Search
  • Follow NativePlanet
Share
» »ಮಹಾನಗರದ ಸಮೀಪದಲ್ಲಿರುವ ಈ ಸುಂದರ ಗ್ರಾಮವನ್ನು ನೋಡಿದರೆ ನಿಮಗೂ ಇಲ್ಲಿಯೇ ನೆಲೆಸಬೇಕೆಂದು ಅನಿಸದೆ ಇರದು

ಮಹಾನಗರದ ಸಮೀಪದಲ್ಲಿರುವ ಈ ಸುಂದರ ಗ್ರಾಮವನ್ನು ನೋಡಿದರೆ ನಿಮಗೂ ಇಲ್ಲಿಯೇ ನೆಲೆಸಬೇಕೆಂದು ಅನಿಸದೆ ಇರದು

ಮುಂಬೈಗೆ ಬಂದವರು ಜುಹು ಚೌಪಾಟಿಗೆ ಬರದೇ ಇರುವುದಿಲ್ಲ. ಇಲ್ಲಿಗೆ ಬರುವುದು ಬಹುತೇಕರ ಕನಸು. ಆದರೆ ಮುಂಬೈನಲ್ಲಿ ಇನ್ನೊಂದು ಅದ್ಭುತ ಸ್ಥಳವಿದೆ. ಪೊರ್ಚುಗೀಸರು ವಾಸಿಸುತ್ತಿದ್ದ ಪ್ರದೇಶದಂತೆಯೇ ಥೇಟ್‌ ಒಂದು ಹಳ್ಳಿಯಿದೆ. ಇದು ಗದ್ದಲದಿಂದ ದೂರವಿರಲು ಬಯಸುವವರಿಗೆ ಬೆಸ್ಟ್‌ ಪ್ಲೇಸ್‌. ಈ ಸ್ಥಳಕ್ಕೆ ಬಂದೊಡನೆ ವರ್ಣರಂಜಿತ ಮತ್ತು ವಿಭಿನ್ನ ಅನುಭವವನ್ನು ನೀಡಲು ಹಳ್ಳಿ ನಿಮ್ಮನ್ನು ಸ್ವಾಗತಿಸುತ್ತದೆ. ಹಾಗಾದರೆ ಗ್ರಾಮದಲ್ಲಿ ಏನಿದೆ ಎಂದು ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ...

ಇರುವುದೆಲ್ಲಿ ಗೊತ್ತಾ?

ದಕ್ಷಿಣ ಮುಂಬೈನ ಗಿರ್‌ಗಾಂವ್‌ನಲ್ಲಿರುವ ಪೋರ್ಚುಗೀಸ್ ಗ್ರಾಮವೆಂದೇ ಕರೆಯಲ್ಪಡುವ ಇದರ ಹೆಸರು ʼಖೋಟಾಚಿವಾಡಿʼ. ವಿಶೇಷವಾಗಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಈ ಗ್ರಾಮದ ವಿಶಿಷ್ಟವಾದ ಸೆಟ್ಟಿಂಗ್‌ಗೆ ಅಕರ್ಷಿತರಾಗುತ್ತಾರೆ. ಅಷ್ಟೇ ಅಲ್ಲ ಅಲ್ಲಿ ನೀವು ಇಂಡೋ-ಪೊರ್ಚುಗೀಸ್ ವಾಸ್ತುಶಿಲ್ಪದ ಮುದ್ರೆಯನ್ನು ನೋಡಬಹುದು. 100 ರಿಂದ 150 ವರ್ಷಗಳ ಹಿಂದೆ ಹಳೆಯ ಮುಂಬೈ ಹೇಗಿತ್ತು ಎಂದು ತಿಳಿಯಲು ಮತ್ತು ಹಿಂದಿನದಕ್ಕೆ ಹಿಂತಿರುಗಲು ಬಯಸಿದರೆ, ಇದು ನೋಡಲೇಬೇಕಾದ ಸ್ಥಳವಾಗಿದೆ.

