Search
  • Follow NativePlanet
Share
» »ಮಾಲ್ಶೇಜ್ ಘಾಟ್ : ಬೆಟ್ಟ ಗುಡ್ಡಗಳ ದಾರಿ

ಮಾಲ್ಶೇಜ್ ಘಾಟ್ : ಬೆಟ್ಟ ಗುಡ್ಡಗಳ ದಾರಿ

By Vijay

ಆಂಗ್ಲ ಭಾಷೆಯಲ್ಲಿ ಹೇಳಲಾಗುವ ಮೌಂಟೇನ್ ಪಾಸ್ ಎಂಬ ಪದವನ್ನು ಕನ್ನಡದಲ್ಲಿ ಬೆಟ್ಟ ಗುಡ್ಡಗಳ ಮಧ್ಯದಲ್ಲಿ ರೂಪಗೊಂಡ ದಾರಿ ಎಂದು ಅರ್ಥೈಸಬಹುದು. ಇಂತಹ ದಾರಿಗಳಲ್ಲಿ ಸಂಚರಿಸುವುದೆ ಒಂದು ರೋಮಾಂಚನಕರ ಅನುಭವ.

ನಮ್ಮ ದೇಶದಲ್ಲೂ ಸಹ ಹಲವಾರು ಪ್ರದೇಶಗಳಲ್ಲಿ ಇಂತಹ ಪರ್ವತ ದಾರಿಗಳನ್ನು ಕಾಣಬಹುದು. ಅಂತಹ ಕೆಲವು ಪರ್ವತ ದಾರಿಗಳ ಪೈಕಿ ಇಂದಿನ ಲೇಖನವು ಮಾಲ್ಶೇಜ್ ಘಾಟ್ ಎಂಬ ಸುಂದರ ಪರ್ವತ ದಾರಿಯ ಕುರಿತು ತಿಳಿಸುತ್ತದೆ.

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಮಾಲ್ಶೇಜ್ ಘಾಟ್ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿದ್ದು ಠಾಣೆ ಹಾಗೂ ಅಹ್ಮದನಗರ್ ಜಿಲ್ಲೆಗಳ ಗಡಿಗಳಿಗೆ ಹತ್ತಿರದಲ್ಲಿದೆ. ಈ ಪ್ರದೇಶವು ಪಶ್ಚಿಮ ಘಟ್ಟಗಳ ದಟ್ಟವಾದ ಬೆಟ್ಟ ಗುಡ್ಡಗಳಿಂದ ಆವರಿಸಿದ್ದು ನೋಡಲು ಮನಮೋಹಕವಾಗಿದೆ.

ಚಿತ್ರಕೃಪೆ: I for Detail.

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಈ ಘಟ್ಟ ಪ್ರದೇಶಗಳಲ್ಲಿ ಸಾಗುವುದೇನೋ ಒಂದು ರೋಮಾಂಚನ. ಆದರೆ ಎಚ್ಚರವಿರಲಿ ಮಳೆಗಾಲದ ಸಮಯದಲ್ಲಿ ಇಲ್ಲಿ ಭೂಕುಸಿತ ಉಂಟಾಗುವುದು ಸಾಮಾನ್ಯ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಈ ಪ್ರದೇಶವು ನೂರಾರು ಬಗೆಯ ವಿವಿಧ ಸಸ್ಯ ಹಾಗೂ ಜೀವ ಸಂಪತ್ತುಗಳಿಗೆ ಆಶ್ರಯ ತಾಣವಾಗಿದೆ. ವಿಶೇಷವಾಗಿ ಕೆಲ ಅಪರೂಪದ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಅದರಲ್ಲೂ ಫ್ಲೆಮಿಂಗೊ ಹಕ್ಕಿಗಳು ಮಳೆಗಾಲದ ಸಮಯದಲ್ಲಿ ಈ ಪ್ರದೇಶವನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುತ್ತವೆ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮುಂಬೈನಿಂದ 130 ಕಿ.ಮೀ ಹಾಗೂ ಪುಣೆಯಿಂದ 120 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಘಟ್ಟ ಪ್ರದೇಶವು ಪ್ರಸ್ತುತ ಒಂದು ಸುಂದರ ಗಿರಿಧಾಮ ಪ್ರದೇಶವಾಗಿ ಬೆಳೆಯುತ್ತಿದ್ದು ಸಾಕಷ್ಟು ಪ್ರವಾಸಿಗರಲ್ಲಿ ಹೆಸರುವಾಸಿಯಾಗುತ್ತಿದೆ.

