Search
  • Follow NativePlanet
Share
» »ಎಂ.ಜಿ.ಎಂ ಡಿಜ್ಜಿ ವರ್ಲ್ಡ್: ಮೋಜು, ಮಜಾ, ಮಸ್ತಿ ಗ್ಯಾರಂಟಿ

ಎಂ.ಜಿ.ಎಂ ಡಿಜ್ಜಿ ವರ್ಲ್ಡ್: ಮೋಜು, ಮಜಾ, ಮಸ್ತಿ ಗ್ಯಾರಂಟಿ

By Vijay

ಎಂ.ಜಿ.ಎಂ ಡಿಜ್ಜಿ ವರ್ಲ್ಡ್ ಮನರಂಜನಾ ಉದ್ಯಾನ ಚೆನ್ನೈ ನಗರದ ಬಳಿಯಿದ್ದು, ತಮಿಳುನಾಡು ರಾಜ್ಯದ ಅತಿ ದೊಡ್ಡ ಅಮ್ಯೂಸ್‍ಮೆಂಟ್ ಪಾರ್ಕ್ ಆಗಿದೆ. ಹಲವು ಮೊದಲುಗಳನ್ನು ಅಸ್ತಿತ್ವಕ್ಕೆ ತಂದಿರುವ ಈ ಮನರಂಜನಾ ಉದ್ಯಾನ ಕುಟುಂಬ ಸಮೇತರಾಗಿ ಇಲ್ಲವೆ ಸ್ನೇಹಿತರೊಂದಿಗೆ ರಜೆಯ ಸಮಯವನ್ನು ಅತಿ ರೋಮಾಂಚನ ಹಾಗು ಆನಂದಮಯವಾಗಿ ಕಳೆಯಲು ಹೇಳಿ ಮಾಡಿಸಿದಂತಿದೆ. ಚೆನ್ನೈ ನಗರದಿಂದ 30 ಕಿ.ಮೀ ದೂರದಲ್ಲಿ ಪೂರ್ವ ಕರಾವಳಿ ತೀರ ರಸ್ತೆಯ (ಈಸ್ಟ್ ಕೋಸ್ಟ್ ರೋಡ್) ಸುಂದರ ಹಸಿರು ಕಾನಿನ ಮಧ್ಯದಲ್ಲಿ ಈ ಭವ್ಯವಾದ ಮನರಂಜನಾ ಉದ್ಯಾನ ಸ್ಥಿತವಿದೆ.

ಮಕ್ಕಳು ಹಾಗು ಯುವಜನರಿಗೆ ರೋಮಾಂಚನವನ್ನುಂಟು ಮಾಡುವ ಅನೇಕ ತರಹೇವಾರಿ ರೈಡುಗಳು ಇಲ್ಲಿ ಲಭ್ಯವಿದೆ. ಸಮಯವನ್ನು ಆನಂದಮಯವಾಗಿ ಕಳೆಯಲು ದೋಣಿ ವಿಹಾರವಿದೆ. ಈಜಾಡಲು ಈಜು ಕೊಳವಿದೆ. ಇನ್ನೂ ಹೊಟ್ಟೆ ಹಸಿದರೆ ಅದನ್ನು ತೃಪ್ತ ಪಡಿಸಲು ವಿಶಾಲವಾದ ಉಪಹರಗೃಹವೂ ಸಹ ಇಲ್ಲಿದೆ. ಸಮುದ್ರದಲೆಗಳ ಆನಂದವನ್ನು ಪಡೆಯಲು ಕೃತಕವಾಗಿ ಸೃಷ್ಟಿಸಲಾಗುವ ಅಲೆಗಳ ಕೊಳವನ್ನು ಇಲ್ಲಿ ಕಾಣಬಹುದು. ಕೆಲವರಿಗೆ ಸಮುದ್ರದಲ್ಲಿ ಇಳಿಯಲು ಇಷ್ಟವಿದ್ದರೂ ಸಹ ಭಯದ ಕಾರಣ ಅದರಲ್ಲಿಳಿಯಲಾಗದೆ ಅಲೆಗಳ ಅನುಭವದಿಂದ ವಂಚಿತರಾಗಿರುತ್ತಾರೆ. ಅಂಥವರಿಗೆ ಈ ಅಲೆಗಳ ಕೊಳ ಒಂದು ಉತ್ತಮ ಪರಿಹಾರ. ಇನ್ನೂ ಇಲ್ಲಿರುವ ರೈಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ರೋಮಾಂಚನವನ್ನುಂಟು ಮಾಡುವುದಲ್ಲದೆ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.