khotachiwadi history

ಚಿಕ್ಕ ಕರಾವಳಿ ಗ್ರಾಮ

ಬ್ರಿಟಿಷರು ಮುಂಬೈ (ಆ ಸಮಯದಲ್ಲಿ ಬಾಂಬೆ) ಮೇಲೆ ಆಕ್ರಮಣ ಮಾಡುವ ಮುಂಚೆಯೇ, ಅರೇಬಿಯನ್ ಸಮುದ್ರದ ತೀರದಲ್ಲಿ ಸಣ್ಣ ಪೋರ್ಚುಗೀಸ್‌ ಸಮುದಾಯಗಳು ಅಭಿವೃದ್ಧಿ ಹೊಂದಿದ್ದವು. ಹಿಂದೆ ಇಂತಹ ಹತ್ತಾರು ಕರಾವಳಿ ಗ್ರಾಮಗಳಿದ್ದವು. ಆದರೆ ಈಗ ಅವುಗಳಲ್ಲಿ ಈ ನಗರ ಮಾತ್ರ ತಮ್ಮ ಮೂಲ ಸ್ಥಿತಿಯಲ್ಲಿ ಉಳಿದುಕೊಂಡಿವೆ. ದಕ್ಷಿಣ ಮುಂಬೈನ ಹೃದಯಭಾಗದಲ್ಲಿರುವ ಈ ವಿಶಿಷ್ಟ ಗ್ರಾಮವು ಅತ್ಯುತ್ತಮ, ಸುಂದರವಾದ ಮನೆಗಳಿಂದ ಕೂಡಿದೆ. ಮನೆಯ ಅಲಂಕಾರವು ಅಷ್ಟೇ ಯಾವುದೋ ಅದ್ಭುತ ಜಾಗಕ್ಕೆ ಬಂದಂತೆ ಭಾಸವಾಗುತ್ತದೆ.

ಇಲ್ಲಿಗೆ ತಲುಪುವುದು ಹೇಗೆ?

ಈ ಗ್ರಾಮಕ್ಕೆ ಭೇಟಿ ನೀಡಬೇಕೆಂದರೆ ನೀವು ಸೈಫೀ ಆಸ್ಪತ್ರೆಯ ಮುಂದಿನ ಸೇತುವೆಯನ್ನು ದಾಟಬೇಕು. ಇದು ಚರ್ನಿ ರಸ್ತೆ ನಿಲ್ದಾಣದ ಎದುರು ಇದೆ. ಪಾದಚಾರಿ ಸೇತುವೆಯಿಂದ ಇಳಿದ ನಂತರ, ನೀವು ನೇರವಾಗಿ ನಡೆದುಕೊಂಡು ಹತ್ತಿರದ ಜನರನ್ನು ದಾರಿಗಾಗಿ ಕೇಳಬೇಕು. ಕಾಲ್ನಡಿಗೆಯಲ್ಲಿ ತಲುಪಲು ನಿಮಗೆ ಸುಮಾರು 15 ನಿಮಿಷಗಳು ತೆಗೆದುಕೊಳ್ಳಬಹುದು.

