Search
  • Follow NativePlanet
Share
» »ಭಾರತದ ಅತಿ ದೊಡ್ಡ ಧಾರಾವಿ ಕೊಳಗೇರಿ

ಭಾರತದ ಅತಿ ದೊಡ್ಡ ಧಾರಾವಿ ಕೊಳಗೇರಿ

By Vijay

ಅರೇ ಇದೇನಪ್ಪಾ ಸ್ಲಮ್ ಅಥವಾ ಕೊಳಗೇರಿ ಪ್ರದೇಶಗಳ ಕುರಿತು ಪ್ರವಾಸ ಲೇಖನವೆ ಎಂದು ಹುಬ್ಬೇರಿಸಬೇಡಿ. ಇದೂ ಸಹ ಒಂದು ಪ್ರವಾಸ ಚಟುವಟಿಕೆಯಾಗಿದೆ. ಆದರೆ ಕೊಳಗೇರಿ ಪ್ರವಾಸೋದ್ಯಮ ಇಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಹು ಬೇಡಿಕೆಯ ಪ್ರವಾಸೋದ್ಯಮದ ಅಂಶವಾಗಿದೆ. ಸ್ಲಮ್ ಅಥವಾ ಕೊಳೆಗೇರಿ ಪ್ರದೇಶಗಳು ಮಹಾನಗರಗಳಲ್ಲಿ ಸಾಮಾನ್ಯವಾಗಿ ಕಂಡು ಬಂದೆ ಬರುತ್ತವೆ. ಇಲ್ಲಿರುವ ಸಂಕೀರ್ಣ ಪರಿಸ್ಥಿತಿಗಳು, ವಾತಾವರಣ, ಜೀವನ ಶೈಲಿ ಮುಂತಾದವುಗಳು, ಇಂದು ಸಂಶೋಧಕರ ಹಾಗೂ ಕೆಲ ಆಸಕ್ತಿಕರ ಪ್ರವಾಸಿಗರ ಪಾಲಿಗೆ ಭೇಟಿ ನೀಡಲು ಪ್ರಮುಖ ಕಾರಣಗಳಾಗಿವೆ.

ಎಕ್ಸ್ಪೆಡಿಯಾದಲ್ಲಿ ಫ್ಲೈಟ್ ಬುಕ್ ಮಾಡಿ 50% ಕಡಿತ ಪಡೆಯಿರಿ, ತ್ವರೆ ಮಾಡಿ

ಕೆಲ ಸರ್ಕಾರೇತರ ಸಂಸ್ಥೆಗಳು, ಇಂತಹ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತವೆ ಹಾಗೂ ಮುಕ್ತ ಮನಸ್ಸಿನ ಹಲವಾರು ಸ್ವಯಂ ಸೇವಕರೂ ಕೂಡ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಕೊಳೆಗೇರಿ ಪ್ರದೇಶಗಳಿಗೆ ತೆರಳುತ್ತಿರುತ್ತಾರೆ. ಪ್ರಸ್ತುತ ಲೇಖನವು ಮುಂಬೈನ ಬಹು ಪ್ರಖ್ಯಾತ ಧಾರಾವಿ ಸ್ಲಮ್ ಅಥವಾ ಕೊಳೆಗೇರಿ ಪ್ರದೇಶದ ಕುರಿತು ತಿಳಿಸುತ್ತದೆ. ವಿಶೇಷವೆಂದರೆ ಈ ಕೊಳೆಗೇರಿ ಪ್ರದೇಶಕ್ಕೆ ಭೇಟಿ ನೀಡಲು ಹಲವು ಪ್ರವಾಸ ಸಂಸ್ಥೆಗಳು ವಿವಿಧ ಪ್ರವಾಸಗಳನ್ನು ಏರ್ಪಡಿಸುತ್ತಿರುತ್ತವೆ.

