Search
  • Follow NativePlanet
Share
» »ಪ್ರಾಕೃತಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಈಶಾನ್ಯ ರಾಜ್ಯಗಳನ್ನು ನೋಡಬೇಕೇ?, IRCTC ಪ್ಯಾಕೇಜ್‌ನಲ್ಲಿ ಪ್ರಯಾಣಿಸಿ…

ಪ್ರಾಕೃತಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಈಶಾನ್ಯ ರಾಜ್ಯಗಳನ್ನು ನೋಡಬೇಕೇ?, IRCTC ಪ್ಯಾಕೇಜ್‌ನಲ್ಲಿ ಪ್ರಯಾಣಿಸಿ…

ಈಶಾನ್ಯದ ರಾಜ್ಯಗಳ ಬಗ್ಗೆ ಮಾತನಾಡುವುದಾದರೆ ಬಹುತೇಕ ಎಲ್ಲಾ ಸ್ಥಳಗಳು ನೈಸರ್ಗಿಕ ಸೌಂದರ್ಯದಿಂದ ತುಂಬಿ ತುಳುಕುತ್ತಿವೆ. ಇಲ್ಲಿನ ವಾತಾವರಣದಲ್ಲಿ ವಿಭಿನ್ನವಾದ ಶಾಂತಿಯ ಭಾವವಿದೆ. ಅದು ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್ ಅಥವಾ ಅಸ್ಸಾಂ ಆಗಿರಲಿ. ಪ್ರತಿಯೊಂದು ಸ್ಥಳವು ಬಹಳ ಅದ್ಭುತವಾಗಿವೆ. ಇದುವರೆಗೂ ನೀವು ಇನ್ನೂ ಇಲ್ಲಿ ಯಾವುದೇ ಸ್ಥಳವನ್ನು ಅನ್ವೇಷಿಸದಿದ್ದರೆ, ಈಗಲೇ ಯೋಜನೆ ಹಾಕಿಕೊಳ್ಳಿ. ಏಕೆಂದರೆ ಐಆರ್‌ಸಿಟಿಸಿ (IRCTC) ನಿಮಗಾಗಿ ಉತ್ತಮ ಅವಕಾಶವನ್ನು ತಂದಿದೆ. ಬನ್ನಿ ಹಾಗಾದರೆ ಐಆರ್‌ಸಿಟಿಸಿಯ ಈ ಪ್ಯಾಕೇಜ್‌ಗೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿವರಗಳನ್ನು ತಿಳಿದುಕೊಳ್ಳೋಣ....

ಪ್ಯಾಕೇಜ್ ಹೆಸರು- ಜುವೆಲ್ ಆಫ್ ನಾರ್ತ್ ಈಸ್ಟ್

ಪ್ಯಾಕೇಜ್ ಅವಧಿ- 10 ರಾತ್ರಿಗಳು ಮತ್ತು 11 ದಿನಗಳು

ಟ್ರಾವೆಲ್‌ ಮೋಡ್ - ರೈಲು

ಏನೆಲ್ಲಾ ನೋಡಬಹುದು?

ಚಿರಾಪುಂಜಿ: ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಚಿರಾಪುಂಜಿಯು ಕೇವಲ 56 ಕಿಮೀ ದೂರದಲ್ಲಿದೆ. ಚಿರಾಪುಂಜಿಯ ಸುತ್ತಲೂ ಪರ್ವತಗಳು ಮತ್ತು ಕಣಿವೆಗಳಿವೆ. ಇಲ್ಲಿ ಸಾಕಷ್ಟು ಜರೀಗಿಡಗಳು, ಪೈನ್ ಮತ್ತು ಅರೌಕೇರಿಯಾ ಮರಗಳು, ಅನೇಕ ರೀತಿಯ ಸ್ಥಳೀಯ ಹಣ್ಣುಗಳು, ಕಿತ್ತಳೆ ಮತ್ತು ಅನಾನಸ್‌ಗಳಿವೆ. ಕೆಲವು ವಿಶೇಷ ರೀತಿಯ ಹುಲ್ಲು ಮತ್ತು ಹೂವುಗಳನ್ನು ಸಹ ಕಾಣಬಹುದು. ಇಲ್ಲಿನ ಖಾಸಿ ಜನಾಂಗದ ಮುಖ್ಯ ಉದ್ಯೋಗ ಕಾಡು ಉತ್ಪನ್ನವಾಗಿದೆ. ಈ ಜನರು ಸೌಂದರ್ಯ ಪ್ರಿಯರು. ಅವರು ಕಲಾತ್ಮಕ ಬಟ್ಟೆ, ಶಾಲು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ ಮತ್ತು ಮಾರಾಟ ಮಾಡುತ್ತಾರೆ. ಮನೆಗಳು ಸಹ ತುಂಬಾ ಸುಂದರವಾಗಿವೆ, ಅದನ್ನು ಅವರು ಅಲಂಕರಿಸುತ್ತಾರೆ. ಅವರು ತಮ್ಮ ನೆಲ, ಧರ್ಮ, ಸಮಾಜ ಮತ್ತು ಆಚಾರ-ವಿಚಾರಗಳಿಗೆ ಬಹಳ ನಿಷ್ಠರಾಗಿದ್ದಾರೆ.

