Search
  • Follow NativePlanet
Share
» »3ಡಿ ಆರ್ಟ್ ಮ್ಯೂಸಿಯಂ ನೋಡಿದ್ದೀರಾ?

3ಡಿ ಆರ್ಟ್ ಮ್ಯೂಸಿಯಂ ನೋಡಿದ್ದೀರಾ?

ಈಗೀಗ ಹೆಚ್ಚಿನ ಸಿನಿಮಾಗಳಂತೂ 3ಡಿ ಸಿನಿಮಾಗಳಾಗಿವೆ. ಸಾಮಾನ್ಯವಾಗಿ 2 ಡಿಯಲ್ಲಿ ನೋಡುವ ಸಿನಿಮಾಕ್ಕಿಂತ 3 ಡಿಯಲ್ಲಿ ನೋಡುವ ಸಿನಿಮಾದಲ್ಲಿ ಜಾಸ್ತಿ ಮಜಾ ಬರುತ್ತದೆ. ಸಣ್ಣ ಮಕ್ಕಳಿಗೂ ಕೂಡಾ 3ಡಿ ಸಿನಿಮಾಗಳೆಂದರೆ ಇಷ್ಟವಾಗುತ್ತದೆ. ಅದರಲ್ಲಿರುವ ಎಫೆಕ್ಟ್‌ ಜನರನ್ನು ಅದನ್ನು ಇಷ್ಟಪಡುವಂತೆ ಮಾಡುತ್ತದೆ. ನೀವು ಬರೀ 3ಡಿ ಸಿನಿಮಾಗಳನ್ನು ಮಾತ್ರ ನೋಡಿದ್ದೀರಾ...ಹಾಗಾದ್ರೆ 3ಡಿ ಪೈಂಟಿಂಗ್‌ಗಳನ್ನು ನೋಡಿಲ್ವಾ? ನೋಡಿಲ್ಲಾ ಅಂದ್ರೆ ಇಲ್ಲೊಂದು ಅದ್ಭುತ 3 ಡಿ ಪೈಂಟಿಂಗ್ ಮ್ಯೂಸಿಯಂ ಇದೆ.

ಎಲ್ಲಿದೆ ಈ 3ಡಿ ಆರ್ಟ್ ಮ್ಯೂಸಿಯಂ

ಎಲ್ಲಿದೆ ಈ 3ಡಿ ಆರ್ಟ್ ಮ್ಯೂಸಿಯಂ

PC: Click Art Museum

ಚೆನ್ನೈ ನಗರದ ಈಸ್ಟ್ ಕೋಸ್ಟ್ ಹೆದ್ದಾರಿಯಲ್ಲಿರುವ ದೇಶದ ಅತಿ ದೊಡ್ಡ ಸ್ನೋವ್ ಪಾರ್ಕ್ ಆದ ವಿಜಿಪಿ ಸಂಕೀರ್ಣದಲ್ಲಿ ಈ ಅದ್ಭುತ ಕ್ಲಿಕ್ ಆರ್ಟ್ ಸಂಗ್ರಹಾಲಯವಿದೆ. ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿರು ಈ ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಟ್ರಿಕ್ ಆರ್ಟ್

ಟ್ರಿಕ್ ಆರ್ಟ್

PC:Click Art Museum

ಟ್ರಿಕ್ ಆರ್ಟ್ ಎಂದು ಕರೆಯಲಾಗುವ ಈ ಕಲೆಯು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಇತಿಹಾಸವನ್ನು ಹೊಂದಿದೆ. ಈ ಕಲೆ ಬಲು ಆಕರ್ಷಕವಾಗಿ ಇಂದು ಬಹಳಷ್ಟು ಜನರ ಗಮನ ಸೆಳೆಯುತ್ತಿದೆ.

ಟೊಂಪೆ-ಲ್'ಓಯ್ಲ್

ಟೊಂಪೆ-ಲ್'ಓಯ್ಲ್

PC:Click Art Museum

ಇದನ್ನು ತಾಂತ್ರಿಕವಾಗಿ ಫ್ರೆಂಚ್ ಭಾಷೆಯಲ್ಲಿ ಟೊಂಪೆ-ಲ್'ಓಯ್ಲ್ ಅಂದರೆ ಕಣ್ಣುಗಳನ್ನು ಮೋಸಗೊಳಿಸು ಎಂದಾಗುತ್ತದೆ. ಈ ಕಲೆಯ ಮೂಲ ಉದ್ದೇಶ ಭ್ರಮೆಯನ್ನು ಸೃಷ್ಟಿಸಿ ಇಲ್ಲದ್ದನ್ನು ಇರುವ ಹಾಗೆ ಕಾಣುವಂತೆ ಮಾಡುವುದಾಗಿದೆ.

ಗ್ರೀಕರು ರೋಮನ್ನರು ಬಳಸುತ್ತಿದ್ದರು

ಗ್ರೀಕರು ರೋಮನ್ನರು ಬಳಸುತ್ತಿದ್ದರು

PC:Click Art Museum

ಈ ಕಲೆಯು ಸಾವಿರಾರು ವರ್ಷಗಳ ಹಿಂದೆ ಪ್ರಥಮವಾಗಿ ಗ್ರೀಕರು ಹಾಗೂ ರೋಮನ್ನರು ಬಳಸಿದ್ದರು. ಇವರು ಕೊಠಡಿಗಳು ಚಿಕ್ಕದಿದ್ದರೂ ಅವು ಬಲು ವಿಶಾಲವಾಗಿರುವಂತೆ ಭ್ರಮೆ ಮೂಡಿಸಲು ಈ ರೀತಿಯ ಕಲೆಯನ್ನು ಬಳಸುತ್ತಿದ್ದರೆನ್ನಲಾಗಿದೆ.

ಸಂಪೂರ್ಣ ವಿಳಾಸ

ಸಂಪೂರ್ಣ ವಿಳಾಸ

PC:Click Art Museum

ಈ ಕ್ಲಿಕ್ ಆರ್ಟ್ ಸಂಗ್ರಹಾಲಯದ ಸಂಪೂರ್ಣ ವಿಳಾಸ ಹೀಗಿದೆ : ಕ್ಲಿಕ್ ಆರ್ಟ್ ಮ್ಯೂಸಿಯಂ (ವಿಜಿಪಿ), ಈಸ್ಟ್ ಕೋಸ್ಟ್ ಹೆದ್ದಾರಿ, ಅಕ್ಕರೈ, ಇಂಜಂಬಕ್ಕಂ, ಚೆನ್ನೈ-600115. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂರ್ಕಿಸಬಹುದು.

ನಿಮಗೂ ಇಂತಹ ಅದ್ಭುತ ತ್ರೀಡಿ ಅನುಭವ ನೀಡುವಂತಹ ವೈವಿಧ್ಯಮಯ ಚಿತ್ರಕಲೆಗಳನ್ನು ಅಥವಾ ಚಿತ್ರಸಂಗ್ರಹವನ್ನು ನೋಡುವ ತವಕವಿದ್ದರೆ ಚೆನ್ನೈ ನಗರದಲ್ಲಿರುವ ಕ್ಲಿಕ್ ಆರ್ಟ್ ಸಂಗ್ರಹಾಲಯಕ್ಕೆ ತಪ್ಪದೆ ಭೇಟಿ ನೀಡಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+