Search
  • Follow NativePlanet
Share
» »ಕಂಚಿಯಲ್ಲಿನ ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯಗಳು!!

ಕಂಚಿಯಲ್ಲಿನ ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯಗಳು!!

ಕಂಚಿ ಒಂದು ಮಾಹಿಮಾನ್ವಿತವಾದ ದೇವಾಲಯ. ಈ ಕಂಚಿ ದೇವಾಲಯದ ಬಗ್ಗೆ ಹಲವಾರು ಮಂದಿ ವಿಭಿನ್ನವಾದ ಕಥೆಗಳನ್ನು ಹೇಳುತ್ತಿರುತ್ತಾರೆ. ಆ ಕಥೆಗಳನ್ನು ಪಕ್ಕಕ್ಕೆ ಇಟ್ಟರೆ ಅಲ್ಲಿನ ಹಲ್ಲಿಯನ್ನು ತಾಕಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಮುಖ್ಯವಾಗಿ ಹಲ್ಲಿ

ಕಂಚಿ ಒಂದು ಮಾಹಿಮಾನ್ವಿತವಾದ ದೇವಾಲಯ. ಈ ಕಂಚಿ ದೇವಾಲಯದ ಬಗ್ಗೆ ಹಲವಾರು ಮಂದಿ ವಿಭಿನ್ನವಾದ ಕಥೆಗಳನ್ನು ಹೇಳುತ್ತಿರುತ್ತಾರೆ. ಆ ಕಥೆಗಳನ್ನು ಪಕ್ಕಕ್ಕೆ ಇಟ್ಟರೆ ಅಲ್ಲಿನ ಹಲ್ಲಿಯನ್ನು ತಾಕಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಮುಖ್ಯವಾಗಿ ಹಲ್ಲಿ ಶಾಸ್ತ್ರದ ಪ್ರಕಾರ ಎಂದಾದರೂ ಹಲ್ಲಿ ದೇಹದ ಯಾವುದೇ ಭಾಗದಲ್ಲಾದರು ಬಿದ್ದರೆ ಕೇಡು ಆಗುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ ಕಂಚಿಯಲ್ಲಿನ ಹಲ್ಲಿಯನ್ನು ತಾಕಿದವರಿಗೆ ಮಾತ್ರ ಯಾವುದೇ ಕೆಡುಕು ಸಂಭವಿಸುವುದಿಲ್ಲ ಎಂದು ಹೇಳಲಾಗುತ್ತದೆ.

