Search
  • Follow NativePlanet
Share
» »ಸಾಧು ಸಂತರು ಮೋಕ್ಷ ಗಳಿಸಿದ ಪಾರಸನಾಥ ಶಿಖರದ ಯಾತ್ರೆ ಮಾಡಿ

ಸಾಧು ಸಂತರು ಮೋಕ್ಷ ಗಳಿಸಿದ ಪಾರಸನಾಥ ಶಿಖರದ ಯಾತ್ರೆ ಮಾಡಿ

ಪಾರಸನಾಥ ಬೆಟ್ಟವು ಜಾರ್ಖಂಡ್‌ನ ಗಿರಿಡಿಹ್‌ ಜಿಲ್ಲೆಯಲ್ಲಿದೆ. ಇದನ್ನು ಸಮ್ಮೇದ್ ಶಿಖರ್ ಎಂದೂ ಕರೆಯುತ್ತಾರೆ. ಇದೊಂದು ಜೈನರ ಪುಣ್ಯ ಕ್ಷೇತ್ರವಾಗಿದೆ. 1350 ಫೀಟ್ ಎತ್ತರವಿರುವ ಈ ಶಿಖರವು ಜಾರ್ಖಂಡ್‌ ರಾಜ್ಯದಲ್ಲಿರುವ ಅತ್ಯಂತ ಎತ್ತರದ ಶಿಖರವೂ ಇದಾಗಿದೆ.

ಪಾದ ಯಾತ್ರೆ

ಪಾದ ಯಾತ್ರೆ

PC: AGRIM.AJ

ಮುಖ್ಯದ್ವಾರದಿಂದ ಶಿಖರದವರೆಗೆ ೧೦ಕಿ.ಲೋ ನಡೆದು ಹೋಗಬೇಕು. ಈ ಯಾತ್ರೆಯಲ್ಲಿ ಸುಮಾರು ೮ ರಿಂದ 10 ಗಂಟೆ ಸಮಯ ಹಿಡಿಯುತ್ತದೆ. ಇಲ್ಲಿನ ಯಾತ್ರೆಯನ್ನು ನೀವು ಬೆಳಗ್ಗಿನ ಸಮಯದಲ್ಲೇ ಪ್ರಾರಂಭಿಸಿದರೆ ಒಳ್ಳೆಯದು. ಕುಡಿಯುವ ನೀರು, ಆಹಾರವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಒಳ್ಳೆಯದು.

ಮೋಕ್ಷ ಪ್ರಾಪ್ತಿ ಮಾಡಿದ್ದು ಇಲ್ಲೆ

ಮೋಕ್ಷ ಪ್ರಾಪ್ತಿ ಮಾಡಿದ್ದು ಇಲ್ಲೆ

PC: Bodhisattwa

ಪಾರಸನಾಥ ಬೆಟ್ಟದ ಮೇಲೆ ಜೈನ್ ಧರ್ಮದ 24 ತೀರ್ಥಂಕರರಲ್ಲಿ 20 ತೀರ್ಥಂಕರರ ಮಂದಿರವಿದೆ. ಎಲ್ಲಾ ತೀರ್ಥಂಕರರು ಪಾರಸನಾಥದಲ್ಲೇ ಮೋಕ್ಷ ಪ್ರಾಪ್ತಿ ಮಾಡಿದ್ದು ಎನ್ನಲಾಗುತ್ತದೆ. ಇಲ್ಲಿ ಅನೇಕ ಸಾಧು, ಸಂತರು ಮೋಕ್ಷ ಪ್ರಾಪ್ತಿ ಮಾಡಿದ್ದಾರೆ.

ಮೃತ್ಯುವಿನ ನಂತರ ಮೋಕ್ಷ

ಮೃತ್ಯುವಿನ ನಂತರ ಮೋಕ್ಷ

PC: CaptVijay

ಜೀವನದಲ್ಲಿ ಒಮ್ಮೆಯಾದರೂ ಪೂರ್ಣ ನಿಷ್ಠೆಯಿಂದ ಈ ಶಿಖರವನ್ನು ಏರಿದರೆ ಮೃತ್ಯುವಿನ ನಂತರ ಮೋಕ್ಷ ಪ್ರಾಪ್ತಿಯಾಗುತ್ತಂತೆ. ಶಿಖರದ ಮೇಲೆ ಮುಖ್ಯ ಮಂದಿರವಿದೆ ಅದನ್ನು ಶೀಖರ್ ಮಂದಿರ ಎಂದು ಕರೆಯಲಾಗುತ್ತದೆ. ಇಲ್ಲಿ ತಲುಪಿದ ನಂತರವೇ ವ್ಯಕ್ತಿಗೆ ಯಾತ್ರೆಯ ಸಂಪೂರ್ಣ ಫಲ ದೊರೆಯುತ್ತದೆ.

ಪಲ್ಲಕ್ಕಿ ವ್ಯವಸ್ಥೆಯೂ ಇದೆ

ಪಲ್ಲಕ್ಕಿ ವ್ಯವಸ್ಥೆಯೂ ಇದೆ

PC: Pankajmcait

ಪ್ರಾಚೀನ ಕಾಲದಿಂದಲು ಅನೇಕ ರಾಜರು ಇಲ್ಲಿ ಮೋಕ್ಷ ಪ್ರಾಪ್ತಿ ಮಾಡುವ ಸಲುವಾಗಿ ಆಗಮಿಸಿದ್ದಾರೆ. ಜಲಮಂದಿರದಿಂದ 1 ಕಿ.ಲೋ ಮೀಟರ್ ದೂರದಲ್ಲಿ ಮುಖ್ಯ ಮಂದಿರವಿದೆ. ಇಲ್ಲಿನ ಯಾತ್ರೆಯು ಕಷ್ಟಕರವಾಗಿದ್ದು ನಡೆಸು ಹೋಗಲು ಸಾಧ್ಯವಿಲ್ಲದವರು ಪಲ್ಲಕ್ಕಿಯಲ್ಲಿ ಪ್ರಯಾಣಿಸಬಹುದು. ಇದಕ್ಕೆ 5 ರಿಂದ 8 ಸಾವಿರದವರೆಗೆ ನೀಡಬೇಕಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Bodhisattwa

ರಸ್ತೆ ಮಾರ್ಗದ ಮೂಲಕ: ರಾಂಚಿಯಿಂದ 209 ಕಿ.ಮೀ , ಗಿರಿಡಿಹ್‌ನಿಂದ ಪಾರಸ್‌ನಾಥ್ 31ಕಿ.ಮಿ , ಗಿರಿಡಿಹ್‌ನಿಂದ ಮಧುಬನ್‌ ಮೋಡ್ 25 ಕಿ.ಮಿ ದೂರದಲ್ಲಿದೆ. ರೈಲು ಮಾರ್ಗದ ಮೂಲಕ : ಧನ್‌ಬಾದ್‌ನಿಂದ ಪಾರಸ್‌ನಾಥ 48 ಕಿ.ಮೀ, ಕೋಡ್‌ರಾಮದಿಂದ ಪಾರಸನಾಥ 75 ಕಿ.ಮಿ., ರಾಂಚಿಯಿಂದ ಪಾರಸನಾಥ್ ಸ್ಟೇಶನ್ 165ಕಿ.ಮೀ ದೂರದಲ್ಲಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+