Search
  • Follow NativePlanet
Share
» » ಹೆಚ್ಚಿನ ವಿವಾಹಗಳು ಈ ಗುರುವಾಯೂರಪ್ಪನ ಸನ್ನಿಧಿಯಲ್ಲಿ ನಡೆಯುತ್ತೇ ಯಾಕೆ ಗೊತ್ತಾ?

ಹೆಚ್ಚಿನ ವಿವಾಹಗಳು ಈ ಗುರುವಾಯೂರಪ್ಪನ ಸನ್ನಿಧಿಯಲ್ಲಿ ನಡೆಯುತ್ತೇ ಯಾಕೆ ಗೊತ್ತಾ?

ಮದುವೆ ಎನ್ನುವುದು ಗಂಡು ಹೆಣ್ಣಿನ ಒಂದು ಪವಿತ್ರ ಬಂಧವಾಗಿದೆ. ಗಂಡು ಹೆಣ್ಣುಗಳಿಬ್ಬರು ಜೀವನಪರ್ಯಂತ ಕೂಡಿ ಬಾಳ ಬೇಕು, ಅವರ ನಡುವೆ ಯಾವುದೇ ಸಮಸ್ಯೆಗಳು ಉಂಟಾಗಬಾರದು ಎಂಬ ಕಾರಣದಿಂದ ಸರಿಯಾದ ಘಳಿಗೆ, ಮುಹೂರ್ತ ನೋಡಿ ಮದುವೆ ಮಾಡುತ್ತಾರೆ. ಆದರೂ ಕೆಲವು ವಿಘ್ನಗಳು ಜೀವನದಲ್ಲಿ ಎದುರಾಗುತ್ತದೆ. ದೇವಸ್ಥಾನದಲ್ಲಿ ವಿವಾಹವಾದರೆ ಒಳ್ಳೆಯದು ಎನ್ನುತ್ತಾರೆ. ಅಂತಹದ್ದೇ ಒಂದು ವಿಶೇಷ ದೇವಸ್ಥಾನದ ಬಗ್ಗೆ ಇಂದು ನಾವು ಹೇಳ ಹೊರಟಿದ್ದೇವೆ.

ಗುರುವಾಯೂರಪ್ಪ

ಗುರುವಾಯೂರಪ್ಪ

PC:Kuttix

ಕೇರಳದ ಗುರುವಾಯೂರಿನಲ್ಲಿರುವ ಗುರುವಾಯೂರಪ್ಪ ದೇವಾಲಯವು ಮದುವೆ ಕಾರ್ಯಗಳಿಗೆ ಬಹಳ ಶುಭ ಎನ್ನಲಾಗುತ್ತದೆ. ಹಾಗಾಗಿ ಅಲ್ಲಿ ಪ್ರತಿದಿನ ಸಾಕಷ್ಟು ಮದುವೆಗಳು ನಡೆಯುತ್ತವೆ.

ಸಿಂಪಲ್ ಮದುವೆ

ಸಿಂಪಲ್ ಮದುವೆ

ಗಂಡು ಹೆಣ್ಣುಗಳು ಪುರೋಹಿತರ ಮುಂದೆ ನಿಂತು ಹಾರ ಬದಲಾಯಿಸುವ ಮೂಲಕ ಮದುವೆಯಾಗುತ್ತದೆ. ಬಹಳ ಸಿಂಪಲ್ ಮದುವೆ ಇದಾಗಿದೆ. ಇಲ್ಲಿ ತುಳಸಿಯ ಮಾಲೆಯನ್ನು ಹೂವಿನ ಮಾಲೆಯ ಬದಲಿಗೆ ಗಂಡು ಹೆಣ್ಣುಗಳು ಧರಿಸುತ್ತಾರೆ.

ಸೆಲೆಬ್ರಿಟಿಗಳೂ ಇಲ್ಲಿ ಮದುವೆಯಾಗ್ತಾರೆ

ಸೆಲೆಬ್ರಿಟಿಗಳೂ ಇಲ್ಲಿ ಮದುವೆಯಾಗ್ತಾರೆ

ಈ ದೇವಸ್ಥಾನವು ಬಗಳ ಪ್ರಾಚೀನ ಹಾಗೂ ಐತಿಹಾಸಿ ದೇವಾಲಯವಾಗಿದೆ. ಕೇರಳದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಈ ದೇವಾಲಯ ಬಹಳ ಫೇಮಸ್. ಸೆಲೆಬ್ರಿಟಿಗಳೂ ಈ ದೇವಸ್ಥಾನದಲ್ಲಿ ಮದುವೆಯಾಗುತ್ತಾರೆ.