ವಿಶೇಷ ಲೇಖನ : ಮುಂಬೈ ನಗರದ ಮಾಯಾ ಜೀವನ

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಧಾರಾವಿ ಭಾರತದ ಅತಿ ದೊಡ್ಡ ಸ್ಲಮ್ ಪ್ರದೇಶವಾಗಿರುವುದಲ್ಲದೆ ವಿಶ್ವದಲ್ಲಿಯೂ ಸಹ ಅತಿ ದೊಡ್ಡದಾದ ಕೊಳೆಗೇರಿ ಪ್ರದೇಶಗಳ ಪೈಕಿ ಒಂದಾಗಿದೆ. ಬ್ರಿಟಿಷ್ ವಸಾಹತು ಇದ್ದ ಕಾಲದಲ್ಲಿ ಅಂದರೆ ಸುಮಾರು 1882 ರ ಸಮಯದಲ್ಲಿ ಈ ಕೊಳಗೇರಿ ಪ್ರದೇಶದ ಜನನವಾಯಿತು. ಗ್ರಾಮಾಂತರ ಪ್ರದೇಶಗಳಿಂದ ಬದುಕು ಅರಿಸಿ ವಲಸೆ ಬಂದ ಜನಗಳೆ ಇದರ ಜನನಕ್ಕೆ ಪ್ರಮುಖ ಕಾರಣ.

ಚಿತ್ರಕೃಪೆ: Mike Towber

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಇಲ್ಲಿ ವಿವಿಧ ಧರ್ಮದ, ವಿವಿಧ ಸಂಸ್ಕೃತಿಯ ವೈವಿಧ್ಯಮಯ ಜನರು ವಾಸಿಸುತ್ತಾರೆ. ಅಂತೆಯೆ ಧಾರಾವಿ ತನ್ನದೆ ಆದ ಒಂದು ವಿಶಿಷ್ಟ ಸಂಸ್ಕೃತಿಯನ್ನೆ ಹೊಂದಿದೆ ಎಂದು ಹೇಳಬಹುದು. ಧಾರಾವಿಯ ಪ್ರಸ್ತುತ ಜನಸಂಖ್ಯೆ ಇಂದು ಮಿಲಿಯನ್ ಗಿಂತಲೂ ಅಧಿಕವಾಗಿದೆ.

ಚಿತ್ರಕೃಪೆ: rusticus80

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಈ ರೀತಿಯ ಅತ್ಯಧಿಕ ಜನಸಂಖ್ಯೆಯು ಈ ಕೊಳಗೇರಿಯನ್ನು ಪ್ರಪಂಚದಲ್ಲಿಯೆ ಅತಿ ದೊಡ್ಡ ಜನಸಾಂದ್ರತೆಯುಳ್ಳ ಪ್ರದೇಶವನ್ನಾಗಿ ಮಾಡಿದೆ. ಈ ಕೊಳಗೇರಿಯಲ್ಲಿ ಸಾಕಷ್ಟು ಸಣ್ಣ ಪುಟ್ಟ ಗುಡಿ ಕೈಗಾರಿಕೆಗಳು ನಡೆಯುತ್ತಿದ್ದು, ಸ್ಲಮ್ ನ ಜನರು ಈ ಕೈಗಾರಿಕೆಗಳಿಂದ ಬದುಕು ಸಾಗಿಸುತ್ತಿದ್ದಾರೆ.

ಚಿತ್ರಕೃಪೆ: M M

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಇಲ್ಲಿ ಬಹುವಾಗಿ ಸ್ಥಳೀಯವಾಗಿ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಅವುಗಳನ್ನು ದೇಶದೆಲ್ಲೆಡೆ ಹಾಗೂ ಇತರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಈ ಸ್ಲಮ್ ಪ್ರದೇಶದ ವಾರ್ಷಿಕ ವಹಿವಾಟು ಸುಮಾರು 300 ಕೋಟಿ ರೂಪಾಯಿಗಳಷ್ಟಿದೆ ಎಂದರೆ ನೀವೇ ಉಹಿಸಬಹುದು, ಯಾವ ರೀತಿಯಲ್ಲಿ ಇಲ್ಲಿನ ಚಿಕ್ಕ ಪುಟ್ಟ ಕೈಗಾರಿಕೆಗಳು ಚುರುಕಾಗಿವೆ ಎಂದು.

ಚಿತ್ರಕೃಪೆ: M M

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

18 ನೆಯ ಶತಮಾನದಲ್ಲಿ ಧಾರಾವಿ ಒಂದು ಮ್ಯಾಂಗ್ರೋವ್ ಕಾಡುಗಳುಳ್ಳ ದ್ವೀಪವಾಗಿತ್ತು. ಇಲ್ಲಿ ಮುಖ್ಯವಾಗಿ ಕೋಳಿ ಜನಾಂಗದ ಬೆಸ್ತರು ವಾಸಿಸುತ್ತಿದ್ದರು. ನಂತರ ಮರಾಠಾ ಸಾಮ್ರಾಜ್ಯದ ಪೇಶ್ವಾ ಸಂಸ್ಥಾನದ ಚಿಮ್ನಾಜಿ ಅಪ್ಪಾ ಎಂಬುವವರು ಈ ಸ್ಥಳವನ್ನು ವಶಪಡಿಸಿಕೊಂಡರು.

