Search
  • Follow NativePlanet
Share
» »ವೀಕೆಂಡ್‌ ಎಂಜಾಯ್‌ಗೆ, ಚೌಕಾಶಿ ಮಾಡುವವರಿಗೆ, ಮಳೆ ಪ್ರಿಯರು ತಡಮಾಡದೆ ಕೋಟಗಿರಿಗೆ ತೆರಳಿ... ಇದಕ್ಕೆಲ್ಲಾ ಉತ್ತಮ ಸಮಯವಿದು

ವೀಕೆಂಡ್‌ ಎಂಜಾಯ್‌ಗೆ, ಚೌಕಾಶಿ ಮಾಡುವವರಿಗೆ, ಮಳೆ ಪ್ರಿಯರು ತಡಮಾಡದೆ ಕೋಟಗಿರಿಗೆ ತೆರಳಿ... ಇದಕ್ಕೆಲ್ಲಾ ಉತ್ತಮ ಸಮಯವಿದು

ಮಳೆಗಾಲದಲ್ಲಿ ಕೋಟಗಿರಿ ಪಟ್ಟಣವು ಹೆಚ್ಚು ಶಾಂತವಾಗಿರುತ್ತದೆ. ಈ ಸೀಸನ್‌ನಲ್ಲಿ ಸ್ಥಳೀಯರು ಉರುವಲು ಹಾಕಿ, ಚಹಾ ಕುಡಿಯುತ್ತಾ, ಮನೆಯಲ್ಲಿ ನೆಚ್ಚಿನ ಪುಸ್ತಕವನ್ನು ಓದುತ್ತಾ, ಮಳೆಯ ಶಬ್ದ, ತಾಜಾ ಮಣ್ಣಿನ ವಾಸನೆಯನ್ನು ಆನಂದಿಸುತ್ತಿರುತ್ತಾರೆ. ಅಂದರೆ ಮನೆಯೊಳಗೆ ಮಳೆಗಾಲದಲ್ಲಿ ಆರಾಮಾಗಿ ದಿನ ಕಳೆಯುತ್ತಾರೆ. ಆದರೆ ಅದೇ ಮಳೆ ನಿಂತಾಗ ಸುತ್ತಾಡಲು ಹೋಗಬೇಕೆಂದರೆ ಮೈದುಂಬಿರುವ ಜಲಪಾತಗಳನ್ನು ನೋಡಲು ಅಣಿಯಾಗುತ್ತಾರೆ. ಹೌದು, ಕೋಟಗಿರಿ ವಾತವರಣವೇ ಅಂತಹುದು. ಪ್ರಕೃತಿ ಪ್ರಿಯರಿಗಂತೂ ಈ ಜಾಗ ಹಬ್ಬ. ಬನ್ನಿ ಮಳೆಗಾಲದಲ್ಲಿ ಕೋಟಗಿರಿಯಲ್ಲಿ ವೀಕೆಂಡ್‌ ಎಂಜಾಯ್‌ ಮಾಡುವುದು ಹೇಗೆಂದು ತಿಳಿಯೋಣ. ನೀವೇನಾದರೂ ವಸತಿ ಸೌಕರ್ಯಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ಪಡೆಯಬೇಕೆಂದಿದ್ದರೆ, ಚೌಕಾಶಿ ಮಾಡುವವರಿಗೆ, ಬ್ಯಾಕ್‌ಪ್ಯಾಕರ್‌ಗಳಿಗೆ ಭೇಟಿ ನೀಡಲು ಇದು ಉತ್ತಮ ಸಮಯ.

