ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಕಾನನದಲ್ಲಿ ನೆಲೆಸಿರುವ ಎಡಕ್ಕಲ್ ಗುಹೆಗಳು ಶಿಲಾಯುಗದ ಮಾನವನ ಕಲೆಯನ್ನು ಪ್ರಚುರಪಡಿಸುವ ಕೆತ್ತನೆಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಏಕೈಕ ತಾಣವಾಗಿದೆ. ಅಲ್ಲದೆ ಇದೊಂದು ವಿನೂತನವಾದ ಪ್ರವಾಸಿ ಕ್ಷೇತ್ರವಾಗಿಯೂ ಗಮನ ಸೆಳೆಯುತ್ತದೆ. ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಿಂದ 25 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಪ್ರಾಚೀನ ಪ್ರಾಕೃತಿಕ ರಚನೆಗಳು 6000 ವರ್ಷಗಳಷ್ಟು ಪುರಾತನವಾದವುಗಳೆಂದು ನಂಬಲಾಗಿದ್ದು ಸಮುದ್ರ ಮಟ್ಟದಿಂದ 1200 ಮೀಟರುಗಳಷ್ಟು ಎತ್ತರದಲ್ಲಿ ನೆಲೆಸಿವೆ.
ತಾಂತ್ರಿಕವಾಗಿ ಹೇಳಬೇಕೆಂದರೆ ಇವು ದೊಡ್ಡ ಬೆಟ್ಟದಿಂದ ಬೇರ್ಪಟ್ಟ ಬಂಡೆಯ ಸೀಳುಗಳಾಗಿದ್ದು ಸರಿ ಸುಮಾರು 96 ಅಡಿಗಳಷ್ಟು ಎತ್ತರ, 22 ಅಡಿಗಳಷ್ಟು ಅಗಲ, 30 ಅಡಿಗಳಷ್ಟು ಆಳವಾಗಿದೆ. ನೋಡಲು ಗುಹೆಗಳಂತೆ ಗೋಚರಿಸುವ ಈ ರಚನೆಗಳಲ್ಲಿ ಅತಿ ಪ್ರಾಚೀನವಾದ ಶಿಲಾ ಕೆತ್ತನೆಗಳನ್ನು ಕಾಣಬಹುದಾಗಿದೆ.

ಹೊರವಲಯ:
ದೂರದಿಂದ ಗೋಚರಿಸುವ ಪಶ್ಚಿಮ ಘಟ್ಟಗಳಲ್ಲಿರುವ ಎಡಕ್ಕಲ್ ಗುಹೆಗಳಿರುವ ಬೆಟ್ಟದ ನೋಟ.
ಚಿತ್ರಕೃಪೆ: BostonMA

ಪ್ರವಾಸಿ ತಾಣ:
ಬೆಟ್ಟಗಳ ಮಧ್ಯದಲ್ಲಿರುವ ಚಿಕ್ಕ ರಂಧ್ರದೊಳು ಒಳ ಪ್ರವೇಶಿಸುವುದೆ ಒಂದು ರೋಮಾಂಚನವಾಗುವ ಅನುಭವ. ಅನೇಕ ಪ್ರವಾಸಿಗರನ್ನು ಈ ತಾಣ ಸೆಳೆಯುತ್ತದೆ.
ಚಿತ್ರಕೃಪೆ: Aravind K G

ಸುಗಮ ಸಂಚಾರ:
ಗುಹೆಯೊಳಗೆ ಸಂಚರಿಸಲು ಪ್ರವಾಸಿಗರಿಗೆ ಅನುವಾಗುವಂತೆ ನಿರ್ಮಿಸಲಾದ ಮೆಟ್ಟಿಲುಗಳು.
ಚಿತ್ರಕೃಪೆ: Sreejith K

ತಲ್ಲೀನ:
ಪುರಾತನ ಶಿಲಾ ರಚನೆ ಹಾಗು ಕೆತ್ತನೆಗಳನ್ನು ತನ್ಮಯದಿಂದ ವೀಕ್ಷಿಸುತ್ತಿರುವ ಪ್ರವಾಸಿಗರು.
ಚಿತ್ರಕೃಪೆ: Satheesan.vn

ರೋಚಕ:
ಅಂಕು ಡೊಂಕಾದ ಶಿಲಾ ರಚನೆಗಳು...ಹತ್ತಿಳಿಯುತ್ತ ಚಲಿಸುವುದೆ ಒಂದು ಮೋಜಿನ ಅನುಭವ.
ಚಿತ್ರಕೃಪೆ: Drajay1976

ಛಾವಣಿ:
ಛಾವಣಿಯಂತೆ ಪ್ರಾಕೃತಿಕವಾಗಿ ಸ್ಥಿತಗೊಂಡಿರುವ ಬೃಹತ್ ಬಂಡೆಗಳು.
ಚಿತ್ರಕೃಪೆ: Abin jv

ಒಂದು ನೋಟ:
ಸೂರ್ಯನ ರಶ್ಮಿಗೂ ತಡೆ ಒಡ್ಡುವ ಶಿಲಾ ರಚನೆಗಳು.
ಚಿತ್ರಕೃಪೆ: Aravind K G

ದಿಗ್ಭ್ರಮೆ:
ದಿಗ್ಭ್ರಮೆ ಮೂಡಿಸುವಂತಹ ಒಂದರ ಮೇಲೊಂದು ಇಟ್ಟೂ ಇಲ್ಲದಂತಿರುವ ಶಿಲಾ ಬಂಡೆಗಳು.
ಚಿತ್ರಕೃಪೆ: Aravind K G

ಸುತ್ತಲಿನ ನೋಟ:
ಬೆಟ್ಟದ ಮೇಲಿಂದ ಸುಂದರವಾಗಿ ಕಾಣಿವ ಸುತ್ತ ಮುತ್ತಲಿನ ಪರಿಸರ.
ಚಿತ್ರಕೃಪೆ: Vinayaraj

ಮೆಟ್ಟಿಲುಗಳ ದಾರಿ:
ಬೆಟ್ಟವನ್ನು ಸುಗಮವಾಗಿ ಹತ್ತಲು ನಿರ್ಮಿಸಲಾಗಿರುವ ಮೆಟ್ಟಿಲುಗಳು.
ಚಿತ್ರಕೃಪೆ: Drajay1976

ಶಿಲಾ ಕೆತ್ತನೆಗಳು:
ಶಿಲಾ ಯುಗದ ಮಾನವನಿಂದ ಬಿಡಿಸಲಾದ ಎಂದು ನಂಬಲಾಗಿರುವ ಬಂಡೆ ಕಲ್ಲಿನ ಮೇಲಿನ ಕೆತ್ತನೆಗಳು.
ಚಿತ್ರಕೃಪೆ: Satheesan.vn


Click it and Unblock the Notifications

















