Search
  • Follow NativePlanet
Share
» »ಅದ್ಭುತ ದೀಪಾವಳಿಗೆ ಸಾಕ್ಷಿಯಾಗುವ 5 ಸ್ಥಳಗಳು!

ಅದ್ಭುತ ದೀಪಾವಳಿಗೆ ಸಾಕ್ಷಿಯಾಗುವ 5 ಸ್ಥಳಗಳು!

ದಿಪಾವಳಿಯನ್ನು ಆಚರಿಸಲು ಹೊರಡಬಹುದಾದ ಐದು ಅದ್ಭುತ ಸ್ಥಳಗಳು ಹಾಗೂ ಹೆಚ್ಚಿನ ಹಣ ಉಳಿತಾಯದೊಂದಿಗೆ ಅಲ್ಲಿ ಹೋಟೆಲ್ ರೂಂ ಬುಕ್ ಮಾಡಿ

By Vijay

ಸಾಂಪ್ರದಾಯಿಕವಾಗಿ ಮದ್ದು, ಪಟಾಕಿಗಳ ಆರ್ಭಟದಿಂದ ಕೂಡಿರುವ ದೀಪಾವಳಿ ನಮಗೆಲ್ಲ ಗೊತ್ತಿರುವ ಹಾಗೆ ಅಷ್ಟೊಂದು ಪರಿಸರ ಸ್ನೇಹಿಯಾಗಿರುವುದಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಪರಿಸರ ಮಾಲಿನ್ಯದ ಕುರಿತು ಸಾಕಷ್ಟು ಜನರಲ್ಲಿ ಜಾಗೃತಿ ಮೂಡುತ್ತಿದ್ದು ವರ್ಷದಿಂದ ವರ್ಷಕ್ಕೆ ಪರಿಸರ ಸ್ನೇಹಿ ದಿಪಾವಳಿಯನ್ನು ಆಚರಿಸುವಲ್ಲಿ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಭಾರತದಲ್ಲಿ ಕೆಲವು ನಗರಗಳು ದೀಪಾವಳಿಯ ಸಂದರ್ಭದಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತವೆ. ಶಾಪಿಂಗ್, ಎಲ್ಲೆಡೆ ಸಂಭ್ರಮ, ಬಣ್ಣ ಬಣ್ಣದ ಲೈಟುಗಳಿಂದ ಸಿಂಗರಿಸಲ್ಪಟ್ಟ ಹಾದಿ ಬೀದಿಗಳು, ಲವಲವಿಕೆ ಈ ನಗರಗಳಲ್ಲಿ ಅದ್ಭುತವಾಗಿ ಕಂಡುಬರುವುದಲ್ಲದೆ ಹಬ್ಬದ ಗಮ್ಮತ್ತನ್ನು ಎತ್ತಿ ಹಿಡಿಯುತ್ತವೆ. ದೀಪಾವಳಿಗೆ ಇಂತಹ ಸ್ಥಳಗಳಿಗೆ ಭೇಟಿ ನೀಡಿ, ಒನ್ ಇಂಡಿಯಾ ಕುಪನ್ ಬಳಸಿ ಅದ್ಭುತ ಉಳಿತಾಯದ ಶಾಪಿಂಗ್ ಜೊತೆಗೆ ಅಮೋಘ ದೀಪಾವಳಿಯನ್ನು ಆಚರಿಸಿ.

ದೀಪಾವಳಿ ಪ್ರವಾಸಿ ಪ್ಯಾಕೆಜುಗಳು ಮತ್ತು ಉಚಿತ ಕೂಪನ್ ಕೋಡುಗಳು!

ಅದ್ಭುತ ದೀಪಾವಳಿಗೆ ಸಾಕ್ಷಿಯಾಗುವ 5 ಸ್ಥಳಗಳು!

ಜೈಪುರ : "ಪಿಂಕ್ ಸಿಟಿ" ಎಂದೆ ಪ್ರಸಿದ್ಧವಾಗಿರುವ ರಾಜಸ್ಥಾನದ ರಾಜಧಾನಿ ಜೈಪುರವು ತನ್ನಲ್ಲಿರುವ ಅದ್ಭುತ ಕೋಟೆಗಳು ಹಾಗೂ ಅರಮನೆಗಳಿಗಾಗಿ ವಿಶ್ವದಲ್ಲೆ ಪ್ರಖ್ಯಾತಿಗಳಿಸಿದೆ. ಅದರಂತೆ ದಿಪಾವಳಿಯ ಸಂದರ್ಭದಲ್ಲಿ ಜೈಪುರದ ಬಹುತೇಕ ಭಾಗಗಳಲ್ಲಿ ಪಟಾಕಿಗಳ ಸದ್ದಿಲ್ಲದೆ ಬದಲು ಹೆಚ್ಚಾಗಿ ಹಣತೆಗಳನ್ನು ಬೆಳಗಿ ಸುಂದರವಾಗಿ ಆಚರಿಸಲಾಗುತ್ತದೆ.

