ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಚಾಲ್ತಿಯಲ್ಲಿರುವ ಪದ ಬಜಾರ್ ಅಥವಾ ಮಾರುಕಟ್ಟೆಗಳು ಸದಾ ಲವಲವಿಕೆಯಿಂದ ಕೂಡಿರುವ ತಾಣಗಳಾಗಿದ್ದು ಪ್ರತಿಯೊಬ್ಬರೂ ನೋಡಲು ಬಯಸುತ್ತಾರೆ. ಬೇಕಾದ ವಸ್ತುಗಳು, ವೈವಿಧ್ಯಮಯ ತಿಂಡಿಗಳು, ಸಿದ್ಧ ಉಡುಪುಗಳು, ಆಭರಣಗಳು, ಅಡುಗೆಮನೆ ಸಾಮಗ್ರಿಗಳು ಹೀಗೆ ಎಲ್ಲ ಬಗೆಯ ವಸ್ತುಗಳು ಸಿಗುವುದು ಮಾರುಕಟ್ಟೆಗಳಲ್ಲಿಯೆ ಆದುದರಿಂದ ಎಲ್ಲರಿಗೂ ಬಜಾರ್ ನೋಡುವುದೆಂದರೆ ಇಷ್ಟ.
ಕ್ಲಿಯರ್‌ಟ್ರಿಪ್‌ನಿಂದ ಹೋಟೆಲ್ ಹಾಗೂ ಫ್ಲೈಟ್ ಬುಕ್ಕಿಂಗ್ ಮೇಲೆ 5000 ರೂ. ಮರಳಿ ಪಡೆಯಿರಿ
ಸಾಮಾನ್ಯವಾಗಿ ಭಾರತದಂತಹ ದೊಡ್ಡ ದೇಶದಲ್ಲಿ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಮಾರುಕಟ್ಟೆಗಳಿವೆ. ಬಹುತೇಕ ಎಲ್ಲ ಮಾರುಕಟ್ಟೆಗಳಲ್ಲೂ ಎಲ್ಲ ರೀತಿಯ ವಸ್ತುಗಳು ದೊರಕೆ ದೊರಕುತ್ತವೆ. ಆದರೂ ಸಹ ಕೆಲವು ಮಾರುಕಟ್ಟೆಗಳು ವಿಶಿಷ್ಟವಾಗಿ ಹೆಸರುವಾಸಿಯಾಗಿದ್ದು ದೇಶದಲ್ಲೆ ಹೆಚ್ಚು ಜನಪ್ರೀಯಗೊಂಡಿವೆ. ಈ ಮಾರುಕಟ್ಟೆಗಳಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದನಿಸದೆ ಇರಲಾರದು.
ವಿಶೇಷ ಲೇಖನ : ಬೆಂಗಳೂರಿನಲ್ಲಿ ಶಾಪಿಂಗ್
ಪ್ರವಾಸಿಗರು ಆಯಾ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ಈ ಮಾರುಕಟ್ಟೆಗಳಿಗೆ ಭೇಟಿ ನೀಡದೆ ಮತ್ತೆ ಮರಳಲಾರರು, ಹಾಗಿದೆ ಈ ಮಾರುಕಟ್ಟೆಗಳ ಗಮ್ಮತ್ತು. ಈ ಮಾರುಕಟ್ಟೆಗಳು ಸಾಕಷ್ಟು ಹಳೆಯ ಸಾಂಪ್ರದಾಯಿಕ ಮಾರುಕಟ್ಟೆಗಳಾಗಿದ್ದು ತನ್ನಲ್ಲಿ ದೊರಕುವ ವಿಶಿಷ್ಟ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಹಾಗಾದರೆ ಆ ಮಾರುಕಟ್ಟೆಗಳು ಯಾವುವೆಂದು ಈ ಲೇಖನದ ಮೂಲಕ ತಿಳಿಯಿರಿ.

ಭಾರತದ ವಿಭಿನ್ನ ಬಜಾರುಗಳು:
ಚಾಂದನಿ ಚೌಕ್ : ಭಾರತದ ರಾಜಧಾನಿಯಾದ ದೆಹಲಿಯ ಅದರಲ್ಲೂ ಹಳೆಯ ದೆಹಲಿಯ ಹೃದಯ ಭಾಗದಲ್ಲಿರುವ ಈ ಪುರಾತನ ಪ್ರಸಿದ್ಧ ಮಾರುಕಟ್ಟೆಯು ದೇಶದಲ್ಲೆ ಜನಪ್ರೀಯವಾದ ಹೆಸರಾಗಿದೆ. ಒಂದೊಮ್ಮೆ ಈ ಮಾರುಕಟ್ಟೆಗೆ ಪ್ರವೇಶಿಸಿದರೆ ಸಾಕು ಎಲ್ಲಿಗೆ ಸಾಗಬೇಕು, ಏನು ನೋಡಬೇಕು? ಎಂಬ ಗೊಂದಲ ಉಂಟಾಗದೆ ಇರದು.
ಚಿತ್ರಕೃಪೆ: Umesh Gopinath