ಮನರಂಜನಾ ಉದ್ಯಾನದ ಆಡಳಿತ ಮಂಡಳಿಯ ಪ್ರಕಾರ, ಇಲ್ಲಿರುವ ಪ್ರತಿಯೊಂದು ರೈಡುಗಳು ಅಂತಾರಾಷ್ಟ್ರೀಯ ಸುರಕ್ಷತಾ ಗುಣಮಟ್ಟದಿಂದ ಕೂಡಿದ್ದು ಕುಳಿತುಕೊಳ್ಳಲು ಸುರಕ್ಷಿತವಾಗಿವೆ. ಈ ಉದ್ಯಾನದಲ್ಲಿ ಆಸ್ವಾದಿಸಬಹುದಾದ ಹಲವು ವಿಭಿನ್ನ ರೈಡುಗಳ ಚಿತ್ರ ಈ ಲೇಖನದ ಸ್ಲೈಡುಗಳಲ್ಲಿವೆ. ನೋಡಿ ಆನಂದಿಸಿ ಹಾಗು ಒಮ್ಮೆ ಭೇಟಿ ನೀಡಿ.

ಚಿತ್ರಕೃಪೆ ಹಾಗು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: http://www.mgmdizzeeworld.com/

ಬಿಗ್ ವ್ಹೀಲ್:

ಬಿಗ್ ವ್ಹೀಲ್:

ಚಕ್ರದ ಹಾಗೆ ತಿರುಗುವ ಈ ರೈಡಿನಲ್ಲಿ ಕುಳಿತಾಗ ಹೊಟ್ಟೆಯಲ್ಲಿ ಉಲ್ಲಾಸದ ಅಲೆಗಳು ಮೂಡದೆ ಇರಲಾರವು.

ಕ್ಯಾರಿಬಿಯನ್ ಸ್ವಿಂಗ್:

ಕ್ಯಾರಿಬಿಯನ್ ಸ್ವಿಂಗ್:

ಜೋಕಾಲಿಯ ಹಾಗಿ ತೂಗುತ್ತ ಉತ್ಸಾಹವನ್ನು ಕೊಡುತ್ತದೆ.

ಕ್ರೀಪರ್ ಬಗ್:

ಕ್ರೀಪರ್ ಬಗ್:

ಒಂದು ರೀತಿಯ ವಿಭಿನ್ನ ಮನರಂಜನಾ ರೈಡ್.

ಡಿಸ್ಕೊ ಸಾಸರ್:

ಡಿಸ್ಕೊ ಸಾಸರ್:

ಅಡ್ಡಾ ದಿಡ್ಡಿಯಾಗಿ ಮೇಲೆ ಕೆಳಗೆ ಬೀಳುತ್ತ ತಿರುಗುವ ರೈಡ್.

ಡೊಜೆಮ್ ಕಾರ್:

ಡೊಜೆಮ್ ಕಾರ್:

ರಸ್ತೆಯ ಮೇಲೆ ಖಂಡಿತ ಬೇಡ...ಆದರೆ ಇಲ್ಲಿ ಡಿಕ್ಕಿ ಹೊಡೆಯಬಹುದು.

ಕಮಿಕೇಜ್ ರೇಂಜರ್:

ಕಮಿಕೇಜ್ ರೇಂಜರ್:

ಹುಬ್ಬೇರಿಸುವಂತಹ ಮನರಂಜನಾ ರೈಡ್. ಇದು ಅತಿ ವೇಗವಾಗಿ ಚಲಿಸುತ್ತದೆ.

ನೀಲಗಿರಿ ಎಕ್ಸ್ ಪ್ರೆಸ್:

ನೀಲಗಿರಿ ಎಕ್ಸ್ ಪ್ರೆಸ್:

ಬೆಟ್ಟ, ಗುಡ್ಡಗಳ ಮೇಲೆ ಹಾರುತ್ತ ಸಾಗುತ್ತಿರುವ ಅನುಭವ ನೀಡುತ್ತದೆ.

ರಿವೊಲುಷನ್:

ರಿವೊಲುಷನ್:

ಸಾಹಸಮಯ ತಿರುಗು. ಬೋನಿನಲ್ಲಿದ್ದು ತಿರುಗುವ ಆನಂದ ಪಡೆಯಿರಿ.