khotachiwadi

1800 ರಲ್ಲಿ ಸ್ಥಾಪಿತವಾದ ಗ್ರಾಮ

ಪೊರ್ಚುಗೀಸ್ ವಸಾಹತುಶಾಹಿಯಿಂದ ಪ್ರಭಾವಿತವಾದ ಇಲ್ಲಿನ ಸಮುದಾಯದ ಸಾಂಸ್ಕೃತಿಕ ಸೌಂದರ್ಯವನ್ನು ಬರ್ಮೀಸ್ ಮರ ಮತ್ತು ಮಂಗಳೂರು ಹೆಂಚುಗಳ ಜೊತೆ ಯುರೋಪಿಯನ್ ವಿನ್ಯಾಸಗಳೊಂದಿಗೆ ಸಂಯೋಜಿಸಲಾಗಿದೆ. ಈ ಪ್ರದೇಶವು ಅಂಕುಡೊಂಕಾದ ಮಾರ್ಗಗಳನ್ನು ಸೃಷ್ಟಿಸಿದ್ದು, ನಗರ ಯೋಜನೆ ಸಂಪ್ರದಾಯಗಳಿಗೆ ಸವಾಲು ಹಾಕಿದೆ. ಈ ಪೋರ್ಚುಗೀಸ್‌ ಗ್ರಾಮವು ಶ್ರೀಮಂತ ಪರಂಪರೆ ಮತ್ತು ಮುಂಬೈಯನ್ನು ರೂಪಿಸಿದ ಸಾವಿರಾರು ಕಥೆಗಳನ್ನು ಹೊಂದಿರುವ ಗುಪ್ತ ರತ್ನವಾಗಿದೆ. ಮುಂಬೈನ ಕಾಂಕ್ರೀಟ್ ಕಾಡಿನಿಂದ ಹೊರಬಂದು ಹೊಸ ಗುರುತನ್ನು ಸೃಷ್ಟಿಸಿಕೊಂಡಿರುವ ಇದಕ್ಕೆ ದಾಡೋಬಾ ವಾಮನ್ ಖೋಟ್ ಅವರ ಹೆಸರನ್ನು ಇಡಲಾಗಿದೆ. ಗ್ರಾಮವನ್ನು 1800 ರ ದಶಕದಲ್ಲಿ ಈಸ್ಟ್‌ ಇಂಡಿಯನ್ ಸಮುದಾಯದಿಂದ ಸ್ಥಾಪಿಸಲಾಯಿತು, ಇದು ಪೋರ್ಚುಗೀಸರಿಂದ ಹೆಚ್ಚು ಪ್ರಭಾವಿತವಾದ ಕ್ಯಾಥೋಲಿಕ್ ಸಮುದಾಯವಾಗಿದೆ.

khotachiwadivillage struturestructure

ಗ್ರಾಮದ ಮನೆಗಳ ರಚನೆ ಹೇಗಿದೆ?

ಗ್ರಾಮವು ಸುಸಜ್ಜಿತ ರಸ್ತೆಗಳು, ತಿಳಿ ಬಣ್ಣದ ಬಂಗಲೆಗಳು ಮತ್ತು ಬರ್ಮಾದಿಂದ ಅಮದು ಮಾಡಿಕೊಂಡ ತೇಗದಿಂದ ಮಾಡಿದ ಕಿರಿದಾದ ಮೆಟ್ಟಿಲುಗಳನ್ನು ಹೊಂದಿದೆ. ಮನೆಯ ಅಂಗಳವು ತಾಳೆ ಮರಗಳು ಮತ್ತು ಅಲೆಗಳಿಂದ ಆವೃತವಾಗಿದೆ, ಗ್ರಾಮದ ಆರಂಭದಲ್ಲಿ ಸಮುದಾಯಕ್ಕೆ ಮುಖ್ಯವಾದ ಪ್ರಾರ್ಥನಾ ಮಂದಿರವಿದೆ. ಕ್ಷಿಪ್ರ ನಗರೀಕರಣ ಮತ್ತು ವಲಸಿಗರ ಒಳಹರಿವಿನಿಂದಾಗಿ, ಹಳ್ಳಿಯ ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆ ನಿಧಾನವಾಗಿ ಕಣ್ಮರೆಯಾಗುತ್ತಿರುವುದು ನೋಡಿದ ಕೂಡಲೇ ತಿಳಿಯುವುದು.

ಅಳಿವಿನ ಅಂಚಿನಲ್ಲಿದೆ ಗ್ರಾಮ

ಈ ಗ್ರಾಮವನ್ನು ಐತಿಹಾಸಿಕ ಪ್ರದೇಶವೆಂದು ಘೋಷಿಸಲಾಗಿದೆ. ಮನೆಗಳ ಸಂಖ್ಯೆ ಸಹ 65 ರಿಂದ 27 ಕ್ಕೆ ಇಳಿದಿದೆ. ಎತ್ತರದ ಕಟ್ಟಡಗಳ ನಡುವೆ ನಿಂತಾಗ ಈ ಸ್ಥಳವು ಒಂಟಿಯಾಗಿ ಕಾಣುತ್ತದೆ. ಬಿಲ್ಡರ್‌ಗಳು ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ನಾಗರಿಕರ ಆಕ್ಷೇಪಣೆಗಳು ಮುಂಬೈನ ಇತಿಹಾಸದ ಈ ಭಾಗವನ್ನು ಜೀವಂತವಾಗಿರಿಸಿದೆ.

More News

Read more about: mumbai village ಮುಂಬೈ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+