Search
  • Follow NativePlanet
Share
» »ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

By Sowmyabhai

ಭಾರತದಲ್ಲಿ ಮಹಾಭಾರತಕ್ಕೆ ಒಂದು ಪ್ರತ್ಯೇಕವಾದ ಸ್ಥಾನವಿದೆ. ಧರ್ಮಕ್ಕೂ-ಅಧರ್ಮಕ್ಕೂನಡುವೆ ನಡೆದ ಯುದ್ಧವೇ ಕುರುಕ್ಷೇತ್ರವಾಗಿದೆ. ಮಹಾಭಾರತದಲ್ಲಿ ಪ್ರತಿಯೊಂದು ಪಾತ್ರವುತನ್ನದೇ ಆದ ಮಹತ್ವವನ್ನು ಹಾಗು ವಿಶೇಷತೆಯನ್ನು ಪಡೆದುಕೊಂಡಿದೆ. ಧರ್ಮದ ಪರವಾಗಿಪಾಂಡವರು ಇದ್ದರೆ, ಅಧರ್ಮದ ಪರವಾಗಿ ಕೌರವರು ಇದ್ದರು. ಹಾಗಾಗಿಯೇ ಕುರುಕ್ಷೇತ್ರದಲ್ಲಿಕೌರವರನ್ನು ಸೋಲಿಸಿ ಪಾಂಡವರು ಮತ್ತೇ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡರುಆಶ್ಚರ್ಯ ಏನಪ್ಪ ಎಂದರೆ ಪಾಂಡವರನ್ನು ಮಹಾನುಭಾವರಾಗಿ ಕಂಡರೂ ಕೂಡ ಅವರಿಗಾಗಿ ಯಾವುದೇಪ್ರತ್ಯೇಕವಾದ ದೇವಾಲಯಗಳು ಇಲ್ಲದೇ ಇರುವುದನ್ನು ಕಾಣಬಹುದು.

ಆದರೆ ಇಲ್ಲೊಂದು ವಿಶೇಷವಾದ ದೇವಾಲಯವಿದೆ. ಆ ಮೂರು ಕೋಟಿ ದೇವಾಲಯಗಳಲ್ಲಿ ಇದೊಂದು ಪ್ರತ್ಯೇಕವಾದ ದೇವರು ಎಂದೇ ಹೇಳಬಹುದು. ಮತ್ತೇ ಯಾವ ದೇವತೆಯು ಅಲ್ಲ, ಬದಲಾಗಿದುರ್ಯೋಧನನ ದೇವಾಲಯವಾಗಿದೆ. ಇದೆನಪ್ಪ ದುರ್ಯೋಧನನ ದೇವಾಲಯವೇ ಎಂದುಆಶ್ಚರ್ಯಗೊಳ್ಳುತ್ತಿದ್ದಿರಾ? ಹಾಗಾದರೆ ಲೇಖನದ ಮೂಲಕ ಆತನ ದೇವಾಲಯ ಎಲ್ಲಿದೆ?ಆತನಿಗಾಗಿಯೇ ಎಂದು ಪ್ರತ್ಯೇಕವಾದ ದೇವಾಲಯ ನಿರ್ಮಾಣ ಮಾಡಲು ಕಾರಣವೇನು? ಎಂಬುದನ್ನುಸವಿಸ್ತಾರವಾಗಿ ಲೇಖನದ ಮೂಲಕ ತಿಳಿದುಕೊಳ್ಳೊಣ.

1.ಎಲ್ಲಿದೆ?

1.ಎಲ್ಲಿದೆ?

PC:YOUTUBE

ಉತ್ತರಾಂಚಲವು ಎತ್ತರವಾದ ಮಂಜಿನ ಪರ್ವತಕ್ಕೆ, ಪ್ರಕೃತಿ ಸೌಂದರ್ಯಕ್ಕೆಪ್ರಸಿದ್ಧಿಯಾದುದು. ಅಲ್ಲಿ ಮುಖ್ಯ ಪಟ್ಟಣವಾದ ಡೆಹರಾಡೂನ್‍ಗೆ 216 ಕಿ.ಮೀ ದೂರದಲ್ಲಿರುವಜಾಕೊಲ್ ಎಂಬ ಗ್ರಾಮದ ಪ್ರಜೆಗಳು ದುರ್ಯೋಧನನ್ನು ತಮ್ಮ ಆರಾಧ್ಯ ದೈವವಾಗಿಆರಾಧಿಸುತ್ತಾರೆ. ಮುಖ್ಯವಾಗಿ ಇಲ್ಲಿ ನಿವಾಸಿಸುವ ಮೇರಿ ಎಂಬ ಜಾತಿಯವರು ದುರ್ಯೋಧನನುತಮ್ಮ ಪೂರ್ವಿಕನೆಂದೂ, ಅವರ ಜಾತಿ ಆದಿ ಪುರುಷನೆಂದು ಹೇಳುತ್ತಾರೆ.

