Search
  • Follow NativePlanet
Share
» »ಏಷ್ಯಾದಲ್ಲಿಯ ಈ ಕಣ್ಮನ ಸೆಳೆಯುವ ದ್ವೀಪಗಳಿಗೆ ಜೀವಮಾನದಲ್ಲೊಮ್ಮೆ ಭೇಟಿ ನೀಡಿ.

ಏಷ್ಯಾದಲ್ಲಿಯ ಈ ಕಣ್ಮನ ಸೆಳೆಯುವ ದ್ವೀಪಗಳಿಗೆ ಜೀವಮಾನದಲ್ಲೊಮ್ಮೆ ಭೇಟಿ ನೀಡಿ.

ಏಷ್ಯಾದಲ್ಲಿರುವ ಅತ್ಯಂತ ಸುಂದರವಾದ ಹಾಗೂ ನೀವು ಭೇಟಿ ಕೊಡಲೇಬೇಕಾದ ದ್ವೀಪಗಳು

ಯಾವುದೇ ಪ್ರಯಾಣಿಕನಿಗಾಗಲಿ ಏಷ್ಯಾ ಖಂಡದಲ್ಲಿರುವ ಕೆಲವು ಸುಂದರ ದ್ವೀಪಗಳು ನೋಡಲೇಬೇಕು ಎನ್ನುವಂತಹುದು. ಏಷ್ಯಾಖಂಡವು ಬೆರಗುಗೊಳಿಸುವಂತಹ ಬೀಚ್ ಗಳು, ಪರ್ವತಗಳು, ಮತ್ತು ಶ್ರೀಮಂತ ಸಂಸ್ಕೃತಿ ಇತ್ಯಾದಿಗಳಿಂದ ಆಶೀರ್ವದಿಸಲ್ಪಟ್ಟಿದೆ. ಇವುಗಳಲ್ಲಿ ಕೆಲವು ದ್ವೀಪಗಳು ಭೂಮಿ ಮೇಲಿನ ಸ್ವರ್ಗ ಎಂದೂ ವರ್ಣಿಸಲ್ಪಟ್ಟಿವೆ. ಇವುಗಳು ಶಾಂತಿಯುತವಾಗಿದ್ದು, ವಿಶ್ರಾಂತಿ, ತೃಪ್ತಿ ಹೊಂದಲು ಮತ್ತು ನೆಮ್ಮದಿಯನ್ನು ಪಡೆಯುವ ಸ್ಥಳಗಳಾಗಿವೆ. ಬೀಚ್ ಗಳು ಭೂಮಿ ಮೇಲಿನ ಅತ್ಯಂತ ಬೆರಗುಗೊಳಿಸುವ ಸ್ಥಳಗಳಾಗಿವೆ.

ಈ ದ್ವೀಪಗಳಿಗಿಂತ ಹೆಚ್ಚು ಸುಂದರವಾದ ಸ್ಥಳವನ್ನು ಕಲ್ಪಿಸುವುದು ಕಷ್ಟ, ಅಲ್ಲಿ ನೀವು ಬೆಚ್ಚಗಿನ ಉಷ್ಣವಲಯದ ಹವಾಮಾನವನ್ನು ಆನಂದಿಸಬಹುದು ಮತ್ತು ಬಿಳಿ ಮರಳಿನ ಕಡಲತೀರಗಳೊಂದಿಗೆ ಸ್ಪಷ್ಟವಾದ ನೀಲಿ ನೀರನ್ನು ನೋಡಬಹುದು.

