Search
  • Follow NativePlanet
Share
» »ತಮಿಳುನಾಡಿನ ಪ್ರಸಿದ್ಧವಾದ ದೇವಿಯ ದೇವಾಲಯ ಮತ್ತು ಮಹತ್ವ

ತಮಿಳುನಾಡಿನ ಪ್ರಸಿದ್ಧವಾದ ದೇವಿಯ ದೇವಾಲಯ ಮತ್ತು ಮಹತ್ವ

ದಕ್ಷಿಣ ಭಾರತದಲ್ಲಿ ಆನೇಕ ದೇವಾಲಯಗಳಿವೆ. ತಮಿಳುನಾಡಿನಲ್ಲಿನ ದೇವಿಯ ದೇವಾಲಯಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಿಶೇಷವಾಗಿ ತಮಿಳುನಾಡು "ದೇವಾಲಯಗಳ ನಾಡು" ಎಂದೇ ಪ್ರಖ್ಯಾತತೆಯನ್ನು ಪಡೆದಿದೆ. ಈ ರಾಜ್ಯದಲ್ಲಿ ಎಲ್ಲಿ ನೋಡಿದರೂ ದೊಡ್ಡ-ದೊಡ್ಡ ದೇವಾಲಯಗಳೇ ಕಾಣುಬಹುದು. ಇಲ್ಲಿ ಸರಿಸುಮಾರು 33,000 ಗಳಷ್ಟು ಪುರಾತನವಾದ ಹಿಂದೂ ದೇವಾಲಯಗಳನ್ನು ಕಾಣಬಹುದು. ಇವುಗಳಲ್ಲಿ ಬಹಳಷ್ಟು ದೇವಾಲಯಗಳು 800 ರಿಂದ 1200 ವರ್ಷಗಳಷ್ಟು ಪುರಾತನವಾದುದಾಗಿದೆ.

ತಮಿಳುನಾಡಿನ ದೇವಾಲಯಗಳೇ ಹಾಗೆ ದೊಡ್ಡ ಗೋಪುರಗಳು, ಸಂಕೀರ್ಣವಾದ ಕಟ್ಟಡಗಳು, ಮುಖ್ಯವಾಗಿ ಅತಿ ಹೆಚ್ಚು ದೇವಿಗಳ ದೇವಾಲಯಗಳನ್ನು ಕಾಣಬಹುದು. ಇಲ್ಲಿ ಹಿಂದೂ ದೇವಾಲಯಗಳು ಇವೆ. ಸಾಮಾನ್ಯವಾಗಿ ಇಲ್ಲಿ ದೇವಿಯ ದೇವಾಲಯಗಳನ್ನು ಅಮ್ಮನವರ ಸನ್ನಿಧಿ ಎಂದು ಸಂಭೋದಿಸುತ್ತಾರೆ. ಇಲ್ಲಿ ಸುಪ್ರಸಿದ್ಧ ದೇವಾಲಯಗಳನ್ನು ಕಾಣಬಹುದಾಗಿದೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ವೈಶಿಷ್ಟತೆ ಇದೆ.

ಪ್ರಸ್ತುತ ಲೇಖನದ ಮೂಲಕ ಈ ರಾಜ್ಯದಲ್ಲಿರುವ ಮಹಿಮಾನ್ವಿತವಾದ ದೇವಿಯ ದೇವಾಲಯಕ್ಕೆ ಒಮ್ಮೆ ತಿಳಿಯೋಣ.

1.ಅಷ್ಟಲಕ್ಷ್ಮೀ ದೇವಾಲಯ

1.ಅಷ್ಟಲಕ್ಷ್ಮೀ ದೇವಾಲಯ

PC: Summer yellow

ತಮಿಳುನಾಡಿನ ರಾಜಧಾನಿಯಾದ ಚೆನ್ನೈ ನಗರದಲ್ಲಿರುವ ಈ ದೇವಾಲಯವು ಲಕ್ಷ್ಮೀ ದೇವಿಗೆ ಮುಡಿಪಾದ ಸುಂದರವಾದ ದೇವಾಲಯವಾಗಿದೆ. ಅಷ್ಟ ಎಂದರೆ 8 ಅಂದರೆ ಲಕ್ಷ್ಮೀಯರ ಅಷ್ಟಾವತಾರಗಳು ಒಂದೇ ಸ್ಥಳದಲ್ಲಿ ದರ್ಶನ ಪಡೆಯಬಹುದಾದ ಪುಣ್ಯಕ್ಷೇತ್ರವಾಗಿದೆ. ಇದು ಎಲಿಯಟ್ ಕಡಲ ತೀರದ ಬಳಿ ನೆಲೆಸಿದೆ. ಈ ದೇವಾಲಯದಲ್ಲಿ 8 ಪ್ರತ್ಯೇಕವಾದ ಗರ್ಭಗುಡಿಗಳಿದ್ದು, ಅವುಗಳಲ್ಲಿ 8 ರೂಪದ ಅಷ್ಟ ಲಕ್ಷ್ಮೀಯರನ್ನು ಕಾಣಬಹುದು. ಈ ದೇವಾಲಯಕ್ಕೆ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