ಎಲ್ಲಿ ನೋಡಿದರೂ ಕಾಫಿ, ಚಹಾ ತೋಟಗಳು

ಕೋಟಗಿರಿಯು ಊಟಿ ಮತ್ತು ಕೂನೂರ್ ನಂತರ ಅತಿ ದೊಡ್ಡ ಗಿರಿಧಾಮವಾಗಿದೆ. ತಮಿಳುನಾಡಿನ ಮಧುರೈ ನಗರದಿಂದ 5 ಗಂಟೆ 30 ನಿಮಿಷಗಳ ಪ್ರಯಾಣದ ಮೂಲಕ ನೀವು ಕೋಟಗಿರಿಯನ್ನು ತಲುಪಬಹುದು. ಕೋಟಗಿರಿಯು ಎಲ್ಲಾ ಕಡೆಗಳಲ್ಲಿ ಕಾಫಿ ತೋಟಗಳಿಂದ ಆವೃತವಾಗಿದೆ. ಇಲ್ಲಿ ಸುಮಾರು 30 ಸಾವಿರ ಎಕರೆಗಳಷ್ಟು ಚಹಾ ಮತ್ತು ಕಾಫಿ ತೋಟಗಳಿವೆ. ನೀವು ಬಯಸಿದರೆ ಈ ಕೆಲವು ತೋಟಗಳಿಗೆ ಭೇಟಿ ನೀಡಬಹುದು. ಪ್ರತಿ ವರ್ಷ ಬೇಸಿಗೆ ಹಬ್ಬದ ಅಂಗವಾಗಿ ಕೋಟಗಿರಿಯಲ್ಲಿ ತರಕಾರಿಗಳನ್ನು ಬಳಸಿ ವಿವಿಧ ಆಕಾರದಲ್ಲಿ ತರಕಾರಿ ಪ್ರದರ್ಶನ ಏರ್ಪಡಿಸಲಾಗುತ್ತದೆ.

ಕೋಟಗಿರಿ ಇತಿಹಾಸ

ಕೋಟಗಿರಿ ಬ್ರಿಟಿಷ್ ಅಧಿಕಾರಿಗಳಿಗೆ ಬೇಸಿಗೆಯ ರೆಸಾರ್ಟ್ ಆಗಿತ್ತು. ಈಗಲೂ ಕೆಲವೆಡೆ ಯುರೋಪಿಯನ್ ಶೈಲಿಯ ಮನೆಗಳನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು. ಈ ಪ್ರದೇಶವು 'ಕೋಟ' ಬುಡಕಟ್ಟು ಜನಾಂಗದವರ ತವರು. ಈಗವರು ಅಗ್ಗಲ್ ಎಂಬ ಕುಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಹೊರ ಪ್ರಪಂಚದೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಜನಸಂಖ್ಯೆಯು ಕಡಿಮೆ. ಕೆಲವು ಕಲೆಗಳಲ್ಲಿ ನಿಪುಣರು. ಇನ್ನು ಸಾಹಸಿ ಪ್ರಿಯರಿಗಂತೂ ಕೋಟಗಿರಿ ಹೇಳಿ ಮಾಡಿಸಿದ ತಾಣ. ಇಲ್ಲಿ ಅತ್ಯುತ್ತಮ ಟ್ರೆಕ್ಕಿಂಗ್ ಮಾರ್ಗಗಳಿವೆ. ನೀವು ಬಯಸಿದರೆ ರಾಕ್ ಕ್ಲೈಂಬಿಂಗ್ ಅನ್ನು ಸಹ ಮಾಡಬಹುದು. ಕೋಟಗಿರಿಗೆ ತೆರಳಿದಾಗ ಕ್ಯಾಥರೀನ್ ಫಾಲ್ಸ್, ಎಲ್ಕ್ ಫಾಲ್ಸ್, ಕೋಟಗಿರಿ ವ್ಯೂ ಪಾಯಿಂಟ್ ಮತ್ತು ಲಾಂಗ್‌ವುಡ್ ಶೋಲಾ ಮುಂತಾದ ಸ್ಥಳಗಳಿಗೆ ಭೇಟಿ ನೀಡಲು ಮರೆಯದಿರಿ.

ಏನೆಲ್ಲಾ ನೋಡಬಹುದು?

ಕೊಡನಾಡ್ ವ್ಯೂ ಪಾಯಿಂಟ್

ಇಲ್ಲಿ ನೀವು ಏಷ್ಯಾದ ಅತಿದೊಡ್ಡ ಮಣ್ಣಿನ ಅಣೆಕಟ್ಟು, ಟಿಪ್ಪು ಸುಲ್ತಾನನ ಕೋಟೆ ಮತ್ತು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮ ಸ್ಥಳವನ್ನು ನೋಡಬಹುದು. ಕೊಡನಾಡ್ ವ್ಯೂ ಪಾಯಿಂಟ್ ನಲ್ಲಿ ಎತ್ತರದ ಜಾಗ ತಲುಪಿದ ನಂತರ ಸುತ್ತಮುತ್ತಲಿನ ಹಚ್ಚ ಹಸಿರನ್ನು ಕಣ್ತುಂಬಿಕೊಳ್ಳಬಹುದು. ಮೋಡಗಳು ಸ್ಪಷ್ಟವಾಗಲು ನೀವು ಕಾಯಬೇಕಾಗಬಹುದು, ಆದರೆ ಒಮ್ಮೆ ಮೋಡಗಳು ಸ್ಪಷ್ಟವಾದರೆ, ನಿಮ್ಮ ಕಣ್ಣುಗಳು ನಂಬಲು ಅಸಾಧ್ಯವಾದಷ್ಟು ಅದ್ಭುತವಾದ ನೋಟ ಕಣ್ತುಂಬಿಕೊಳ್ಳುವಿರಿ.