ಭಾರತದ ವಿಭಿನ್ನ ಬಜಾರುಗಳು:
ಸುಮಾರು ಮೂರು ಶತಮಾನಗಳ ಇತಿಹಾಸ ಹೊಂದಿರುವ ಈ ಮಾರುಕಟ್ಟೆಯು ಮುಘಲ್ ಆಡಳಿತದ ಸಂದರ್ಭದಲ್ಲಿ ದೊರೆ ಶಹಜಹಾನನಿಂದ ನಿರ್ಮಾಣವಾಗಿದೆ. ಮೊದಲಿಗೆ ಈ ಮಾರುಕಟ್ಟೆಯಲ್ಲಿ ನೀರಿನ ಮಾರ್ಗಳಿದ್ದವು ಹಾಗೂ ರಾತ್ರಿಯ ಬೆಳದಿಂಗಳಿನಲ್ಲಿ ಅವು ಹೊಳೆಯುತ್ತಿದ್ದವು. ಆದರೆ ಇಂದು ಅವೆಲ್ಲ ಇಲ್ಲವಾದರೂ ಇಲ್ಲಿನ ವಾತಾವರಣದಲ್ಲಿರುವ ಉಲುವು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.
ಚಿತ್ರಕೃಪೆ: Guilhem Vellut

ಭಾರತದ ವಿಭಿನ್ನ ಬಜಾರುಗಳು:
ಈ ಮಾರುಕಟ್ಟೆಯು ಆಧುನಿಕವೆಂತಿರದೆ ಸಂದಿಗಳು, ಮೂಲೆಗಳು, ಕಿರು ರಸ್ತೆಗಳು, ಬೀಡಾ ಅಂಗಡಿಗಳು ಹೀಗೆ ಇಕ್ಕಟ್ಟಾಗಿದ್ದರೂ ಸಹ ಇಲ್ಲಿ ಯಾವ ವಸ್ತುಗಳು ಸಿಗುವುದಿಲ್ಲ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿಸದೆ ಇರಲಾರದು.
ಚಿತ್ರಕೃಪೆ: Chris Brown

ಭಾರತದ ವಿಭಿನ್ನ ಬಜಾರುಗಳು:
ದಿಲ್ಲಿ ಹಾತ್: ದೆಹಲಿಯಲ್ಲಿರುವ ಮತ್ತೊಂದು ಸುಪ್ರಸಿದ್ಧ ಮಾರುಕಟ್ಟೆ. ಹಳ್ಳಿಗಡಿನ, ಗ್ರಾಮೀಣ ಬದುಕಿನ, ಕರ ಕುಶಲ ವಸ್ತುಗಳನ್ನು ಖರೀದಿಸುವ ಬಯಕೆ ನಿಮ್ಮದಾಗಿದ್ದಲ್ಲಿ ದಕ್ಷಿಣ ದೆಹಲಿಯಲ್ಲಿರುವ ಈ ಮಾರುಕಟ್ಟೆಗೆ ಭೇಟಿ ನೀಡಲೇಬೇಕು.
ಚಿತ್ರಕೃಪೆ: Mathanki Kodavasal

ಭಾರತದ ವಿಭಿನ್ನ ಬಜಾರುಗಳು:
ಅಷ್ಟೆ ಏಕೆ ಈ ಮಾರುಕಟ್ಟೆಯಲ್ಲಿ ಪ್ರವಾಸಿಗರಿಗಾಗಿ, ಗ್ರಾಹಕರಿಗಾಗಿ ಸಾಂಸ್ಕೃತಿಕ ಸಂಗೀತ ನೃತ್ಯೋತ್ಸವಗಳೂ ಕೂಡ ಜರುಗುತ್ತಿರುತ್ತವೆ. ಈ ಮಾರುಕಟ್ಟೆಗೆ ಪ್ರವೇಶ ಶುಲ್ಕ ಕೊಟ್ಟು ಪ್ರವೇಶಿಸಬೇಕಾಗಿದ್ದು ಇದು ಬೆಳಿಗ್ಗೆ 10 ಘಂಟೆಯಿಂದ ರಾತ್ರಿ 10.30 ರವರೆಗೆ ಮಾತ್ರವೆ ತೆರೆದಿರುತ್ತದೆ.
ಚಿತ್ರಕೃಪೆ: Manuel Menal

ಭಾರತದ ವಿಭಿನ್ನ ಬಜಾರುಗಳು:
ಜೊಹರಿ ಬಜಾರ್ : ರಾಜಸ್ಥಾನದ ಪಿಂಕ್ ಸಿಟಿ ಎಂದೆ ಖ್ಯಾತವಾದ ಜೈಪುರದಲ್ಲಿರುವ ಸುಪ್ರಸಿದ್ಧ ಮಾರುಕಟ್ಟೆ ಇದಾಗಿದೆ. ರಾಜಸ್ಥಾನಿ ಸಂಸ್ಕೃತಿಯನ್ನು ಬಿಂಬಿಸುವ ಸಾಕಷ್ಟು ಬಗೆ ಬಗೆಯ ಆಭರಣಗಳು, ಬಟ್ಟೆಗಳು, ಕಲಾಕೃತಿಗಳು ಹೀಗೆ ವೈವಿಧ್ಯಮಯ ವಸ್ತುಗಳು ಸಿಗುವ ದೊಡ್ಡ ಮಾರುಕಟ್ಟೆ ಇದಾಗಿದೆ. ರಾಜಸ್ಥಾನಕ್ಕೆ ಭೇಟಿ ನೀಡುವ ಹೆಚ್ಚಿನ ವಿದೇಶಿ ಪ್ರವಾಸಿಗರು ಈ ಮಾರುಕಟ್ಟೆಯಲ್ಲಿ ಏನಾದರೂ ಕೊಳ್ಳದ ಹಿಂತಿರುಗುವುದೆ ಇಲ್ಲ.
ಚಿತ್ರಕೃಪೆ: Travis Wise

