Search
  • Follow NativePlanet
Share
» »ಹಂಪಿ ಉತ್ಸವ 2022 : ಕಣ್ಮನ ಸೆಳೆಯುವ ಹಂಪಿ ಉತ್ಸವದಲ್ಲಿ ಭಾಗಿಯಾಗಲು ಹಂಪೆಗೆ ಭೇಟಿ ಕೊಡಿ

ಹಂಪಿ ಉತ್ಸವ 2022 : ಕಣ್ಮನ ಸೆಳೆಯುವ ಹಂಪಿ ಉತ್ಸವದಲ್ಲಿ ಭಾಗಿಯಾಗಲು ಹಂಪೆಗೆ ಭೇಟಿ ಕೊಡಿ

ಹಂಪಿ ಉತ್ಸವದ ಸಮಯದಲ್ಲಿ ಹಂಪೆಗೆ ಏಕೆ ಭೇಟಿ ಕೊಡಬೇಕು? ನೋಡೋಣ ಬನ್ನಿ

ಪ್ರತಿಯೊಬ್ಬ ಪ್ರವಾಸಿಗ ಅಥವಾ ಪ್ರಯಾಣಿಕ ತನ್ನ ಪ್ರವಾಸದ ಪಟ್ಟಿಯಲ್ಲಿ ಸೇರಿಸುವ ಹೆಸರೆಂದರೆ ಅದು ಹಂಪೆ. ಈ ಸ್ಥಳವು ಎಲ್ಲಾ ತರಹದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ಗುಣವನ್ನು ಹೊಂದಿದೆ. ಅದು ಕಲೆ ಮತ್ತು ವಾಸ್ತುಶಿಲ್ಪ ಉತ್ಸಾಹಿಗಳಾಗಿರಲಿ, ಇತಿಹಾಸ ಪ್ರಿಯರಾಗಿರಲಿ, ಸಾಹಸಿಗಳು, ಬ್ಯಾಕ್ ಪ್ಯಾಕರ್ಸ್ ಗಳಾಗಿರಲಿ ಅಥವಾ ಬೈಕ್ ಸವಾರರಾಗಿರಲಿ ಎಲ್ಲರೂ ಈ ಸ್ಥಳಕ್ಕೆ ಭೇಟಿ ಕೊಡಲು ಇಷ್ಟ ಪಡುತ್ತಾರೆ ಅಷ್ಟೇ ಅಲ್ಲ ಇವರೆಲ್ಲರಿಗೂ ಬೇಕಾದಂತಹ ಎಲ್ಲವನ್ನೂ ಹಂಪೆಯು ಒದಗಿಸುವುದರಲ್ಲಿ ಯಾವತ್ತೂ ಹಿಂದೆ ಸರಿದಿಲ್ಲ ಎಂದರೆ ತಪ್ಪಾಗಲಾರದು. ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾದ ಮತ್ತು ವಿಜಯನಗರ ಸಾಮ್ರ್ಯಾಜ್ಯದ ಶ್ರೀಮಂತ ಅವಶೇಷಗಳನ್ನು ಹೊಂದಿರುವ ಹಂಪೆಯು ಜಗತ್ತಿನಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಯುರೋಪಿನ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದ್ದು ಇವರು ಕರ್ನಾಟಕದ ಹಂಪೆಯಲ್ಲಿಯೇ ತಮ್ಮ ಪ್ರವಾಸವನ್ನು ಇನ್ನಷ್ಟು ದಿನ ಮುಂದುವರಿಸುತ್ತಾ ಸಮಯ ಕಳೆಯುವುದನ್ನು ಕಾಣಬಹುದು.

