ಭಾರತದಲ್ಲಿನ ಅನೇಕ ನಗರಗಳು ಪುರಾಣಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಅಂತಹ ನಗರಗಳಲ್ಲಿ ಹರಿಯಾಣ ಕೂಡಾ ಒಂದು. ನೀವು ಮಹಾಭಾರತವನ್ನು ಓದಿದ್ದರೆ, ಅಥವಾ ಅದರ ಕಥೆಯನ್ನು ಕೇಳಿದ್ದರೆ ಕೌರವ ಪಾಂಡವರ ನಡುವಿನ ಯುದ್ಧದ ಬಗ್ಗೆ ನಿಮಗೆ ತಿಳಿದಿರಬಹುದು. ಈ ಯುದ್ಧ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿತ್ತು ಎನ್ನಲಾಗುತ್ತದೆ. ಅದೇ ಸ್ಥಳದಲ್ಲಿ ಕೃಷ್ಣನು ಅರ್ಜುನನಿಗೆ ಉಪದೇಶ ನೀಡಿದ್ದನು.ಇಂದಿಗೂ ಕೂಡಾ ಹರಿಯಾಣದ ಈ ಸ್ಥಳದಲ್ಲಿ ಕೃಷ್ಣ ಹಾಗು ಮಹಾಭಾರತಕ್ಕೆ ಸಂಬಂಧಪಟ್ಟ ಕುರುಹುಗಳನ್ನು ಕಾಣಬಹುದಾಗಿದೆ. ನೀವು ಧಾರ್ಮಿಕ ಇತಿಹಾಸದಲ್ಲಿ ಆಸಕ್ತಿ ಹೊಂದಿದ್ದರೆ ಒಮ್ಮೆ ಹರಿಯಾಣವನ್ನು ಸುತ್ತಿ ಅಲ್ಲಿನ ಧಾರ್ಮಿಕ ಸ್ಥಳಗಳ ಬಗ್ಗೆ ತಿಳಿಯಲೇ ಬೇಕು.

ಸ್ತಾನೇಶ್ವರ ಮಂದಿರ
Pc: OjAg
ಹರಿಯಾಣದ ಕುರುಕ್ಷೇತ್ರದಲ್ಲಿರುವ ಶ್ರೀ ಸ್ತಾನೇಶ್ವರ ಮಂದಿರವು ಶಿವನಿಗೆ ಸಮರ್ಪಿತವಾದಂತಹದ್ದು. ಈ ದೇವಸ್ಥಾನದ ಮುಂಭಾಗದಲ್ಲಿ ಒಂದು ಸಣ್ಣ ಕುಂಡವಿದೆ. ಆ ಕುಂಡದಲ್ಲಿನ ನೀರು ಎಷ್ಟು ಪವಿತ್ರವೆಂದರೆ ಆ ನೀರಿನ ಒಂದು ಹನಿಯಿಂದ ರಾಜ ಬಾನನ ಕುಷ್ಠರೋಗ ನಿವಾರಣೆಯಾಗಿತ್ತು ಎನ್ನಲಾಗುತ್ತದೆ. ಶಿವನನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾದ ಮೊದಲ ದೇವಸ್ಥಾನ ಇದು ಎನ್ನಲಾಗುತ್ತದೆ. ಹಾಗಾಗಿ ಈ ದೇವಸ್ಥಾನದ ದರ್ಶನದ ಹೊರತಾಗಿ ಕುರುಕ್ಷೇತ್ರದ ಯಾತ್ರೆ ಪೂರ್ಣವಾಗುವುದಿಲ್ಲ.

ಬ್ರಹ್ಮ ಸರೋವರ
Pc: Gagan.leonidas
ಸ್ತಾನೇಶ್ವರದಲ್ಲಿರುವ ಪವಿತ್ರವಾದ ಕೆರೆಯೇ ಬ್ರಹ್ಮ ಸರೋವರ. ಇಲ್ಲಿ ಗ್ರಹಣದ ಸಂದರ್ಭ ಪ್ರತಿವರ್ಷ ಸಾವಿರಾರು ತೀರ್ಥಯಾತ್ರಿಗಳು ಸ್ನಾನ ಮಾಡಲು ಬರುತ್ತಾರೆ. ಈ ಮೂಲಕ ತಮ್ಮ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ. ದುರ್ಯೋದನನು ಸಾವಿನಿಂದ ಪಾರಾಗಲೂ ಇದೇ ಸರೋವರದಲ್ಲಿ ಅಡಗಿದ್ದ ಎನ್ನಲಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಇಲ್ಲಿ ದೀಪವನ್ನು ನದಿಯಲ್ಲಿ ಹರಿಯ ಬಿಡಲಾಗುತ್ತದೆ. ಆಗ ಆ ದೃಶ್ಯ ನೋಡಲು ಸುಂದರವಾಗಿರುತ್ತದೆ.

ಜ್ಯೋತೀಸರ್
Pc: Ravinder M A
ಒಂದು ಪವಿತ್ರವಾದ ಜ್ಯೋತೀಸರ್ ಕುರುಕ್ಷೇತ್ರದಲ್ಲಿರುವ ಒಂದು ನಗರವಾಗಿದೆ. ಇದು ಆಲದ ಮರಕ್ಕೆ ಪ್ರಸಿದ್ಧಿಯಾಗಿದೆ. ಯಾಕೆಂದರೆ ಈ ಮರದ ಅಡಿಯಲ್ಲೇ ಶ್ರೀ ಕೃಷ್ಣನು ಅರ್ಜುನನಿಗೆ ಉಪದೇಶ ನೀಡಿದ್ದನು. ಕೃಷ್ಣನು ಸಾರಥಿಯ ರೂಪದಲ್ಲಿ ರಥದಲ್ಲಿ ಕುಳಿತಿದ್ದರೆ ಅರ್ಜುನನು ವಿನಮೃವಾಗಿ ನೆಲದ ಮೇಲೆ ನಿಂತಿದ್ದನು. ಈ ಮೂರ್ತಿಯನ್ನು 1967ರಲ್ಲಿ ಕಂಚಿ ಕಾಮ ಕೋಟಿಯ ಶಂಕರಾಚಾರ್ಯರಿಂದ ತಯಾರಿಸಲಾಗಿತ್ತು. ಮನಸಾ ದೇವಿ ಮಂದಿರ ಪಂಚಕುಲ ಜಿಲ್ಲೆಯಲ್ಲಿರು ಈ ಮನಸಾ ಮಂದಿರವು ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದು ಶಕ್ತಿಗೆ ಸಮರ್ಪಿತವಾದಂತಹ ಮಂದಿರ. ಸುಮಾರು 100 ಎಕರೆ ಸ್ಥಳದಲ್ಲಿರುವ ಈ ಮಂದಿರ ಒಂದು ಬೆಟ್ಟದ ಮೇಲಿದೆ.

ಆಗ್ರಹ ಧಾಮ
ಹಿಸಾರದಲ್ಲಿರುವ ಆಗ್ರಹ ಧಾಮ ಹಿಂದುಗಳ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. 1976ರಲ್ಲಿ ಈ ಮಂದಿರದ ನಿರ್ಮಾಣ ಮಾಡಲಾಯಿತು. ಈ ಮಂದಿರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮಧ್ಯದ ಭಾಗ ಲಕ್ಷ್ಮೀ ದೇವಿಗೆ ಸಮರ್ಪಿತವಾಗಿದೆ. ಶಕ್ತಿ ಕೆರೆ ಎನ್ನುವ ದೊಡ್ಡ ಸರೋವರ ಈ ಮಂದಿರದ ಹಿಂಭಾಗದಲ್ಲಿದೆ.


Click it and Unblock the Notifications

