guwathi

ಗುವಾಹಟಿ

ಗುವಾಹಟಿಯು ಅಸ್ಸಾಂನ ಅತಿದೊಡ್ಡ ನಗರವಾಗಿದ್ದು, ಬ್ರಹ್ಮಪುತ್ರ ನದಿಯ ದಡದಲ್ಲಿದೆ. ಹಿಮಾಲಯ ಪರ್ವತ ಶ್ರೇಣಿಗಳ ಭವ್ಯವಾದ ಬೆಟ್ಟಗಳ ನಡುವೆ ನೆಲೆಗೊಂಡಿರುವ ಗುವಾಹಟಿಯು ಕೇವಲ ಒಂದು ಆಕರ್ಷಣೆ ಮಾತ್ರವಲ್ಲದೆ ಇತರ ಹಲವು ಈಶಾನ್ಯ ಸ್ಥಳಗಳಿಗೆ ಪ್ರವಾಸಿ ಸಂಪರ್ಕ ಕೇಂದ್ರವಾಗಿದೆ. ಈ ಕಾರಣದಿಂದಾಗಿ ನೀವು ವಾರಾಂತ್ಯದಲ್ಲಿ ಗುವಾಹಟಿಯಿಂದ ಶಿಲ್ಲಾಂಗ್, ತೇಜ್ಪುರ್ ಮತ್ತು ಚಿರಾಪುಂಜಿಯಂತಹ ಅನೇಕ ಸುಂದರವಾದ ಸ್ಥಳಗಳನ್ನು ಕಾಣಬಹುದು. ನಿಸರ್ಗ ಪ್ರೇಮಿಯಾಗಿರಲಿ ಅಥವಾ ಸಾಹಸ ಪ್ರಿಯರಾಗಿರಲಿ, ಪ್ರತಿಯೊಂದು ರೀತಿಯ ಪ್ರಯಾಣಿಕರಿಗೆ ಇಲ್ಲಿ ಖಂಡಿತವಾಗಿಯೂ ಏನಾದರೂ ಇರುತ್ತದೆ.

ಕಾಮಾಖ್ಯ: ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಖ್ಯ ದೇವಿ ದೇವಸ್ಥಾನದಲ್ಲಿ ಸತಿ ದೇವಿಯ ಯೋನಿಯನ್ನು ಪೂಜಿಸಲಾಗುತ್ತದೆ. ವರ್ಷದ 3 ದಿನಗಳ ಕಾಲ ಇಲ್ಲಿಗೆ ಪುರುಷರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಈ ದಿನಗಳಲ್ಲಿ ತಾಯಿ ಸತಿ ಋತುಮತಿಯಾಗುತ್ತಾಳೆ ಎಂದು ನಂಬಲಾಗಿದೆ. ಈ ಮೂರು ದಿನಗಳಲ್ಲಿ ಪುರುಷರು ಕೂಡ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ಈ ಸ್ಥಳವು ತಂತ್ರ ಮಂತ್ರಗಳಿಗೆ ಪ್ರಮುಖ ಸ್ಥಳವಾಗಿದೆ. ಅಷ್ಟೇ ಅಲ್ಲ ಯಾರಿಗಾದರೂ ಮಾಟಮಂತ್ರವಾಗಿದ್ದರೆ, ದೇವಾಲಯದಲ್ಲಿರುವ ಅಘೋರಿಗಳು ಮತ್ತು ತಂತ್ರಿಗಳು ಅದನ್ನು ತೆಗೆದುಹಾಕುತ್ತಾರೆ ಎಂದು ಹೇಳಲಾಗುತ್ತದೆ.