ಚಿತ್ರಕೃಪೆ: Leonora Enking

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಎಲ್ಲ ಧರ್ಮಗಳ, ವಿವಿಧ ಜಾತಿಗಳ ಜನರು ಇಂದು ಧಾರಾವಿಯಲ್ಲಿ ಕಂಡುಬರುತ್ತಾರೆ. ಚರ್ಮೋತ್ಪನಗಳಿಂದ ಹಿಡಿದು ಉಡುಪುಗಳವರೆಗೆ ವೈವಿಧ್ಯಮಯ ಕೈಗಾರಿಕೆಗಳು ಇಲ್ಲಿ ಕಂಡುಬರುತ್ತವೆ. ಪ್ರಾಣಿ ಚರ್ಮಕ್ಕೆ ಸಂಬಂಧಿಸಿದಂತೆ ಹೆಚ್ಚು ಕೈಗಾರಿಕೆಗಳು ಇಲ್ಲಿದ್ದು, ಇಲ್ಲಿರುವ ವಾತಾವರಣ ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತವೆ.

ಚಿತ್ರಕೃಪೆ: ☻☺

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

1960 ರ ಸಮಯದಲ್ಲಿ ಈ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಜನರಿಗೆ ಸುಧಾರಿತ ಹಾಗೂ ಗುಣಮಟ್ಟದ ವಾಸಕ್ಕೆಂದು ಸಹಕಾರಿ ಸಂಘಗಳಿಂದ ವಸತಿ ಸಂಕೀರ್ಣಗಳು ನಿರ್ಮಾಣಗೊಂಡವು. ಇಂದು ಬ್ಮುಂಬೈ ನಗರವು ಸಾಕಷ್ಟು ಬೆಳೆದಿದ್ದು ಧಾರಾವಿ ಸಹ ಅದರ ಒಂದು ಭಾಗವಾಗಿದೆ. ಅಂತೆಯೆ ಇಲ್ಲಿನ ಸ್ಥಳೀಯ ಆರ್ಥಿಕ ವ್ಯವಸ್ಥೆಯ ಮೇಲೆ ಧಾರಾವಿ ತನ್ನದೆ ಆದ ಪ್ರಭಾವನು ಬೀರುತ್ತದೆ.

ಚಿತ್ರಕೃಪೆ: Mark Hillary

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಧಾರಾವಿಯು ಮುಂಬೈನ ಎರಡು ಪ್ರಮುಖ ರೈಲು ಮಾರ್ಗಗಳಾದ ಪಶ್ಚಿಮ ಹಾಗೂ ಕೇಂದ್ರ ರೈಲು ಮಾರ್ಗಗಳ ಮಧ್ಯದಲ್ಲಿ ಸ್ಥಿತವಿದೆ. ಇದರ ಪಶ್ಚಿಮಕ್ಕೆ ಮಾಹಿಮ್ ಮತ್ತು ಬಾಂದ್ರಾ ಪ್ರದೇಶಗಳಿದ್ದರೆ ಇದರ ಉತ್ತರಕ್ಕೆ ಮೀಠಿ ನದಿಯು ಹರಿದಿದೆ.

ಚಿತ್ರಕೃಪೆ: Leonora Enking

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಮಿಠಿ ನದಿಯು ಧಾರಾವಿ ಜನರಿಗೆ ಪ್ರಮುಖ ಆಸರೆಯಾಗಿದ್ದು ಪ್ರಸ್ತುತ ಕಾರ್ಖಾನೆಗಳ ತ್ಯಾಜ್ಯ ಹಾಗೂ ಮಾನವನಿಂದುಂಟಾಗುವ ಕಲ್ಮಷಗಳಿಂದ ಕಲುಷಿತಗೊಳ್ಳುತ್ತಿದೆ. ಮಾಹಿಮ್ ಕ್ರಿಕ್ ಎಂಬ ಜಲ ಮೂಲದ ಮೂಲಕ ಮೀಠಿ ನದಿಯು ಕೊನೆಗೆ ಅರಬ್ಬಿ ಸಮುದ್ರದಲ್ಲೆ ಸೇರ್ಪಡೆಗೊಳ್ಳುತ್ತದೆ. ಮಾಹಿ ಕ್ರೀಕ್.