ಏಷ್ಯಾದ ಭೇಟಿ ಕೊಡಲೇ ಬೇಕಾದಂತಹ ಅತ್ಯಂತ ಸುದರವಾದ ದ್ವೀಪಗಳ ಪಟ್ಟಿ ಇಲ್ಲಿದೆ

ಪಲಾವಾನ್ ದ್ವೀಪ, ಪಿಲಿಪ್ಪೈನ್ಸ್

ಪಲಾವಾನ್ ದ್ವೀಪ, ಪಿಲಿಪ್ಪೈನ್ಸ್

ಪಲವಾನ್ ನಲ್ಲಿರುವ ದ್ವೀಪವು ದ್ವೀಪಗಳ ಸಮೂಹವಾಗಿದ್ದು ಈ ಪ್ರಸಿದ್ದ ದ್ವೀಪವು ಬೀಚ್ ಪ್ರಿಯರು ಮತ್ತು ಪ್ರವಾಸಿಗರಿಗೆ ಅತ್ಯಂತ ಮೆಚ್ಚಿನ ತಾಣವಾಗಿದೆ. ರೇಷ್ಮೆಯಂತೆ ಕಾಣುವ ಮರಳುಗಳೊಂದಿಗೆ ಸ್ಪಟಿಕದಂತೆ ಶುದ್ದವಾಗಿರುವ ಕಡಲ ನೀರಿನಿಂದ ಈ ದ್ವೀಪವು ಸುತ್ತುವರಿಯಲ್ಪಟ್ಟಿದೆ. ಪಲವಾನ್ ಬಗ್ಗೆ ಉತ್ತಮ ವಿಷಯವೆಂದರೆ ಇದು ತನ್ನ ಬಿಳಿ ಮರಳು ಮತ್ತು ಶುದ್ದ ನೀರಿಗೆ ಮಾತ್ರವಲ್ಲದೆ ಅದರ ನೈಸರ್ಗಿಕ ಅದ್ಭುತಗಳಿಗೂ ಹೆಸರುವಾಸಿಯಾಗಿದೆ. ಪಲ್ವಾನ್ ನಲ್ಲಿ ಪೋರ್ಟೊ ಪ್ರಿನ್ಸೆಸ್ಸಾ, ಕೊರಾನ್ ಮತ್ತು ಎಲ್ ನಿಡೋಗಳಂತಹ ಅನೇಕ ಸುಂದರ ದ್ವೀಪಗಳನ್ನು ನೀವು ಕಾಣಬಹುದು.

ಸ್ವರಾಜ್ ದೀಪ್ (ಹ್ಯಾವ್ಲಾಕ್ ದ್ವೀಪ), ಭಾರತ

ಸ್ವರಾಜ್ ದೀಪ್ (ಹ್ಯಾವ್ಲಾಕ್ ದ್ವೀಪ), ಭಾರತ

ಭಾರತದ ಅಂಡಮಾನ್ ಕರಾವಳಿಯಲ್ಲಿ ನೆಲೆಸಿರುವ ಪ್ರಸಿದ್ದ ಹ್ಯಾವ್ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪವೆಂದೂ ಕರೆಯಲಾಗುತ್ತದೆ. ಈ ದ್ವೀಪವು ತನ್ನ ಸೌಂದರ್ಯತೆ ಮತ್ತು ಇತಿಹಾಸದಿಂದಾಗಿ ಪ್ರವಾಸಿಗರಲ್ಲಿ ಅತ್ಯಂತ ಹೆಸರುವಾಸಿಯಾದುದಾಗಿದೆ. ರಾಧಾನಗರ, ಎಲಿಫೆಂಟ್ ಬೀಚ್ ಮತ್ತು ಕಾಲಪತ್ತರ್ ಎಂಬ ಮೂರು ವಿಶ್ವಪ್ರಸಿದ್ಧ ಕಡಲತೀರಗಳನ್ನು ಹೊಂದಿರುವ ಇದು, ಅಂಡಮಾನ್ ನ ಅತಿದೊಡ್ಡ ಬೀಚ್ ಎಂದು ಪರಿಗಣಿಸಲಾಗಿದೆ.ಈ ಸ್ಥಳಕ್ಕೆ ಭೇಟಿ ಕೊಡಲು ಉತ್ತಮ

ಸಮಯವೆಂದರೆ : ಫೆಬ್ರವರಿ ಮತ್ತು ಮಾರ್ಚ್ ನಿಂದ ಮೇ ತಿಂಗಳುಗಳವರೆಗೆ.