ರಾಕ್ ಒ ಪ್ಲೇನ್:

ರಾಕ್ ಒ ಪ್ಲೇನ್:

ಮತ್ತೊಂದು ಆನಂದಮಯ ರೈಡ್.

ರೋಲ್ ಒ ರೋಲ್:

ರೋಲ್ ಒ ರೋಲ್:

ಮೇಲೆ ಕೆಳಗೆ ಚಲಿಸುವುದಲ್ಲದೆ ವೃತ್ತಾಕಾರದಲ್ಲಿ ತಿರುಗಿ.

ರೋಲಿಂಗ್ ಥಂಡರ್:

ರೋಲಿಂಗ್ ಥಂಡರ್:

ಅಮೋಘವಾದ ರೋಲರ್ ಕೋಸ್ಟರ್ ರೈಡ್.

ಸ್ಟಾರ್ ವ್ಹೀಲ್:

ಸ್ಟಾರ್ ವ್ಹೀಲ್:

ಮತ್ತೊಂದು ಬೃಹತ್ತಾದ ಜಯಂಟ್ ವ್ಹೀಲ್ ರೈಡ್.

ಟೂಂಬ್ ರೈಡರ್:

ಟೂಂಬ್ ರೈಡರ್:

ಗಾಳಿಯಲ್ಲಿ ವೇಗವಾಗಿ ಚಲಿಸುವ ಟ್ರೈನ್.

ವಾಟರ್ ಕೋಸ್ಟರ್:

ವಾಟರ್ ಕೋಸ್ಟರ್:

ವೇಗವಾಗಿ ನೀರಿನ ಮೇಲೆ ಚಲಿಸಿ ಆನಂದ ಪಡೆಯಿರಿ.

ವೇವ್ ಸ್ವಿಂಗರ್:

ವೇವ್ ಸ್ವಿಂಗರ್:

ಸ್ವಿಂಗ್ ಆಗಿ ಚಲಿಸುತ್ತ ಆನಂದಪಡೆಯಿರಿ.

ಕ್ಯಾಟರ್ ಪಿಲ್ಲರ್:

ಕ್ಯಾಟರ್ ಪಿಲ್ಲರ್:

ಕಂಬಳಿ ಹುಳುವಿನಂತಿರುವ ರೈಡ್.

ಚಿಲ್ಡ್ರನ್ಸ್ ಲ್ಯಾಂಡ್:

ಚಿಲ್ಡ್ರನ್ಸ್ ಲ್ಯಾಂಡ್:

ಮಕ್ಕಳ ಮನರಂಜನೆಗಾಗಿ ನಿರ್ಮಿಸಲಾದ ರಚನೆ.

ಕಪ್ ಸಾಸರ್:

ಕಪ್ ಸಾಸರ್:

ಚಹಾ ಕಪ್ಪಿನ ಹಾಗಿರುವ ಒಂದು ಆನಂದದಾಯಕ ರೈಡ್.

ಡಿಜ್ಜಿ ಎಕ್ಸ್ ಪ್ರೆಸ್:

ಡಿಜ್ಜಿ ಎಕ್ಸ್ ಪ್ರೆಸ್:

ಎಂ.ಜಿ.ಎಂ ಉದ್ಯಾನದ ಡಿಜ್ಜಿ ಎಕ್ಸ್ ಪ್ರೆಸ್ ಇದೇನೆ.

ಜುರಾಸಿಕ್ ಟ್ರೈನ್:

ಜುರಾಸಿಕ್ ಟ್ರೈನ್:

ಡೈನೊಸಾರ್ ಆಕಾರದಲ್ಲಿ ನಿರ್ಮಿಸಲಾಗಿರುವ ಟ್ರೈನ್ ರೈಡ್.

ಕಿಡ್ಸ್ ಸ್ವಿಂಗ್:

ಕಿಡ್ಸ್ ಸ್ವಿಂಗ್:

ಮಕ್ಕಳಿಗಾಗಿ ನಿರ್ಮಿಸಲಾಗಿರುವ ರೈಡ್.

ಮಿನಿ ಜೆಟ್:

ಮಿನಿ ಜೆಟ್:

ಮಕ್ಕಳಿಗಾಗಿ ನಿರ್ಮಿಸಲಾಗಿರುವ ಒಂದು ರಚನೆ.

ಮಿನಿ ಎಂ.ಜಿ.ಆರ್:

ಮಿನಿ ಎಂ.ಜಿ.ಆರ್:

ಮಕ್ಕಳಿಗಾಗಿ ನಿರ್ಮಿಸಲಾಗಿರುವ ಮಿನಿ ಎಂ.ಜಿ.ಆರ್ ರೈಡ್.