ಚಿತ್ರಕೃಪೆ: Nicholas

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

1997 ರ ನಂತರ ಧಾರಾವಿ ಕೊಳಗೇರಿಯನ್ನು ಒಂದು ಸುವ್ಯವಸ್ಥಿತ ಪ್ರದೇಶವನ್ನಾಗಿ ಮಾಡುವ ದೃಷ್ಟಿಯಿಂದ ಸಾಕಷ್ಟು ಯೋಜನೆಗಳು ಕೇಳಿ ಬಂದಿವೆ. ಆ ಸಮಯದಲ್ಲೆ ಈ ಕೊಳಗೇರಿಯ ಮರು ಅಭಿವೃದ್ಧಿಯ ಕುರಿತು 5000 ಕೋಟಿ ರೂಪಾಯಿಯ ಯೋಜನೆ ಸಿದ್ಧಪಡಿಸಲಾಗಿತ್ತು.

ಚಿತ್ರಕೃಪೆ: ☻☺

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಇಂದು ಮರು ಅಭಿವೃದ್ಧಿಯ ಯೋಜನೆಗೆ 15,000 ಕೋಟಿಯ ಯೋಜನೆ ಸಿದ್ಧವಿದೆ. ಈ ಯೋಜನೆಯನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸಿದ್ದು 2010 ರಲ್ಲಿ. ಕೆಲೆ ಪ್ರವಾಸಿ ಸಂಸ್ಥೆಗಳು ಮಾರ್ಗದರ್ಶಿ ಸಹಿತ ಪ್ರವಾಸಗಳನ್ನು ಇಲ್ಲಿ ಆಯೋಜಿಸುತ್ತವೆ. ಈ ಪ್ರವಾಸಗಳು ಕೊಳಗೇರಿಯ ಸ್ಥಿತಿ, ಅಲ್ಲಿರುವ ಜೀವನಶೈಲಿ, ಸಂಸ್ಕೃತಿ, ಆಚಾರ-ವಿಚಾರಗಳ ಸಮಗ್ರ ಮಾಹಿತಿಯನ್ನು ಆಸಕ್ತಿಯಿರುವ ಪ್ರವಾಸಿಗರಿಗೆ ಒದಗಿಸುತ್ತವೆ.

ಚಿತ್ರಕೃಪೆ: Thomas Leuthard

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಮತ್ತೊಂದು ಸಂಗತಿಯೆಂದರೆ ಸಾಕಷ್ಟು ಹಿಂದಿ ಹಾಗೂ ಇತರೆ ಚಲನ ಚಿತ್ರಗಳ ಹಲವಾರು ಸನ್ನಿವೇಶಗಳು ಧಾರಾವಿಯಲ್ಲಿ ಚಿತ್ರೀಕರಣಗೊಂಡಿವೆ. ಆಸ್ಕರ್ ಪ್ರಶಸ್ತಿ ವಿಜೇತ ಡ್ಯಾನಿ ಬಾಯ್ಲ್ ಅವರ ಪ್ರಸಿದ್ಧ "ಸ್ಲಮ್ ಡಾಗ್ ಮಿಲೇನಿಯರ್" ಚಿತ್ರದ ಮಹತ್ವದ ಸನ್ನಿವೇಶಗಳೂ ಸಹ ಇಲ್ಲಿ ಚಿತ್ರೀಕರಣಗೊಂಡಿದೆ.

ಚಿತ್ರಕೃಪೆ: M M

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಏಷಿಯಾ ಖಂಡದಲ್ಲೆ ಅತಿ ದೊಡ್ಡ ಕೊಳಗೇರಿ ಎಂಬ ಹೆಸರು ಪಡೆದಿರುವ ಧಾರಾವಿಯ ಒಮ್ದು ನೋಟ.

ಚಿತ್ರಕೃಪೆ: erin

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಏನಾದರೇನು....ಜೀವನ ನಡೆಯುತ್ತಲೆ ಇರಬೇಕು.

ಚಿತ್ರಕೃಪೆ: ☻☺

ಧಾರಾವಿ ಕೊಳಗೇರಿ:

ಧಾರಾವಿ ಕೊಳಗೇರಿ:

ಒಮ್ಮೆ ಬರುವಿರಾ ಧಾರಾವಿಗೆ?

ಚಿತ್ರಕೃಪೆ: M M

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+