ಮಳೆಗಾಲ ಶುರುವಾಗಿದೆ. ದೇಶದ ಹಲವೆಡೆ ವರುಣನ ಆರ್ಭಟ ಹೆಚ್ಚಿರುವುದರಿಂದ ತಾಪಮಾನ ಸ್ವಲ್ಪ ಕಡಿಮೆಯಾಗಿದೆ. ಬಿಸಿಲಿನ ಬೇಗೆಗೆ ಹಲವು ದಿನಗಳಿಂದ ಮನೆ, ಕಚೇರಿಗಳಿಗೆ ಸೀಮಿತವಾಗಿದ್ದ ಜನರು ಈಗ ಮೆಲ್ಲಗೆ ಹೊರಗೆ ಕಾಲಿಡುತ್ತಿದ್ದಾರೆ. ಹಾಗಾಗಿ ಪ್ರವಾಸ ಇಷ್ಟಪಡುವವರು ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಸ್ಥಳಗಳಿಗೆ ತೆರಳಬಹುದು. ಈ ಸಮಯದಲ್ಲಿ ದೇಶದ ಅನೇಕ ಪ್ರದೇಶಗಳಲ್ಲಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ ಮತ್ತು ಅದ್ಭುತ ದೃಶ್ಯಾವಳಿಗಳಿಂದ ಕೂಡಿರುತ್ತದೆ. ಈ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಸಮಯವಿರಬೇಕು ಅಷ್ಟೇ. ಅಂದರೆ ಉದ್ಯೋಗಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಈ ತಿಂಗಳು ಅಂದರೆ ಜುಲೈನಲ್ಲಿ ಯಾವಾಗ ಮತ್ತು ಎಷ್ಟು ರಜೆ ಇದೆ ಎಂಬುದನ್ನು ತಿಳಿದ ನಂತರವೇ ನಿಮ್ಮ ಪ್ರಯಾಣವನ್ನು ಯೋಜಿಸಲು ನಿಮಗೆ ಸಾಧ್ಯವಾಗುತ್ತದೆ ಅಲ್ಲವೇ...
ಹೌದು, ಈ ಲೇಖನದಲ್ಲಿ, ಜುಲೈ ತಿಂಗಳಲ್ಲಿ ಬರುವ ಸಾರ್ವಜನಿಕ ರಜಾದಿನಗಳು ಮತ್ತು ದೀರ್ಘ ವಾರಾಂತ್ಯಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಇದು ಪ್ರವಾಸವನ್ನು ಯೋಜಿಸುವ ಜನರಿಗೆ ಉಪಯುಕ್ತವಾಗಿರುತ್ತದೆ. ಮತ್ತೇಕೆ ತಡ...ಜುಲೈನಲ್ಲಿ ನೀವು ಯಾವಾಗ ಮತ್ತು ಎಲ್ಲಿ ಭೇಟಿ ನೀಡಬಹುದು ಎಂಬುದನ್ನು ನಾವೀಗ ತಿಳಿಸಲಿದ್ದೇವೆ.

ಜುಲೈನಲ್ಲಿ ಬರುವ ರಜಾದಿನಗಳು
ಜುಲೈ ತಿಂಗಳಲ್ಲಿ ಹೆಚ್ಚಿನ ರಜಾದಿನಗಳಿಲ್ಲ. ಈ ತಿಂಗಳು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊಹರಂ ಮಾತ್ರ ಆಚರಿಸಲಾಗುತ್ತದೆ. ಮೊಹರಂ ಮುಸ್ಲಿಂ ಸಮಾಜದ ವಿಶೇಷ ದಿನವಾಗಿದ್ದು, ಇದನ್ನು ಶೋಕದ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಜುಲೈ 17 ರಂದು ಮೊಹರಂ ಆಚರಿಸಲಾಗುತ್ತಿದೆ. ಮೊಹರಂ ದಿನದಂದು ನಿಮಗೆ ರಜೆ ಇದ್ದರೆ, ನೀವು ಹತ್ತಿರದ ಸ್ಥಳಗಳಲ್ಲಿ ಸುತ್ತಾಡಬಹುದು. ಇನ್ನು ಜುಲೈನಲ್ಲಿ ಹೆಚ್ಚಿನ ರಜಾದಿನಗಳಿಲ್ಲದ ಕಾರಣ, ದೀರ್ಘ ವಾರಾಂತ್ಯಗಳು ಸಿಗುವುದಿಲ್ಲ. ಆದರೂ ನೀವು ಎರಡು ದಿನಗಳ ಕಾಲ ಪ್ರವಾಸವನ್ನು ಹಮ್ಮಿಕೊಳ್ಳುವ ಮೂಲಕ ಅಥವಾ ರಜೆ ತೆಗೆದುಕೊಳ್ಳುವ ಮೂಲಕ ವಾರಾಂತ್ಯದ ಪ್ರವಾಸವನ್ನು ವಿಸ್ತರಿಸಬಹುದು.
