Search
  • Follow NativePlanet
Share
» »ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತಕ್ಕೆ ಹೋಗಿದ್ದೀರಾ?

ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತಕ್ಕೆ ಹೋಗಿದ್ದೀರಾ?

ಗಂಗಾವಲ್ಲಿ ನದಿ ಎಂದೂ ಕರೆಯಲ್ಪಡುವ ಬೆಡ್ತಿ ನದಿಯ ಮೇಲೆ ಮಾಗೋಡ್ ಜಲಪಾತವು ರೂಪುಗೊಳ್ಳುತ್ತದೆ. ಬಂಡೆಗಳ ಕಿರಿದಾದ ಕಣಿವೆಯಲ್ಲಿ ಸುಮಾರು 650 ಅಡಿಗಳ ಎತ್ತರದಿಂದ ಕೆಳಗೆ ಬೀಳುತ್ತದೆ.

ಯೆಲ್ಲಾಪುರದಲ್ಲಿರುವ ಮಾಗೋಡ್ ಜಲಪಾತವು ಪ್ರಕೃತಿ ಸೌಂದರ್ಯದ ನಡುವೆ ಕಣ್ತುಂಬಿಸುವ ತಾಣವಾಗಿದೆ. ಬೋರ್ಗರೆಯುವ ಜಲಪಾತದ ನಡುವೆ ಕಾಲಕಳೆಯುವುದು ನಿಜಕ್ಕೂ ಮನಮೋಹಕವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಜಲಪಾತಕ್ಕೆ ನೀವೂ ಭೇಟಿ ನೀಡಿ.

ಎಲ್ಲಿದೆ ಮಾಗೋಡ್ ಫಾಲ್ಸ್

ಎಲ್ಲಿದೆ ಮಾಗೋಡ್ ಫಾಲ್ಸ್

PC:Prad.gk
ಯಲ್ಲಾಪುರದಿಂದ 18 ಕಿ.ಮೀ ದೂರದಲ್ಲಿ, ಶಿರಸಿಯಿಂದ 60 ಕಿ.ಮೀ ದೂರದಲ್ಲಿ, ಜೊಗ್ ಫಾಲ್ಸ್ನಿಂದ 117 ಕಿ.ಮೀ, ಗೋಕರ್ಣದಿಂದ 107 ಕಿ.ಮೀ, ಕಾರವಾರದಿಂದ 108 ಕಿ.ಮೀ, ದಾಂಡೇಲಿಯಿಂದ 81 ಕಿ.ಮೀ ಮತ್ತು ಹುಬ್ಬಳ್ಳಿಯಿಂದ 88 ಕಿ.ಮೀ, ದೂರದಲ್ಲಿರುವ ಮಾಗೋಡ್ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಮಾಗೋಡ್ ನಲ್ಲಿರುವ ಜಲಪಾತಗಳ ಸಮೂಹವಾಗಿದೆ.

650 ಅಡಿಗಳ ಎತ್ತರದಿಂದ ಬೀಳುತ್ತದೆ

650 ಅಡಿಗಳ ಎತ್ತರದಿಂದ ಬೀಳುತ್ತದೆ

PC:Sangama24
ಗಂಗಾವಲ್ಲಿ ನದಿ ಎಂದೂ ಕರೆಯಲ್ಪಡುವ ಬೆಡ್ತಿ ನದಿಯ ಮೇಲೆ ಮಾಗೋಡ್ ಜಲಪಾತವು ರೂಪುಗೊಳ್ಳುತ್ತದೆ. ಬಂಡೆಗಳ ಕಿರಿದಾದ ಕಣಿವೆಯಲ್ಲಿ ಸುಮಾರು 650 ಅಡಿಗಳ ಎತ್ತರದಿಂದ ಕೆಳಗೆ ಬೀಳುತ್ತದೆ. ಬೆಡ್ತಿ ನದಿಯು ಒಂದು ಸುಂದರ ನೋಟವನ್ನು ನೀಡುವ ಮೂಲಕ ಎರಡು ಹಂತಗಳಲ್ಲಿ ಹರಿಯುತ್ತದೆ. ಇದು ಅತ್ಯುತ್ತಮ ದಾಂಡೇಲಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ಚಾರಣಿಗರ ಸ್ವರ್ಗವೂ ಆಗಿದೆ.

