ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಯು ಎಲ್ಲಿಯೂ ಸಾಂಸ್ಕೃತಿಕ ಮಹತ್ವದಿಂದ ವಂಚಿತವಾಗಿಲ್ಲ. ಹಲವಾರು ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳಿಗೆ ನೆಲೆಯಾಗಿರುವ ಇದು ಕರ್ನಾಟಕದ ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ನೆಲೆಸಿರುವ ಮೇಲುಕೋಟೆಗೆ 12ನೇ ಶತಮಾನಗಳಷ್ಟು ಹಳೆಯ ಇತಿಹಾಸವಿದ್ದು ಇಲ್ಲಿ ಸಂತ ರಾಮಾನುಜಾಚಾರ್ಯರು ಹನ್ನೆರಡು ವರ್ಷಗಳ ಕಾಲ ಈ ಪಟ್ಟಣದಲ್ಲಿ ನೆಲೆಸಿದ್ದ ಸಮಯದಿಂದಲೂ ಈ ಸ್ಥಳವು ಧಾರ್ಮಿಕ ಮಹತ್ವವುಳ್ಳ ಸ್ಥಳವೆನಿಸಿದೆ.
ಮೈಸೂರಿನಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ ಮೇಲುಕೋಟೆಯನ್ನು ಸುಲಭವಾಗಿ ತಲುಪಬಹುದಾಗಿದೆ ದೇವಾಲಯದ ಹೊರತಾಗಿಯೂ ಮೇಲುಕೋಟೆಯು ಹಲವಾರು ಐತಿಹಾಸಿಕ ಕಟ್ಟಡಗಳನ್ನು ಮತ್ತು ದಟ್ಟವಾದ ಹಸಿರು ಪರಿಸರವನ್ನು ಹೊಂದಿದೆ. ಆದ್ದರಿಂದ ಮೇಲುಕೋಟೆಗೆ ಒಂದು ಪ್ರವಾಸ ಆಯೋಜಿಸಿ ಅಲ್ಲಿಯ ಇತಿಹಾಸವನ್ನು ವಿಸ್ತಾರವಾಗಿ ತಿಳಿದರೆ ಹೇಗಿರಬಹುದು? ಈ ಕೆಳಗಿನ ಕೆಲವು ಸ್ಥಳಗಳು ಅನ್ವೇಷಣೆಗೆ ಒಳಗಾಗದೇ ಇರುವಂತಹ ಮೇಲುಕೋಟೆಯಲ್ಲಿನ ಕೆಲವು ಪ್ರಮುಖ ಸ್ಥಳಗಳು.

ಚೆಲುವನಾರಾಯಣ ಸ್ವಾಮಿ ದೇವಾಲಯ
ಚೆಲುವನಾರಾಯಣ ಸ್ವಾಮಿ ದೇವಾಲಯವು ಮೇಲುಕೋಟೆಯ ಮೊಟ್ಟಮೊದಲ ಪ್ರವಾಸಿ ಆಕರ್ಷಣಾ ಸ್ಥಳವಾಗಿದೆ. ದೇಶದಾದ್ಯಂತದ ಹಿಂದೂ ಭಕ್ತರಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿರುವ ಕಾರಣದಿಂದಾಗಿ ಈ ದೇವಾಲಯಗಳು ಸಾವಿರಾರು ಪ್ರವಾಸಿಗರು ಮತ್ತು ಹಿಂದುಗಳಿಂದ ಪ್ರತೀ ವರ್ಷ ಭೇಟಿ ನೀಡಲ್ಪಡುತ್ತದೆ. ವಿಷ್ಣು ದೇವರ ಅವತಾರವಾದ ಚೆಲುವನಾರಾಯಣ ದೇವರಿಗೆ ಅರ್ಪಿತವಾದ ಈ ಪ್ರಾಚೀನ ದೇವಾಲಯವು ಯಾದವಗಿರಿ ಮತ್ತು ಯದುಗಿರಿ ಬೆಟ್ಟಗಳ ಮೇಲೆ ನೆಲೆಸಿದೆ.
ಈ ದೇವಾಲಯಕ್ಕೆ ಮೈಸೂರು ರಾಜಮನೆತನದ ರಾಜರುಗಳು ಆಭರಣಗಳು ಕಿರೀಟಗಳು ಮತ್ತು ರತ್ನಗಳನ್ನು ಹೇರಳವಾಗಿ ದೇವರಿಗೆ ಅರ್ಪಿಸಿದ್ದರು. ಈ ಅಮೂಲ್ಯವಾದ ವಸ್ತುಗಳನ್ನು ದೇವಾಲಯಕ್ಕೆ ವೈರಮುಡಿ ಹಬ್ಬದ ಸಮಯದಲ್ಲಿ ಚೆಲುವನಾರಾಯಣ ದೇವರ ಮೂರ್ತಿಯನ್ನು ಅಲಂಕಾರ ಮಾಡಲು ಮತ್ತು ದೇವಾಲಯದ ಸಂಕೀರ್ಣವನ್ನು ಅಲಂಕಾರಗೊಳಿಸಲು ತರಲಾಗುತ್ತದೆ.

ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚ್
1977 ರಲ್ಲಿ ಸ್ಥಾಪಿಸಲಾದ ಅಕಾಡಮಿ ಆಫ್ ಸಂಸ್ಕೃತ ರಿಸರ್ಚ್ ಸಂಸ್ಕೃತದ ವಿವಿಧ ವಿಷಯಗಳ ಕುರಿತು ಸಂಶೋಧನೆ ನಡೆಸಲು ನೇಮಕಗೊಂಡ ಹಲವಾರು ಸಂಶೋಧನಾ ವಿದ್ವಾಂಸರನ್ನು ಹೊಂದಿದೆ.ಇಲ್ಲಿ ನೀವು ನೂರಾರು ಹಳೆಯ ಹಸ್ತಪ್ರತಿಗಳು ಮತ್ತು ಸಾವಿರಾರು ಪ್ರಾಚೀನ ಗ್ರಂಥಗಳನ್ನು ಕಾಣಬಹುದು. ಇಲ್ಲಿಯ ವಿದ್ವಾಂಸರು ಸಂಸ್ಕೃತದ ಬಳಕೆಯನ್ನು ಆರಂಭಿಕ ಅವಧಿಗಳಲ್ಲಿ ಹೇಗೆ ಮಂಡಿಸಿದರು ಮತ್ತು ಅದರ ವಿಕಾಸವನ್ನು ಹೇಗೆ ಸಂಶೋಧಿಸುತ್ತಾರೆ ಎಂಬುದನ್ನು ತಿಳಿಯುತ್ತಾ ಇಲ್ಲಿ ಸ್ವಲ್ಪ ಸಂಸ್ಕೃತ ಕಲಿತರೆ ಹೇಗೆ?

ಯೋಗ ನರಸಿಂಹ ದೇವಾಲಯ
ಯದುಗಿರಿ ಬೆಟ್ಟದ ಮೇಲೆ ನೆಲೆಸಿದ್ದು ಮೇಲು ಕೋಟೆ ಪಟ್ಟಣದ ಸೌಂದರ್ಯವನ್ನು ಇಲ್ಲಿಂದ ನೋಡಲು ಸುಂದರವಾಗಿ ಕಾಣುತ್ತದೆ. ಯೋಗ ನರಸಿಂಹ ದೇವಾಲಯವು ಮೇಲುಕೋಟೆಯಲ್ಲಿ ಹೆಚ್ಚು ಭೇಟಿ ಕೊಡಲ್ಪಡುವ ಸ್ಥಳಗಳಲ್ಲೊಂದಾಗಿದೆ. ದಂತ ಕಥೆಗಳ ಪ್ರಕಾರ ನರಸಿಂಹ ದೇವರನ್ನು ಈ ದೇವಾಲಯದ ಒಳಗೆ ಸಾವಿರಾರು ವರ್ಷಗಳ ಹಿಂದೆ ಪರಮ ಭಕ್ತನಾದ ಪ್ರಹಲ್ಲಾದನಿಂದ ಇರಿಸಲಾಯಿತು ಎಂಡು ನಂಬಲಾಗುತ್ತದೆ. ಹಾಗೂ ತದನಂತರದಿಂದ ಇದು ಹಿಂದುಗಳಿಗೆ ಅತ್ಯಂತ ಪ್ರಮುಖ ಧಾರ್ಮಿಕ ಸ್ಥಳವಾಯಿತೆಂದು ಹೇಳಲಾಗುತ್ತದೆ. ಅಲ್ಲದೆ ಈ ದೇವಾಲಯದಲ್ಲಿ ಭಗವಾನ್ ಶ್ರೀರಾಮ ಮತ್ತು ಶ್ರೀಕೃಷ್ಣ ಕೂಡ ಪೂಜಿಸಿದ್ದಾರೆ ಎಂದು ಹೇಳಲಾಗುತ್ತದೆ. ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವೆಂದರೆ ನರಸಿಂಹ ಜಯಂತಿ.

