Search
  • Follow NativePlanet
Share
ಮುಖಪುಟ » ಸ್ಥಳಗಳು» ಗಿರಿಡೀಹ್

ಗಿರಿಡೀಹ್ - ಜೈನ್ ಧರ್ಮದ ಚಟುವಟಿಕೆಯ  ಕೇಂದ್ರ.

36

ಗಿರಿಡೀಹ್ ಜಾರ್ಖಂಡಿನ ಒಂದು ಪ್ರಸಿದ್ಧ ಪಟ್ಟಣ.  ಛೋಟಾನಾಗಪುರ ವಿಭಾಗ ಕೇಂದ್ರದ ಉತ್ತರ ಭಾಗದಲ್ಲಿರುವ ಗಿರಿಡೀಹ್ ಪಟ್ಟಣವು ಬಿಹಾರಿನ ಉತ್ತರದಲ್ಲಿರುವ ನವಾಡಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು, ಇದಕ್ಕೆ ಪೂರ್ವದಲ್ಲಿ ದಿಯೋಘರ್ ಮತ್ತು ಜಾಂತಾಡ ಜಿಲ್ಲೆಗಳು, ಪಶ್ಚಿಮದಲ್ಲಿ ಹಜ಼ಾರಿಬಾಗ್ ಮತ್ತು ಕೋಡರ್ಮಾ ಜಿಲ್ಲೆಗಳು, ದಕ್ಷಿಣದಲ್ಲಿ ಧನ್ಬಾದ್ ಮತ್ತು ಬೊಕಾರೋ ಜಿಲ್ಲೆಗಳಿವೆ. ಇದು ಒಂದು ಬೆಟ್ಟಗಳ ಮಧ್ಯೆ ಸುಂದರವಾದ ಪ್ರದೇಶವಾಗಿದ್ದು ನೆರೆರಾಜ್ಯಗಳಿಂದ ಪ್ರವಾಸಿಗಳನ್ನು ಆಕರ್ಷಿಸುತ್ತದೆ.  

ಹಿಂದೆ ಹಜಾರಿಬಾಗ್ ಜಿಲ್ಲೆಯಲ್ಲಿದ್ದು 1972 ಇಸವಿಯಲ್ಲಿ ಗಿರಿಡೀಹ್ ಜಿಲ್ಲೆಯು ಹೊಸದಾಗಿ ರೂಪುಗೊಂಡಿತು.  4853.56 ಚ.ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಗಿರಿಡೀಹ್ ಜಿಲ್ಲೆಯು ಕೆಂಪು ಅಭ್ರಕ (Ruby mica) ಮತ್ತು ಕಲ್ಲಿದ್ದಲುಗಳ ಒಂದು ಭಂಡಾರವೇ ಆಗಿದೆ. ಗಿರಿಡೀಹ್ ಎಂದರೆ ಬೆಟ್ಟಗುಡ್ಡಗಳ ಪ್ರದೇಶವಾಗಿದ್ದು ಗಮನಹರಿಸುವ ಮಲೆನಾಡಿನ ಪ್ರದೇಶವಾಗಿದೆ. ವಿಶಾಲವಾದ ಅರಣ್ಯಗಳು ಜಿಲ್ಲೆಯ ಬಹುಭಾಗವನ್ನು ಆವರಿಸಿಕೊಂಡಿದೆ. ಇಲ್ಲಿ ಹೆಚ್ಚಾಗಿ ಕಾಣುವ ಸಾಲ್ ಮರಗಳಲ್ಲದೆ ಬಿದಿರು, ಸೇಮಲ್ (Red-silk cotton tree), ಮಹೂವಾ(Mahua) ಮತ್ತು ಪಲಶ್(Palash) ಮರಗಳನ್ನು ಕಾಣಬಹುದು. ಗಿರಿಡೀಹ್ ಪ್ರದೇಶವು ಕೆಂಪು ಅಭ್ರಕವಲ್ಲದೆ ಸಮೃದ್ಧ ಖಣಿಜಗಳ ಮೂಲವಾಗಿದೆ.