ಭಾರತದ ವಿಭಿನ್ನ ಬಜಾರುಗಳು:
ದಾದರ್ ಒಳಾಂಗಣ ಹೂವು ಮಾರುಕಟ್ಟೆ: ಮುಂಬೈನ ದಾದರ್ ಪ್ರದೇಶದಲ್ಲಿರುವ ಈ ಹೂವಿನ ಮಾರುಕಟ್ಟೆಯು ನಿಜವಾಗಿಯೂ ಒಂದು ಅಭೂತಪೂರ್ವ ಅನುಭವ ನೀಡುತ್ತದೆ. ಒಳಾಂಗಣ ಮಾರುಕಟ್ಟೆ ಇದಾಗಿರುವುದರಿಂದ ಬಿಸಿಲು, ಮಳೆಯ ಚಿಂತೆಯಿಲ್ಲದೆ ಸುತ್ತಾಡಬಹುದು. ಪ್ರವಾಸಿಗರೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಬಣ್ಣ ಬಣ್ಣದ ಹೂವುಗಳನ್ನು ನೋಡಿ ಆನಂದಿಸುತ್ತಾರೆ. ಆದರೆ ಮುಂಜಾವಿನ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಕಾರಣ ಆ ಸಮಯದಲ್ಲಿ ಹೂವುಗಳ ರಾಶಿ ರಾಶಿ ಬೆಟ್ಟಗಳನ್ನು ಆಸ್ವಾದಿಸಬಹುದು. ನಂತರ ಸಮಯ ಕಳೆದ ಹಾಗೆ ಇವು ಖರೀದಿಸಲ್ಪಡುತ್ತವೆ.
ಚಿತ್ರಕೃಪೆ: Meena Kadri

ಭಾರತದ ವಿಭಿನ್ನ ಬಜಾರುಗಳು:
ಕನೌಜ್ ಮಾರುಕಟ್ಟೆ: ಉತ್ತರ ಪ್ರದೇಶ ರಾಜ್ಯದಲ್ಲಿರುವ ಕನೌಜ್ ಪಟ್ಟಣದಲ್ಲಿರುವ ಒಂದು ಮಾರುಕಟ್ಟೆಯು ಇತರೆ ಮಾರುಕಟ್ಟೆಯ ಹಾಗಿರದೆ ವಿಭಿನ್ನವಾಗಿದ್ದು, ಭೇಟಿ ನೀಡಲು ಯೋಗ್ಯವಾದ ಒಂದು ವಿಶಿಷ್ಟ ಮಾರುಕಟ್ಟೆಯಾಗಿದೆ. ಕಾರಣ ಇಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುವ ಸುಗಂಧ ದ್ರವ್ಯ ಅಥವಾ ಅತ್ತರ್. ಇವೂ ಸಾಂಪ್ರದಾಯಿಕ ಹಿಡಿಕೆಗಳಲ್ಲೂ ಲಭ್ಯ. ಅಷ್ಟೆ ಏಕೆ ಇಲ್ಲಿ ವಿಶಿಷ್ಟವಾಗಿ ಸುಗಂಧ ದ್ರವ್ಯ ತಯಾರಿಸುವ ವಿಧಾನ, ಬಳಸಲ್ಪಡುವ ವಿಶಿಷ್ಟ ಉಪಕರಣಗಳನ್ನೂ ಸಹ ಕಾಣಬಹುದು. ಇಲ್ಲಿ ನೆಲೆಸಿರುವ ಕೆಲ ಜನರು ತಲ ತಲಾಂತರದಿಂದ ಈ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಸುತ್ತಾಡುವಾಗ ವಾತಾವರಣದಲ್ಲಿ ಸುಗಂಧ ಪಸರಿಸಿರುವದನ್ನು ಅನುಭವಿಸಬಹುದು. ಒಂಟೆ ಚರ್ಮದ ಕುಡಿಕೆಯಲ್ಲಿ ಸಂಗ್ರಹಿಸಲಾದ ಕನೌಜ್ ಮಾರುಕಟ್ಟೆಯ ಸುಗಂಧ ದ್ರವ್ಯ/ಅತ್ತರ್.
ಚಿತ್ರಕೃಪೆ: David Prasad

ಭಾರತದ ವಿಭಿನ್ನ ಬಜಾರುಗಳು:
ಸರ್ದಾರ್ ಮಾರುಕಟ್ಟೆ: ರಾಜಸ್ಥಾನದ ಜೋಧಪುರದಲ್ಲಿರುವ ಪ್ರಸಿದ್ಧ ಮೆಹ್ರಾನಗಡ್ ಕೋಟೆಯ ಬಳಿ ಇರುವ ಈ ಮಾರುಕಟ್ಟೆ ಅದ್ಭುತ ಪ್ರವಾಸಿ ಆಕರ್ಷಣೆಯಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ದವಸಧಾನ್ಯಗಳ ಜೊತೆಗೆ ಇಲ್ಲಿ ರಾಜಸ್ಥಾನಿ ಶೈಲಿಯ ಕುಸುರಿ ವಸ್ತುಗಳು, ಬಟ್ಟೆಗಳು, ಆಭರಣಗಳು, ವಿಶಿಷ್ಟ ಚಪ್ಪಲಿಗಳು, ಬೊಂಬೆಗಳು ಹೀಗೆ ವೈವಿಧ್ಯಮಯ ವಸ್ತುಗಳು ದೊರಕುತ್ತವೆ. ಅಂಗಡಿ ಇರಲಿ ಅಥವಾ ಇಲ್ಲದೆ ಇರಲಿ ಕಟ್ಟೆ ಜಗುಲಿಗಳ ಮೇಲೂ ಬಣ್ಣ ಬಣ್ಣದ, ವಿವಿಧ ಚಿತ್ತಾರಗಳ ಮಹಿಳೆಯರ ಉಡುಗೆ ತೊಡುಗೆಗಳು ಇಲ್ಲಿ ದೊರೆಯುತ್ತವೆ.
ಚಿತ್ರಕೃಪೆ: MGA73bot2