ಚಟುವಟಿಕೆಗಳು: ಸ್ನೋರ್ಕ್ಲೆಲಿಂಗ್, ಸ್ಕೂಬಾ ಡೈವಿಂಗ್ ನಂತಹ ಜಲಕ್ರೀಡೆಗಳು, ಟ್ರೆಕ್ಕಿಂಗ್, ಸಮುದ್ರ ಆಹಾರ

 ರಾಜಾ ಅಂಪಾತ್ ನಾಲ್ಕು ರಾಜರುಗಳು) ದ್ವೀಪ , ಇಂಡೋನೇಶ್ಯಾ

ರಾಜಾ ಅಂಪಾತ್ ನಾಲ್ಕು ರಾಜರುಗಳು) ದ್ವೀಪ , ಇಂಡೋನೇಶ್ಯಾ

ಇಂಡೋನೇಶ್ಯಾದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ರಾಜಾ ಅಂಪತ್ ದ್ವೀಪ ಸಮೂಹವು ಭೂಮಿಯಲ್ಲಿರುವ ಅತ್ಯಂತ ವೈವಿಧ್ಯಮಯ ಸ್ಥಳಗಳಲ್ಲಿ ಒಂದಾಗಿದೆ. ಇದರ ಅವಿಸ್ಮರಣೀಯ ಸೌಂದರ್ಯತೆ, ಬಂಡೆಗಳು ಮತ್ತು ಡೈವಿಂಗ್ ತಾಣಗಳನ್ನು ಇಲ್ಲಿಯ ಕಡಲತೀರಗಳ ಉದ್ದಕ್ಕೂ ಕಾಣಬಹುದಾಗಿದೆ. ಈ ಪ್ರದೇಶವು ಶ್ರೀಮಂತ ಈ ಪ್ರದೇಶವು ತನ್ನ ಜೀವವೈವಿಧ್ಯತೆ ಮತ್ತು ಶ್ರೀಮಂತ ನಯನ ಮನೋಹರ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಹವಳಗಳು, ಪಕ್ಷಿಗಳು ಮತ್ತು ಚಿಟ್ಟೆಗಳಂತಹ ಹಲವಾರು ಸ್ಥಳೀಯ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಹೊಂದಿದೆ. ಸಮುದ್ರದಲ್ಲಿ ಡೈವ್ ಮಾಡುವ ಸಾಹಸಿಗಳಿಗೆ ಮಾತ್ರ ಸ್ವರ್ಗವಲ್ಲದೆ ಈ ದ್ವೀಪವು ಆನಂದಿಸಲು ಕೆಲವು ಅದ್ಭುತ ಕಡಲತೀರಗಳನ್ನು ಸಹ ನೀಡುತ್ತದೆ!ಚಟುವಟಿಕೆಗಳು: ಪಾಸಿರ್ ಟಿಂಬುಲ್, ಸ್ನಾರ್ಕ್ಲಿಂಗ್, ಡೈವಿಂಗ್ ಮತ್ತು ಜೀವವೈವಿಧ್ಯ ರೆಸಾರ್ಟ್‌ಗೆ ಭೇಟಿ ನೀಡಬೇಕು.

ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ: ಅಕ್ಟೋಬರ್ ನಿಂದ ಎಪ್ರಿಲ್ ವರೆಗೆ