ಬರಾಕರ್ ಮತ್ತು ಸಾಕ್ರಿ ಎರಡು ಮುಖ್ಯವಾದ ನದಿಗಳು ಈ ಜಿಲ್ಲೆಯ ಮೂಲಕ ಹರಿಯುತ್ತದೆ. ಉಸ್ರಿ ಜಲಪಾತ ಮತ್ತೊಂದು ಪ್ರವಾಸೀ ಆಕರ್ಷಣೆ. ಇದು 13 ಕಿ.ಮೀ. ದೂರದಲ್ಲಿದ್ದು ನದಿಯು 40 ಅಡಿ ಎತ್ತರದಿಂದ ಬೀಳುವುದು ಇಲ್ಲಿಂದ ಕಾಣುತ್ತದೆ.

ಖಂಡೋಲೀ ಅಣೆಕಟ್ಟು ಒಂದು ಆಕರ್ಷಕ ನೀರಿನ ಜಲಾಶಯವಾಗಿದೆ. ಇದು ಪಕ್ಷಿ ಅಭಿಮಾನಿಗಳಿಗೆ ಮತ್ತು ದೋಣಿವಿಹಾರ, ಬಂಡೆ ಏರುವವರಿಗೆ(Rock climbing), ದೋಣಿಯಹಿಂದೆ ಎಳೆಸಿಕೊಂಡು ತೇಲುವುದು ಮತ್ತು ಪೆಡಲ್ಮಾಡುವ ದೋಣಿಯಲ್ಲಿ ಸಾಹಸಗಳನ್ನು ಮಾಡುವ ಉತ್ಸಾಹಿಗಳಿಗೆ ಒಂದು ತಕ್ಕ ಸ್ಥಳ.  ಆನೆ ಮತ್ತು ಒಂಟೆ ಸಫಾರಿಗಳ ಜೊತೆಯಲ್ಲಿ ಇಲ್ಲಿ ಜಲಕ್ರೀಡೆಗಳನ್ನು ಆನಂದದಿಂದ ಅನುಭವಿಸಬಹುದು.

ಹರಿಹರ ಧಾಮ ಒಂದು ತೀರ್ಥಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ಭಾರತದ ಅತ್ಯಂತ ದೊಡ್ಡ ಶಿವಲಿಂಗವು ಇಲ್ಲಿ ಸ್ಥಾಪಿತವಾಗಿದೆ. ದುಖಿಯಾ ಮಹಾದೇವ ದೇವಾಲಯ ಮತ್ತು ಜಾರ್ಖಂಡ್ ಧಾಮ ಕೆಲವು ಇತರ ಯಾತ್ರಾ ಕೇಂದ್ರಗಳಾಗಿವೆ.  ಜಮುಆ ಪಟ್ಟಣವು ಗಿರಿಡೀಹ್ನಿಂದ 35 ಕಿ.ಮೀ. ದೂರದಲ್ಲಿದೆ ಮತ್ತು ಇದು ತನ್ನ ಸುತ್ತಲಿರುವ ಸುಂದರ ಪ್ರಕೃತಿ ದೃಶ್ಯಗಳ ಮತ್ತು ಹಸಿರುವನರಾಶಿಗೆ ಪ್ರಸಿದ್ಧವಾಗಿದೆ.  

ಗಿರಿಡೀಹ್ ತಲಪುವುದು ಹೇಗೆ?

ರೈಲು ಮತ್ತು ರಸ್ತೆಸಾರಿಗೆ ಗಿರಿಡೀಹ್ ಸೇರಲು ಪ್ರಮುಖ ಸಾಧನಗಳಾಗಿವೆ. ಈ ಸ್ಥಳಕ್ಕೆ ಪಶ್ಚಿಮಬಂಗಾಳ ಮತ್ತು ಬಿಹಾರದ ಪ್ರಮುಖ ಸ್ಥಳಗಳೊಂದಿಗೆ ಒಳ್ಳೆಯ ಸಂಪರ್ಕ ಇದೆ.