ಭಾರತದ ವಿಭಿನ್ನ ಬಜಾರುಗಳು:
ಬಹುತೇಕ ಎಲ್ಲ ಮಾರುಕಟ್ಟೆಗಳಲ್ಲಿ, ವ್ಯಾಪಾರಿ ಮಳಿಗೆಗಳಲ್ಲಿ ಹೆಚ್ಚಾಗಿ ಪುರುಷರೆ ಪ್ರಧಾನವಾಗಿ ವ್ಯವಹರಿಸುವುದನ್ನು ನಾವು ಕಾಣುತ್ತೇವೆ. ಆದರೆ ಕೇವಲ ಮಹಿಳೆಯರೆ ಸ್ವತಃ ಮಾರುಕಟ್ಟೆಯನ್ನು ನಡೆಸುತ್ತ ನಿಯಂತ್ರಿಸುವುದನ್ನು ಎಲ್ಲಿಯಾದರೂ ನೋಡಿದ್ದೀರಾ? ಇಲ್ಲವೆಂದರೆ ಒಂದೊಮ್ಮೆ ಈಶಾನ್ಯ ಭಾರತದ ಮಣಿಪುರ ರಾಜ್ಯದ ರಾಜಧಾನಿ ಇಂಫಾಲ್ ನಗರಕ್ಕೊಮ್ಮೆ ಭೇಟಿ ನೀಡಿ. ಇಲ್ಲಿರುವ ಇಮಾ ಮಾರುಕಟ್ಟೆ ಅಂತಹ ಒಂದು ವಿಶಿಷ್ಟ ಮಾರುಕಟ್ಟೆಯಾಗಿದೆ. ಪ್ರಪಂಚದಲ್ಲೆ ಈ ರೀತಿಯ ಒಂದು ಮಾರುಕಟ್ಟೆ ಇದಾಗಿದೆ ಎಂದು ಹೇಳಲಾಗುತ್ತದೆ. ದೊಡ್ಡ ಸಂಕೀರ್ಣವೊಂದರಲ್ಲಿ ಸಾಲು ಸಾಲಾಗಿ ಕುಳಿತು ವ್ಯಾಪಾರ ಮಾಡುತ್ತಿರುವ ಮಹಿಳೆಯರು ಇಲ್ಲಿ ಕಾಣಸಿಗುತ್ತಾರೆ. ಹಾಗೂ ಈ ಮಾರುಕಟ್ಟೆಯಲ್ಲಿ ಸ್ಥಳೀಯವಾಗಿ ಬಳಸಲ್ಪಡುವ ವೈವಿಧ್ಯಮಯ ವಸ್ತುಗಳು ದೊರಕುತ್ತವೆ.
ಚಿತ್ರಕೃಪೆ: PP Yoonus

ಭಾರತದ ವಿಭಿನ್ನ ಬಜಾರುಗಳು:
ಜೀವ್ ಟೌನ್ : ಕೇರಳ ರಾಜ್ಯದ ಕೊಚ್ಚಿ ನಗರದಲ್ಲಿರುವ ಯಹೂದಿ ಕುಟುಂಬಗಳಿಂದ ನಡೆಸಿಕೊಂಡು ಬರಲಾಗಿರುವ ಈ ಮಾರುಕಟ್ಟೆಯು ಒಂದು ವಿಶಿಷ್ಟ ಮಾರುಕಟ್ಟೆಯಾಗಿದೆ. ಬಹುತೇಕ ವಿದೇಶ ಪ್ರವಾಸಿಗರು ಈ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವಿಶೇಷವೆಂದರೆ ಇಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ದೊರಕುವ ವಿಶಿಷ್ಟ ವಸ್ತುಗಳು ಇಲ್ಲಿ ದೊರೆಯುತ್ತವೆ. ಇದೇನು ಅಷ್ಟು ದೊಡ್ಡದಾಗಿಲ್ಲದಿದ್ದರೂ ವಿಶಿಷ್ಟವಾದ ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: Adams Homestay Cochin