2.ಪಟ್ಟೀಶ್ವರಂ ದುರ್ಗಾ ದೇವಿ ದೇವಾಲಯ

2.ಪಟ್ಟೀಶ್ವರಂ ದುರ್ಗಾ ದೇವಿ ದೇವಾಲಯ

PC: VasuVR

ತಂಜಾವೂರು ಜಿಲ್ಲೆಯ ಕುಂಭಕೋಣಂ ತಾಲೂಕಿನ ಪಟ್ಟೇಶ್ವರಂನಲ್ಲಿ ದುರ್ಗಾ ದೇವಿಯ ದೇವಾಲಯವಿದೆ. ಇದು ಮೂಲತಃ ಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಇಲ್ಲಿನ ದುರ್ಗಾ ಮಾತೆಯು 3 ಕಣ್ಣುಗಳನ್ನು ಹೊಂದಿದ್ದು, ಭಕ್ತರಿಗೆ ದರ್ಶನ ಭಾಗ್ಯವನ್ನು ನೀಡುತ್ತಾಳೆ.

3.ಪ್ರತ್ಯಂಗೀರಾ ದೇವಿ ದೇವಾಲಯ

3.ಪ್ರತ್ಯಂಗೀರಾ ದೇವಿ ದೇವಾಲಯ

PC: Ganapati Pujans

ಮಹಾ ಪ್ರತ್ಯಂಗಿರಾ ದೇವಿಯು ಅತ್ಯಂತ ಶಕ್ತಿವಂತಳು, ಶಾಂತ ರೂಪದ ತಾಯಿಯಾಗಿದ್ದಾಳೆ. ಇದೊಂದು ಅಪರೂಪದ ದೇವಾಲಯ ಎಂದೇ ಹೇಳಬಹುದು. ಈ ದೇವಾಲಯವು ಚೆನ್ನೈನ ಶೊಲ್ಲಿಂಗನಲ್ಲೂರಿನಲ್ಲಿದೆ. ಈ ದೇವಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು ಚಾಲ್ತಿಯಲ್ಲಿದೆ. ಇಲ್ಲಿನ ತಾಯಿಯು ಸಿಂಹದ ಮುಖ, ಸ್ತ್ರೀ ದೇಹ, ತಲೆಬುರುಡೆಗಳ ಹಾರ, ಸಿಂಹ ವಾಹನ, ತ್ರಿಶೂಲ, ಸರ್ಪ, ಚಂದ್ರಾದಿಗಳನ್ನು ಹಿಡಿದಿರುವ ಈ ದೇವಿಯನ್ನು ನರಸಿಂಹಿಕಾ ಎಂದು ಬಣ್ಣಿಸಲಾಗಿದೆ.

4.ಅಂಗಾಳಮ್ಮನವರ ದೇವಾಲಯ

4.ಅಂಗಾಳಮ್ಮನವರ ದೇವಾಲಯ

PC: Sakthijanani

ವಿಲ್ಲುಪುರಂ ಜಿಲ್ಲೆಯ ಸೆಂಜಿಯಲ್ಲಿರುವ ಮಲ್ಮಲಯೂರ್‍ನಲ್ಲಿರುವ ಈ ದೇವಾಲಯವು ಸುಪ್ರಸಿದ್ಧವಾದ ದೇವಿಯ ದೇವಾಲಯವಾಗಿದೆ. ದಕ್ಷಿಣ ಭಾರತದಿಂದ ಹಲವಾರು ಭಕ್ತರು ಈ ತಾಯಿಯ ದರ್ಶನ ಕೋರಿ ಭೇಟಿ ನೀಡುತ್ತಾರೆ. ಈ ದೇವಿಯ ದರ್ಶನಕ್ಕೆ ಹೆಚ್ಚಾಗಿ ಹುಣ್ಣಿಮೆಯ ದಿನಗಳಂದು ಭಕ್ತರು ಆಗಮಿಸುತ್ತಾರೆ. ಈಕೆಯನ್ನು ಅತ್ಯಂತ ಶಕ್ತಿಶಾಲಿ ದೇವತೆ ಎಂದು ಸ್ಥಳೀಯರು ಆರಾಧಿಸುತ್ತಾರೆ.