ಅಸಲಿಗೆ ಕಂಚಿಗೆ ಹೋದವರೆಲ್ಲಾ ಹಲ್ಲಿಯನ್ನು ಮುಟ್ಟುತ್ತಾರೆ. ಆದರೆ ಎಂದಾದರೂ ಯೋಚಿಸಿದ್ದೀರಾ ಆ ಹಲ್ಲಿ ಯಾರು ಎಂದು? ಆ ದೇವಾಲಯದಲ್ಲಿ ನೂರಾರು ಹಲ್ಲಿಗಳು ಓಡಾಡುತ್ತಿರುತ್ತವೆ ಅದು ಏಕೆ? ಎನ್ನುವ ಹಲವಾರು ಪ್ರಶ್ನೆಗೆ ಮಾತ್ರ ಉತ್ತರ ತಿಳಿಯದು. ಅಸಲಿಗೆ ಆ ರಹಸ್ಯ ಏನು ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಕಂಚಿ ಅಥವಾ ಕಾಂಚಿಪುರಂ ತಮಿಳುನಾಡು ರಾಜ್ಯದ ಕಾಂಚಿಪುರಂ ಜಿಲ್ಲಾ ರಾಜಧಾನಿಯಾಗಿದೆ. ಕಾಂಚಿಪುರಂ ಜಿಲ್ಲೆ ತಮಿಳುನಾಡು ರಾಜ್ಯದ ಚೆನ್ನೈ ನಗರಕ್ಕೆ ಸುಮಾರು 70 ಕಿ.ಮೀ ದೂರದಲ್ಲಿದೆ. ಇಲ್ಲಿ ಕಂಚಿ ಎಂದೇ ಖ್ಯಾತಿಯಗಿರುವ ಒಂದು ಮಾಹಿಮಾನ್ವಿತವಾದ ದೇವಾಲಯವಿದೆ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಕಾಂಚಿಪುರಂ ಎಂದಾಕ್ಷಣ ಸೀರೆ ಹಾಗು ದೇವಾಲಯಕ್ಕೆ ಪ್ರಸಿದ್ಧವಾದುದು. ಕಂಚಿ ಪಟ್ಟಣದಲ್ಲಿ ಪಂಚಭೂತ ಕ್ಷೇತ್ರಗಳಲ್ಲಿ ಒಂದಾಗಿ ಪ್ರಖ್ಯಾತಿ ಪಡೆದ ದೇವಾಲಯಗಳೆಂದರೆ ಅದು ಏಕಾಂಬರೇಶ್ವರ ದೇವಾಲಯ, ಕಂಚಿ ಕಾಮಾಕ್ಷಿ ದೇವಾಲಯ. ಹಾಗೆಯೇ ಶಂಕರಾಚಾರ್ಯರು ಸ್ಥಾಪನೆ ಮಾಡಿದ ಶಂಕರ ಮಠಗಳು.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಕಂಚಿಯಲ್ಲಿನ ರೇಷ್ಮೆ ಸೀರೆಗಳು ಕೇವಲ ದಕ್ಷಿಣ ಭಾರತ ದೇಶದಲ್ಲಿಯೇ ಅಲ್ಲದೇ ಉತ್ತರ ಭಾರತ ದೇಶದಲ್ಲಿಯು ಕೂಡ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಕಾಂಚಿಪುರಂ ಜಿಲ್ಲೆಯಲ್ಲಿನ ಮಹಾಬಲಿಪುರಂ ಎಂಬ ಚಾರಿತ್ರಾತ್ಮಕ ಪಟ್ಟಣವು ತನ್ನ ಶಿಲ್ಪಕಲೆಯಿಂದ ಕಂಗೊಳಿಸುತ್ತಿದೆ. ಮಹಾಬಲೀಪುರಂನಿಂದ ಸುಮಾರು 14 ಕಿ.ಮೀ ದೂರದಲ್ಲಿ ಮೊಸಳೆ ಸೆಂಟರ್ ಕೂಡ ಇದೆ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಪ್ರಸಿದ್ಧ ಕಾಂಚಿಪುರಂ ಪಟ್ಟಣವನ್ನು ಅಂದಿನ ಚೈನಾ ರಾಯಭಾರಿ ಹುಯಾನ್ ಸಾಂಗ್ ತನ್ನ ಭಾರತ ಯಾತ್ರೆ ಮಾಡುವಾಗ ಈ ಪಟ್ಟಣವನ್ನು ಸಂದರ್ಶಿಸಿದನು. 4 ನೇ ಶತಮಾನದಿಂದ 9 ನೇ ಶತಮಾನದವರೆಗೆ ದಕ್ಷಿಣ ಭಾರತ ದೇಶವನ್ನು ಪರಿಪಾಲನೆ ಮಾಡಿದ ಪಲ್ಲವ ರಾಜವಂಶಿಕರಿಗೆ ಈ ಕಂಚಿ ರಾಜಧಾನಿಯಾಗಿತ್ತು.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಪಲ್ಲವರು ತಮ್ಮ ಆಳ್ವಿಕೆಯ ಸಮಯದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಒಂದು ಕಾಲದಲ್ಲಿ ಕಂಚಿಯನ್ನು ಆಳಿದ ಪಲ್ಲವ ರಾಜ ಮಹೇಂದ್ರ ವರ್ಮ ಅತ್ಯಂತ ದೊಡ್ಡ ವಿದ್ವಾಂಸ ಮತ್ತು ಸಾಹಿತಿಯಾಗಿದ್ದ. ಆತನ ಪಾರಿಪಾಲನೆ ಕಾಲದಲ್ಲಿ ಹುಯಾನ್ ಸಾಂಗ್ ಕಂಚಿಗೆ ಭೇಟಿ ನೀಡಿದನು. ನಗರವು ಅತ್ಯಂತ ಸುಂದರವಾಗಿದ್ದು, ಇಲ್ಲಿ ವಾಸಿಸುವ ಪ್ರಜೆಗಳು ಧೈರ್ಯವಂತರು ಎಂದು ಮತ್ತು ದಯೆಯನ್ನು ಹೊಂದಿದವರು ಎಂದು ವರ್ಣಿಸಿದ್ದಾನೆ. ಬುದ್ಧ ಕೂಡ ಕಂಚಿಯನ್ನು ಭೇಟಿ ಮಾಡಿದ್ದನಂತೆ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಅಂದಿನ ಕಾಲದಲ್ಲಿ ಕಾಂಚಿಪುರಂ ವಿದ್ವಾಂಸರನ್ನು ತಯಾರು ಮಾಡುವುದರಲ್ಲಿ, ವಿದ್ಯಾಭೋದನೆಯಲ್ಲಿ ಕಾಶಿಯಷ್ಟೇ ಪ್ರಖ್ಯಾತತೆ ಗಳಿಸಿತ್ತು. ಕಂಚಿಯನ್ನು ಪಲ್ಲವರು, ಚೋಳರು, ವಿಜಯ ನಗರದ ರಾಜರು ಹೀಗೆ ಹಲವಾರು ರಾಜ ಸಂತತಿಗಳು ಆಳ್ವಿಕೆ ನಡೆಸಿದ್ದಾರೆ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಕಂಚಿಯಲ್ಲಿನ ಆ ಹಲ್ಲಿಗೆ ಇರುವ ಕಥೆ ಏನೆಂದರೆ ತಂದೆ ದೇವರ ಪೂಜೆಗಾಗಿ ನೀರನ್ನು ತೆಗೆದುಕೊಂಡು ಬರಲು ಹೇಳುತ್ತಾನೆ. ಮಗ ನೀರನ್ನು ತರುವ ಸಮಯದಲ್ಲಿ ಅದರಲ್ಲಿ ಹಲ್ಲಿಯು ಬಿದ್ದಿರುತ್ತದೆ. ಇದನ್ನು ಕಂಡ ತಂದೆಯು ಮಗನ ಮೇಲೆ ಕೋಪಗೊಂಡು ಇಲ್ಲಿಯೇ ಹಲ್ಲಿಯಾಗಿ ಹೋಗು ಎಂದು ಶಾಪ ನೀಡುತ್ತಾನಂತೆ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ತದನಂತರ ಆ ಮಗನು ಇಲ್ಲಿಯೇ ಹಲ್ಲಿಯಾಗಿ ನೆಲೆಸಿದ್ದಾನೆ. ಅತನನ್ನು ಮುಟ್ಟಿದರೆ ದೇಹದ ಮೇಲೆ ಬೀಳುವ ಹಲ್ಲಿಯ ಪಾಪ ಅಂಟುವುದಿಲ್ಲ ಎಂದು ಆರ್ಶೀವಾದಿಸುತ್ತಾನೆ. ಭಾರತ ದೇಶದ ಮೂಲೆ ಮೂಲೆಗಳಿಂದ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ಬೆಳ್ಳಿ, ಬಂಗಾರದ ಹಲ್ಲಿಗಳನ್ನು ತಾಕಿಸಿ, ತಮ್ಮ ಹಲ್ಲಿ ದೋಷದಿಂದ ವಿಮುಕ್ತರಾಗುತ್ತಾರೆ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಈ ದೇವಾಲಯದ ಮತ್ತೊಂದು ವಿಶೇಷವೆನೆಂದರೆ ಇಲ್ಲಿಯೂ ಕೂಡ 1000 ಸ್ತಂಭಗಳ ಮಂಟಪವಿರುವುದು. ಇತಿಹಾಸದ ಪ್ರಕಾರ ಇಲ್ಲಿ ವರದರಾಜಸ್ವಾಮಿಯು ಕೃತ ಯುಗದಲ್ಲಿ ಬ್ರಹ್ಮ, ತ್ರೇತಾ ಯುಗದಲ್ಲಿ ಗಂಜೇಂದ್ರ, ದ್ವಾಪರಯುಗದಲ್ಲಿ ಬೃಹಸ್ಪತಿ, ಕಲಿಯುಗದಲ್ಲಿ ಅನಂತಶೇಷನನ್ನು ಪೂಜಿಸಿದರು ಎಂದು ಹೇಳಲಾಗುತ್ತದೆ.