ಅತಿ ಹೆಚ್ಚು ಪ್ರಯಾಣಿಸುವ ಹಾಗೂ ಪ್ರವಾಸಿಗರನ್ನು ಕಾಣುವ ಈ ತಾಣವು ಹಂಪಿ ಉತ್ಸವ ಅಥವಾ ಹಂಪಿ ಉತ್ಸವ ಎಂದು ಕರೆಯಲ್ಪಡುವ ಅದರ ಅತಿರಂಜಿತ, 3-ದಿನಗಳ ಕಾಲ ನಡೆಸಲಾಗುವ ಅದ್ಭುತವಾದ ಉತ್ಸವಕ್ಕೆ ಹೆಸರುವಾಸಿಯಾಗಿದೆ. ಈ ಸಾಂಸ್ಕೃತಿಕ ಉತ್ಸವವು ಪ್ರವಾಸಿಗರಿಗೆ ಹಂಪಿಯ ನೆಲದ ವೈಭವವನ್ನು ಆನಂದಿಸಲು ಮತ್ತು ರೋಮಾಂಚಕ ಸಾಂಸ್ಕೃತಿಕ ಪರಂಪರೆ ಮತ್ತು ಇಲ್ಲಿಯ ಜನರನ್ನು ವೀಕ್ಷಿಸಲು ಅವಕಾಶವನ್ನು ಒದಗಿಸುತ್ತದೆ.

hampie-08-1452238965-1663219892.jpg -Properties

ನೀವು ಹೊಸ ಸ್ಥಳಗಳಿಗೆ ಪ್ರಯಾಣಿಸಲು ಇಷ್ಟಪಡುತ್ತಿದ್ದರೆ, ಹಂಪಿ ಉತ್ಸವದ ಸಮಯದಲ್ಲಿ ಹಂಪಿಗೆ ಭೇಟಿ ನೀಡುವುದು ಉತ್ತಮ ಆಯ್ಕೆಯಾಗಿದೆ. ನೀವು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದರೆ, ವರ್ಣರಂಜಿತ ಆಚರಣೆಗಾಗಿ ಭೇಟಿ ನೀಡುವುದರಿಂದ ನಿಮ್ಮ ಪ್ರವಾಸದ ಕಥೆಗೆ ಹೊಸ ಅನುಭವವನ್ನು ನೀಡುತ್ತದೆ. ಹಂಪಿ ಉತ್ಸವ 2022 ತನ್ನ ಸಂದರ್ಶಕರಿಗೆ ಏನನ್ನು ನೀಡುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಸಾಹಸಪ್ರಿಯರಿಗೆ ಮೆಚ್ಚಿನ ಸಾಹಸಿ ತಾಣಗಳು

ಹಂಪಿಯ ಸೌಂದರ್ಯವು ಅದರ ವೈವಿಧ್ಯತೆಗಳಲ್ಲಿವೆ. ಈ ಸ್ಥಳದ ಒರಟಾದ ಭೂಪ್ರದೇಶ ಮತ್ತು ಕಲ್ಲಿನ ಬಂಡೆಗಳು ಮತ್ತು ತುಂಗಭದ್ರಾ ನದಿಯು ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಹಲವಾರು ಸಾಹಸ ಚಟುವಟಿಕೆಗಳ ಸಂಪೂರ್ಣ ರೋಮಾಂಚನವನ್ನು ಅನುಭವಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಹಂಪಿ ಉತ್ಸವದಲ್ಲಿ ಹಲವಾರು ಸಾಹಸಮಯ ಚಟುವಟಿಕೆಗಳು ಮತ್ತು ಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದ್ದು, ಇದರಲ್ಲಿ ರಾಕ್ ಕ್ಲೈಂಬಿಂಗ್, ಬೌಲ್ಡರಿಂಗ್, ರಾಪೆಲ್ಲಿಂಗ್, ಜ಼ಿಪ್ ಲೈನಿಂಗ್, ಮತ್ತು ಇನ್ನೂ ಅನೇಕ ಆಸಕ್ತಿದಾಯಕ ಚಟುವಟಿಕೆಗಳ ಆಯ್ಕೆಗಳಿವೆ. ಬೌಲ್ಡರಿಂಗ ಆಯ್ಕೆಗಳಿಗಾಗಿ ಆನೆಗುಂಡಿಗೆ ಭೇಟಿ ಕೊಡಿ.