ಹೇಗಿದ್ದರೂ ಕಚೇರಿಯಲ್ಲಿ ಶನಿವಾರ ಮತ್ತು ಭಾನುವಾರ ರಜಾದಿನಗಳು ಇದ್ದೇ ಇರುತ್ತವೆ. ಆದ್ದರಿಂದ ನೀವು ಜುಲೈ 6-7, ಜುಲೈ 13-14, ಜುಲೈ 20-21 ಮತ್ತು ಜುಲೈ 27-28 ರಂದು ಭೇಟಿ ನೀಡಲು ಯೋಜಿಸಬಹುದು.
ಜುಲೈನಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು
ಕರ್ನಾಟಕದ ಪ್ರವಾಸಿ ಸ್ಥಳಗಳು
ಬೆಂಗಳೂರಿನಿಂದ 200-400 ಕಿಮೀ ವ್ಯಾಪ್ತಿಯಲ್ಲಿ ಅನೇಕ ಪ್ರವಾಸಿ ಸ್ಥಳಗಳಿದ್ದು, ಇದು ಅವರಿಗೆ ವಾರಾಂತ್ಯದ ವಿಹಾರಕ್ಕೆ ಬೆಸ್ಟ್ ಪ್ಲೇಸ್ ಆಗಿವೆ. ಸುರಿಯುತ್ತಿರುವ ಮಳೆಯಿಂದ ನಗರಗಳು ಜಲಾವೃತವಾಗಿದ್ದರೂ ಬೆಂಗಳೂರಿನ ಹೊರವಲಯದ ದೃಶ್ಯಗಳು, ನದಿಗಳು, ಸರೋವರಗಳು ಮತ್ತು ಬೆಟ್ಟಗಳು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಜುಲೈ ತಿಂಗಳಲ್ಲಿ, ನೀವು ಭಾರತದ ಸ್ಕಾಟ್ಲೆಂಡ್ ಕೊಡಗಿಗೆ ಭೇಟಿ ನೀಡಬಹುದು. ಇದನ್ನು ಹೊರತುಪಡಿಸಿದರೆ ಚಿಕ್ಕಮಗಳೂರು ಟ್ರೆಕ್ಕಿಂಗ್ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಉಡುಪಿಯಿಂದ 45 ಕಿಮೀ ದೂರದಲ್ಲಿರುವ ಬಿಆರ್ ಹಿಲ್ಸ್, ನಂದಿ ಬೆಟ್ಟ ಮತ್ತು ಕೆಮ್ಮಣ್ಣು ಗುಂಡಿ ಮತ್ತು ಆಗುಂಬೆಗೂ ಸಹ ಭೇಟಿ ನೀಡಬಹುದು. ಜೋಗಜಲಪಾತ, ಶಿವನಸಮುದ್ರ, ಹೊಗೆನಕಲ್ ಸೇರಿದಂತೆ ಅನೇಕ ಜಲಪಾತಗಳು ಮಳೆಗಾಲದಲ್ಲಿ ಅದ್ಭುತವಾಗಿ ಗೋಚರಿಸುತ್ತವೆ. ಈ ಎಲ್ಲಾ ಸ್ಥಳಗಳು ಬೆಂಗಳೂರಿನಿಂದ ಸಾಕಷ್ಟು ದೂರವೇನಿಲ್ಲ.

