Search
  • Follow NativePlanet
Share
» »ಶ್ರೀರಾಮ ರಾವಣನನ್ನು ಸಂಹರಿಸಿ ಬಂದು ತನ್ನ ಜಡೆಯನ್ನು ತೊಳೆದದ್ದು ಇಲ್ಲೇ

ಶ್ರೀರಾಮ ರಾವಣನನ್ನು ಸಂಹರಿಸಿ ಬಂದು ತನ್ನ ಜಡೆಯನ್ನು ತೊಳೆದದ್ದು ಇಲ್ಲೇ

ರಾಮೇಶ್ವರದ ಸುತ್ತಮುತ್ತಲಿರುವ 9 ಪವಿತ್ರ ತೀರ್ಥಗಳಲ್ಲಿ ಜಡಾ ತೀರ್ಥವೂ ಒಂದು. ಈ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗಿ ಗೊಂದಲಗಳೆಲ್ಲಾ ದೂರವಾಗಿ ಒಳ್ಳೆಯ ಆಲೋಚನೆ ಮೂಡುತ್ತದಂತೆ. ಈ ವಿಶೇಷ ತೀರ್ಥದಲ್ಲಿ ರಾಮನು ತನ್ನ ಜಡೆಯನ್ನು ತೊಳೆದಿದ್ದನು ಹಾಗಾಗಿ ಇದಕ್ಕೆ ಜಡಾ ತೀರ್ಥ ಎನ್ನುವ ಹೆಸರು ಬಂದಿದೆ ಎನ್ನುತ್ತದೆ ಪುರಾಣ.

ಜಡಾ ತೀರ್ಥ

ಜಡಾ ತೀರ್ಥ

PC: youtube

ಜಡಾ ತೀರ್ಥವು ರಾಮೇಶ್ವರದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ಧನುಷ್ಕೊಂಡಿಗೆ ಹೋಗುವ ದಾರಿಯಲ್ಲಿದೆ. ಅಲ್ಲೊಂದು ಶ್ರೀರಾಮನ ಮಂದಿರವಿದೆ. ಇಲ್ಲಿ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಾಗೆಯೇ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಕಾಮ್ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪುರಾಣ ಕಥೆ

ಪುರಾಣ ಕಥೆ

PC:Vishnukiran L.S

ರಾಮನು ರಾವಣನನ್ನು ಸಂಹರಿಸಿ ತೆರಳುತ್ತಿದ್ದಾಗ ಅದೇ ದಾರಿಯಲ್ಲಿ ಈ ತೀರ್ಥ ಸಿಗುತ್ತದೆ. ಆ ತೀರ್ಥದಲ್ಲಿ ರಾಮ ಹಾಗೂ ಲಕ್ಷ್ಮಣರು ತಮ್ಮ ಜಡೆಯನ್ನು ತೊಳೆದಿದ್ದರು ಎನ್ನಲಾಗುತ್ತದೆ. ಹಾಗಾಗಿ ಈ ತೀರ್ಥಕ್ಕೆ ಜಡಾ ತೀರ್ಥ ಎನ್ನುವ ಹೆಸರು ಬಂದಿದೆ.

ರಾಮೇಶ್ವರದ ಪೂಜೆ

ರಾಮೇಶ್ವರದ ಪೂಜೆ

PC: Saksham1909jain

ರಾಮ, ಲಕ್ಷ್ಮಣರು ಈ ತೀರ್ಥದಲ್ಲಿ ಜಡೆ ತೊಳೆದು ನಂತರ ರಾಮೇಶ್ವರಂಗೆ ಹೋಗಿ ಶಿವಲಿಂಗವನ್ನು ಪೂಜಿಸಿದ್ದರು. ಈ ಜಡೆ ತೀರ್ಥದ ಬಳಿಯೇ ಒಂದು ಶಿವನ ಮಂದಿರವಿದೆ. ಈ ಮಂದಿರದಲ್ಲಿ ಶಿವಲಿಂಗದ ಪೂಜೆಯನ್ನ ಸ್ವತಃ ರಾಮನೇ ಮಾಡಿದ್ದರು ಎನ್ನಲಾಗುತ್ತದೆ.

ತೆಂಗಿನ ನೀರಿನಂತೆ ಸಿಹಿ

ತೆಂಗಿನ ನೀರಿನಂತೆ ಸಿಹಿ

PC: youtube

ಮರಳು ದಿಬ್ಬಗಳಿಂದ ಆವೃತವಾಗಿರುವ ಈ ತೀರ್ಥದ ನೀರು ತೆಂಗಿನ ನೀರಿನಂತೆ ಸಿಹಿಯಾಗಿರುತ್ತದೆ. ಪ್ರವಾಸಿಗರು ಕಾವೇರಿ ತೀರ್ಥಮ್ ಆವರಣದಲ್ಲಿ ಜಡಾ ತೀರ್ಥಂ ದೇವಾಲಯವನ್ನೂ ನೋಡಬಹುದು. ಇದು ದೊಡ್ಡ ಆಲದ ಮರದ ಕೊಂಬೆಯ ಕೆಳಗೆ ಇರುವ ಸಣ್ಣ ದೇವಾಲಯವಾಗಿದೆ.

ದಂತಕಥೆ

ದಂತಕಥೆ

ಶುಕನು ಅನೇಕ ಯಜ್ಞಗಳನ್ನು ಮಾಡುತ್ತಾನೆ ಆದರೆ ಮಹಾನ್ ಶಕ್ತಿಗಳನ್ನು ಪಡೆಯಲು ಸಾಧ್ಯವಾಗೋದಿಲ್ಲ. ನಂತರ ರಾಜ ಋಷಿ ಜನಕರ ಸಲಹೆ ಮೇರೆಗೆ ಈ ಸ್ಥಳಕ್ಕೆ ಬಂದು ಜದಾಮಗುಡ ತೀರ್ಥಂನಲ್ಲಿ ಸ್ನಾನ ಮಾಡಿ, ಮತ್ತು ಧ್ಯಾನಲಿಂಗಗಳು, ಜ್ಞಾನೇಶ್ವರರ್ ಮತ್ತು ಅಗ್ನೇಸ್ವರರರನ್ನು ಪೂಜಿಸಿ ದೊಡ್ಡ ಋಷಿಯಾಗುತ್ತಾನೆ.

ತೀರ್ಥ ಸ್ನಾನ ಮಾಡಿದ್ರೆ ಪುಣ್ಯ

ತೀರ್ಥ ಸ್ನಾನ ಮಾಡಿದ್ರೆ ಪುಣ್ಯ

ತೀರ್ಥ ಸ್ನಾನ ಮಾಡಿದ್ರೆ ಪುಣ್ಯಶ್ರೀ ರಾಮನಾಥಸ್ವಾಮಿ ಮತ್ತು ಧ್ಯಾನಲಿಂಗವು ಭಕ್ತರಿಗೆ ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಅನುಗ್ರಹಿಸುತ್ತದೆ. ಇಲ್ಲಿನ ತೀರ್ಥವು ಭಕ್ತರನ್ನು ಕಾಮ, ಕ್ರೋಧ ಮಧದಿಂದ ರಕ್ಷಿಸುತ್ತದೆ. ಈ ಜಡಾ ತೀರ್ಥದಲ್ಲಿ ಒಂದು ಸಾರಿ ಸ್ನಾನ ಮಾಡಿದರೆ ಕುಂಭಕೋಣದಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ಬರುತ್ತದೆ ಎನ್ನುತ್ತಾರೆ. ಇಲ್ಲಿ ಸ್ನಾನ ಮಾಡುವ ಜನರಿಗೆ ಬಡತನ ಹಾಗೂ ಪಾಪಗಳಿಂದ ಮುಕ್ತಿ ಸಿಗುತ್ತದಂತೆ. ಅಲ್ಲದೆ ಗೊಂದಲಗಳಿಂದ ಮುಕ್ತವಾಗಿ ಒಳ್ಳೆಯ ಆಲೋಚನೆಯನ್ನು ಹೊಂದುತ್ತಾರಂತೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: youtube

ರಾಮೇಶ್ವರಂ-ಧನುಷ್ಕೊಂಡಿ ಬಸ್ ಮೂಲಕ, ರಿಕ್ಷಾ ಮೂಲಕ ಅಥವಾ ನಿಮ್ಮದೇ ವಾಹನದ ಮೂಲಕವೂ ಹೋಗಬಹುದು.
ಅಗ್ನೀ ತೀರ್ಥವು ಜಡಾ ತೀರ್ಥದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ.
ಮುಖ್ಯ ಬಸ್‌ಸ್ಟ್ಯಾಂಡ್ 14 ಕಿ.ಮೀ ದೂರದಲ್ಲಿದೆ.
ಧನುಷ್ಕೊಂಡಿ 8 ಕಿ.ಮೀ ದೂರದಲ್ಲಿದೆ.

ಈ ಮಂದಿರವು ಬೆಳಗ್ಗೆ 6 ರಿಂದ 11 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 6 ಗಂಟೆವರೆಗೆ ತೆರೆದಿರುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+