ಗುರುವಾಯೂರಪ್ಪನ ರೂಪದಲ್ಲಿ ಕೃಷ್ಣ

ಗುರುವಾಯೂರಪ್ಪನ ರೂಪದಲ್ಲಿ ಕೃಷ್ಣ


ಇಲ್ಲಿ ವಿವಾಹವಾದರೆ ಒಳ್ಳೆಯದು ಅವರ ಸಂಬಂಧ ಗಟ್ಟಿಯಾಗಿರುತ್ತದೆ ಎನ್ನುವ ಅಭಿಪ್ರಾಯ ಜನರದ್ದು, ಹಾಲ್‌ನಲ್ಲಿ ಮದುವೆಗೆ ದಿನ ಬುಕ್ ಮಾಡುವ ಹಾಗೆಯೇ ಇಲ್ಲೂ ಬುಕ್ಕಿಂಗ್ ಇದೆ. ಇಲ್ಲಿ ಶ್ರೀಕೃಷ್ಣನು ಗುರುವಾಯೂರಪ್ಪ ಎನ್ನುವ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೆ.

ಉನ್ನಿಕೃಷ್ಣನ್

ಉನ್ನಿಕೃಷ್ಣನ್

PC:Arjun.theone

ಕೇರಳದ ತ್ರಿಶೂರ್ ಜಿಲ್ಲೆಯಿಂದ 30 ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಕೃಷ್ಣನನ್ನು ಕನ್ನನ್, ಉನ್ನಿಕೃಷ್ಣನ್ , ಬಾಲಕೃಷ್ಣನ್ ಎಂದೆಲ್ಲಾ ಕರೆಯುತ್ತಾರೆ. ಇಲ್ಲಿನ ಗರ್ಭಗುಡಿಯಲ್ಲಿರುವ ವಿಗ್ರಹವು ೫ ಸಾವಿರ ವರ್ಷ ಹಳೆಯದು ಎನ್ನಲಾಗುತ್ತದೆ.

ತುಲಾಭಾರ

ತುಲಾಭಾರ

PC: Arjun.theone

ಈ ವಿಗ್ರಹವನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಸಹ ಪೂಜಿಸಿದ್ದಾರಂತೆ. ಇದನ್ನು ಪಾತಾಳ ಶಿಲೆಯಿಂದ ತಯಾರಿಸಲಾಗಿದೆ ಎನ್ನಲಾಗುತ್ತದೆ. ಇಲ್ಲಿ ತುಲಾಭಾರವೂ ಮಾಡುತ್ತಾರೆ. ಭಕ್ತರು ತಮ್ಮ ತೂಕಕ್ಕೆ ಸಮಾನಾಗಿ ಹಣ್ಣು, ಬೆಲ್ಲ, ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ.

ಅನ್ನಪ್ರಾಶಾನ

ಅನ್ನಪ್ರಾಶಾನ

PC: Arjun.theone

ಇಲ್ಲಿ ಪ್ರತಿದಿನ ಬಹಳಷ್ಟು ಮಕ್ಕಳಿಗೆ ಅನ್ನಪ್ರಾಶಾನ ಮಾಡಲಾಗುತ್ತದೆ. ಗುರುವಾಯೂರಪ್ಪನ ಸನ್ನಿಧಿಯಲ್ಲಿ ಮೊದಲು ಅನ್ನ ತಿಂದರೆ ಆ ಮಗುವಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎನ್ನುವುದು ಜನರ ವಿಶ್ವಾಸ.

ಆನೆಗಳ ಕ್ಯಾಂಪ್

ಆನೆಗಳ ಕ್ಯಾಂಪ್

PC: Suresh Babunair

ಗುರುವಾಯೂರಪ್ಪನ ಸನ್ನಿಧಿಗೆ ಸ್ವಲ್ಪ ದೂರದಲ್ಲಿ ಆನೆಗಳ ಕ್ಯಾಂಪ್ ಕೂಡಾ ಇದೆ. ಇಲ್ಲಿ ಸಾಕಷ್ಟು ಆನೆಗಳು ಕಾಣಸಿಗುತ್ತವೆ. ಇದೊಂದು ಧಾರ್ಮಿಕ ತಾಣದ ಜೊತೆಗೆ ಪ್ರಮುಖ ಪ್ರವಾಸಿ ತಾಣವೂ ಆಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+