Search
  • Follow NativePlanet
Share
» »Navratri 2024: ಯಕ್ಷ ವೈಭವ, ತೂಟೆದಾರ ಸೇವೆ ಶ್ರೀ ಕ್ಷೇತ್ರ ಕಟೀಲಿನ ವಿಶೇಷತೆಗಳಿವು!

Navratri 2024: ಯಕ್ಷ ವೈಭವ, ತೂಟೆದಾರ ಸೇವೆ ಶ್ರೀ ಕ್ಷೇತ್ರ ಕಟೀಲಿನ ವಿಶೇಷತೆಗಳಿವು!

ಭಾರತವು ದೇವಾಲಯಗಳ ದೇಶ. ಸರಿಸುಮಾರು 20 ಲಕ್ಷ ದೇವಾಸ್ಥಾನಗಳಿದ್ದು, ಪ್ರತಿಯೊಂದು ದೇವಾಲಯವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕೆಲವು ದೇವಾಲಯಗಳು ತನ್ನದೇ ಆದ ರಹಸ್ಯವನ್ನು ಹೊಂದಿದೆ. ಮತ್ತೆ ಕೆಲವು ದೇವಾಲಯಗಳ ಕಥೆಯು ತುಂಬಾ ಆಸಕ್ತಿದಾಯಕವಾಗಿದೆ. ಆದರೆ ಇಲ್ಲಿಯವರೆಗೆ ಯಾರಿಗೂ ಅವುಗಳೊಳಗೆ ಅಡಗಿರುವ ಆಳವಾದ ರಹಸ್ಯವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಅಂತಹುದೇ ದೇವಾಲಯದ ಬಗ್ಗೆ ನಾವಿಂದು ಹೇಳಲಿದ್ದು, ಮಂಗಳೂರಿಗರಿಗೆ ಇದರ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ ಈ ದೇವಾಲಯವು ಮಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿದ್ದು, ಈ ದೇವಾಲಯವು ಮಾತೃ ದೇವತೆಗೆ ಸಮರ್ಪಿತವಾಗಿದೆ. ದೇವಾಲಯದ ಹೆಸರು ಕಟೀಲು ದುರ್ಗಾ ಪರಮೇಶ್ವರಿ. ನವರಾತ್ರಿಯ ದಿನಗಳಲ್ಲಿ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಕಂಡುಬರುತ್ತಾರೆ.

ನವರಾತ್ರಿ ವೇಳೆ ಬರುವ ಹುಲಿ ವೇಷದ ತಂಡಗಳು

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಹುಲಿಗಳೆಂದರೆ ಪ್ರೀತಿ. ಅದಕ್ಕಾಗಿಯೇ ನವರಾತ್ರಿ ಬಂತೆಂದರೆ ಕಟೀಲು ಕ್ಷೇತ್ರಕ್ಕೆ ಹುಲಿ ವೇಷದ ತಂಡಗಳು ಊರಿನ ತಿರುಗಾಟ ನಡೆಸುವ ಮೊದಲು ಕಟೀಲಿನಲ್ಲೊಂದು ಸೇವೆ ಮಾಡುತ್ತಾರೆ. ನವರಾತ್ರಿಯ ದಿನಗಳಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಹುಲಿ ವೇಷಧಾರಿಗಳು ಮತ್ತು ಇತರ ವೇಷಧಾರಿಗಳು ಕಟೀಲು ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸುತ್ತಾರೆ. ಹರಕೆ ತೀರಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗುತ್ತಾರೆ. ಹಾಗಾಗಿ ಕಟೀಲು ಕ್ಷೇತ್ರದಲ್ಲಿ ನಿತ್ಯವೂ ತಾಸೆ-ಡೋಲು-ವಾದ್ಯ-ಬ್ಯಾಂಡ್- ಚೆಂಡೆಗಳ ಅಬ್ಬರ. ವೇಷಧಾರಿಗಳಿಗೆ ಪ್ರದರ್ಶನ ನೀಡಲೆಂದೇ ದೇವಳದ ರಥಬೀದಿಯಲ್ಲಿ ಪ್ರತ್ಯೇಕ ವೇದಿಕೆ ಮತ್ತು ಚಪ್ಪರ ಹಾಕಲಾಗಿದೆ.