ಕೇರಳದ ಪ್ರವಾಸಿ ಸ್ಥಳಗಳು
ಈ ಪ್ರದೇಶದಲ್ಲಿ ಜುಲೈನಲ್ಲಿ ತಾಪಮಾನ ತಡೆಯಲಾರದಷ್ಟು ಇದ್ದರೂ ಮಳೆಗಾಲ ಬಂದ ನಂತರ ಸ್ವಲ್ಪ ಸಮಾಧಾನ ಸಿಗುತ್ತದೆ. ಆದ್ದರಿಂದ ನೀವು ಮಳೆಗಾಲವನ್ನು ಸಂಪೂರ್ಣವಾಗಿ ಆನಂದಿಸಲು ಜುಲೈ ತಿಂಗಳಲ್ಲಿ ಕೇರಳಕ್ಕೆ ಭೇಟಿ ನೀಡಬಹುದು. ಕೇರಳದ ಅಲೆಪ್ಪಿ, ಮುನ್ನಾರ್, ಪೆರಿಯಾರ್, ಪೊನ್ಮುಡಿ ಈ ಋತುವಿನಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಕೇರಳದ ಈ ಸುಂದರ ನಗರಗಳು ಮತ್ತು ಗಿರಿಧಾಮಗಳನ್ನು ತಲುಪಲು, ನೀವು ತಿರುವನಂತಪುರಂ ವಿಮಾನ ನಿಲ್ದಾಣ, ಕೊಚ್ಚಿನ್ ವಿಮಾನ ನಿಲ್ದಾಣ ಅಥವಾ ತಿರುವನಂತಪುರಂ ಸೆಂಟ್ರಲ್, ಎರ್ನಾಕುಲಂ ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್‌ಗೆ ಹೋಗಬಹುದು.

ಮಹಾರಾಷ್ಟ್ರದ ಗಿರಿಧಾಮಗಳು
ಜನರು ಸುದೀರ್ಘ ಬೇಸಿಗೆಯ ನಂತರ ಮಳೆ ಬಂತೆಂದು ಸಂತೋಷಪಡುತ್ತಿರುವಾಗ, ಮುಂಬೈನಲ್ಲಿಯೂ ಸಾಮಾನ್ಯವಾಗಿ ಮಳೆಯಿಂದಾಗಿ ರಸ್ತೆಯಲ್ಲಿ ಜಲಾವೃತ ಮತ್ತು ಟ್ರಾಫಿಕ್ ಅವ್ಯವಸ್ಥೆಯ ಬಗ್ಗೆಯೇ ಚಿಂತಿಸಬೇಕಾಗುತ್ತದೆ. ಆದರೆ ಈ ಜಂಜಾಟ ಬಿಟ್ಟು ಮುಂಬೈ ಬಳಿ ಭೇಟಿ ನೀಡಬೇಕಾದ ಪ್ರವಾಸಿ ಸ್ಥಳಗಳ ಪಟ್ಟಿಯನ್ನು ನಾವಿಲ್ಲಿ ಕೊಡುತ್ತಿದ್ದೇವೆ. ಇವೆಲ್ಲಾ ಸ್ಥಳಗಳು ಮುಂಬೈನಿಂದ ಹೊರಗಿದ್ದು, ಇದು ವಾರಾಂತ್ಯದ ರಜೆ ಕಳೆಯಬೇಕೆನ್ನುವವರಿಗೆ ಪರಿಪೂರ್ಣ ಸ್ಥಳಗಳಾಗಿವೆ. ಮಹಾರಾಷ್ಟ್ರದಲ್ಲಿ ಜುಲೈ ತಿಂಗಳಲ್ಲಿ ಭೇಟಿ ನೀಡಬಹುದಾದ ಅನೇಕ ನಗರಗಳಿವೆ. ಇವುಗಳಲ್ಲಿ, ಮಹಾಬಲೇಶ್ವರ ಗಿರಿಧಾಮ, ಅಂಬೋಲಿ, ಲೋನಾವಾಲಾ, ಮಾಥೆರಾನ್, ಪಂಚಗನಿ, ಅಲಿಬಾಗ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು. ಇಲ್ಲಿಗೆ ತಲುಪಲು, ನೀವು ಮುಂಬೈ ಅಥವಾ ಪುಣೆ ವಿಮಾನ ನಿಲ್ದಾಣ ಮತ್ತು ಪುಣೆ ಜಂಕ್ಷನ್ ಇತ್ಯಾದಿಗಳಿಂದ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಬಹುದು.


Click it and Unblock the Notifications
