shillong

ಶಿಲ್ಲಾಂಗ್: ಶಿಲ್ಲಾಂಗ್ ಸಮುದ್ರ ಮಟ್ಟದಿಂದ 1,491 ಮೀಟರ್ ಎತ್ತರದಲ್ಲಿದೆ, ಇದು ಮೇಘಾಲಯದ ರಾಜಧಾನಿ ಮತ್ತು ಪ್ರಸಿದ್ಧ ಗಿರಿಧಾಮವಾಗಿದೆ. ಎಲ್ಲಾ ಕಡೆಯಿಂದ ತಲುಪಬಹುದಾದ ದೇಶದ ಮೊದಲ ಗಿರಿಧಾಮ ಇದಾಗಿದೆ. ಅಂದಹಾಗೆ ಶಿಲ್ಲಾಂಗ್‌ಗೆ ಯು-ಶೈಲ್ಲಾಂಗ್ ದೇವತೆಯ ಹೆಸರನ್ನು ಇಡಲಾಗಿದೆ. ಸೌಂದರ್ಯದಲ್ಲಿ ಶಿಲ್ಲಾಂಗ್ ಸ್ಕಾಟ್ಲೆಂಡ್‌ಗಿಂತ ಕಡಿಮೆಯಿಲ್ಲ. ಮಾನವ ನಿರ್ಮಿತ ಜಲಾಶಯವಾದ ಉಮಿಯಂ ಸರೋವರವು ಶಿಲ್ಲಾಂಗ್‌ನಿಂದ ಉತ್ತರಕ್ಕೆ 15 ಕಿಲೋಮೀಟರ್ ದೂರದಲ್ಲಿದೆ. ಇದು ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.

ಪ್ಯಾಕೇಜ್‌ನಲ್ಲಿ ಈ ಸೌಲಭ್ಯಗಳು ದೊರೆಯಲಿವೆ

1. ಪ್ರಯಾಣಕ್ಕಾಗಿ ರೈಲು ಟಿಕೆಟ್‌ಗಳು ಲಭ್ಯವಿರುತ್ತವೆ.

2. ಉಳಿದುಕೊಳ್ಳಲು ಹೋಟೆಲ್ ಸೌಲಭ್ಯಗಳು ಲಭ್ಯವಿರುತ್ತವೆ.

3. ಉಪಹಾರವನ್ನು ಪ್ರವಾಸದ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ.

4. ನೀವು ಪ್ರಯಾಣ ವಿಮೆಯ ಸೌಲಭ್ಯವನ್ನು ಸಹ ಪಡೆಯುತ್ತೀರಿ .

ಪ್ರಯಾಣದ ಶುಲ್ಕವೆಷ್ಟು?

1. ಈ ಪ್ರವಾಸದಲ್ಲಿ ನೀವು ಒಬ್ಬರೇ ಪ್ರಯಾಣಿಸಿದರೆ 73,295 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

2. ಇಬ್ಬರು ವ್ಯಕ್ತಿಗಳಿಗೆ 42,215 ರೂ.

3. ಮಕ್ಕಳಿಗೆ ನೀವು ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಸಿಗೆಯೊಂದಿಗೆ (5-11 ವರ್ಷಗಳು) 19,030 ರೂ. ಮತ್ತು ಹಾಸಿಗೆ ಇಲ್ಲದೆ 14,755 ರೂ. ಪಾವತಿಸಬೇಕಾಗುತ್ತದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ IRCTC

IRCTC ಈ ಪ್ರವಾಸದ ಪ್ಯಾಕೇಜ್ ಕುರಿತು ಮಾಹಿತಿಯನ್ನು ನೀಡುವ ಟ್ವೀಟ್ ಅನ್ನು ಹಂಚಿಕೊಂಡಿದೆ. ಇದರಲ್ಲಿ ನೀವು ಈಶಾನ್ಯದ ಸುಂದರ ಸ್ಥಳಗಳನ್ನು ನೋಡಲು ಬಯಸಿದರೆ IRCTC ಯ ಈ ಅದ್ಭುತ ಪ್ರವಾಸದ ಪ್ಯಾಕೇಜ್‌ನ ಲಾಭವನ್ನು ಪಡೆಯಬಹುದು ಎಂದು ಹೇಳಿದೆ.

ನೀವು ಈ ರೀತಿ ಬುಕ್ ಮಾಡಬಹುದು

ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಈ ಪ್ರವಾಸದ ಪ್ಯಾಕೇಜ್‌ಗಾಗಿ ಬುಕ್ ಮಾಡಬಹುದು. ಇದಲ್ಲದೆ, IRCTC ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕವೂ ಬುಕ್ಕಿಂಗ್ ಮಾಡಬಹುದು. ಪ್ಯಾಕೇಜ್‌ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು IRCTC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+