ತೂಟೆದಾರ ಸೇವೆ

ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಎಂಟು ದಿನಗಳ ಕಾಲ ಬೆಂಕಿಯ ಆಟವನ್ನು ಆಡಲಾಗುತ್ತದೆ. ಇದು ಮೇಷ ಸಂಕ್ರಾಂತಿಯ ಒಂದು ದಿನ ಮೊದಲು ಪ್ರಾರಂಭವಾಗುತ್ತದೆ. ಈ ಆಟವನ್ನು ನೋಡಲು ದೂರದೂರುಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಇಂತಹ ದೃಶ್ಯವನ್ನು ಮೊದಲ ಬಾರಿಗೆ ನೋಡುವ ಜನರಿಗೆ ಗೂಸ್ಬಂಪ್ಸ್ ಬರೋದು ಗ್ಯಾರಂಟಿ. ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ನಡುವೆ ನಡೆಯುವ ತೂಟೆದಾರ ಎಂಬ ಸೇವೆಯಿದೆ. ಈ ಆಟದಲ್ಲಿ ಜನರು ತೆಂಗಿನ ತೊಗಟೆಯಿಂದ ಮಾಡಿದ ಪಂಜುಗಳನ್ನು ಪರಸ್ಪರ ಎಸೆಯುತ್ತಾರೆ. ಈ ಆಟವನ್ನು ಸುಮಾರು 15 ನಿಮಿಷಗಳ ಕಾಲ ಆಡಲಾಗುತ್ತದೆ. ಇದನ್ನು ಮಾಡುವುದರಿಂದ ತಮ್ಮ ನೋವು ಮತ್ತು ಸಂಕಟಗಳು ಕಡಿಮೆಯಾಗುತ್ತವೆ ಎಂದು ಜನರು ನಂಬುತ್ತಾರೆ.

kateeldurgaparameshwaritemple

ದೇವಾಲಯದ ಇತಿಹಾಸ

ಬಹಳ ಹಿಂದೆಯೇ ಅರುಣಾಸುರ ಎಂಬ ರಾಕ್ಷಸನಿದ್ದನು. ಅವನನ್ನು ಯಾವುದೇ ಎರಡು ಕಾಲಿನ ಜೀವಿ ಅಥವಾ ಯಾವುದೇ ನಾಲ್ಕು ಕಾಲಿನ ಜೀವಿಗಳು ಕೊಲ್ಲಲು ಸಾಧ್ಯವಿಲ್ಲ ಎಂದು ಬ್ರಹ್ಮನಿಂದ ಆಶೀರ್ವಾದ ಪಡೆದಿದ್ದನು. ಈ ವರದ ಲಾಭವನ್ನು ಪಡೆದ ಅರುಣಾಸುರನು ಭೂಮಿಯ ಮೇಲೆ ದೌರ್ಜನ್ಯವನ್ನು ಮಾಡಲು ಪ್ರಾರಂಭಿಸಿದನು. ಇದರಿಂದಾಗಿ ಅರುಣಾಸುರನನ್ನು ಕೊಲ್ಲಲು ದುರ್ಗಾದೇವಿಯು ಭೂಮಿಗೆ ಬರಬೇಕಾಯಿತು. ದುರ್ಗಾ ಮಾತೆಯು ಬಂಡೆಯ ರೂಪವನ್ನು ಪಡೆದಳು. ಆಗ ಅರುಣಾಸುರನು ಆ ಬಂಡೆಯ ಕಲ್ಲನ್ನು ತನ್ನ ಪಾದಗಳಿಂದ ಪುಡಿಮಾಡಲು ಹೊರಟಿದ್ದಾಗ ಜೇನುನೊಣಗಳ ಸಮೂಹವು ಅವನನ್ನು ಸುತ್ತುವರೆದಿತು ಮತ್ತು ಅವುಗಳಿಂದ ಅವನು ಸತ್ತನು. ಯಾವುದೇ ಎರಡು ಅಥವಾ ನಾಲ್ಕು ಕಾಲಿನ ಜೀವಿಗಳಿಂದ ಅವನು ಕೊಲ್ಲಲ್ಪಡುವುದಿಲ್ಲ ಎಂಬ ವರವನ್ನು ಅವನಿಗೆ ನೀಡಿದ್ದರಿಂದ, ಜೇನುನೊಣಗಳು ಎರಡು ಕಾಲಿನ ಅಥವಾ ನಾಲ್ಕು ಕಾಲಿನವುಗಳಲ್ಲ. ಅದಕ್ಕಾಗಿಯೇ ಅವನು ಜೇನುನೊಣಗಳಿಂದ ಕೊಲ್ಲಲ್ಪಟ್ಟನು. ಈ ಸುದ್ದಿಯನ್ನು ಕೇಳಿ ಸಂತರು ಮತ್ತು ಮುನಿಗಳೆಲ್ಲರೂ ಬಹಳ ಸಂತೋಷಪಟ್ಟರು ಮತ್ತು ಅದೇ ದಿನ ಈ ಸ್ಥಳದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ನಿರ್ಮಿಸಿದರು.