ಮೇಲುಕೋಟೆ ದೇವಾಲಯ ವನ್ಯಜೀವಿ ಅಭಯಾರಣ್ಯ
ಮೇಲುಕೋಟೆಯ ದೇವಾಲಯಗಳ ಗಡಿಯಲ್ಲಿರುವ ಮೇಲುಕೋಟೆ ವನ್ಯಜೀವಿ ಅಭಯಾರಣ್ಯವು ಸುಮಾರು 50 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಅಭಯಾರಣ್ಯದ ಒಳಗೆ ಹೇರಳವಾಗಿ ಕಂಡುಬರುವ ಕಪ್ಪು ಬಕ್ ಮತ್ತು ಬೂದು ತೋಳದ ರಕ್ಷಣೆಗಾಗಿ ಇದು ಜನಪ್ರಿಯವಾಗಿದೆ. ಈ ವನ್ಯಜೀವಿ ಅಭಯಾರಣ್ಯದ ಭೂದೃಶ್ಯವು ಬಂಡೆಗಳು ಮತ್ತು ಡೆಸಿಡಿಯಸ್ ಮರಗಳಿಂದ ಆವೃತವಾಗಿದೆ. ಇಲ್ಲಿ ನೀವು ಹಲವಾರು ಜಾತಿಯ ವರ್ಣರಂಜಿತ ಚಿಟ್ಟೆಗಳನ್ನು ಸಹ ಕಾಣಬಹುದು.

ಪುಷ್ಕರಣಿ ಕೊಳ
ಕಲ್ಯಾಣಿ ಕೊಳ ಎಂದೂ ಕರೆಯಲ್ಪಡುವ ಈ ಸುಂದರ ಕೊಳವು ದೇವಾಲಯದ ಸುತ್ತ ನೆಲೆಸಿದ್ದು ಸುತ್ತಮುತ್ತಲಿಗೆ ಆರಾಮದಾಯಕ ಮತ್ತು ತಂಪಾದ ವಾತಾವರಣದ ಅನುಭವ ನೀಡುತ್ತದೆ. ಮೇಲುಕೋಟೆಯ ಆಹ್ಲಾದಕರ ವಾತಾವರಣದಲ್ಲಿ ಸ್ವಲ್ಪ ಸಮಯ ಕಳೆಯಲು ಮತ್ತು ಹತ್ತಿರದ ದೇವಾಲಯಗಳಿಂದ ಹೊರಹೊಮ್ಮುವ ಭಕ್ತಿ ರಾಗಗಳನ್ನು ಕೇಳಲು ನೀವು ಬಯಸಿದರೆ ನೀವು ಈ ಸುಂದರವಾದ ಕೊಳಕ್ಕೆ ಭೇಟಿ ನೀಡಬೇಕು.

ಇನ್ನಿತರ ಆಸಕ್ತಿದಾಯಕ ಸ್ಥಳಗಳು
ಮೇಲಿನ ಸ್ಥಳಗಳ ಹೊರತಾಗಿಯೂ ಮೇಲುಕೋಟೆಯಲ್ಲಿ ಅನ್ವೇಷಣೆಗೊಳಬೇಕಾದ ಹಲವಾರು ವಿಷಯಗಳಿವೆ. ನೀವು ಇಲ್ಲಿಯ ರಾಯಗೋಪುರಕ್ಕೆ ಭೇಟಿ ಕೊಡಬಹುದು ಇದು ಒಂದು ಪಾಳುಬಿದ್ದಿರುವ ರಚನೆಯಾಗಿದ್ದು ಇತಿಹಾಸ ಪ್ರಿಯರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇಲ್ಲಿರುವ ವಾನಪ್ರಸ್ಥ ಆಶ್ರಮ ಇದೊಂದು ಉಪದೇಶದ ಕೇಂದ್ರವಾಗಿದೆ. ತೊಂಡನೂರು ಸರೋವರವು ಮೇಲುಕೋಟೆಯಲ್ಲಿರುವ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಇದನ್ನು ಶ್ರೀ ವೈಷ್ಣವ ಬ್ರಾಹ್ಮಣರ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.


Click it and Unblock the Notifications
