ಮ್ಯಾಕ್ಲಿಯೊಡ್ ದ್ವೀಪ, ಮ್ಯಾನ್ಮಾರ್

ಮ್ಯಾಕ್ಲಿಯೊಡ್ ದ್ವೀಪ, ಮ್ಯಾನ್ಮಾರ್

ಮ್ಯಾಕ್ಲಿಯೊಡ್ ದ್ವೀಪವು ಮ್ಯಾನ್ಮಾರ್ (ಬರ್ಮಾ) ನ ಆಗ್ನೇಯ ಕರಾವಳಿಯಲ್ಲಿದೆ ಮತ್ತು ಮ್ಯಾನ್ಮಾರ್ ಅಂಡಮಾನ್ ರೆಸಾರ್ಟ್‌ನಿಂದ ನಿರ್ವಹಿಸಲ್ಪಡುವ ಖಾಸಗಿ ದ್ವೀಪವಾಗಿದೆ. ಇದು ಸ್ಫಟಿಕ ಸ್ಪಷ್ಟ ನೀರು ಮತ್ತು ಎತ್ತರದ ಸುಣ್ಣದ ಬಂಡೆಗಳಿಂದ ಸುತ್ತುವರಿದ ಬಿಳಿ ಮರಳಿನ ಕಡಲತೀರಗಳೊಂದಿಗೆ ಆಗ್ನೇಯ ಏಷ್ಯಾದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ವಿವರಿಸಲಾಗಿದೆ. ಆದರೆ ಮ್ಯಾಕ್ಲಿಯೊಡ್ ದ್ವೀಪವು ಸಮುದ್ರ ಜೀವಿಗಳಿಗೆ ವಿಶೇಷವಾಗಿ ಹವಳದ ಬಂಡೆಗಳಿಗೆ ಹೆಸರುವಾಸಿಯಾಗಿದೆ, ಇದು ಬರಾಕುಡಾ, ಯೆಲ್ಲೋಫಿನ್ ಟ್ಯೂನ ಮತ್ತು ಮಾರ್ಲಿನ್ ಸೇರಿದಂತೆ ಸಾವಿರಾರು ಜಾತಿಯ ಮೀನುಗಳಿಗೆ ನೆಲೆಯಾಗಿದೆ.

ಜೇಜು ದ್ವೀಪಗಳು, ದಕ್ಷಿಣ ಕೊರಿಯ

ಜೇಜು ದ್ವೀಪಗಳು, ದಕ್ಷಿಣ ಕೊರಿಯ

ಹವಾಯಿ ಎಂದೂ ಕರೆಯಲ್ಪಡುವ ಜೇಜು ದ್ವೀಪಗಳು ದಕ್ಷಿಣ ಕೊರಿಯದ ಅತ್ಯಂತ ಪ್ರಸಿದ್ದ ಪ್ರವಾಸಿ ತಾಣಗಳಲ್ಲೊಂದಾಗಿದೆ. ಸುಂದರವಾದ ಬೀಚ್ ಗಳು ನೈಸರ್ಗಿಕ ಭೂದೃಶ್ಯಗಳು, ಮತ್ತು ಶ್ರೀಮಂತ ಇತಿಹಾಸಗಳನ್ನೊಳಗೊಂಡ ಜೇಜು ದ್ವೀಪವು ಭೇಟಿ ಕೊಡುವವರಿಗೆ ಎಂದಿಗೂ ನಿರಾಶೆಗೊಳಿಸದೇ ಇರುವಂತಹ ಸ್ಥಳವಾಗಿದೆ. ಈ ದ್ವೀಪವು ವಿಶ್ವದ ಅತಿದೊಡ್ಡ ಜ್ವಾಲಾಮುಖಿ ಕುಳಿ, ಹಲ್ಲಾಸನ್ ಮತ್ತು ಹಲ್ಲಾಸನ್ ರಾಷ್ಟ್ರೀಯ ಉದ್ಯಾನವನಕ್ಕೆ ನೆಲೆಯಾಗಿದೆ. ಜೆಜುನಲ್ಲಿ ಕಾಲ್ನಡಿಗೆಯ ಮೂಲಕ ಅಥವಾ ಮೌಂಟೇನ್ ಬೈಕು ಮೂಲಕ ಅನ್ವೇಷಿಸಬಹುದಾದ ಸಾಕಷ್ಟು ಹಾದಿಗಳಿವೆ. ಇದು ದಂಪತಿಗಳಿಗೆ ಮಧುಚಂದ್ರಕ್ಕೆ ಹೆಚ್ಚು ಶಿಫಾರಸು ಮಾಡಲಾಗುವ ಸ್ಥಳವೆಂದು ಪರಿಗಣಿಸಲಾಗಿದೆ.ಇಲ್ಲಿಗೆ ಭೇಟಿಗೆ ಸೂಕ್ತ