2.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

2.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ತಾವು ಕೌರಕ ವಂಶಕ್ಕೆ ಸೇರಿದವರು ಎಂದೂ, ಹಾಗಾಗಿಯೇ ತಮ್ಮ ಕುಲದೈವವಾಗಿ ದುರ್ಯೋಧನನ್ನುಆರಾಧಿಸುತ್ತೆವೆ ಎಂದು ಹೇಳುತ್ತಾರೆ. ಹಾಗಾಗಿಯೇ ಸುಯೋಧನನಿಗೆ ಜಾಕೊಲ್‍ನಲ್ಲಿ ಒಂದುದೇವಾಲಯ ಕೂಡ ನಿರ್ಮಾಣ ಮಾಡಿದ್ದಾರೆ. ಈ ದೇವಾಲಯದ ಸಮೀಪದಲ್ಲಿ ಟೋನ್ಸ್ ಎಂಬ ನದಿ ಕೂಡ ಇದೆ.

3. ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

3. ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಒಂದು ಕಾಲದಲ್ಲಿ ಈ ನದಿಯನ್ನು ಥಾಮಸ್ ಎಂದು ಕೂಡ ಕರೆಯುತ್ತಿದ್ದರು. ಸಂಸ್ಕøತದಲ್ಲಿಥಾಮಸ್ ಎಂದರೆ ಶೋಕ ಎಂದು ಅರ್ಥವಿದೆ. ಕುರುಕ್ಷೇತ್ರಯುದ್ಧದಲ್ಲಿ ಕೌರವರು ಸೋತರು ಎಂಬವಾರ್ತೆಯನ್ನು ಕೇಳಿ ಅಲ್ಲಿನ ಪ್ರಜೆಗಳು ಕೆಲವು ತಿಂಗಳ ಕಾಲ ತೀವ್ರವಾಗಿ ರೋಧನೆಪಟ್ಟರಂತೆ. ಅವರ ಕಣ್ಣೀರೇ ಈ ನದಿಯಾಗಿ ಹುಟ್ಟಿತು ಎಂದೂ, ಹಾಗಾಗಿಯೇ ಅದಕ್ಕೆ ಥಾಮಸ್ ಎಂಬಹೆಸರು ಬಂದಿತು ಎಂದು ಹೇಳಲಾಗುತ್ತದೆ. ಕಾಲಾನಂತರ ಟೋನ್ಸ್ ಎಂಬ ಹೆಸರು ಮಾರ್ಪಾಟಾಯಿತುಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.

4.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

4.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಹಾಗಾಗಿಯೇ ಇಂದಿಗೂ ಅಲ್ಲಿನ ಪ್ರಜೆಗಳು ಆ ನದಿಯಲ್ಲಿನ ನೀರನ್ನು ಕುಡಿಯಲುಉಪಯೋಗಿಸುವುದಿಲ್ಲ. ದುರ್ಯೋಧನನ ಆರಾಧನೆಯು ಕೇವಲ ಇಲ್ಲಿನವರು ಮಾತ್ರವೇ ಅಲ್ಲದೇ,ಬಾಲಗಂಗಾ, ಬಿಲ್ ಗಂಗಾ, ಯಮುನ, ಭಾಗಿರಥಿ ಎಂಬ ಕಣಿವೆಗಳಲ್ಲಿ ವಾಸಿಸುತ್ತಿರುವವರು ಕೂಡಆತನಿಗೆ ಆರಾಧನೆ ಮಾಡುತ್ತಾರೆ.