ಭಾರತದ ವಿಭಿನ್ನ ಬಜಾರುಗಳು:
ಗೋವಾದ ಅಲ್ಪ ಬೆಲೆಯ ಮಾರುಕಟ್ಟೆಗಳು : ಗೋವಾದ ಕಲಂಗೂಟ್, ಮಾಪುಸಾ, ಪಣಜಿ ಮುಂತಾದ ಪ್ರೇಕ್ಷಣೀಯ ಕಡಲ ತೀರಗಳ ಸ್ಥಳಗಳಲ್ಲಿ ಅಲ್ಪ ಬೆಲೆಯ ಮಾರುಕಟ್ಟೆಗಳು ಬಲು ವಿಶಿಷ್ಟವಾಗಿರುತ್ತವೆ. ಆಧುನಿಕ ಬದುಕಿಗೆ ಒಪ್ಪುವಂತಹ, ಕ್ರಿಯಾಶೀಲತೆಯಿಂದ ಕೂಡಿರುವಂತಹ ತರಹೇವಾರಿ ವಸ್ತುಗಳು, ಆಭರಣಗಳು ಅಲ್ಪ ಬೆಲೆಗಳಿಗೆ ಇಲ್ಲಿ ದೊರೆಯುವುದೆ ಈ ಮಾರುಕಟ್ಟೆಗಳ ವಿಶೇಷ. ಗೋವಾದಲ್ಲಿರುವ ಟಿಬೆಟ್ ಬಜಾರ್.
ಚಿತ್ರಕೃಪೆ: wikimedia

ಭಾರತದ ವಿಭಿನ್ನ ಬಜಾರುಗಳು:
ಚೌರಂಗೀ ಲೇನ್ : ಇಂದು ಜವಾಹರಲಾಲ್ ನೆಹರೂ ರಸ್ತೆ ಎಂದು ಕರೆಯಲ್ಪಡುವ ಈ ಬೀದಿ ಬದಿ ಅಂಗಡಿಗಳ ರಸ್ತೆಯು ಕೊಲ್ಕತ್ತಾ ನಗರದ ಅತಿ ಮುಖ್ಯ ರಸ್ತೆಯಾಗಿದ್ದು ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಎಲ್ಲ ರೀತಿಯ ವಸುಗಳು, ಈ ರಸ್ತೆಯ ತುಂಬೆಲ್ಲ ಇದ್ದು ನೋಡಲು ಆಕರ್ಷಕವಾಗಿದೆ.
ಚಿತ್ರಕೃಪೆ: Paul Hamilton

ಭಾರತದ ವಿಭಿನ್ನ ಬಜಾರುಗಳು:
ತೆಲಂಗಾಣ ರಾಜ್ಯದ ರಾಜಧಾನಿ ನಗರವಾದ ಹೈದರಾಬಾದ್ ನಗರದ ಪ್ರತಿಷ್ಠಿತ ಚಾರ್ಮಿನಾರ್ ಸ್ಮಾರಕದ ಬಳಿಯಿರುವ ಲಾಡ್ ಬಜಾರ್ ಖಂಡಿತವಾಗಿಯೂ ಮಹಿಳೆಯರು ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಮಾರುಕಟ್ಟೆ ಪ್ರದೇಶವಾಗಿದೆ. ಕಾರಣ ಇಲ್ಲಿ ದೊರಕುವ ವೈವಿಧ್ಯಮಯ ವಸ್ತ್ರಾಭರಣಗಳು. ಅದರಲ್ಲೂ ವಿಶೇಷವಾಗಿ ಸಾಕಷ್ಟು ಬಗೆಯ ಬಳೆಗಳಿಗೆ ಈ ಮಾರುಕಟ್ಟೆ ಪ್ರಸಿದ್ಧವಾಗಿದೆ. ಅಲ್ಲದೆ ಮುತ್ತಿನ ಆಭರಣಗಳು, ಉತ್ತಮ ಗುಣಮಟ್ಟದ ಹರಳಿನ ಆಭರಣಗಳೂ ಸಹ ಇಲ್ಲಿ ದೊರೆಯುತ್ತವೆ.
ಚಿತ್ರಕೃಪೆ: Cephas 405

ಭಾರತದ ವಿಭಿನ್ನ ಬಜಾರುಗಳು:
ಹೈದರಾಬಾದ್ ನಗರ ಮೊದಲಿನಿಂದಲೂ ಮುತ್ತುಗಳಿಗೆ ಹೆಸರುವಾಸಿ. ಹಾಗಾಗಿ ನೀವು ಈ ನಗರಕ್ಕೆ ಭೇಟಿ ನೀಡಿದಾಗ ಒಂದೊಮ್ಮೆ ಲಾಡ್ ಬಜಾರಿಗೆ ಭೇಟಿ ನೀಡಿ ಇಲ್ಲಿನ ಮುತ್ತುಗಳ ಸರಗಳನ್ನು ನೋಡದೆ ಇರಬೇಡಿ.
ಚಿತ್ರಕೃಪೆ: Abhinaba Basu

ಭಾರತದ ವಿಭಿನ್ನ ಬಜಾರುಗಳು:
ಅರ್ಪೋರಾ ರಾತ್ರಿ ಮಾರುಕಟ್ಟೆ: ಉತ್ತರ ಗೋವಾದಲ್ಲಿರುವ ಅರ್ಪೋರಾ ಒಂದು ಸಣ್ಣ ಗ್ರಾಮ. ರಾಜಧಾನಿ ಪಣಜಿ ನಗರದಿಂದ ಕೇವಲ 18 ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರತಿ ಶನಿವಾರ (ಪ್ರವಾಸಿ ಋತುವಿನಲ್ಲಿ) ನಡೆಯುವ "ಶನಿವಾರದ ರಾತ್ರಿ ಬಜಾರ್" ರೋಮಾಂಚನ ಉಂಟುಮಾಡದೆ ಇರಲಾರದು.
ಚಿತ್ರಕೃಪೆ: Ashwin Kumar