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಬಂಗಾರದ ಹಲ್ಲಿಯ ಹಿಂದಿರುವ ರಹಸ್ಯ

ಈ ದೇವಾಲಯದಲ್ಲಿನ ಮೂಲವಿರಾಟ ವಿಗ್ರಹವು ವರದರಾಜ ಪೆರುಮಾಳ್ ಆಗಿದೆ. ಈ ವಿಗ್ರಹವು ಅತ್ಯಂತ ಎತ್ತರವಾದ ದೇವತಾ ವಿಗ್ರಹಗಳಲ್ಲಿ 2 ನೆಯದಾಗಿದೆ. ಇಲ್ಲಿ ಹಲವಾರು ದೇವಾಲಯಗಳನ್ನು ಕೂಡ ಕಾಣಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಖಾಂತರ: ಬೆಂಗಳೂರಿನಿಂದ ಚೆನ್ನೈ ವಿಮಾನ ನಿಲ್ದಾಣ ಅತ್ಯಂತ ಸಮೀಪದ್ದಾಗಿದೆ. ಇಲ್ಲಿಂದ ಕಂಚಿಯಲ್ಲಿನ ಆ ಮಾಹಿಮಾನ್ವಿತವಾದ ದೇವಾಲಯಕ್ಕೆ ತೆರಳಿ ಹಲ್ಲಿಯ ದೋಷವನ್ನು ಕಳೆದುಕೊಳ್ಳಬಹುದಾಗಿದೆ.

ಬೆಂಗಳೂರಿನಿಂದ ಕಾಂಚಿಪುರಂಗೆ ಸುಮಾರು 280 ಕಿ.ಮೀ ದೂರದಲ್ಲಿದೆ. ಹಾಗೆಯೇ ಬೆಂಗಳೂರಿನಿಂದ ಕಾಂಚಿಪುರಂಗೆ ಹಲವಾರು ರೈಲ್ವೆ ಸಂಪರ್ಕಗಳು ಕೂಡ ಇವೆ.

ಕಲಿಯುಗ ಅಂತ್ಯವನ್ನು ಸೂಚಿಸುವ ಯಾಗಂಟಿ ದೇವಾಲಯ ಎಲ್ಲಿದೆ ಗೊತ್ತ?ಕಲಿಯುಗ ಅಂತ್ಯವನ್ನು ಸೂಚಿಸುವ ಯಾಗಂಟಿ ದೇವಾಲಯ ಎಲ್ಲಿದೆ ಗೊತ್ತ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X