Search
  • Follow NativePlanet
Share
» »ಇಲ್ಲಿ ಸ್ನಾನ ಮಾಡಬೇಕಾದರೆ 2028 ರವರೆಗೆ ಕಾಯಬೇಕು ಅಷ್ಟೇ.....

ಇಲ್ಲಿ ಸ್ನಾನ ಮಾಡಬೇಕಾದರೆ 2028 ರವರೆಗೆ ಕಾಯಬೇಕು ಅಷ್ಟೇ.....

ಭಾರತ ದೇಶದಲ್ಲಿ ಪ್ರತಿ ದೇವಾಲಯದ ಎದುರು ಒಂದು ಪುಷ್ಕರಣಿ ಇರುತ್ತದೆ. ಮೊದಲು ಈ ದೇವಾಲಯದಲ್ಲಿ ಸ್ನಾನವನ್ನು ಮಾಡಿ ಸ್ನಾನದ ಜೊತೆಗೆ ದೈವ ದರ್ಶನ ಮಾಡಿಕೊಂಡರೆ ಪುಣ್ಯ ಬರುತ್ತದೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಅದೇ ಪುರಾಣಗಳು ಒಂದೇ ಒಂದ

ಭಾರತ ದೇಶದಲ್ಲಿ ಪ್ರತಿ ದೇವಾಲಯದ ಎದುರು ಒಂದು ಪುಷ್ಕರಣಿ ಇರುತ್ತದೆ. ಮೊದಲು ಈ ದೇವಾಲಯದಲ್ಲಿ ಸ್ನಾನವನ್ನು ಮಾಡಿ ಸ್ನಾನದ ಜೊತೆಗೆ ದೈವ ದರ್ಶನ ಮಾಡಿಕೊಂಡರೆ ಪುಣ್ಯ ಬರುತ್ತದೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಅದೇ ಪುರಾಣಗಳು ಒಂದೇ ಒಂದು ಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತದೆ ಎಂದು ಹೇಳುತ್ತದೆ.

ಇಲ್ಲಿ ದೇವಾಲಯವೇ ಇರುವುದಿಲ್ಲ. ಆದರೆ ಆ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಿದರೆ ದೇಶದ ಅನೇಕ ಪುಣ್ಯಸ್ಥಳಗಳಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ಮುಖ್ಯವಾಗಿ 12 ವರ್ಷಕ್ಕೆ ಒಮ್ಮೆ ಬರುವ ಆ ಶುಭ ಸಮಯಕ್ಕಾಗಿ ಅನೇಕ ಭಕ್ತರು ಕಾಯುತ್ತಾ ಇರುತ್ತಾರೆ.

2016ರಲ್ಲಿ ಬಂದ ಈ ಪುಣ್ಯಕಾಲದಲ್ಲಿ ಆ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಿದ ಭಕ್ತರು ಮತ್ತೆ 2028ರಲ್ಲಿ ಎದುರು ನೊಡುತ್ತಿದ್ದಾರೆ. ಈ ಮೂಲಕ ಪುಷ್ಕರಣಿಗೆ ಸಂಬಂಧಿಸಿದ ಸಂಕ್ಷೀಪ್ತವಾದ ವಿವರಗಳು ನಿಮಗಾಗಿ....

1.ಪ್ರಳಯದ ನಂತರ

1.ಪ್ರಳಯದ ನಂತರ

PC:YOUTUBE

ಪ್ರಳಯದ ನಂತರ ಬ್ರಹ್ಮದೇವನು ತಿರುಗಿ ಸೃಷ್ಟಿಯನ್ನು ಮುಂದುವರೆಸಲು ಅವಶ್ಯಕವಾದುದನ್ನು ಒಂದು ಕುಂಭದಲ್ಲಿ ಇಟ್ಟು ಈ ಭೂಮಿಗೆ ಕಳುಹಿಸುತ್ತಾನೆ. ಹಾಗೆ ಭೂಮಿಯ ಮೇಲೆ ಬಂದ ಕುಂಭವು ಮೊದಲು ಈ ಭೂಮಿಯನ್ನು ತಾಕುತ್ತದೆ. ಆ ಸ್ಥಳವೇ ಕುಂಭಕೋಣವಾಗಿ ಮಾರ್ಪಟಾಯಿತು ಎಂದು ನಮ್ಮ ಪುರಾಣ ಕಥೆಗಳು ಹೇಳುತ್ತವೆ.

2.ಕಾಶಿಯನ್ನು ದರ್ಶಿಸಿದ ಪುಣ್ಯ

2.ಕಾಶಿಯನ್ನು ದರ್ಶಿಸಿದ ಪುಣ್ಯ

PC:YOUTUBE

ಅದ್ದರಿಂದಲೇ ಈ ಕುಂಭಕೋಣಂ ಅತ್ಯಂತ ಪವಿತ್ರವಾದ ಪ್ರದೇಶ. ಇನ್ನು ಈ ಕುಂಭಕೋಣಂನಲ್ಲಿ ಬ್ರಹ್ಮ ದೇವಾಲಯವಿರುವುದು ಕೂಡ ಗಮನಾರ್ಹ. ಇನ್ನು ಈ ಕುಂಭಕೋಣಂನಲ್ಲಿ ಪ್ರತಿ ಹೆಜ್ಜೆಗೂ ಒಂದು ದೇವಾಲಯ ಕಾಣಿಸುತ್ತದೆ. ಇದರಿಂದಾಗಿ ಕಾಶಿಗೆ ತೆರಳಿದಷ್ಟು ಪುಣ್ಯ ಕುಂಭಕೋಣಕ್ಕೆ ದರ್ಶಿಸಿದರೆ ಬರುತ್ತದೆ ಎಂದು ಪುರಾಣಗಳು ಹೇಳುತ್ತವೆ.