02-1388664957-slide1-1663219931.jpg -Properties

ಮೋಜು ಮತ್ತು ಸಾಹಸಮಯ ಜಲಕ್ರೀಡೆಗಳು

ಹಂಪೆಯು ತುಂಗಭದ್ರಾ ನದಿ ದಡದಲ್ಲಿ ನೆಲೆಸಿರುವುದರಿಂದ ಇವು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಸೌಂದರ್ಯತೆಗಳಲ್ಲಿ ಒಂದೆನಿಸುವಂತಹ ಅನೇಕ ಸುಂದರವಾದ ಭೂದೃಶ್ಯಗಳು ಮತ್ತು ಮತ್ತು ಸುಂದರವಾದ ಕಮರಿಗಳನ್ನು ರೂಪಿಸುತ್ತದೆ. ಹಂಪಿ ಉತ್ಸವಕ್ಕೆ ಬರುವಂತಹ ಸಂದರ್ಶಕರು ಬೋಟಿಂಗ್, ಕೆನೋಯಿಂಗ್, ರಾಪ್ಟಿಂತ್, ಈಜುವಿಕೆ ಇತ್ಯಾದಿಗಳನ್ನೊಳಗೊಂಡ ಹಲವಾರು ಮೋಜಿನ ಮತ್ತು ಸಾಹಸಮಯ ಜಲಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ.

ಕ್ಲಿಫ್ ಜಂಪಿಂಗ್ ನಲ್ಲಿ ಉತ್ಸಾಹವಿರುವವರು ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಆದರೆ ಆದರೂ ಗಂಭೀರ ಅಪಘಾತಗಳು ಮತ್ತು ಪ್ರಾಣಾಪಾಯಗಳನ್ನು ತಪ್ಪಿಸಲು ಅತಿ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಹಂಪಿಯ ಸಂಸ್ಕೃತಿಯ ಕಡೆಗೆ ಒಂದು ನೋಟ ಹರಿಸೋಣ

ಹಂಪಿ ಉತ್ಸವದ ಸಮಯದಲ್ಲಿ ಶಾಸ್ತ್ರೀಯ ನೃತ್ಯಗಳು, ನುರಿತ ಕಲಾವಿದರಿಂದ ಪ್ರದರ್ಶಿಸಲಾಗುವ ನಾಟಕಗಳು, ಜಾನಪದ ಗಾಯನಗಳು, ಮತ್ತು ಜನಪದ ನೃತ್ಯಗಳು, ಗೊಂಬೆ ಆಟಗಳು, ಮತ್ತು ಕುಸ್ತಿ, ಕಬ್ಬಡ್ಡಿ ಪಂದ್ಯಗಳಂತಹ ಸಾಂಪ್ರದಾಯಿಕ ಕ್ರೀಡೆಗಳು ಇತ್ಯಾದಿಗಳನ್ನು ವೀಕ್ಷಿಸುತ್ತಾ ಇಲ್ಲಿಯ ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಕೊಳ್ಳಬಹುದಾಗಿದೆ. ಇತಿಹಾಸಕಾರರ ಆಸಕ್ತಿಯನ್ನು ಕೆರಳಿವಂತಿರುವ ಭವ್ಯ ವಿಜಯನಗರ ಸಾಮ್ರಾಜ್ಯ ಕಾಲದ ಶ್ರೀಮಂತ ಅವಶೇಷಗಳತ್ತ ಒಂದು ನಡಿಗೆಯನ್ನು ಕೂಡಾ ನೀವು ಆಯೋಜಿಸಿಕೊಳ್ಳಬಹುದಾಗಿದ್ದು, ಸುಂದರವಾಗಿ ಅಲಂಕೃತವಾದ ಕುದುರೆಗಳು ಮತ್ತು ಆನೆಗಳ ಸಂಗೀತ ಮೆರವಣಿಗೆಯು ಕಹಳೆ ಮತ್ತು ವಾದ್ಯಗಳ ಶಬ್ದಗಳಿಗೆ ಮೆರವಣಿಗೆಗೆ ಮೆರುಗನ್ನು ನೀಡುತ್ತದೆ, ಇದು ನಿಮ್ಮನ್ನು ವಿಜಯನಗರ ಸಾಮ್ರಾಜ್ಯದ ರಾಜರ ಕಾಲದ ಹಿಂದಿನ ಯುಗಕ್ಕೆ ಹಿಂತಿರುಗಿಸುತ್ತದೆ.