 ಕಾವಡಿಕೆರೆ ಸರೋವರ

ಕಾವಡಿಕೆರೆ ಸರೋವರ

PC: Vikashegde
ಇದು ಈ ಪ್ರದೇಶದ ಪ್ರಸಿದ್ಧ ಸೂರ್ಯಾಸ್ತದ ಸಮೀಪದಲ್ಲಿ 6 ಕಿಮೀ. ದೂರದಲ್ಲಿ ಜೆನುಕಲ್ಲು ಗುಡ್ಡವಿದೆ. ಮ್ಯಾಗೊಡ್ ಜಲಪಾತಗಳಿಗೆ ಹೋಗುವ ದಾರಿಯಲ್ಲಿ, 11 ಕಿಮೀ ದೂರದಲ್ಲಿ 60 ಎಕರೆ ಪ್ರದೇಶದಲ್ಲಿ ಹರಡಿದ ಕಾವಡಿಕೆರೆ ಎಂಬ ಆಹ್ಲಾದಕರ ಸರೋವರವನ್ನು ಕಾಣಬಹುದು. ಇದು ಒಂದು ಸುಂದರವಾದ ದೃಶ್ಯದೊಂದಿಗೆ ಸೂಕ್ತ ಪಿಕ್ನಿಕ್ ತಾಣವಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:ShrinivasN
ಮಾಗೋಡ್ ಜಲಪಾತಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್ - ಜನವರಿ. ಹೆಚ್ಚಾಗಿ ಬೇಸಿಗೆಯಲ್ಲಿ ಜಲಪಾತದ ನೀರು ಕಡಿಮೆಯಾಗುತ್ತದೆ. ಇನ್ನು ಮಳೆಗಾಲದಲ್ಲಿ ಮಂಜು ಬೀಳುತ್ತದೆ. ಮಳೆಗಾಲದಲ್ಲಿ ಚಾರಣ ಕೈಗೊಳ್ಳಲೂ ಸಾಧ್ಯವಾಗೋದಿಲ್ಲ. ಹಾಗಾಗಿ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಪ್ರವೇಶ ದ್ವಾರ

ಪ್ರವೇಶ ದ್ವಾರ

PC:Tiruka.yatrika
ಕಾರ್ ಪಾರ್ಕ್ ತಲುಪಿದ ನಂತರ, ಪ್ರವೇಶದ್ವಾರ ಮತ್ತು ಕ್ಯಾಮರಾ ಶುಲ್ಕವನ್ನು ನಾವು ಗೇಟ್ ಬಳಿ ಪಾವತಿಸಬೇಕು. ಸುಸಜ್ಜಿತವಾದ ಕಾಲುದಾರಿಯನ್ನು ಅನುಸರಿಸುತ್ತಾ ಜಲಪಾತದ ಬಳಿಗೆ ಹೋಗುತ್ತಿದ್ದಂತೆ ಬರೀ ಜಲಪಾತದ ಸದ್ದು ಮಾತ್ರ ಕೇಳಿಸುತ್ತದೆ. ಈ ಸದ್ದಿನಿಂದಲೇ ಜಲಪಾತ ಎಷ್ಟೊಂದು ರಭಸದಿಂದ ಧುಮ್ಮುಕ್ಕುತ್ತಿರಬಹುದು ಎನ್ನುವುದುನ್ನು ಊಹಿಸಿಕೊಳ್ಳಬಹುದು.

ತಲುಪುವುದು ಹೇಗೆ?

ಹತ್ತಿರದ ವಿಮಾನ ನಿಲ್ದಾಣವೆಂದರೆ ಹುಬ್ಬಳ್ಳಿ ವಿಮಾನ ನಿಲ್ದಾಣ. ನೀವು ಗೋವಾ ಮೂಲಕ ಪ್ರಯಾಣಿಸಲು ಆರಿಸಿದರೆ, ದಾಬೋಲಿಮ್ ವಿಮಾನ ನಿಲ್ದಾಣವು ಸುಮಾರು 105 ಕಿ.ಮೀ ದೂರದಲ್ಲಿದೆ. ರೈಲು ಮೂಲಕ
ಹತ್ತಿರದ ರೈಲು ನಿಲ್ದಾಣ ಯೆಲ್ಲಾಪುರ ರೈಲು ನಿಲ್ದಾಣ. ನಿಲ್ದಾಣದಿಂದ ಜಲಪಾತವನ್ನು ತಲುಪಲು ನೀವು ಖಾಸಗಿ ವಾಹನಗಳನ್ನು ಅವಲಂಬಿಸಿರುತ್ತದೆ. ಮಾಗೋಡ್‌ಗೆ ಚೆನ್ನಾಗಿ ಸಂಪರ್ಕ ಹೊಂದಿದ ರಸ್ತೆ ಜಾಲವಿದೆ. ಇದು ಬೆಂಗಳೂರಿನಿಂದ 520 ಕಿ.ಮೀ ದೂರದಲ್ಲಿದೆ, ಗೋವಾದಿಂದ 205 ಕಿ.ಮೀ, ಹುಬ್ಬಳ್ಳಿನಿಂದ 90 ಕಿ.ಮೀ, ಕಾರವಾರದಿಂದ 80 ಕಿ.ಮೀ ಮತ್ತು ಯೆಲ್ಲಾಪುರದಿಂದ 19 ಕಿ.ಮೀ ದೂರದಲ್ಲಿದೆ.

ದಾಂಡೇಲಿ ವನ್ಯಜೀವಿ ಧಾಮ

ದಾಂಡೇಲಿ ವನ್ಯಜೀವಿ ಧಾಮ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+