ಕ್ಯಾಥರೀನ್ ಜಲಪಾತ

250 ಅಡಿ ಎತ್ತರದ ಈ ಜಲಪಾತವು ಬೆಟ್ಟದ ಎದುರು ಭಾಗದಿಂದ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ. ನೀವು ಈ ಜಲಪಾತವನ್ನು ಹತ್ತಿರದಿಂದ ನೋಡಲು ಬಯಸಿದರೆ ವೀಕ್ಷಣಾ ಮಂಟಪದ ಬಳಿ ಹೋಗಿ. ಮಳೆಗಾಲದಲ್ಲಿ ಜಲಪಾತ ಉಕ್ಕಿ ಹರಿಯುತ್ತಿರುವಾಗ ಇಲ್ಲಿಗೆ ಭೇಟಿ ನೀಡಿ.

ರಂಗಸ್ವಾಮಿ ಶಿಖರ

ಇಲ್ಲಿ ಉತ್ತಮ ಟ್ರೆಕ್ಕಿಂಗ್ ಮಾರ್ಗ ಯಾವುದು ಎಂದು ಕೋಟಗಿರಿಯ ಸ್ಥಳೀಯರನ್ನು ಕೇಳಿದರೆ ರಂಗಸ್ವಾಮಿ ಶಿಖರ ಎಂಬ ಉತ್ತರ ಖಂಡಿತ ಸಿಗುತ್ತದೆ. ನೀವು ಸುಲಭವಾದ ಟ್ರೆಕ್ಕಿಂಗ್ ಮಾರ್ಗಗಳನ್ನು ಅನುಸರಿಸಲು ಬಯಸಿದರೆ ಇಲ್ಲಿ ಇನ್ನೂ ಹಲವು ಆಯ್ಕೆಗಳು ಲಭ್ಯವಿವೆ.

ಕೋಟಗಿರಿಯ ಸ್ಥಳೀಯ ಆಹಾರ

ತಮಿಳುನಾಡಿನಲ್ಲಿರುವ ಕೋಟಗಿರಿಯಲ್ಲಿ ದಕ್ಷಿಣ ಭಾರತದ ಖಾದ್ಯಗಳನ್ನು ಸವಿಯಬಹುದು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಕ್ಕೂ ಹೆಸರುವಾಸಿಯಾಗಿದೆ. ನೀವು ಪಟ್ಟಣದಲ್ಲಿದ್ದರೆ, ಚಾಕೊಲೇಟ್, ಏಲಕ್ಕಿ ಚಹಾದಿಂದ ಹಿಡಿದು ಶುಂಠಿ ಚಹಾದವರೆಗೆ ಇಲ್ಲಿ ಲಭ್ಯವಿರುವ ವಿವಿಧ ಚಹಾ ರುಚಿಗಳನ್ನು ಸವಿಯಬಹುದು. ಈ ಸ್ಥಳದಲ್ಲಿ ಅನೇಕ ರೆಸ್ಟೋರೆಂಟ್‌ಗಳಿದ್ದು, ಹೆಚ್ಚಾಗಿ ಡೊನಿಂಗ್‌ಟನ್ ರಸ್ತೆ ಅಥವಾ ಜಾನ್ಸ್‌ಟನ್ ಸ್ಕ್ವೇರ್ ಬಳಿ ನೋಡಬಹುದು.

ತಲುಪುವುದು ಹೇಗೆ?

ಹತ್ತಿರದ ವಿಮಾನ ನಿಲ್ದಾಣ ಕೊಯಮತ್ತೂರು. ಕೊಯಮತ್ತೂರಿನಿಂದ ಕೋಟಗಿರಿಗೆ 47 ಕಿಲೋಮೀಟರ್ ದೂರವಿದ್ದು, ನೀವು ಟ್ಯಾಕ್ಸಿ ಮೂಲಕ ಕ್ರಮಿಸಬಹುದು. ಹತ್ತಿರದ ರೈಲು ನಿಲ್ದಾಣಗಳು ಕೂನೂರು (21 ಕಿಮೀ), ಊಟಿ (29 ಕಿಮೀ).

More News

Read more about: monsoon travel tamilnadu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+