3.ಸಿಂಹರಾಶಿಯಲ್ಲಿ ಪ್ರವೇಶಿಸುವ ಸಮಯದಲ್ಲಿ

3.ಸಿಂಹರಾಶಿಯಲ್ಲಿ ಪ್ರವೇಶಿಸುವ ಸಮಯದಲ್ಲಿ

PC:YOUTUBE

ಇಂತಹ ಪುಣ್ಯಸ್ಥಳವಾದ ಕುಂಭಕೋಣಂನಲ್ಲಿ ಒಂದು ಅದ್ಭುತವಾದ ದೊಡ್ಡದಾದ ಕೊಳ ಇದೆ. ಈ ಕೊಳವು ಭಾರತ ದೇಶದಲ್ಲಿಯೇ ಅತ್ಯಂತ ದೊಡ್ಡದಾದ ತೀರ್ಥ ಎಂದೇ ಹೇಳುತ್ತಾರೆ. 13 ವರ್ಷಕ್ಕೆ ಒಮ್ಮೆ ಬೃಹಸ್ಪತಿ ಸಿಂಹರಾಶಿಯೊಳಗೆ ಬರುವ ಸಮಯದಲ್ಲಿ ಈ ಕೊಳದಲ್ಲಿ ಸಕಲ ತೀರ್ಥಗಳು ಬಂದು ಸೇರುತ್ತವೆ ಎಂದು ನಂಬಲಾಗಿದೆ. ಆ ಸಮಯದಲ್ಲಿ ಈ ಕೊಳದಲ್ಲಿ ಸ್ನಾನವನ್ನು ಆಚರಿಸಿದರೆ ಭಾರತ ದೇಶದಲ್ಲಿನ ಎಲ್ಲಾ ಪವಿತ್ರವಾದ ತೀರ್ಥಗಳಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.

4.ಮಹಾಮಹಾ

4.ಮಹಾಮಹಾ

PC:YOUTUBE

ಅದ್ದರಿಂದಲೇ ಈ ತೀರ್ಥದಲ್ಲಿ ಸ್ನಾನವನ್ನು ಮಾಡುವುದಕ್ಕೆ ದೇಶದಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆ ಒಂದೇ ದಿನದಲ್ಲಿ ಲಕ್ಷಾಧಿ ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸ್ನಾನವನ್ನು ಆಚರಿಸುತ್ತಾರೆ. 12 ವರ್ಷಕ್ಕೆ ಒಮ್ಮೆ ಬರುವ ಆ ಪುಣ್ಯಕಾಲಕ್ಕೆ ಮಹಾಮಹಾ ಎಂದು ಕರೆಯುತ್ತಾರೆ.

5.ಮಕರ ಸಂಕ್ರಾತಿ ದಿನ

5.ಮಕರ ಸಂಕ್ರಾತಿ ದಿನ

PC:YOUTUBE

ಅದೇ ಸಮಯದಲ್ಲಿ ಇಲ್ಲಿ ಪುಣ್ಯಸ್ನಾನಗಳು ನಡೆಯುತ್ತವೆಯಾದ್ದರಿಂದ ಇದನ್ನು ಮಹಾಮಹಾ ಕಲ್ಯಾಣಿ ಎಂದು ಕರೆಯುತ್ತಾರೆ. ಕೇವಲ ಮಹಾಮಹಾ ಸಮಯದಲ್ಲಿಯೇ ಅಲ್ಲದೇ ಮಕರ ಸಂಕ್ರಾತಿ ದಿನದ ಮಾಘ ಪೌರ್ಣಿಮ ತದಿತರ ದಿನಗಳಲ್ಲಿಯೂ ಕೂಡ ಇಲ್ಲಿ ಸ್ನಾನಗಳು ಮಾಡುವುದಕ್ಕೆ ಹೆಚ್ಚು ಮಂದಿ ಉತ್ಸಹವನ್ನು ತೋರುತ್ತಾರೆ. 6 ಎಕರೆಗಳ ವಿಸ್ತೀರ್ಣದಲ್ಲಿ ಈ ಕಲ್ಯಾಣಿಯ ಸುತ್ತ 16 ಮಂಟಪಗಳು, 21 ಬಾವಿಗಳು ಇವೆ. ಮಂಟಪದಲ್ಲಿರುವ ಶಿಲ್ಪ ಸಂಪತ್ತು ನಮ್ಮ ಭಾರತೀಯ ಶಿಲ್ಪಕಲೆಗೆ ಕನ್ನಡಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X