ಮಾತೃದೇವತೆಯ ಒಂಬತ್ತು ಅವತಾರ

ಪ್ರವೇಶ ದ್ವಾರದಲ್ಲಿರುವ ʼಗೋಪುರʼ ದೇವಾಲಯದ ಮೊದಲ ಆಕರ್ಷಣೆಯಾಗಿದೆ. ಇದರ ಎತ್ತರದ ಬಗ್ಗೆ ಹೇಳುವುದಾದರೆ ಸುಮಾರು 108 ಅಡಿ ಎತ್ತರವಿದೆ. ಇದು ಸಾಮಾನ್ಯವಾಗಿ ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ನೀವು ಏಕಕಾಲದಲ್ಲಿ ದುರ್ಗಾ ದೇವಿಯ ಒಂಬತ್ತು ವಿಭಿನ್ನ ಅವತಾರಗಳನ್ನು ನೋಡಬಹುದು.

ದೇವಸ್ಥಾನದಲ್ಲಿ ಅನ್ನಸಂತರ್ಪಣೆ

ಈ ದೇವಾಲಯವು ಬೆಳಗ್ಗೆ 4 ಗಂಟೆಗೆ ತೆರೆಯುತ್ತದೆ ಮತ್ತು ಇದರ ಬಾಗಿಲುಗಳು 12 ರಿಂದ ಮಧ್ಯಾಹ್ನ 3 ರವರೆಗೆ ಮುಚ್ಚಲ್ಪಡುತ್ತವೆ. ನಂತರ ದೇವಾಲಯವು ಭಕ್ತರಿಗಾಗಿ ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ಮಧ್ಯಾಹ್ನ 12:30 ರಿಂದ 3. ರಾತ್ರಿ 8:30 ರಿಂದ 10 ರವರೆಗೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗುತ್ತದೆ. ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ಆಹಾರವನ್ನು ನೀಡಲಾಗುತ್ತದೆ.

kateeldurgaparameshwaritemple2

ದೇವಸ್ಥಾನವನ್ನು ತಲುಪುವುದು ಹೇಗೆ?

ಬಸ್ಸು

ದೇವಸ್ಥಾನವನ್ನು ತಲುಪಲು ಮೊದಲು ನೀವು ನಿಮ್ಮ ನಗರದಿಂದ ಮಂಗಳೂರಿಗೆ ರೈಲು ಅಥವಾ ಬಸ್ ಅನ್ನು ಹಿಡಿಯಬೇಕು. ಇದಾದ ನಂತರ ಮಂಗಳೂರಿನಿಂದಲೇ ಕಟೀಲಿಗೆ ಬಸ್ ನಲ್ಲಿ ಹೋಗಬಹುದು. ಅಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನವಿದೆ.

ರೈಲು

ಕಟೀಲಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಮಂಗಳೂರು. ನೀವು ರೈಲಿನಲ್ಲಿ ಇಲ್ಲಿಗೆ ತಲುಪಬಹುದು. ಮಂಗಳೂರಿನಿಂದ ಈ ದೇವಸ್ಥಾನದ ದೂರ 28 ಕಿ.ಮೀ. ಇಲ್ಲಿಗೆ ಹೋಗಲು ನೀವು ಟ್ಯಾಕ್ಸಿ ಅಥವಾ ಕ್ಯಾಬ್ ಅನ್ನು ಬುಕ್ ಮಾಡಬಹುದು.

ವಿಮಾನ

ನೀವು ವಿಮಾನದಲ್ಲಿ ಹೋಗುತ್ತಿದ್ದರೆ, ನೀವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕಾಗುತ್ತದೆ. ಇಲ್ಲಿಂದ ದೇವಾಲಯದ ಅಂತರ ಕೇವಲ 12 ಕಿ.ಮೀ. ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿದ ನಂತರ ನೀವು ಟ್ಯಾಕ್ಸಿ ಅಥವಾ ಕ್ಯಾಬ್ ಮೂಲಕ ದುರ್ಗಾ ಪರಮೇಶ್ವರಿ ದೇವಸ್ಥಾನವನ್ನು ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+