5.ಲಕ್ಷ್ಮೀ ದೇವಾಲಯ

5.ಲಕ್ಷ್ಮೀ ದೇವಾಲಯ

PC: Dsudhakar555

ವೇಲೂರು ನಗರದ ಮಲೈಕೊಡಿ ಎಂಬ ಸ್ಥಳದಲ್ಲಿರುವ ಶ್ರೀ ಲಕ್ಷ್ಮೀ ದೇವಿಯ ದೇವಾಲಯವು ತನ್ನ ಚಿನ್ನದ ವೈಭವಕ್ಕಾಗಿ ಪ್ರಖ್ಯಾತವಾಗಿದೆ. ಲಕ್ಮೀ ನಾರಾಯಣಿ ದೇವಾಲಯ ಎಂದು ಕರೆಯಲಾಗುವ ಈ ದೇವಾಲಯದ ನಿರ್ಮಾಣದಲ್ಲಿ ಕೆಲವು ಭಾಗಗಳನ್ನು ಚಿನ್ನದ ಹಾಳೆಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ. ನಕ್ಷತ್ರಾಕಾರದಲ್ಲಿರುವ ಈ ಸ್ಥಳ ಮೇಲೆ ಲಕ್ಷ್ಮಿ ದೇವಿಯ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಈ ತಾಯಿಯ ದರ್ಶನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

6.ಕಾಮಾಕ್ಷಿ ಅಮ್ಮನವರ ದೇವಾಲಯ

6.ಕಾಮಾಕ್ಷಿ ಅಮ್ಮನವರ ದೇವಾಲಯ

PC: SINHA

ಕಾಮಾಕ್ಷಿ ದೇವಾಲಯವು ಪಾರ್ವತಿ ದೇವಿಯ ಒಂದು ರೂಪವಾದ ಕಾಮಾಕ್ಷಿ ದೇವಿಗೆ ಮುಡಿಪಾದ ದೇವಾಲಯವಾಗಿದೆ. ಈ ಅದ್ಬುತವಾದ ದೇವಾಲಯವನ್ನು ಪಲ್ಲವ ರಾಜವಂಶದವರು 6 ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಊಹಿಸಲಾಗಿದೆ. ತಮಿಳುನಾಡಿನ ಕಾಂಚಿಪುರಂನಲ್ಲಿರುವ ಈ ದೇವಿಯ ದೇವಾಲಯವು ಸುಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ಇಲ್ಲಿ ತಾಯಿಯು ಕುಳಿತಿರುವ ಭಂಗಿಯಲ್ಲಿದ್ದಾಳೆ. ಅಶ್ಚರ್ಯವೆನೆಂದರೆ ಹಿಂದೂಗಳಲ್ಲಿ ತುಂಬ ಜನಪ್ರಿಯ ದೇವತೆಯಾಗಿದ್ದರೂ ಪಾರ್ವತಿಯ ಈ ದೇವಾಲಯವು ನಗರದಲ್ಲಿ ಇದೊಂದೇ ಆಗಿದೆ.

7.ಮೀನಾಕ್ಷಿ ಅಮ್ಮನವರ ದೇವಾಲಯ

7.ಮೀನಾಕ್ಷಿ ಅಮ್ಮನವರ ದೇವಾಲಯ

PC: Alessandro Malatesta

ಮೀನಾಕ್ಷಿ ಅಮ್ಮನವರ ದೇವಾಲಯ ಅಥವಾ ಮೀನಾಕ್ಷಿ ದೇವಾಲಯವು ಶಿವನ ಪತ್ನಿಯಾದ ಪಾರ್ವತಿಯ ಇನ್ನೊಂದು ಅವತಾರವಾದ ಮೀನಾಕ್ಷಿ ದೇವಿಗೆ ಮುಡಿಪಾಗಿದೆ. ಪಾರ್ವತಿಗೆ ಮೀನಾಕ್ಷಿ ಎಂಬ ಹೆಸರು ಕೂಡ ಇದೆ. ಈ ದೇವಾಲಯವು ತಮಿಳುನಾಡಿನಲ್ಲಿರುವ ಪ್ರಖ್ಯಾತವಾದ ಪ್ರವಾಸಿ ಕ್ಷೇತ್ರವಾದ ಮದುರೈ ನಗರದಲ್ಲಿದೆ.