ಕೋವಲಂ, ಕೇರಳ : ಕೇರಳ ಕರಾವಳಿಯ ಒಂದು ಸುಂದರ ಗ್ರಾಮ ಕೋವಲಂ. ತನ್ನಲ್ಲಿರುವ ಸಮುದ್ರ ಹಾಗೂ ಹವಾ ಎಂಬ ಎರಡು ಕಡಲ ತೀರಗಳಿಂದಾಗಿ ಸಾಕಷ್ಟು ಪ್ರವಾಸಿಗರ ಗಮನಸೆಳೆಯುತ್ತದೆ ಕೋವಲಂ. ದೀಪಾವಳಿಯ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ತಮ್ಮ ಬಂಧುಗಳೊಡಗೂಡಿ ಸಂತಸದಿಂದ ದೀಪಾವಳಿಯನ್ನು ಶಾಂತಿಯುತವಾಗಿ ಆಚರಿಸುತ್ತಾರೆ.

ಗೋವಾ : ಪರಿಸರ ಸ್ನೇಹಿ ದಿಪಾವಳಿಯ ವಿಷಯ ಬಂತೆಂದರೆ ಹೆಚ್ಚು ಗಮನಸೆಳೆವ ತಾಣಗಳ ಪೈಕಿ ಗೋವಾ ಪ್ರಮುಖವಾಗಿ ಗಮನಸೆಳೆಯುತ್ತದೆ. ಇಲ್ಲಿನ ಅದ್ಭುತವಾದ ಕಡಲ ತೀರಗಳು ದೀಪಾವಳಿಯ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ. ರಜೆಯ ಮಜೆಯನ್ನು ಸುಂದರವಾಗಿ ಅನುಭವಿಸಲು ಗೋವಾ ಹೇಳಿ ಮಾಡಿಸಿದಂತಹ ಪ್ರವಾಸಿ ತಾಣವಾಗಿದೆ.

ಬೆಂಗಳೂರು : ದೀಪಾವಳಿಯು ಕಣ್ಣಿಗೆ ಕಟ್ಟುವ ಹಾಗೆ ಮಾಡುತ್ತದೆ ಬೆಂಗಳೂರು ನಗರಿ. ದೇಶದ ಬಹುತೇಕ ಎಲ್ಲ ಭಾಗಗಳ ಜನರಿರುವ ಬೆಂಗಳೂರಿನಲ್ಲಿ ದೀಪಾವಳಿಯ ವೈವಿಧ್ಯತೆಯನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ ಶಾಪಿಂಗ್ ಚಟುವಟಿಕೆಯಂತೂ ಬೆಂಗಳೂರಿನ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಶಿಮ್ಲಾ : ಹಿಮಾಚಲ ಪ್ರದೇಶ ರಾಜ್ಯದ ಅದ್ಭುತ ಪ್ರವಾಸಿ ತಾಣವಾದ ಶಿಮ್ಲಾದಲ್ಲಿ ದೀಪಾವಳಿ ಹಬ್ಬದ ಪ್ರಭಾವ ಬಹು ಮುಂಚೆಯೆ ಪ್ರಾರಂಭವಾಗುತ್ತದೆ. ಹಿಮದಲ್ಲಿ ಸ್ಕೇಟಿಂಗ್, ಹೈಕಿಂಗ್ ನಂತಹ ಚಟುವಟಿಕೆಗಳು ಸಾಕಷ್ಟು ಗಮನಸೆಳೆಯುತ್ತವೆ.

ನಿಮಗೂ ಈ ಲೇಖನದಲ್ಲಿ ತಿಳಿಸಲಾದ ಯಾವುದಾದರೊಂದು ಸ್ಥಳಕ್ಕೆ ಪ್ರವಾಸ ಹೊರಡಬೇಕೆ? ಅದೂ ಸಹ ಅತಿ ಕಡಿಮೆ ಬೆಲೆಗಳಲ್ಲಿ ಫ್ಲೈಟ್ ಟಿಕೆಟ್ ಹಾಗೂ ಹೋಟೆಲ್ ರೂಂ ಬುಕ್ ಮಾಡಿ? ಹಾಗಾದರೆ ಒನ್ ಇಂಡಿಯಾದ ಕೂಪನ್ ವಿಭಾಗಕ್ಕೆ ಭೇಟಿ ನೀಡಿ ನಿಮಗಿಷ್ಟವಾಗುವ ಕೂಪನ್ ಅನ್ನು ಆಯ್ಕೆ ಮಾಡಿ ಸಂಪೂರ್ಣವಾಗಿ ಉಚಿತವಾಗಿ ಬಳಸಿ ಅದರ ಅಪಾರ ಲಾಭ ಪಡೆಯಿರಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+