ಸಮಯ : ಜುಲೈ ಯಿಂದ ಸೆಪ್ಟೆಂಬರ್

ಮಾಡಬಹುದಾದ ಚಟುವಟಿಕೆಗಳು: ಬಂಡಿ ಸವಾರಿ, ಜೆಜು ಜಾನಪದ ಗ್ರಾಮಕ್ಕೆ ಭೇಟಿ, ಈಜು

ಪೊಮ್ ಪೊಮ್ ದ್ವೀಪ ಮಲೇಶ್ಯಾ

ಪೊಮ್ ಪೊಮ್ ದ್ವೀಪ ಮಲೇಶ್ಯಾ

ಪೊಮ್ ಪೊಮ್ ದ್ವೀಪವು ಸೆಂಪೋರ್ನಾ ದ್ವೀಪಸಮೂಹದಲ್ಲಿರುವ ಆಗ್ನೇಯ ಏಷ್ಯಾದ ಅತ್ಯುತ್ತಮ ಗುಪ್ತ ಸೌಂದರ್ಯಗಳಲ್ಲಿ ಒಂದಾಗಿದೆ. ಇದು ಶಾಂತವಾದ ನೀರು ಮತ್ತು ಸುಂದರವಾದ ಬಿಳಿ ಮರಳಿನ ಕಡಲತೀರಗಳಿಗೆ ಹೆಸರುವಾಸಿಯಾಗಿದ್ದು, ಮಕ್ಕಳು ಮತ್ತು ಕುಟುಂಬದವರೊಡನೆ ರಜಾದಿನಗಳನ್ನು ವಿಶ್ರಾಂತಿಯಿಂದ ಕಳೆಯಲು ಪರಿಪೂರ್ಣವಾದ ಸ್ಥಳವಾಗಿದೆ. ದ್ವೀಪವು ನಿಮ್ಮನ್ನು ಕಾರ್ಯನಿರತರನ್ನಾಗಿಸಿ ಇಡುಲು ಬೇಕಾಗುವಂತಹ ಸಾಕಷ್ಟು ಚಟುವಟಿಕೆಗಳನ್ನು ಹೊಂದಿದೆ, ಇದರಲ್ಲಿ ಸ್ನಾರ್ಕೆಲಿಂಗ್ ಮತ್ತು ದ್ವೀಪದಿಂದ ಸ್ವಲ್ಪ ಕಡಲಾಚೆಯ ಹವಳದ ದಿಬ್ಬಗಳಿಗೆ ಡೈವಿಂಗ್ ಪ್ರವಾಸಗಳು ಸೇರಿವೆ. ಪೊಮ್ ಪೊಮ್ ನ ಸುತ್ತಮುತ್ತಲಿನ ನೀರು ಸಹ ಮೀನುಗಳಿರುವ ಸ್ಥಳಗಳಿಂದ ತುಂಬಿದ್ದು, ಆದ್ದರಿಂದ ಡೈವರ್ ಗಳು ಯಾವುದೇ ಪ್ರಯತ್ನವಿಲ್ಲದೆ ಇವುಗಳನ್ನು ಹಿಡಿಯಬಹುದಾಗಿದೆ.ಭೇಟಿ