8.ಕನ್ಯಾಕುಮಾರಿ ದೇವಾಲಯ

8.ಕನ್ಯಾಕುಮಾರಿ ದೇವಾಲಯ

PC: Shantul

https://commons.wikimedia.org/wiki/File:Kanyakumari_Temple_on_the_vivekanand_rock.JPG

ಹೆಸರೇ ಸೂಚಿಸುವಂತೆ ತಮಿಳುನಾಡಿನ ಒಂದು ಪ್ರಖ್ಯಾತವಾದ ತಾಣವಾದ ಕನ್ಯಾಕುಮಾರಿಯಲ್ಲಿದೆ ಈ ಮಹಿಮಾನ್ವಿತವಾದ ದೇವಾಲಯ. ಈ ದೇವಿಯ ಹೆಸರಿನಿಂದಾಗಿಯೆ ಈ ಪಟ್ಟಣಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂದಿದೆ. ಈ ದೇವಾಲಯವು ಸಮುದ್ರದ ತೀರದಲ್ಲಿದೆ. ಕನ್ಯಾಕುಮಾರಿ ಎಂಬ ಹೆಸರು "ಕನ್ಯಾ" ಮತ್ತು "ಕುಮಾರಿ" ಎಂಬ 2 ಪದಗಳ ಸಂಯೋಗವಾಗಿದ್ದು, ಕನ್ಯಾ ಎಂದರೆ ಕನ್ನಿಕೆ, ಕುಮಾರಿ ಎಂದೇ ಆಗಿದೆ. ಈ ದೇವಾಲಯವನ್ನು 8 ನೇ ಶತಮಾನದಲ್ಲಿ ಪಾಂಡ್ಯರಿಂದ ನಿರ್ಮಾಣ ಮಾಡಲಾಯಿತು.

9.ಸಮಯಪುರಂ ಮಾರಿ ಅಮ್ಮನ್ ದೇವಾಲಯ

9.ಸಮಯಪುರಂ ಮಾರಿ ಅಮ್ಮನ್ ದೇವಾಲಯ

PC: wikipedia

ಇಲ್ಲಿ ಅಮ್ಮನವರ ವಿಗ್ರಹವನ್ನು ಮರಳು ಮತ್ತು ಜೇಡಿ ಮಣ್ಣಿನಿಂದ ಮಾಡಲಾಗಿದ್ದು, ಅತ್ಯಂತ ಮಾಹಿಮಾನ್ವಿತವಾದ ದೇವಿ ಎಂದೇ ಪೂಜಿಸುತ್ತಾರೆ. ಸಾಮಾನ್ಯವಾಗಿ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಕಂಡುಬರುವಂತೆ ಇಲ್ಲಿ ದೇವಿ ವಿಗ್ರಹಕ್ಕೆ ನೇರವಾಗಿ ಅಭೀಷೇಕವನ್ನು ಮಾಡುವುದಿಲ್ಲ. ಬದಲಾಗಿ ಆಕೆಯ ಚಿಕ್ಕ ಕಲ್ಲಿನಲ್ಲಿ ಕೆತ್ತಲಾದ ವಿಗ್ರಹವೊಂದನ್ನು ಮೂಲ ವಿಗ್ರಹದ ಮುಂದಿಟ್ಟು ಅದಕ್ಕೆ ಅಭಿಷೇಕಗಳನ್ನು ಮಾಡಲಾಗುತ್ತದೆ.

10.ಪಚ್ಚಿಯಮ್ಮಳ ದೇವಾಲಯ

10.ಪಚ್ಚಿಯಮ್ಮಳ ದೇವಾಲಯ

PC: Thamizhpparithi Maari

ಸೇಲಂ ಜಿಲ್ಲೆಯ ಮಂಗುಪ್ಪೈ ಪಂಚಾಯತ್ ಪಟ್ಟಣದಲ್ಲಿರುವ ಪಚ್ಚಿಯಮ್ಮ ದೇವಾಲಯವು ಪಾರ್ವತಿ ದೇವಿಗೆ ಮುಡಿಪಾದ ದೇವಾಲಯವಾಗಿದೆ. ಇಲ್ಲಿ ಸಾಮಾನ್ಯವಾಗಿ ಎಲ್ಲೆಡೆ ದೇವಾಲಯಗಳಲ್ಲಿ ಕಂಡು ಬರುವಂತೆ ಶಿಲೆಯು ಮಣ್ಣಿನಲ್ಲಿದೆ. ಇಷ್ಟೇ ಅಲ್ಲದೇ ಇಲ್ಲಿ ಹಲವಾರು ದೇವಾಲಯಗಳ ಗೊಂಬೆಗಳನ್ನು ಕಾಣಲು ಅತ್ಯಂತ ಆಕರ್ಷಣೆಯುತವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+