಶ ಸಮಯ: ಬೆಳಗ್ಗೆಯಿಂದ ಸಂಜೆ ಸೂರ್ಯಾಸ್ತ ಸಮಯದ ವರೆಗೆ..

ನೋಡಲು ಎಷ್ಟು ಸಮಯ ಬೇಕು?
ಸುಮಾರು ಒಂದು ಗಂಟೆಯ ಸಮಯ ಬೇಕು...

ಅರಾವಳಿ ಪರ್ವತ ಶ್ರೇಣಿಯಲ್ಲಿರುವ ಈ ಮೌಂಟ್ ಅಬು ಪ್ರದೇಶದಲ್ಲಿ ಸೂರ್ಯಾಸ್ತ ಸಮಯದಲ್ಲಿ ಪ್ರಕೃತಿ ಪ್ರೇಮಿಗಳು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲದೇ, ಇಲ್ಲಿನ ಸೂರ್ಯಾಸ್ತ ಸಮಯದಲ್ಲಿ ಅನೇಕ ಬಾಲಿವುಡ್ ಸಿನಿಮಾಗಳು ಕೂಡ ನಿರ್ಮಾಣ ಮಾಡಿದ್ದಾರೆ.

4.ಅಚಲೇಶ್ವರ ಮಹದೇವ್ ದೇವಾಲಯ

4.ಅಚಲೇಶ್ವರ ಮಹದೇವ್ ದೇವಾಲಯ

PC:YOUTUBE

ವಿಶೇಷತೆಗಳು.. ದೇವಾಲಯದ ನಿರ್ಮಾಣ ಶೈಲಿ ಅದ್ಭುತವಾಗಿದೆ. ಹಿಂದೂಗಳಿಗೆ ಪರಮ ಪವಿತ್ರವಾದ ಪುಣ್ಯಕ್ಷೇತ್ರ ಇದಾಗಿದೆ.

ಪ್ರವೇಶ ಶುಲ್ಕ: ಪ್ರವೇಶ ಶುಲ್ಕ ಉಚಿತ..ಬೋಟಿಂಗ್ ಮಾಡಬೇಕಾದರೆ ಮಾತ್ರ ಸ್ವಲ್ಪ ಹಣವನ್ನು ಪಾವತಿಸಬೇಕು.

ಪ್ರವೇಶ ಸಮಯ: ವಾರದಲ್ಲಿ ಎಲ್ಲಾ ದಿನಗಳು ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ

ನೋಡಲು ಎಷ್ಟು ಸಮಯ ಬೇಕು?
ಸುಮಾರು ಒಂದು ಗಂಟೆಯ ಸಮಯ ಬೇಕು...

ಭಾರತ ದೇಶದಲ್ಲಿನ ಅತ್ಯಂತ ಪ್ರಾಚೀನವಾದ ದೇವಾಲಯಗಳಲ್ಲಿ ಈ ಅಚಲೇಶ್ವರ ಮಹಾದೇವ್ ದೇವಾಲಯ ಕೂಡ ಒಂದು. ಇಲ್ಲಿ ಶಿವಲ ಬಲಗಾಲಿನ ಹೆಬ್ಬೆರಳನ್ನು ಪೂಜಿಸುತ್ತಾರೆ. ಇನ್ನು ಈ ದೇವಾಲಯದಲ್ಲಿರುವ ಕಂಚಿನಿಂದ ಇರುವ ನಂದಿ ವಿಗ್ರಹವು ಕೂಡ ಭಕ್ತರಿಗೆ ಆಕರ್ಷಿಸುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+