5.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

5.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಈ ಕಣಿವೆಯಲ್ಲಿನ ಹಾರಿಕಿಧುನ್. ಓಸ್ಲಾ, ಗಂಗಾರ್, ದತ್ ಮೆರ್‍ನಲ್ಲಿಯೂ ಕೂಡದುರ್ಯೋಧನನಿಗೆ ದೇವಾಲಯವನ್ನು ನಿರ್ಮಾಣ ಮಾಡಿ ಪೂಜಿಸುತ್ತಿದ್ದಾರೆ. ಅಷ್ಟೇ ಅಲ್ಲಜಾಕೊಲ್‍ನಲ್ಲಿ ಸಯಾನಾ, ಬಲ್ಜಿ ಎಂಬ ಸ್ಥಾನಿಕರು ಆಷಾಢ ಮಾಸದಿಂದ ಪುಷ್ಯ ತಿಂಗಳವರೆಗೆದುರ್ಯೋಧನ ಯಾತ್ರೆಯನ್ನು ನಿರ್ವಹಿಸುತ್ತಾರೆ.

6.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

6.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಈ ಯಾತ್ರೆ ಜೊಕಲ್‍ನಿಂದ ಪ್ರಾರಂಭವಾಗಿ ಆ ಸುತ್ತಮುತ್ತಲ ಗ್ರಾಮದಲ್ಲಿ ತಿರುಗಿ ಸಂಭ್ರಮಆಚರಣೆ ಮಾಡುತ್ತಾರೆ. ಈ ಸಂದರ್ಭವಾಗಿ ಸುಯೋಧನ ಯಾತ್ರೆ ಯಾವ ಊರಿನಲ್ಲಿ ಇರುತ್ತದೆಯೋ ಆಗ್ರಾಮದಲ್ಲಿ ಅತ್ಯಂತ ವೈಭವೊಪೇತವಾಗಿ ಸಂಭ್ರಮ ಆಚರಣೆ ಮಾಡುತ್ತಾರೆ. ಹಾಗೆ ಎಲ್ಲಾಗ್ರಾಮಗಳು ತಿರುಗಿ ಮತ್ತೆ ದುರ್ಯೋಧನನ ಯಾತ್ರೆ ಜಾಕೊಲ್‍ನಲ್ಲಿ ಕೊನೆಗೊಳಿಸುತ್ತಾರೆ.

7.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

7.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಇಲ್ಲಿನವರು ದುರ್ಯೋಧನ ಎಷ್ಟು ಪೂಜಿಸಲು ಕಾರಣವೆನೆಂದರೆ ಒಂದು ಚಾರಿತ್ರಿಕ ಸಂಘಟನೆಗೆಸಂಬಂಧಿಸಿದೆಯಂತೆ. ಮಹಾಭಾರತ ಕಾಲದಲ್ಲಿ ದೇಶ ಪರ್ಯಾಟನೆ ಮಾಡುತ್ತಿದ್ದ, ಕೌರವಚಕ್ರವರ್ತಿ ಸುಯೋಧನನು ಈ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನುಕಂಡು ಮಂತ್ರ ಮುಗ್ಧನಾಗಿ ಅನೇಕ ದಿನಗಳ ಕಾಲ ಅಲ್ಲಿಯೇ ಕಾಲಕಳೆದನಂತೆ.

8.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

8.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಆ ಸಮಯದಲ್ಲಿ ಒಮ್ಮೆ ದೇವರ ಪೂಜೆಯಲ್ಲಿರುವ ದುರ್ಯೋಧನನಿಗೆ ದೇವರ ವಾಣಿಯು ಹೀಗೆ ಹೇಳಿತು," ಓ ದುರ್ಯೋಧನ ಇಲ್ಲಿನ ಪ್ರಜೆಗಳು ಕಡು ದಾರಿದ್ರ್ಯದಲ್ಲಿದ್ದಾರೆ. ಹಾಗಾಗಿ ಅವರಒಳ್ಳೆಯದನ್ನು ನೀನೆ ನೋಡಿಕೊಳ್ಳಬೇಕು ಎಂದು ಹೇಳಿತಂತೆ". ಅಂದಿನಿಂದ ದುರ್ಯೋಧನ ಈಪ್ರದೇಶದಲ್ಲಿನ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನಂತೆ. ಹಾಗಾಗಿಯೇ ಅವರುದುರ್ಯೋಧನನ್ನು ತಮ್ಮ ಆರಾಧ್ಯ ದೈವವಾಗಿ ಪೂಜಿಸುತ್ತಾರೆ.