ಸಾಲು ಸಾಲು ಪ್ರದರ್ಶನಗಳನ್ನು ಕಾಣಬಹುದು

ಹಂಪಿ ಉತ್ಸವವು ನಿಸ್ಸಂದೇಹವಾಗಿಯೂ ಕಣ್ಣಿಗೆ ಹಬ್ಬವೇ ಸರಿ ಅದರ ಜೊತೆಗೆ ಈ ಹಬ್ಬದ ಸಮಯದಲ್ಲಿ ಎಲ್ಲಾ ತರಹದ ಪ್ರವಾಸಿಗರು ಮತ್ತು ಪ್ರಯಾಣಿಕರ ಆಸಕ್ತಿಯನ್ನು ಕೆರಳಿಸುವಂತಹ ಹಲವಾರು ಪ್ರದರ್ಶನಗಳನ್ನು ಆಯೋಜಿಸುತ್ತದೆ. ಮೂರುದಿನಗಳ ಕಾಲ ನಡೆಯುವ ಈ ಹಬ್ಬದ ಪ್ರದರ್ಶನಗಳಲ್ಲಿ, ಹಲವಾರು ಸಂಖ್ಯೆಯಲ್ಲಿ ಆಹಾರ ಮಳಿಗೆಗಳು, ಪುಸ್ತಕದ ಅಂಗಡಿಗಳು, ಹೂವಿನ ಪ್ರದರ್ಶನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಅಂಗಡಿಗಳು, ಪೈಂಟಿಂಗ್ ಗಳು ಮತ್ತು ಶಿಲ್ಪಕಲಾ ಪ್ರದರ್ಶನಗಳು, ಬೆಳಕು ಮತ್ತು ಧ್ವನಿ ಪ್ರದರ್ಶನ, ಸಾಕುಪ್ರಾಣಿ ಪ್ರದರ್ಶನ ಇತ್ಯಾದಿಗಳನ್ನು ನಡೆಸಲಾಗುತ್ತದೆ.

08-1452235551-folkartformsinhampie-1663219942.jpg -Properties

ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

ಹಂಪಿ ಉತ್ಸವದಲ್ಲಿ ಪ್ರಸಿದ್ದ ಗಾಯಕರಿಂದ ಸಂಗೀತ ನೇರ ಪ್ರದರ್ಶನಗಳನ್ನು ನಡೆಸಲಾಗುತ್ತದೆ ಉದಾಹರಣೆಗೆ 2017ರ ಹಂಪಿ ಉತ್ಸವದಲ್ಲಿ ಕುನಾಲ್ ಗಾಂಜವಾಲ ನೀತಿ ಮೋಹನ್ ಶಾನ್ ರಂತಹ ಹೆಸರಾಂತ ಕಲಾವಿದರಿಂದ ನೇರ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಹೀಗೆಯೇ ಹಲವಾರು ಕರ್ನಾಟಕ ಸಂಗೀತ ಗಾಯಕರು ಮತ್ತು ಭಾರತದ ಹಲವಾರು ಗಾಯಕ ಗಾಯಕಿಯರಿಂದ ಗಾಯನ ಪ್ರದರ್ಶನಗಳನ್ನು ಈ ವರ್ಷವೂ ಆಯೋಜಿಸಲಾಗಿದೆ. ಪ್ರತಿ ದಿನ ಸುಮಾರು 20-30 ಪ್ರದರ್ಶನಗಳನ್ನು ಹಲವಾರು ಸ್ಥಳಗಳಲ್ಲಿ ಹಾಕಲಾದ ಅನೇಕ ವೇದಿಕೆಗಳಲ್ಲಿ ನಡೆಸಲಾಗುವುದು.