ಭಾರತದ ವಿಭಿನ್ನ ಬಜಾರುಗಳು:
ಈ ಮಾರುಕಟ್ಟೆಯು ನಿಜ ಅರ್ಥದಲ್ಲಿ ವಿಶಿಷ್ಟವಾಗಿದೆ. ಅತಿ ವಿಚಿತ್ರ ಬಗೆಯ, ಕ್ರಿಯಾಶೀಲತೆಯಿಂದ ತುಂಬಿ ತುಳುಕುತ್ತಿರುವಂತಹ ವೈವಿಧ್ಯಮಯ ವಸ್ತುಗಳು ಇಲ್ಲಿ ದೊರೆಯುತ್ತವೆ. ಪ್ರಸ್ತುತ ಯುವ ಜನಾಂಗದ ಯೋಚನಾ ಲಹರಿಗೆ ಪೂರಕವಾಗಿರುವಂತಹ ವಸ್ತುಗಳು ಇಲ್ಲಿ ದೊರೆಯುತ್ತವೆ.
ಚಿತ್ರಕೃಪೆ: Ashwin Kumar

ಭಾರತದ ವಿಭಿನ್ನ ಬಜಾರುಗಳು:
ಕೇವಲ ದೇಶೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ವಸ್ತುಗಳು, ಆಭರಣಗಳು, ಬಟ್ಟೆಗಳು ಇಲ್ಲಿ ದೊರೆಯುತ್ತವೆ. ಪ್ರಾಯಶಃ ಇಲ್ಲಿ ದೊರೆಯುವ ಅಂತಾರಾಷ್ಟ್ರೀಯ ಮಟ್ಟದ ಕೆಲವು ವಸ್ತುಗಳು ದೇಶದ ಮಿತ್ತಿನ್ನೆಲ್ಲೂ ಸಿಗಲಾರದು.
ಚಿತ್ರಕೃಪೆ: Ashwin Kumar

ಭಾರತದ ವಿಭಿನ್ನ ಬಜಾರುಗಳು:
ಪ್ರವಾಸಿ ಋತುವಿನಲ್ಲಿ ಪ್ರತಿ ಶನಿವಾರ ಸಂಜೆಯಿಂದ ಪ್ರಾರಂಭವಾಗುವ ಈ ಮಾರುಕಟ್ಟೆ ಮಧ್ಯ ರಾತ್ರಿಯವರೆಗೂ ನಡೆಯುತ್ತದೆ. ರುಚಿಕರವಾದ ಮೀನಿನ ಹಾಗೂ ಚಾಟ್ ಖಾದ್ಯಗಳೂ ಸಹ ಈ ಮಾರುಕಟ್ಟೆಯಲ್ಲಿ ಮಧ್ಯ ರಾತ್ರಿಯ ಸಮಯದವರೆಗೂ ದೊರೆಯುತ್ತದೆ.
ಚಿತ್ರಕೃಪೆ: innacoz

ಭಾರತದ ವಿಭಿನ್ನ ಬಜಾರುಗಳು:
ವಿಶೇಷವೆಂದರೆ ಈ ಮಾರುಕಟ್ಟೆಯಲ್ಲಿ ಡಿಜೆ ಸಂಗೀತ, ಸಾಹಸಮಯ ಪ್ರದರ್ಶನ ಮುಂತಾದವುಗಳನ್ನು ಆಯೋಜಿಸಲಾಗಿರುತ್ತದೆ. ಹೀಗಾಗಿ ಈ ಮಾರುಕಟ್ಟೆಗೆ ಬರುವವರು ವಿಶಿಷ್ಟ ವಸ್ತುಗಳನ್ನು ಖರೀದಿಸಬಹುದಲ್ಲದೆ ಸಂಗೀತ ಕೇಳುತ್ತ, ಹಾಯಾಗಿ ತಿನ್ನುತ್ತ ಸಂತಸ ಪಡಬಹುದು.
ಚಿತ್ರಕೃಪೆ: Ashwin Kumar

ಭಾರತದ ವಿಭಿನ್ನ ಬಜಾರುಗಳು:
ಛಪ್ಪನ್ ಚೌಕ್ : ಮಧ್ಯ ಪ್ರದೇಶದ ದೊಡ್ಡ ಪಟ್ಟಣವಾದ ಇಂದೋರ್ ನಲ್ಲಿ ಈ ಮಾರುಕಟ್ಟೆಯಿದೆ. ಹಿಂದಿಯಲ್ಲಿ ಛಪ್ಪನ್ ಎಂದರೆ 56 ಎಂದಾಗುತ್ತದೆ. ಈ ಮಾರುಕಟ್ಟೆಯಲ್ಲಿ ಬರೋಬ್ಬರಿ 56 ಅಂಗಡಿಗಳಿರುವುದರಿಂದ ಇದಕ್ಕೆ ಛಪ್ಪನ್ ಬಜಾರ್ ಎಂದು ಕರೆಯಲಾಗಿದೆ. ಈ ಮಾರುಕಟ್ಟೆಯ ವಿಶೇಷವೆಂದರೆ ಎಲ್ಲ ಅಂಗಡಿಗಳಲ್ಲಿ ಸಿಗುವುದು ಒಂದೆ ವಸ್ತು ಅದುವೆ ಊಟ. ಭಾರತೀಯ ವೈವಿಧ್ಯಮಯ ಖಾದ್ಯಗಳು ಈ ಬಜಾರ್ ನಲ್ಲಿ ಕೈಗೆಟುಕುವ ದರದಲ್ಲಿ ದೊರೆಯುತ್ತವೆ. ಸಾಂದರ್ಭಿಕ ಚಿತ್ರ. ಇಂದೋರ್ ನ ಖಜೂರಿ ಬಜಾರ್.
ಚಿತ್ರಕೃಪೆ: McKay Savage