ಹವಾಮಾನ

ಗಿರಿಡೀಹ್ನಲ್ಲಿ ಸಾಧಾರಣವಾಗಿ ಒಣ ಹವೆಯಿರುತ್ತದೆ. ತೀವ್ರಬೇಸಿಗೆ ಮತ್ತು ಚಳಿಗಾಲ ಸಹಿಸುದಕ್ಕೆ ಆಗುವುದಿಲ್ಲ. ಮಳೆಗಾಲದ ಹವಾಮಾನವು ಅನುಭವಿಸಲು ಚೆನ್ನಾಗಿರುತ್ತದೆ. ಗಿರಿಡೀಹ್ನಲ್ಲಿ ಒಣ ಹವಾಮಾನವು ಪ್ರಧಾನವಾಗಿದ್ದು ಚಳಿಗಾಲದಲ್ಲಿ ಶೀತ ಮತ್ತು ಹಿತಕರವಾದ ಹವಾಮಾನವಿರುತ್ತದೆ.

ಗಿರಿಡೀಹ್ ಪ್ರಸಿದ್ಧವಾಗಿದೆ

ಗಿರಿಡೀಹ್ ಹವಾಮಾನ

ಉತ್ತಮ ಸಮಯ ಗಿರಿಡೀಹ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗಿರಿಡೀಹ್

  • ರಸ್ತೆಯ ಮೂಲಕ
    ಗ್ರ್ಯಾಂಡ್ ಟ್ರಂಕ್ ರೋಡ್ ಜಿಲ್ಲೆಯ ಮೂಲಕ ಹಾದುಹೋಗುವುದರಿಂದ ಗಿರಿಡೀಹ್ ಉತ್ತಮ ಸಂಪರ್ಕಹೊಂದಿದೆ. ಎನ್. ಹೆಚ್. (National Highway) 2 ಮತ್ತು ಎನ್. ಹೆಚ್. 100 ಗಳು ಸೇರುವ ಜಂಕ್ಷನ್ನಲ್ಲಿ ಗಿರಿಡೀಹ್ ಪಟ್ಟಣವಿದೆ. ಬಸ್ ನಿಲ್ದಾಣವು ಪಟ್ಟಣದ ಮಧ್ಯೆ ಇರುವುದರಿಂದ ಪಟ್ಟಣದ ಯಾವಮೂಲೆಯಿಂದಾದರೂ ಸುಲಭವಾಗಿ ತಲುಪಬಹುದು. ಸರ್ಕಾರೀ ಮತ್ತು ಖಾಸಗಿ ಬಸ್ಗಳು ಲಭ್ಯವಿರುತ್ತದೆ. ಕ್ರಮಬದ್ಧ ಬಸ್ಗಳು ಜಿಲ್ಲೆಯ ಎಲ್ಲಾ ಮೂಲೆಗಳಿಗೂ ಸಂಪರ್ಕಹೊಂದಿದ್ದು, ಧನ್ಬಾದ್, ಬೊಕಾರೋ, ರಾಂಚಿ, ಜಂಶೆಡ್ಪುರ್, ಹಜಾರಿಬಾಗ್ ಮತ್ತು ದಿಯೊಘರ್ ಪಟ್ಟಣಗಳಿಗೂ ಸಂಪರ್ಕ ಹೊಂದಿವೆ. ಪಶ್ಚಿಮಬೆಂಗಾಳಿನ ಆಸನಾಲ್, ದುರ್ಗಾಪುರ್, ಕೋಲ್ಕತ್ತ ಮತ್ತು ಹೌರಾ ಮತ್ತು ಬಿಹಾರಿನ ಪಾಟ್ನ ನಗರಗಳಿಗೂ ಉತ್ತಮ ಬಸ್ ಸಂಪರ್ಕವಿದೆ. ಟ್ರೆಕ್ಕರ್, ಆಟೊರಿಕ್ಷಾ, ಮಿನಿಬಸ್ ಮತ್ತು ಖಾಸಗಿ ವಾಹನಗಳು ಉಳಿದ ಸಾರಿಗೆಯ ಸಾಧನಗಳು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಧುಪೂರ್ ಜಂಕ್ಷನ್ನಿಂದ ಗಿರಿಡೀಹ್ ರೈಲುನಿಲ್ದಾಣಕ್ಕೆ ಪ್ರತಿದಿನವೂ ಐದುಬಾರಿ ಏಕ-ರೈಲು ಪ್ಯಾಸ್ಸೆಂಜರ್ ಗಾಡಿಯು ಓಡುತ್ತದೆ. ಇದು 38 ಕಿ.ಮೀ. ದೂರದ ಸಂಪರ್ಕವಾಗಿದ್ದು, ಒಂದು ಬ್ರಾಡ್ಗೇಜ್ ಮಾರ್ಗ ಹೊಂದಿದೆ. ಗಿರಿಡೀಹ್ನಿಂದ 48 ಕಿ.ಮೀ. ದೂರವಿರುವ ಪಾರ್ಸನಾಥ್ ರೈಲ್ವೆನಿಲ್ದಾಣವು ಮತ್ತೊಂದು ಪ್ರಮುಖ ನಿಲ್ದಾಣವಾಗಿದೆ. ಗಿರಿಡೀಹ್ನಿಂದ ಕೋಲ್ಕತ್ತಾ ಮತ್ತು ಪಾಟ್ನ ನಗರಗಳಿಗೆ ನೇರ ರೈಲು ಸಂಪರ್ಕವಿದೆ. ಗಿರಿಡೀಹ್ನಿಂದ 102 ಕಿ.ಮೀ.ದೂರವಿರುವ ಕೋಡರ್ಮ ಪಟ್ಟಣಕ್ಕೆ ರೈಲುಮಾರ್ಗದ ವ್ಯವಸ್ತೆಯನ್ನು ಯೋಜಿಸಲಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಗಿರಿಡೀಹ್ನಲ್ಲಿ ವಿಮಾನನಿಲ್ದಾಣವಿಲ್ಲದಿದ್ದರೂ, ಒಂದು ವಿಮಾನ ಇಳಿದಾಣವು ಇದ್ದು ಕೆಲವು ಅವಶ್ಯಕತೆಗಳಿಗೆ ಉಪಯೋಗವಾಗಿದೆ. ಬೋರೋ ವಿಮಾನನಿಲ್ದಾಣವು ಗಿರಿಡೀಹ್ನ ಹೆಡ್ಕ್ವಾರ್ಟರ್ಸ್ನಲ್ಲಿದೆ. ಸಮೀಪದ ವಿಮಾನನಿಲ್ದಾಣಗಳೆಂದರೆ 155 ಕಿ.ಮೀ. ದೂರವಿರುವ ರಾಂಚಿಯ ಬಿರ್ಸಾ ಮುಂಡ ವಿಮಾನನಿಲ್ದಾಣ, 169 ಕಿ.ಮೀ. ದೂರವಿರುವ ಗಯಾ ವಿಮಾನನಿಲ್ದಾಣ, 223 ಕಿ.ಮೀ. ದೂರವಿರುವ ಪಾಟ್ನ ವಿಮಾನನಿಲ್ದಾಣ ಮತ್ತು 309 ಕಿ.ಮೀ. ದೂರವಿರುವ ಕೊಲ್ಕತ್ತಾದ ನೇತಾಜಿ ಸುಭಾಶ್ ಚಂದ್ರ ಬೋಸ್ ವಿಮಾನನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu