Search
  • Follow NativePlanet
Share
» »ಪ್ರವಾಸಿಗರಿಗೆ ಅತ್ಯಾಕರ್ಷಕ ಆಫರ್ಸ್! ಐಆರ್‌ಸಿಟಿಸಿಯಿಂದ Mystical Kashmir, ಉತ್ತರಾಖಂಡ ಟೂರ್ ಪ್ಯಾಕೇಜ್ ಘೋಷಣೆ

ಪ್ರವಾಸಿಗರಿಗೆ ಅತ್ಯಾಕರ್ಷಕ ಆಫರ್ಸ್! ಐಆರ್‌ಸಿಟಿಸಿಯಿಂದ Mystical Kashmir, ಉತ್ತರಾಖಂಡ ಟೂರ್ ಪ್ಯಾಕೇಜ್ ಘೋಷಣೆ

ಚಳಿಗಾಲದಲ್ಲಿ ಪ್ರಯಾಣಿಸುವುದೆಂದರೆ ಬೇರೆಯದೇ ಖುಷಿ. ನೀವೂ ಈ ಚಳಿಗಾಲದಲ್ಲಿ ಪ್ರವಾಸ ಹೋಗಲು ಪ್ಲಾನ್‌ ಮಾಡಿದ್ದರೆ, ಭಾರತದಲ್ಲಿ ಸುಂದರವಾದ ಸ್ಥಳಗಳನ್ನು ನೋಡಲು ಯೋಜಿಸುತ್ತಿದ್ದರೆ ಐಆರ್‌ಸಿಟಿಸಿ (IRCTC) ನಿಮಗೆ ಉತ್ತಮ ಆಯ್ಕೆಯಾಗಿದೆ. ಹೌದು, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ಕಾಶ್ಮೀರಕ್ಕೆ ಅತ್ಯಾಕರ್ಷಕ ಪ್ರವಾಸೋದ್ಯಮ ಪ್ಯಾಕೇಜ್ ಅನ್ನು ಘೋಷಿಸಿದೆ. ಪ್ಯಾಕೇಜ್‌ಗೆ 'ಮಿಸ್ಟಿಕಲ್ ಕಾಶ್ಮೀರ್ ವಿಂಟರ್ ಸ್ಪೆಷಲ್' ಎಂದು ಹೆಸರಿಸಲಾಗಿದೆ.‌

ಪ್ಯಾಕೇಜ್‌ನಲ್ಲಿ ಏನೆಲ್ಲಾ ನೋಡಬಹುದು?

ಶ್ರೀನಗರ: ಕಾಶ್ಮೀರದ ಹೃದಯಭಾಗದಲ್ಲಿರುವ ಶ್ರೀನಗರ ನಗರವು ಝೀಲಂ ನದಿಯ ಎರಡೂ ದಡಗಳಲ್ಲಿ ಹರಡಿದೆ. ಇದರ ಆಕರ್ಷಕ ಹವಾಮಾನದಿಂದಾಗಿ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಕಾಶ್ಮೀರದ ಅತ್ಯಂತ ಸುಂದರವಾದ ನಗರ, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಶ್ರೀನಗರವು 103.93 ಚದರ ಕಿಮೀ ಪ್ರದೇಶದಲ್ಲಿ ಹರಡಿದೆ ಮತ್ತು ಸಮುದ್ರ ಮಟ್ಟದಿಂದ 1730 ಮೀಟರ್ ಎತ್ತರದಲ್ಲಿದೆ.

gulmarg

ಗುಲ್ಮಾರ್ಗ್: ಕಾಶ್ಮೀರದ ಗುಲ್ಮಾರ್ಗ್‌ನ ಸೌಂದರ್ಯವು ಚಿತ್ರಗಳಿಗಿಂತ ಹೆಚ್ಚು ವಿಭಿನ್ನವಾಗಿದೆ ಮತ್ತು ವಿಶೇಷವಾಗಿದೆ, ಇಲ್ಲಿಗೆ ಬಂದರೆ ನೀವು ನೋಡುವುದಕ್ಕಿಂತ ಚೆನ್ನಾಗಿ ಅನುಭವಿಸುವುದೇ ಜಾಸ್ತಿ. ಪ್ರಪಂಚದಾದ್ಯಂತದಿಂದ ಬರುವ ಪ್ರವಾಸಿಗರ ಸಮೂಹವನ್ನು ವರ್ಷವಿಡೀ ಇಲ್ಲಿ ಕಾಣಬಹುದು. ಹನಿಮೂನ್‌ನಿಂದ ಹಿಡಿದು ಸಾಹಸ, ಸಿಂಗಲ್, ಕುಟುಂಬದವರೆಗೆ ಪ್ರತಿಯೊಂದು ರೀತಿಯ ಪ್ರವಾಸಕ್ಕೂ ಗುಲ್ಮಾರ್ಗ್ ಅತ್ಯುತ್ತಮ ತಾಣವಾಗಿದೆ.

ಸೋನಾಮಾರ್ಗ್: ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲ್ಪಡುವ ಕಾಶ್ಮೀರಕ್ಕೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಜನರು ಬರುತ್ತಾರೆ. ಆದರೆ ನೀವು ಕಾಶ್ಮೀರದಲ್ಲಿ ಕ್ಯಾಂಪಿಂಗ್ ಮಾಡಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದ್ದರೆ, ಸೋನಾಮಾರ್ಗ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಬೇಸಿಗೆಯಲ್ಲಿ ಇಲ್ಲಿನ ಹವಾಮಾನವು ಸಾಕಷ್ಟು ಉತ್ತಮವಾಗಿರುತ್ತದೆ. ನೀವು ಇಲ್ಲಿ ಕ್ಯಾಂಪಿಂಗ್ ಅನ್ನು ಪೂರ್ಣವಾಗಿ ಆನಂದಿಸಲು ಸಾಧ್ಯವಾಗುತ್ತದೆ.

ಪಹಲ್ಗಾಮ್‌: ಪಹಲ್ಗಾಮ್ ದಟ್ಟವಾದ ಕಾಡುಗಳು, ಸುಂದರವಾದ ಸರೋವರಗಳು ಮತ್ತು ಹೂವುಗಳ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಶ್ರೀನಗರದಿಂದ ಪಹಲ್ಗಾಮ್ 95 ಕಿಲೋಮೀಟರ್ ದೂರವಿದೆ. ಪಹಲ್ಗಾಮ್ ನಲ್ಲಿ ಉಳಿದುಕೊಳ್ಳುವ ಮೂಲಕ ನೀವು ನಕ್ಷತ್ರಗಳ ನಡುವೆ ಕಾಶ್ಮೀರದ ಸೌಂದರ್ಯವನ್ನು ನೋಡಬಹುದು.

ಪ್ಯಾಕೇಜ್‌ನ ವಿವರ

· ಇದು ಐದು ರಾತ್ರಿಗಳು ಮತ್ತು ಆರು ಹಗಲುಗಳನ್ನು ಒಳಗೊಂಡ ಪ್ಯಾಕೇಜ್ ಆಗಿದೆ. ಪ್ಯಾಕೇಜ್ ಬೆಲೆ ₹41,050/- ರಿಂದ ಪ್ರಾರಂಭವಾಗುತ್ತದೆ. ಹೈದರಾಬಾದ್‌ನಿಂದ ಪ್ರವಾಸ ಆರಂಭವಾಗಲಿದೆ.

· ಹೆಚ್ಚಿನ ಮಾಹಿತಿಗಾಗಿ IRCTC X ಹ್ಯಾಂಡಲ್‌ನಲ್ಲಿ ಲಿಂಕ್ ನೋಡಬಹುದು ಅಥವಾ IRCTC ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

· ಇದು ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಿದೆ.

ದೇವಭೂಮಿಗೂ ಪ್ರವಾಸ

ಇದಲ್ಲದೆ, IRCTC ಪವಿತ್ರ ಸ್ಥಳ, ಪ್ರಶಾಂತ ತಾಣ ದೇವಭೂಮಿ ಉತ್ತರಾಖಂಡದ ಕೈಂಚಿ ಧಾಮಕ್ಕೆ ಭೇಟಿ ನೀಡಲು ಅವಕಾಶವನ್ನು ನೀಡಿದೆ. IRCTC ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ತನ್ನ X ಹ್ಯಾಂಡಲ್‌ನಲ್ಲಿ ಪ್ರವಾಸದ ಪ್ಯಾಕೇಜ್‌ಗಳ ಕುರಿತು ಪೋಸ್ಟ್ ಮಾಡಿದೆ. ಈ ಪ್ರವಾಸವು ಕೋಲ್ಕತ್ತಾದಿಂದ ಪ್ರಾರಂಭವಾಗುತ್ತದೆ, ನಿಗದಿತ ನಿರ್ಗಮನ ದಿನಾಂಕ ನವೆಂಬರ್ 16, 2024 ಆಗಿರುತ್ತದೆ. ಇದು 10 ರಾತ್ರಿ, 11 ದಿನಗಳ ಪ್ಯಾಕೇಜ್ ಆಗಿರುತ್ತದೆ. ಈ ಪ್ಯಾಕೇಜ್ ತನಕ್‌ಪುರ, ಚಂಪಾವತ್, ಲೋಹಾಘಾಟ್, ಚೌಕೋರಿ, ಅಲ್ಮೋರಾ, ನೈನಿತಾಲ್, ಭೀಮತಾಲ್ ಅನ್ನು ಒಳಗೊಂಡಿರುತ್ತದೆ.

ಪ್ಯಾಕೇಜ್‌ನ ವಿವರ

ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 37,220 ರೂ. ಜನರು www.irctctourism.com/bharatgaurav ನಲ್ಲಿ ಪ್ಯಾಕೇಜ್‌ಗಳನ್ನು ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ IRCTC ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಐಆರ್‌ಸಿಟಿಸಿ ಭಾರತದ ವಿವಿಧ ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಪ್ರಾರಂಭಿಸಲಾದ ದೇಖೋ ಅಪ್ನಾ ದೇಶ್ ಉಪಕ್ರಮದ ಒಂದು ಭಾಗವಾಗಿದೆ. ಭಾರತದ ಕಡಿಮೆ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಭಾರತದಲ್ಲಿ ದೇಶೀಯ ಪ್ರವಾಸೋದ್ಯಮವನ್ನು ರಕ್ಷಿಸಲು ಪ್ರವಾಸೋದ್ಯಮ ಸಚಿವಾಲಯವು ಇದನ್ನು 2020 ರಲ್ಲಿ ಪ್ರಾರಂಭಿಸಿತು.

More News

Read more about: irctc kashmir uttarakhand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+