Search
  • Follow NativePlanet
Share
» »ಮೀನ ರಾಶಿಯವರು ಹೋಗಬೇಕಾದ ತಾಣ ಇದು

ಮೀನ ರಾಶಿಯವರು ಹೋಗಬೇಕಾದ ತಾಣ ಇದು

ಸಾಮಾನ್ಯವಾಗಿ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಫೆಬ್ರವರಿ 19 ರಿಂದ ಮಾರ್ಚ್ 20ರವರೆಗೆ ಜನಿಸಿದವರು ಮೀನ ರಾಶಿಯವರಾಗಿದ್ದಾರೆ. ಮೀನ ರಾಶಿಯವರು ಕಲಾತ್ಮಕ, ಕನಸುಗಾರರು ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಚಮತ್ಕಾರದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಹಾಗಾಗಿ ಅವರಿಗೆ ಅಂತಹದ್ದೇ ಮ್ಯಾಜಿಕಲ್ ತಾಣ ಇಷ್ಟವಾಗುತ್ತದೆ. ಈ ವರ್ಷ ಮೀನ ರಾಶಿಯವರು ಲಕ್ಷದ್ವೀಪಕ್ಕೆ ಪ್ರವಾಸ ಹೋಗುವುದು.

 ಮೋಜಿನ ತಾಣಗಳು

ಮೋಜಿನ ತಾಣಗಳು

PC: Thejas

ಇಲ್ಲಿನ ಅನೇಕ ಆಕರ್ಷಕ ತಾಣಗಳು ನೋಡುಗರಿಗೆ ಅತ್ಯಂತ ಉತ್ತೇಜನಕಾರಿ, ಮೋಜಿನ ತಾಣಗಳು ಸಾಕಷ್ಟಿವೆ. ಪ್ರವಾಸಿಗರಿಗೆ ನೈಜ ಹಾಗೂ ಮನೋಲ್ಲಾಸದ ಅನುಭವ ನೀಡುತ್ತವೆ. ನೀರಿನಾಳಕ್ಕೆ ಇಳಿದು ಈಜಲು, ನೀರಿಗೆ ಜಿಗಿಯಲು ಇಲ್ಲಿ ಸಾಕಷ್ಟು ತಾಣಗಳು ಸಿಗುತ್ತವೆ.

ಅತ್ಯಾಕರ್ಷಕ ರೇಸಾರ್ಟ್

ಅತ್ಯಾಕರ್ಷಕ ರೇಸಾರ್ಟ್

PC:Lenish Namath

ಲಕ್ಷದ್ವೀಪದಲ್ಲಿನ ರೇಸಾರ್ಟ್ ಗಳು ಅತ್ಯಾಕರ್ಷಕ ರಜಾಕಾಲೀನ ಅವಧಿ ಕಳೆಯಲು ಅನುಕೂಲವಾಗುವ ವಿಶೇಷ ಪ್ಯಾಕೇಜ್‌ಗಳನ್ನು ಪ್ರವಾಸಿಗರಿಗೆ ನೀಡುತ್ತವೆ. ಅಲ್ಲದೇ ಇಲ್ಲಿನ ಕಡಲ ತೀರ ಕೂಡ ಅತ್ಯಂತ ಶುಭ್ರವಾಗಿದ್ದು, ಬಿಳಿ ಬಣ್ಣದಲ್ಲಿ ಸದಾ ಕಂಗೊಳಿಸುತ್ತಿರುತ್ತದೆ.ಭಾರತದ ಪಶ್ಚಿಮ ತೀರದಿಂದ ಈ ದ್ವೀಪಗಳು 200 ರಿಂದ 440 ಕಿ.ಮಿ ನಷ್ಟು ದೂರದಲ್ಲಿವೆ. ಈ ದ್ವೀಪ ಸಮುದಾಯವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, ಇದನ್ನು 10 ತಾಲೂಕುಗಳನ್ನಾಗಿ ವಿಂಗಡಿಸಲಾಗಿದೆ. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. 'ಕೇರಳ ಹೈಕೋರ್ಟ್' ನ ಪರಿಧಿಯಲ್ಲಿ ಬರುತ್ತದೆ.

ನೌಕಾಪಡೆಯ ಕೇಂದ್ರಸ್ಥಳ

ನೌಕಾಪಡೆಯ ಕೇಂದ್ರಸ್ಥಳ

PC:Vaikoovery

ಲಕ್ಷದ್ವೀಪ ಭಾರತೀಯ ನೌಕಾಪಡೆಯ ಕೇಂದ್ರಸ್ಥಳ ಅಥವಾ ಮನೆಯಾಗಿ ಪರಿಣಮಿಸಿದೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಈಗಲೂ ಇದಕ್ಕೆ ಸಾಕಷ್ಟು ಆತಂಕಗಳು, ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದ್ದು, ಇವರಿಂದ ಅಪಾಯ ಎದುರಾಗುವುದನ್ನು ಅಲ್ಲಗಳೆಯಲಾಗದು.

ಅಗತ್ತಿ ಹಾಗೂ ಬಂಗಾರಂ

ಅಗತ್ತಿ ಹಾಗೂ ಬಂಗಾರಂ

PC: Asssagar

ಅಪಾರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವ ಮಾಧ್ಯಮವಾಗಿದೆ. ಅನ್ಯ ಪ್ರದಶಗಳಿಗಿಂತ ಭಿನ್ನವಾಗಿ ಗೋಚರಿಸಲು ಸಹಕಾರಿಯಾಗಿದೆ. ಇಲ್ಲಿನ ಎರಡು ಪ್ರಮುಖ ನಡುಗಡ್ಡೆಗಳಾದ ಅಗತ್ತಿ ಹಾಗೂ ಬಂಗಾರಂ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ. ಅಗತ್ತಿಯು ಇಲ್ಲಿನ ಡೊಮೆಸ್ಟಿಕ್‌ ವಿಮಾನ ನಿಲ್ದಾಣ ಒಳಗೊಂಡಿದೆ. ನಗರ ಜೀವನದಿಂದ ಒಂದು ಚಿಕ್ಕ ವಿರಾಮ ನೀಡಿ ನವೋಲ್ಲಾಸವನ್ನು ಮನಸ್ಸಿನಲ್ಲಿ ತುಂಬುತ್ತದೆ. ಮೀನುಗಾರಿಕೆಯ ಸ್ವಾನುಭವವನ್ನು ಕೂಡ ಇಲ್ಲಿ ಪಡೆಯಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+