Search
  • Follow NativePlanet
Share
» »ಪ್ರವಾಸಿಗರೇ… ಭಾರಿ ಮಳೆ ಹಿನ್ನೆಲೆ ಈ ಸ್ಥಳಗಳಿಗೆ ಪ್ರವಾಸ ಮಾಡುವ ಮುನ್ನ ಎಚ್ಚರದಿಂದ ಇರುವುದು ಒಳ್ಳೆಯದು

ಪ್ರವಾಸಿಗರೇ… ಭಾರಿ ಮಳೆ ಹಿನ್ನೆಲೆ ಈ ಸ್ಥಳಗಳಿಗೆ ಪ್ರವಾಸ ಮಾಡುವ ಮುನ್ನ ಎಚ್ಚರದಿಂದ ಇರುವುದು ಒಳ್ಳೆಯದು

ದಸರಾ ರಜೆ ಇರುವುದರಿಂದ ಮಕ್ಕಳನ್ನು ಸುತ್ತಾಡಿಸಲು ಹೊರಗಡೆ ಪ್ರವಾಸ ಕರೆದುಕೊಂಡು ಹೋಗಿರುವವರು ಸ್ವಲ್ಪ ಎಚ್ಚರದಿಂದ ಇರುವುದು ಒಳಿತು. ಏಕೆಂದರೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ವ್ಯಾಪಕ ಮಳೆಯಾಗಲಿದೆ. ಹವಾಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಅಲರ್ಟ್‌ ನೀಡಿದೆ. ಬೆಂಗಳೂರಿನಲ್ಲಿ ಇಂದು ಅ.15ರ ಬೆಳಗಿನ ಜಾವದಿಂದಲೇ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಸಕ್ಕೆಂದು ತೆರಳಿರುವವರು ಈ ಕೆಳಕಂಡ ಸ್ಥಳಗಳಿಗೆ ಹೋದಾಗ ಜಾಗರೂಕರಾಗಿರಿ.

ಎಲ್ಲೆಲ್ಲಿ ಮಳೆಯಾಗಲಿದೆ?

ಕರಾವಳಿ ಜಿಲ್ಲೆಗಳು

ಕರ್ನಾಟಕದ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡುವ ಯಾರಾದರೂ ನೋಡಲೇಬೇಕಾದ ಸ್ಥಳಗಳಿವು. ಆದರೆ ಈ ಜಿಲ್ಲೆಗಳಲ್ಲಿ ಅ. 22 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉಡುಪಿ: ಜನಪ್ರಿಯ ಪ್ರವಾಸಿ ತಾಣವಾಗಿದೆ. ಸುಂದರವಾದ ಕಡಲತೀರಗಳು, ದೇವಾಲಯಗಳು ಮತ್ತು ರುಚಿಕರವಾದ ಸಮುದ್ರಾಹಾರಕ್ಕೆ ಹೆಸರುವಾಸಿಯಾಗಿದೆ.

Monsoon Travel Tips

ಮಂಗಳೂರು: ಭಾರತದ ಕರ್ನಾಟಕ ರಾಜ್ಯದಲ್ಲಿರುವ ಬಂದರು ನಗರವಾಗಿದೆ. ಇದು ಕೂಡ ವಿಶಿಷ್ಟ ಕಡಲತೀರಗಳು, ದೇವಾಲಯಗಳು ಮತ್ತು ರುಚಿಕರವಾದ ಸಮುದ್ರಾಹಾರಕ್ಕೆ ಹೆಸರುವಾಸಿಯಾಗಿದೆ.

ಕಾರವಾರ: ಭಾರತದ ಪಶ್ಚಿಮ ಕರಾವಳಿಯಲ್ಲಿದೆ ಮತ್ತು ಅದ್ಭುತವಾದ ಬೀಚ್‌ಗಳು, ದೇವಾಲಯಗಳು ಮತ್ತು ಶ್ರೀಮಂತ ಇತಿಹಾಸಕ್ಕೆ ಹೆಸರುವಾಸಿಯಾಗಿದೆ.

ಗೋಕರ್ಣ: ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಪುರಾತನ ದೇವಾಲಯಗಳು ಮತ್ತು ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾದ ಪವಿತ್ರ ಪಟ್ಟಣವಾಗಿದೆ.

ಮರವಂತೆ: ಈ ಚಿಕ್ಕ ಕರಾವಳಿ ಗ್ರಾಮವು ರಾಷ್ಟ್ರೀಯ ಹೆದ್ದಾರಿ 66 ರಲ್ಲಿದೆ, ಇದು ಮುಂಬೈ ಮತ್ತು ಮಂಗಳೂರನ್ನು ಸಂಪರ್ಕಿಸುತ್ತದೆ. ಇದು ಉದ್ದವಾದ, ಮರಳಿನ ಬೀಚ್ ಮತ್ತು ಅರಬ್ಬೀ ಸಮುದ್ರದ ಸುಂದರ ನೋಟಗಳಿಗೆ ಹೆಸರುವಾಸಿಯಾಗಿದೆ.