2022 ರ ಹಂಪಿ ಉತ್ಸವದ ದಿನಾಂಕ

ಹಂಪಿ ಉತ್ಸವ 2022 ಅನ್ನು ಹಂಪಿಯಲ್ಲಿ ನವೆಂಬರ್ 3 ರಿಂದ ನವೆಂಬರ್ 5, 2022 ರ ನಡುವೆ ಆಚರಿಸಲಾಗುತ್ತದೆ.

03-1509707204-elephant-1663219951.jpg -Properties

ಹಂಪೆಯಲ್ಲಿ ಭೇಟಿ ಕೊಡಲೇ ಬೇಕೆನ್ನುವಂತಹ ಸ್ಥಳಗಳು

ನೀವು ಹಂಪಿಯಲ್ಲಿರುವಾಗ, ಈ ಸ್ಥಳಗಳಿಗೆ ಭೇಟಿ ನೀಡಿ - ವಿರೂಪಾಕ್ಷ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ಹನುಮಾನ್ ದೇವಸ್ಥಾನ (ಮಂಕಿ ಟೆಂಪಲ್ ಎಂದೂ ಕರೆಯುತ್ತಾರೆ), ಪುರಾತತ್ವ ವಸ್ತುಸಂಗ್ರಹಾಲಯ, ಸಾಸಿವೆಕಾಲು ಗಣೇಶ ದೇವಸ್ಥಾನ, ಹಜಾರ ರಾಮ ದೇವಸ್ಥಾನ, ಹಂಪಿ ಬಜಾರ್, ನದಿ ತೀರದ ಅವಶೇಷಗಳು ಮತ್ತು ಮಾತಂಗ ಬೆಟ್ಟ ಇತ್ಯಾದಿಗಳು

ಹಂಪಿಗೆ ತಲುಪುವುದು ಹೇಗೆ

ರಸ್ತೆಯ ಮೂಲಕ: ಬೆಂಗಳೂರಿನಿಂದ ರಸ್ತೆಮಾರ್ಗದ ಮೂಲಕ ಹಂಪಿಯನ್ನು ತಲುಪಲು ಉತ್ತಮ ಮಾರ್ಗವಾಗಿದೆ. ಎರಡು ಸ್ಥಳಗಳ ನಡುವೆ ಬಹಳಷ್ಟು ಬಸ್ಸುಗಳು ಚಲಿಸುತ್ತವೆ ಮತ್ತು ಕೆಳಗೆ ಚಲಿಸಲು ಬಯಸಿದರೂ ರಸ್ತೆ ಅತ್ಯುತ್ತಮವಾಗಿದೆ.

ರೈಲುಮಾರ್ಗದ ಮೂಲಕ: ಹೊಸಪೇಟೆಯು ಬೆಂಗಳೂರು, ಹೈದರಾಬಾದ್, ಗೋವಾ ಮುಂತಾದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಹತ್ತಿರದ ರೈಲು ನಿಲ್ದಾಣವಾಗಿದೆ. ಹಂಪಿಯಿಂದ ಸುಮಾರು 13 ಕಿಮೀ ದೂರದಲ್ಲಿರುವ ಹೊಸಪೇಟೆಯನ್ನು ತಲುಪಿದ ನಂತರ, ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು.

ವಿಮಾನದ ಮೂಲಕ: ಹಂಪಿಯಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ, ಆದರೆ ನೀವು ವಿಮಾನದಲ್ಲಿ ಪ್ರಯಾಣಿಸಲು ಬಯಸಿದರೆ, ಹತ್ತಿರದ ವಿಮಾನ ನಿಲ್ದಾಣವು 370 ಕಿಮೀ ದೂರದಲ್ಲಿರುವ ಬೆಂಗಳೂರಿನಲ್ಲಿದೆ. ಬೆಂಗಳೂರಿನಿಂದ ರಸ್ತೆ ಅಥವಾ ರೈಲಿನ ಮೂಲಕ ಪ್ರಯಾಣಿಸುವುದು ಆರಾಮದಾಯಕವಾಗಿರುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+