ಮಿನಿ ಸ್ಲ್ಯಾಮ್ ಬ್ಯಾಮ್:

ಮಿನಿ ಸ್ಲ್ಯಾಮ್ ಬ್ಯಾಮ್:

ಮಕ್ಕಳಿಗಾಗಿರುವ ಮಿನಿ ಸ್ಲ್ಯಾಮ್ ಬ್ಯಾಮ್ ರೈಡ್.

ರಫ್ ರೈಡರ್:

ರಫ್ ರೈಡರ್:

ಮಕ್ಕಳು ಆನಂದಪಡುವಂತಹ ಜೀಪುಗಳ ರೈಡ್.

ಸ್ಕೂಟಿ ರೈಡ್:

ಸ್ಕೂಟಿ ರೈಡ್:

ಮಕ್ಕಳ ಮೋಟರ್ ಬೈಕುಗಳು.

ಶೂ ಹೌಸ್:

ಶೂ ಹೌಸ್:

ಮಕ್ಕಳಿಗಾಗಿರುವ ಶೂ ಹೌಸ್ ಜಾರು ಬಂಡಿ.

ಆಂಫಿ ಥಿಯೇಟರ್:

ಆಂಫಿ ಥಿಯೇಟರ್:

ಯುವಜನರು ಇಷ್ಟ ಪಡುವ ಆಂಫಿ ಥಿಯೇಟರ್.

ಕಾರ್ನಿವಾಲ್ ಗೇಮ್ಸ್:

ಕಾರ್ನಿವಾಲ್ ಗೇಮ್ಸ್:

ಮನರಂಜನಾಭರಿತ ಚಿಕ್ಕ ಪುಟ್ಟ ಆಟಗಳನ್ನು ಆಡಿ ಹಾಗು ಬಹುಮಾನಗಳನ್ನು ಗೆಲ್ಲಿ.

ಚಿನ್ನ ಕುಟ್ರಾಲಂ:

ಚಿನ್ನ ಕುಟ್ರಾಲಂ:

ಪ್ರಸಿದ್ಧವಾದ ಕುಟ್ರಾಲಂ ಜಲಪಾತದ ಪ್ರತಿಕೃತಿಯಾದ ಚಿಕ್ಕ ಕುಟ್ರಾಲಂ.

ಇಮ್ಯಾಜಿನ್:

ಇಮ್ಯಾಜಿನ್:

ನೈಜವೆಂಬಂತೆ ಬಿಂಬಿಸುವ ಒಂದು ಅನನ್ಯವಾದ ರೈಡ್.

ಎಂ.ಜಿ.ಎಂ ಎಕ್ಸ್ ಪ್ರೆಸ್:

ಎಂ.ಜಿ.ಎಂ ಎಕ್ಸ್ ಪ್ರೆಸ್:

ಮಕ್ಕಳ ಎಂ.ಜಿ.ಎಂ ಎಕ್ಸ್ ಪ್ರೆಸ್ ರೈಲು ಸವಾರಿ.

ರೈನ್ ಟ್ರೀ:

ರೈನ್ ಟ್ರೀ:

ಮಳೆ ಇಲ್ಲದೆಯೂ ಕಾಮನಬಿಲ್ಲನ್ನು ಕಾಣಿರಿ.

ಟ್ರೀ ಹೌಸ್:

ಟ್ರೀ ಹೌಸ್:

ವಿನೂತನವಾದ ಮರದ ಮನೆ.

ಅಲೈ ಒಸೈ:

ಅಲೈ ಒಸೈ:

ಸಮುದ್ರದ ಅಲೆಗಳ ಅನುಭವ ಕೃತಕ ನೀರಿನ ಕೊಳದಲ್ಲಿ.

ಬಲೂನ್ ರೇಸ್:

ಬಲೂನ್ ರೇಸ್:

ಬಲೂನುಗಳ ಮಾದರಿಯಲ್ಲಿ ನಿರ್ಮಿತವಾಗಿರುವ ಒಂದು ರೈಡ್.

ಬೋಟಿಂಗ್:

ಬೋಟಿಂಗ್:

ಹಾಯಾದ ದೋಣಿ ವಿಹಾರ.

ಕರೌಸಲ್:

ಕರೌಸಲ್:

ಕುಟುಂಬ ಸಮೇತರಾಗಿ ಆಸೀನರಾಗಿ ಆನಂದದ ರೈಡ್ ಮಾಡಿ.