ನೀಡಲು ಉತ್ತಮ ಸಮಯ: ಮೇ ನಿಂದ ಆಗಸ್ಟ್

ಚಟುವಟಿಕೆಗಳು: ಸ್ಕೂಬಾ ಡೈವಿಂಗ್ ಮತ್ತು ಕಯಾಕಿಂಗ್

ಬೊಹೊಲ್ , ಇಂಡೋನೇಶ್ಯಾ

ಬೊಹೊಲ್ , ಇಂಡೋನೇಶ್ಯಾ

ಚಾಕೊಲೇಟ್ ಹಿಲ್ಸ್ ಎಂಬ ವಿಶಿಷ್ಟ ಭೌಗೋಳಿಕ ರಚನೆಯಿಂದ ಹಿಡಿದು ವಿಶ್ವದ ಅತ್ಯಂತ ಚಿಕ್ಕ ಪ್ರೈಮೇಟ್ ಟಾರ್ಸಿಯರ್‌ಗಳವರೆಗೆ, ಬೋಹೋಲ್ ದ್ವೀಪವು ಪ್ರವಾಸಿಗರು ಮತ್ತು ಸ್ಥಳೀಯರಿಂದ ಜನಪ್ರಿಯವಾಗಿರುವ ಸುಂದರವಾದ ತಾಣವಾಗಿದೆ. ಈ ದ್ವೀಪವು ಬಿಳಿ ಮರಳಿನ ಕಡಲತೀರಗಳು ಮತ್ತು ಸೊಂಪಾದ ಸಸ್ಯವರ್ಗಕ್ಕೆ ನೆಲೆಯಾಗಿದೆ, ಇದು ವಿಶ್ರಾಂತಿ ಮತ್ತು ಸಾಹಸ ಎರಡಕ್ಕೂ ಸೂಕ್ತವಾದ ಸ್ಥಳವಾಗಿದ್ದು, ಇದು ಕಾಲ್ನಡಿಗೆ ಅಥವಾ ಕಯಾಕ್ ಮೂಲಕ ಪ್ರವೇಶಿಸಬಹುದಾದ ಅನೇಕ ಜಲಪಾತಗಳನ್ನು ಒಳಗೊಂಡಿದೆ.ಭೇಟಿ

ನೀಡಲು ಉತ್ತಮ ಸಮಯ: ನವೆಂಬರ್ ನಿಂದ ಏಪ್ರಿಲ್

ಚಟುವಟಿಕೆಗಳು: ರಿವರ್ ಕ್ರೂಸ್, ಚಾಕೊಲೇಟ್ ಹಿಲ್ಸ್ ಗಳ ನೋಟ, ವಾಟರ್ ಸ್ಪೋರ್ಟ್ಸ್, ಡಾನಾವೊ ಅಡ್ವೆಂಚರ್ ಪಾರ್ಕ್

ಸಿಮಿಲನ್ ದ್ವೀಪಗಳು, ಥೈಲ್ಯಾಂಡ್

ಸಿಮಿಲನ್ ದ್ವೀಪಗಳು, ಥೈಲ್ಯಾಂಡ್

ಥಾಯ್ ಸರ್ಕಾರದಿಂದ ಉತ್ತಮವಾಗಿ ರಕ್ಷಿಸಲ್ಪಟ್ಟ ಸಿಮಿಲನ್ ದ್ವೀಪಗಳು ಥಾಯ್ ಪಶ್ಚಿಮ ಕರಾವಳಿಯ ಅಂಡಮಾನ್ ಸಮುದ್ರದಲ್ಲಿದೆ. ಈ ದ್ವೀಪಗಳು ತಮ್ಮ ಬಿಳಿ ಮರಳಿನ ಕಡಲತೀರಗಳು, ಸ್ಫಟಿಕ ಸ್ಪಷ್ಟ ನೀರು ಮತ್ತು ಕರಾವಳಿಯುದ್ದಕ್ಕೂ ಹರಡಿರುವ ಉಷ್ಣವಲಯದ ಕಾಡುಗಳಿಗೆ ಪ್ರಸಿದ್ಧವಾಗಿವೆ. ಇಲ್ಲಿರುವ ಡೈವಿಂಗ್ ವಿಶ್ವಪ್ರಸಿದ್ಧವಾಗಿದೆ ಮತ್ತು ಈ ದ್ವೀಪ ಸರಪಳಿಯಲ್ಲಿ ನೀವು ಅದ್ಭುತವಾದ ಹವಳದ ಬಂಡೆಗಳು ಮತ್ತು ನಾಶವಾಗಿರುವಹಡಗುಗಳನ್ನು ಕಾಣಬಹುದು.ಭೇಟಿ ನೀಡಲು ಉತ್ತಮ

ಸಮಯ: ಅಕ್ಟೋಬರ್ ನಿಂದ ಮೇ

ಚಟುವಟಿಕೆಗಳು: ಸ್ನಾರ್ಕ್ಲಿಂಗ್, ಆಳ ಸಮುದ್ರ ಡೈವಿಂಗ್, ಟ್ರೆಕ್ಕಿಂಗ್, ರೋಯಿಂಗ್.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+