9.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

9.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಅಷ್ಟೇ ಅಲ್ಲ ಇಂದಿಗೂ ಈ ಪ್ರದೇಶದ ಪಂಚಾಯಿತಿಯಲ್ಲಿ ಯಾವುದಾದರೂ ಜಗಳದಿಂದ ತೀರ್ಪೂ ಯಾವಕಡೆಯು ಆಗದೇ ಇದ್ದರೆ ದುರ್ಯೋಧನನ ಆತ್ಮವನ್ನು ಆಹ್ವಾನ ಮಾಡಿ ಸ್ವಯಂ ಆತನಿಂದಲೇತೀರ್ಪನ್ನು ಹೇಳಿಸುತ್ತಾರಂತೆ. ಹಾಗೇ ದುರ್ಯೋಧನನ ಆತ್ಮವನ್ನು ಆಹ್ವಾನೆ ಮಾಡಿಕೊಳ್ಳುವವ್ಯಕ್ತಿಯನ್ನು ಮಾಲಿ ಎಂದು ಕರೆಯುತ್ತಾರೆ.

10.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

10.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಇನ್ನು ದಕ್ಷಿಣ ಭಾರತದ ವಿಷಯಕ್ಕೆ ಬಂದರೆ ಕೇರಳದಲ್ಲಿನ ಕೊಲ್ಲಂ ಜಿಲ್ಲೆಯಲ್ಲಿನ ಪೊರುವಜಿಗ್ರಾಮದಲ್ಲಿನ ಪೊರುವಜಿ ಪೆರುವಿರಿತ್ತಿ ಮಲನಾಡ ಎಂಬ ದೇವಾಲಯವಿದೆ. ಈ ದೇವಾಲಯದಲ್ಲಿನಪ್ರಧಾನವಾದ ದೇವತಾ ಮೂರ್ತಿ ದುರ್ಯೋಧನನೇ. ಆದರೆ ಈ ದೇವಾಲಯವು ಸಾಧಾರಣವಾದ ದೇವಾಲಯಗಳಂತೆಅಲ್ಲದೆ ಅತ್ಯಂತ ವಿಭಿನ್ನವಾಗಿರುತ್ತದೆ.

11.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

11.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಈ ದೇವಾಲಯಕ್ಕೆ ಗೋಪುರವಾಗಲೀ, ವಿಗ್ರಹವಾಗಲೀ ಇರುವುದಿಲ್ಲ. ಅಲ್ಲಿ ಕೇವಲ ಒಂದು ಕಲ್ಲಿನಮಂಟಪದಂತಹ ನಿರ್ಮಾಣ ಒಂದು ಇರುತ್ತದೆ. ಆ ಮಂಟಪವನ್ನು ದುರ್ಯೋಧನ ಎಂದು ಆರಾಧಿಸುತ್ತಾರೆ.ಈ ದೇವಾಲಯದಲ್ಲಿ ದುರ್ಯೋಧನನ್ನು ಮಲಯಕುಪ್ಪಂ ಎಂಬ ಹೆಸರಿನಿಂದ ಕರೆಯುತ್ತಾರೆ.

12.ದೇವಾಲಯದ ವಿಶೇಷಗಳು

12.ದೇವಾಲಯದ ವಿಶೇಷಗಳು

PC:YOUTUBE

ಈ ದೇವಾಲಯದಲ್ಲಿ ಅನೇಕ ಬಗೆಯ ವಿಶೇಷಗಳು ನಡೆಯುತ್ತವೆ. ಎಲ್ಲಾ ದೇವಾಲಯಗಳಲ್ಲಿಬ್ರಾಹ್ಮಣರು ಪೂಜೆಗಳನ್ನು ನಿರ್ವಹಿಸಿದರೆ ಈ ದೇವಾಲಯದಲ್ಲಿ ಮಾತ್ರ ದಲಿತರು ಪೂಜೆಗಳನ್ನುನಿರ್ವಹಿಸುತ್ತಾರೆ. ಅನೇಕ ಕಾಲದಿಂದಲೂ ಪದ್ಧತಿಯಾಗಿ ಅನುಸರಿಸಿಕೊಂಡು ಬರುತ್ತಿರುವಕಡುತೆಸರಿ ಎಂಬ ಕುಟುಂಬಿಕರು ಈ ದೇವಾಲಯದಲ್ಲಿ ದುರ್ಯೋಧನನ್ನು ಆರಾಧಿಸುತ್ತಾರೆ.