ಸೂಪರ್ ಟ್ರಕ್ಸ್:

ಸೂಪರ್ ಟ್ರಕ್ಸ್:

ಟ್ರಕ್ಕುಗಳ ಮಾದರಿಯಲ್ಲಿ ನಿರ್ಮಿತವಾಗಿರುವ ಒಂದು ರೈಡ್.

ಗೇಮ್ ಆರ್ಕೇಡ್:

ಗೇಮ್ ಆರ್ಕೇಡ್:

ಇಲ್ಲಿ ವಿಡಿಯೊ ಗೇಮ್ ಗಳನ್ನು ಆಡಿ.

ರೈನ್ ಬೋವ್:

ರೈನ್ ಬೋವ್:

ವಿನೂತನವಾದ ರೈನ್ ಬೋವ್ ರೈಡಿನ ಆನಂದ.

ರೈನ್ ಡೀರ್ ಕೋಸ್ಟರ್:

ರೈನ್ ಡೀರ್ ಕೋಸ್ಟರ್:

ರೈನ್ ಡೀರ್ ಮಾದರಿಯ ರೋಲರ್ ಕೋಸ್ಟರ್ ರೈಡ್.

ಸ್ಕೈ ಗ್ಲೈಡರ್:

ಸ್ಕೈ ಗ್ಲೈಡರ್:

ಗಾಳಿಯಲ್ಲಿ ಓರೆಯಾಗಿ ಚಲಿಸುತ್ತ ಆನಂದ ಪಡೆಯಿರಿ.

ಸ್ವಿಮ್ಮಿಂಗ್ ಪೂಲ್:

ಸ್ವಿಮ್ಮಿಂಗ್ ಪೂಲ್:

ಈಜಾಡಲು ವಿಶಾಲವಾದ ಈಜು ಕೊಳ.

ಟ್ವಿಸ್ಟರ್:

ಟ್ವಿಸ್ಟರ್:

ಬಿರುಗಾಳಿಗೆ ಸಿಲುಕಿದ ಅನುಭವ ಇದೆಯೆ? ಇಲ್ಲವಾದಲ್ಲಿ ಒಂದೊಮ್ಮೆ ಈ ರೈಡಿನಲ್ಲಿ ಪ್ರಯತ್ನಿಸಿ.

ಎಲಿಫಂಟ್ ಸಫಾರಿ:

ಎಲಿಫಂಟ್ ಸಫಾರಿ:

ಮಕ್ಕಳ ಜಂಗಲ್ ಸಫಾರಿಗೆ ಹೋಗುವ ಬಯಕೆ ಈಡೇರಿಲ್ಲವೆ? ಹಾಗಾದರೆ ಯಾವುದೆ ಭಯವಿಲ್ಲದೆ ಮಕ್ಕಳನ್ನು ಈ ಸಫಾರಿಗೆ ಖಂಡಿತ ಕಳಿಸಿ ಕೊಡಬಹುದು.

ವಾಟರ್ ಎಂ.ಜಿ.ಆರ್:

ವಾಟರ್ ಎಂ.ಜಿ.ಆರ್:

ನೀರಿನಲ್ಲಿ ವೃತ್ತಾಕಾರದಲ್ಲಿ ವೇಗವಾಗಿ ಚಲಿಸಿ ಆನಂದಿಸಿ.

ಗ್ರ್ಯಾನಿ ಬಗ್:

ಗ್ರ್ಯಾನಿ ಬಗ್:

ಮಕ್ಕಳಿಗಾಗಿರುವ ಒಂದು ರೀತಿಯ ರೈಡ್.

ಟೋರಾ ಸ್ಪಿನ್:

ಟೋರಾ ಸ್ಪಿನ್:

ಮಕ್ಕಳಿಗಾಗಿರುವ ಗಿರಕಿ ಹೊಡೆಯುತ್ತ ತಿರುಗುವ ಒಂದು ಸಖತ್ ರೈಡ್.

ಸೂಪರ್ ಟ್ರೂಪರ್:

ಸೂಪರ್ ಟ್ರೂಪರ್:

ಮೃದು ಹೃದಯದವರಿಗೆ ಈ ರೈಡ್ ಖಂಡಿತ ಅಲ್ಲ. ಅತಿ ವೇಗದಲ್ಲಿ ಗಾಳಿಯಲ್ಲಿ ಓರೆಯಾಗಿ ತಿರುಗುವ ರೈಡ್.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+