ಭಾರತದ ವಿಭಿನ್ನ ಬಜಾರುಗಳು:
ಮಾಲ್ ರಸ್ತೆ ಮಾರುಕಟ್ಟೆ: ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾದ ಮಾಲ್ ರಸ್ತೆ ಮಾರುಕಟ್ಟೆಯೂ ಸಹ ಒಂದು ಜನಪ್ರೀಯವಾದ ಮಾರುಕಟ್ಟೆಯಾಗಿದೆ. ಇಲ್ಲಿ ಹಿಮಾಚಲ ಪ್ರದೇಶದ ಗುರುತರವಾದ ವಸ್ತುಗಳು, ರುಚಿ ರುಚಿಯಾದ ಖಾದ್ಯಗಳ ಉಪಹಾರಗೃಹಗಳು ಹೀಗೆ ವೈವಿಧ್ಯಮಯ ವಸ್ತುಗಳು ದೊರಕುತ್ತವೆ. ಶಿಮ್ಲಾ ಪ್ರವಾಸಕ್ಕೆ ತೆರಳುವವರು ಈ ಮಾರುಕಟ್ಟೆಗೆ ಭೇಟಿ ನೀಡದೆ ಮರಳಲಾರರು.
ಚಿತ್ರಕೃಪೆ: Betelgeuse

ಭಾರತದ ವಿಭಿನ್ನ ಬಜಾರುಗಳು:
ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ವಜ್ರ ವೈಢೂರ್ಯಾದಿಗಳನ್ನು ರಸ್ತೆ ಬದಿಗಳಲ್ಲಿ ಮಾರುತ್ತಿದ್ದರಂತೆ! ಇಂದು ಆ ಸ್ಥಿತಿ ಇಲ್ಲದೆ ಹೋದರೂ ರಸ್ತೆ ಬದಿಗಳ ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಗಳು ವ್ಯವಹರಿಸಲ್ಪಡುವುದನ್ನು ಇಂದೂ ಸಹ ಕಾಣಬಹುದು. ಹೌದು ಗುಜರಾತ್ ರಾಜ್ಯದ ಸೂರತ್ ನಗರದಲ್ಲಿರುವ ಮಹಿದರ್ಪುರ ಬೀದಿ ಮಾರುಕಟ್ಟೆಯು ಅಂತಹ ಒಂದು ಪ್ರಸಂಗ ಒದಗಿಸುತ್ತದೆ. ಸದಾ ಕಿಕ್ಕಿರಿದು ತುಂಬಿರುವ ಈ ಮಾರುಕಟ್ಟೆಯು ವಜ್ರದ ಕೊರೆಯುವುದು, ಪಾಲಿಶ್ ಮಾಡುವುದು ಮುಂತಾದ ಸೇವೆಗಳ ಕೈಗಾರಿಕೆಗಳಿಗೆ ಬಲು ಪ್ರಸಿದ್ಧ. ನಿಮಿಷ ನಿಮಿಷ ಗಳಲ್ಲಿ ಲಕ್ಷ ಲಕ್ಷ ರೂಪಾಯಿಗಳ ವಹಿವಾಟು ಇಲ್ಲಿ ಜರುಗುತ್ತಿರುತ್ತದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Kim Alaniz

ಭಾರತದ ವಿಭಿನ್ನ ಬಜಾರುಗಳು:
ಚೋರ್ ಬಜಾರ್ : ಈ ಲೇಖನದಲ್ಲಿ ಮೂಡಿ ಬಂದ ಬಜಾರುಗಳ ಪಟ್ಟಿಯಲ್ಲಿ ಕೊನೆಯದಾಗಿ ಮತ್ತೊಂದು ಮಾರುಕಟ್ಟೆಯ ಹೆಸರು ನಮೂದಿಸದೆ ಇದು ಪೂರ್ಣವೆ ಅಲ್ಲ. ಈ ಬಜಾರ್ ದೇಶದಲ್ಲೆ ಹೆಚ್ಚು ಹೆಸರುವಾಸಿ. ಈ ಬಜಾರಿಗೆ ಸಂಬಂಧಿಸಿದಂತೆ ಒಂದು ನಾಣ್ಣುಡಿ ಪ್ರಚಲಿತದಲ್ಲಿದೆ: "ನೀವು ಏನೇ ಕಳೆದುಕೊಂಡರೂ ಈ ಬಜಾರಿಗೆ ಭೇಟಿ ನೀಡಿ ಮತ್ತೆ ಅದನ್ನ ಪಡೆಯಬಹುದು" ಹೌದು ಆ ಮಾರುಕಟ್ಟೆಯೆ ಮುಂಬೈನ ಜನಪ್ರೀಯ ಚೋರ್ ಬಜಾರ್.
ಚಿತ್ರಕೃಪೆ: Mathanki Kodavasal

ಭಾರತದ ವಿಭಿನ್ನ ಬಜಾರುಗಳು:
ವೈವಿಧ್ಯಮಯ, ಎಲ್ಲ ರೀತಿಯ, ಎಲ್ಲ ಬಗೆಯ ವಸ್ತುಗಳು ಚೌಕಾಸಿ ಮೂಲಕ ಅತಿ ಕಡಿಮೆ ಬೆಲೆಗೆ ದೊರಕುವ ಈ ಬಜಾರ್/ಮಾರುಕಟ್ಟೆ ಪ್ರವಾಸಿ ಆಕರ್ಷಣೆಯೂ ಹೌದು. ಹಿಂದೆ ಈ ಮಾರುಕಟ್ಟೆ ಸದಾ ಗದ್ದಲದಿಂದ ಕೂಡಿದ್ದುದರಿಂದ ಇದನ್ನು ಶೋರ್ (ಹಿಂದಿಯಲ್ಲಿ ಶೋರ್ ಎಂದರೆ ಗದ್ದಲ ಎಂದಾಗುತ್ತದೆ) ಬಜಾರ್ ಅನ್ನುತ್ತಿದ್ದರು. ಕ್ರಮೇಣವಾಗಿ ಇದು ಶೋರ್ ಬದಲಾಗಿ ಚೋರ್ (ಕಳುವು/ಕಳ್ಳತನ) ಎಂದು ಹೆಸರು ಪಡೆಯಿತೆಂದು ಹೇಳಲಾಗುತ್ತದೆ. ಕೆಲವರ ಪ್ರಕಾರ, ಇಲ್ಲಿ ಕಳುವು ಮಾಡಲಾದ ವಸ್ತುಗಳು ದೊರೆಯುತ್ತವೆ.
ಚಿತ್ರಕೃಪೆ: Belasd

ಭಾರತದ ವಿಭಿನ್ನ ಬಜಾರುಗಳು:
ಅಲ್ಲದೆ "ಸೆಕಂಡ್ ಹ್ಯಾಂಡ್" ವಸ್ತುಗಳು ದೊರೆಯುತ್ತವೆ. ಚೌಕಾಸಿ ಮಾಡುವುದು ಅನಿವಾರ್ಯ. ಮತ್ತೊಂದು ಸಂಗತಿಯೆಂದರೆ ಗುಣಮಟ್ಟದ ಕುರಿತು ಏನೂ ಹೇಳಲಾಗುವುದಿಲ್ಲ. ಆದರೆ ಅಪರೂಪದ ಹಳೆಯ ವಸ್ತುಗಳ, ಕಲಾಕೃತಿಗಳ ಖರೀದಿಗೆ ಇದೊಂದು ಅದ್ಭುತವಾದ ತಾಣವೆಂದೆ ಹೇಳಬಹುದು.
ಚಿತ್ರಕೃಪೆ: Gayatri Krishnamoorthy

ಭಾರತದ ವಿಭಿನ್ನ ಬಜಾರುಗಳು:
ಕಬ್ಬಿಣದ ಸಲಕರಣೆಗಳು, ಯಂತ್ರಗಳ ಬಿಡಿ ಭಾಗಗಳು ಹೀಗೆ ಲೋಹದ ಬಗೆ ಬಗೆಯ ಉಪಕರಣಗಳು ಇಲ್ಲಿ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಇಲ್ಲಿ ದೊರೆಯುತ್ತವೆ.
ಚಿತ್ರಕೃಪೆ: Jon Connell

ಭಾರತದ ವಿಭಿನ್ನ ಬಜಾರುಗಳು:
ನಿಮಗೆ 80 ಹಾಗೂ 90 ರ ದಶಕದ ಹಿಂದಿ ಚಲನಚಿತ್ರಗಳ ಚಿತ್ರಪಟಗಳು ನೆನಪಿದೆಯೆ? ಹೌದು ಇನ್ನೂ ಕೆಲವರಿಗೆ ಅಂತಹ ಚಿತ್ರಪಟಗಳನ್ನು ನೋಡುವ ಆಸೆ ಇಂದಿಗೂ ಇದೆ. ನಿಮಗೂ ಸಹ ಆ ಇಚ್ಛೆ ಇದ್ದಲ್ಲಿ ಆ ಕಾಲದ ಚಲನಚಿತ್ರಗಳ ಪೊಸ್ಟರುಗಳನ್ನೂ ಸಹ ಇಲ್ಲಿ ಕೊಂಡು ಕೊಳ್ಳಬಹುದು.
ಚಿತ್ರಕೃಪೆ: Leonora Enking

ಭಾರತದ ವಿಭಿನ್ನ ಬಜಾರುಗಳು:
ಮೊಬೈಲ್ ಗಳು ಹಾಗೂ ಇತರೆ ಕಬ್ಬಿಣದ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಕೈಗೆಟುಕುವ ದರಗಳಲ್ಲಿ...
ಚಿತ್ರಕೃಪೆ: Cory Doctorow

ಭಾರತದ ವಿಭಿನ್ನ ಬಜಾರುಗಳು:
ಅತಿ ಕಡಿಮೆ ಬೆಲೆಗಳಲ್ಲಿ ವಾಹನಗಳ ಹಾರ್ನ್ ಮಾಡುವ ಧ್ವನಿ ಪ್ರಸಾರಕಗಳು (ಸ್ಪೀಕರ್)ಸಂಗೀತದೋಪಕರಣಗಳೂ ಸಹ ಇಲ್ಲಿ ಲಭ್ಯ.
ಚಿತ್ರಕೃಪೆ: Cory Doctorow


Click it and Unblock the Notifications


