13.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

13.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಅಷ್ಟೇ ಅಲ್ಲ ಈ ದೇವಾಲಯದಲ್ಲಿ ಕೊಬ್ಬರಿಕಾಯಿ ಒಡೆಯುವುದಿಲ್ಲ. ಅದಕ್ಕೆ ಬದಲಾಗಿಮಾಂಸವನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಆದರೆ ಜಂತುಗಳನ್ನು ಬಲಿ ನೀಡುವುದು ನಿಷೇಧಮಾಡಿದ್ದರಿಂದ ಕೆಲವು ಬಗೆಯ ಶಾಖಾ ಆಹಾರವನ್ನು ಪ್ರಸಾದವನ್ನಾಗಿ ಸಮರ್ಪಿಸುತ್ತಾರೆ.

14.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

14.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಈ ದೇವಾಲಯಕ್ಕೆ 25 ಮಂದಿ ಕಮಿಟಿ ಸಭ್ಯರು ಕೂಡ ಇದ್ದಾರೆ. ಇವರ ಮೂಖಾಂತರವೇ ಈ ದೇವಾಲಯದಲ್ಲಿ ಎಲ್ಲಾ ಕಾರ್ಯಗಳು ನಡೆಯುತ್ತವೆ. ಪ್ರತಿ ವರ್ಷ ಮಾರ್ಚ್‍ನಲ್ಲಿ ಈದೇವಾಲಯದಲ್ಲಿ ದುರ್ಯೋಧನನಿಗೆ ಹಬ್ಬ ಕೂಡ ಆಚರಿಸುತ್ತಾರೆ.

15.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

15.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಆ ಸಮಯದಲ್ಲಿ ದುರ್ಯೋಧನನ್ನು ಸಂತೃಪ್ತಿಗೊಳಿಸಲು ಒಂದು ಮನೆಯನ್ನು ನಿರ್ಮಾಣ ಮಾಡಿಅದನ್ನು ಸುಡುತ್ತಾರೆ. ಆ ಗ್ರಾಮದಲ್ಲಿ ವಸೂಲಿ ಮಾಡುವ ಹಣವನ್ನು ಕೂಡ ದುರ್ಯೋಧನಮಹಾರಾಜನಿಗೆ ನೀಡುತ್ತಿರುವುದಾಗಿ ಭಾವಿಸುತ್ತಾರೆ ಅಲ್ಲಿನವರು.

16.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

16.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಅಲ್ಲಿ ದುರ್ಯೋಧನನಿಗೆ ಪೂಜಿಸುವುದಕ್ಕೆ ಅನೇಕ ಕಥೆಗಳು ಪ್ರಚಾರದಲ್ಲಿದೆ. ಒಂದು ಕಥೆಮಾತ್ರ ಅತ್ಯಂತ ಪ್ರಚಾರದಲ್ಲಿದೆ. ಅದೆನೆಂದರೆ ಒಮ್ಮೆ ದುರ್ಯೋಧನನಿಗೆ ತೀವ್ರವಾಗಿದಾಹವಾಯಿದ್ದರಿಂದ ಅಲ್ಲಿರುವ ಒಂದು ಮನೆಯ ಹತ್ತಿರ ಹೋಗಿ ಕುಡಿಯುವ ನೀರು ಕೇಳಿ ಆಮನೆಯಲ್ಲಿರುವ ಮುದುಕಿಯು ನೀರು ತಂದುಕೊಟ್ಟಳಂತೆ.

17.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

17.ಅಲ್ಲಿ ಇಂದಿಗೂ ದುರ್ಯೋಧನನೇ ದೇವರು..

PC:YOUTUBE

ಮಹಾಭಾರತದಲ್ಲಿ ಅತಿ ದೊಡ್ಡ ವಿಲನ್ ಆಗಿ ಹೆಸರುವಾಸಿಯಾದ ದುರ್ಯೋಧನನು ಈ ಪ್ರದೇಶಕ್ಕೆಮಾಡಿದ ಒಳ್ಳೆಯ ಕೆಲಸದಿಂದಾಗಿ ಅಲ್ಲಿನ ಪ್ರಜೆಗಳು ಆತನನ್ನು ಆರಾಧ್ಯ ದೈವವಾಗಿ ಆರಾಸಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more