ಚಿತ್ರಕೃಪೆ: Akshay N

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮುಂಬೈನ ಕಲ್ಯಾಣ್ ಜಂಕ್ಷನ್ ಹಾಗೂ ಕರ್ಜಾತ್ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣಗಳು. ಅಲ್ಲದೆ ಸರ್ಕಾರಿ ಬಸ್ಸುಗಳು ಸಹ ನಿಯಮಿತ ಅವಧಿಗಳಲ್ಲಿ ಇಲ್ಲಿಗೆ ಲಭ್ಯವಿರುತ್ತವೆ. ಬಾಡಿಗೆ ರಿಕ್ಷಾಗಳೂ ಸಹ ಮುಂಬೈನ ಕಲ್ಯಾಣ್ ಜಂಕ್ಷನ್ ಗಳಿಂದ ಹಂಚಿಕೆಯ ಪ್ರಯಾಣ ದರದಡಿಯಲ್ಲಿ ಕೊಂಡೊಯ್ಯುತ್ತವೆ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ನ ಪ್ರಮುಖ ಆಕರ್ಷಣೆಗಳೆಂದರೆ ಕಣಿವೆಗಳು ಕಾಣುವ ರೀತಿ, ಬೆಟ್ಟ ಗುಡ್ಡಗಳ ದೃಶ್ಯ, ಮಳೆಗಾಲದ ಸಂದರ್ಭದಲ್ಲಿ ಮಂಜು ಮುಸುಕಿದ ವಾತಾವರಣ. ಒಂದಕ್ಕಿಂತ ನೋಡಲು ಸುಂದರವಾಗಿ ಗೋಚರಿಸುತ್ತವೆ. ಅಲ್ಲದೆ ಈ ಪ್ರದೇಶ ಮಹಾ ನಗರಗಳಾದ ಮುಂಬೈ ಹಾಗೂ ಪುಣೆಗಳಿಗೆ ಹತ್ತಿರವಿರುವುದರಿಂದ ವಾರಾಂತ್ಯದ ರಜೆಗಳಿಗೂ ಆದರ್ಶಪ್ರಾಯವಾಗಿದೆ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಕೇವಲ ಬೆಟ್ಟ ಗುಡ್ಡ, ಪ್ರಕೃತಿಯ ಸುಂದರತೆ ಮಾತ್ರವಲ್ಲದೆ ಇತರೆ ಬೇರೆ ಕೆಲ ಆಕರ್ಷಣೆಗಳನ್ನೂ ಸಹ ಇದರ ಸುತ್ತ ಮುತ್ತ ನೋಡಬಹುದಾಗಿದೆ. ಅದರಲ್ಲಿನ ಕೆಲ ಆಕರ್ಷಣೆಗಳೆಂದರೆ ಹರಿಶ್ಚಂದ್ರಗಡ್, ಶಿವನೇರಿ ಕೋಟೆ, ಮಾಲ್ಶೇಜ್ ಜಲಪಾತ ಮುಂತಾದವುಗಳು.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಈ ಪ್ರದೇಶದ ಮತ್ತೊಂದು ರೋಚಕ ಸಂಗತಿಯೆಂದರೆ, ಇದು ಪಕ್ಷಿಗಳ ರುದ್ರಭೂಮಿ ಎಂತಲೂ ಕೂಡ ಒಮ್ಮೊಮ್ಮೆ ಕರೆಸಿಕೊಳ್ಳುತ್ತದೆ. ಕಾರಣವೆಂದರೆ ವರ್ಷದ ಕೆಲ ನಿರ್ದಿಷ್ಟ ಸಮಯ (ಮಳೆಗಾಲದ ಮುಂಚಿನ) ದಲ್ಲಿ ಹಲವು ಪಕ್ಷಿಗಳು ಪ್ರದೇಶದ ಮೊನಚಾದ ಬೆಟ್ಟದ ತುದಿಗಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪುತ್ತವೆ. ಆದರೆ ಸ್ಥಳೀಯ ಪ್ರಕೃತಿ ಶಾಸ್ತ್ರಜ್ಞರ ಪ್ರಕಾರ, ಈ ಘಟನೆಗಳು ಇತ್ತೀಚಿನ ಕೆಲ ವರ್ಷಗಳಿಂದ ಕಡಿಮೆಯಾಗುತ್ತಿದೆ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಇಂತಹ ಘಟೆನೆಗೆ ಮೂಲ ಕಾರಣವೆಂದರೆ: ಇಲ್ಲಿನ ಮೊನಚಾದ ಗುಡ್ಡದ ತುದಿಗಳಲ್ಲಿ ಪಕ್ಷಿಗಳು ಗೂಡು ಕಟ್ಟಿಕೊಂಡಿರುತ್ತವೆ. ಮಳೆಗಾಲದ ಮುಂಚಿನ ಸಮಯದಲ್ಲಿ ಇಲ್ಲಿ ಬೀಸುವ ಗಾಳಿಯ ವೇಗ ಹೆಚ್ಚಾಗಿರುತ್ತದೆ. ಆದ್ದರಿಂದ ಗಾಳಿಯ ವೇಗ ತಾಳಲಾರದೆ ಪಕ್ಷಿಗಳು ಹಾರುವಾಗ ದಿಕ್ಕು ತಪ್ಪಿ ಅಲ್ಲಿಲ್ಲಿ ಬಡಿಸಿಕೊಂಡು ಸಾವನ್ನಪ್ಪುತ್ತವೆ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Abhimanyu

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: I for Detail.

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್:

ಮಾಲ್ಶೇಜ್ ಘಾಟ್ ಘಟ್ಟ ಪ್ರದೇಶದ ರೋಮಾಂಚನ ಮೂಡಿಸುವ ಪರಿಸರ.

ಚಿತ್ರಕೃಪೆ: Elroy Serrao

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+