ಹೊನ್ನಾವರ: ಈ ಚಿಕ್ಕ ಪಟ್ಟಣವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ ಮತ್ತು ಹೊನ್ನಾವರ ಬೀಚ್ ಮತ್ತು ಮುರುಡೇಶ್ವರ ಬೀಚ್ ಸೇರಿದಂತೆ ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ.

ಮಲೆನಾಡು ಜಿಲ್ಲೆಗಳು

ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಅ. 22 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಚಿಕ್ಕಮಗಳೂರು: ಸಾಲು ಸಾಲು ರಜೆ ಇರುವುದರಿಂದ ಚಿಕ್ಕಮಗಳೂರಿನತ್ತ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಮುಳ್ಳಯ್ಯನಗಿರಿ , ದತ್ತಪೀಠ ಹಾಗೂ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲುಗಳು ಹಸಿರು ಹೊದ್ದು ಕಂಗೊಳಿಸುತ್ತಿವೆ.

ಹಾಸನ: ಹಾಸನವು ಬಡವರ ಊಟಿ ಎಂದು ಹೆಸರು ಪಡೆದಿರುವ ಸ್ಥಳವಾಗಿದೆ.ಇದು ಅನೇಕ ಪಾರಂಪರಿಕ ಸ್ಥಳಗಳಿಂದ ಆವೃತವಾಗಿದೆ.

ಶಿವಮೊಗ್ಗ: ಆಕರ್ಷಕ ಜಲಪಾತಗಳು, ಹಸಿರು ಕಾಡುಗಳು, ನದಿ ಕಣಿವೆಗಳು ಮತ್ತು ಸುಂದರವಾದ ಹೊಲಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮತ್ತು ನಿರಂತರ ಮಳೆಯಿಂದಾಗಿ ಉಷ್ಣಾಂಶ ತಗ್ಗಿದೆ. ಇನ್ನು ಮೂರ್ನಾಲ್ಕು ದಿನ ಮೋಡ ಮತ್ತು ಭಾರಿ ಮಳೆ ಇರಲಿದೆ.

ಉತ್ತರ ಒಳನಾಡಿನ ಜಿಲ್ಲೆಗಳು

ಉತ್ತರ ಒಳನಾಡು ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಅ. 17ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್‌. ಪಾಟೀಲ್‌ ಮಾಹಿತಿ ನೀಡಿದ್ದಾರೆ. ಈ ಭಾಗಗಳಲ್ಲಿ ಬರುವ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳು ಕರ್ನಾಟಕ ಮಾತ್ರವಲ್ಲದೆ ವಿಶ್ವ ಪ್ರಸಿದ್ಧ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಥಳಗಳನ್ನು ಹೊಂದಿವೆ. ಕೋಟೆ ಕೊತ್ತಲಗಳು, ಪುರಾತನ ದೇವಾಲಯಗಳನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು.

ದಕ್ಷಿಣ ಒಳನಾಡು ಜಿಲ್ಲೆಗಳು

ಈ ಜಿಲ್ಲೆಗಳಲ್ಲಿ ಅ. 16 ಮತ್ತು 17 ರಂದು ವ್ಯಾಪಕವಾಗಿ ಸಾಧಾರಣ ಮಳೆ, ಅಲ್ಲಲ್ಲಿ ಚದುರಿದಂತೆ ಭಾರಿ ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಪ್ರದೇಶದ ಪೂರ್ವ ಜಿಲ್ಲೆಗಳಲ್ಲೂ ಭಾರಿ ಮಳೆಯ ನಿರೀಕ್ಷೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳು ಎಂದು ಪಟ್ಟಿ ಮಾಡಲಾಗಿದೆ.

ತಮಿಳುನಾಡಿನಲ್ಲಿ ಭಾರಿ ಮಳೆ

ತಮಿಳುನಾಡಿನಲ್ಲಿ ಭಾರಿ ಮಳೆ ಬರುವ ಮುನ್ಸೂಚನೆ ಇರುವುದರಿಂದ ಐಟಿ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಂ ನೀಡಲಾಗಿದೆ. ಮಳೆ ಹಿನ್ನೆಲೆಯಲ್ಲಿ ಟ್ರಾಫಿಕ್‌ ಜಾಮ್‌ ಸಹ ಉಂಟಾಗಿದ್ದು, ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗಿದೆ. ಅ.18ರ ಬಳಿಕ ಮಳೆ ಕಡಿಮೆ ಇರುವ ಸಾಧ್ಯತೆಯಿದೆ. ಎರಡು-ಮೂರು ದಿನಗಳಲ್ಲಿ ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ ಪ್ರದೇಶದಲ್ಲೂ ವಾಯುಭಾರ ಕುಸಿತ ಸಾಧ್ಯತೆಯ ಪರಿಣಾಮ ಕರಾವಳಿ, ದಕ್ಷಿಣ ಒಳನಾಡಿನಲ್ಲಿ 17ರವರೆಗೆ ವ್ಯಾಪಕ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದ್ದು, ಉತ್ತರ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

More News

Read more about: rain karnataka ಮಳೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+