Search
  • Follow NativePlanet
Share
» »ಈ ರಾಷ್ಟ್ರೀಯ ಉದ್ಯಾನವನಗಳನ್ನು ಮಳೆಗಾಲದಲ್ಲಿ ನೋಡುವುದೇ ಚೆಂದ…

ಈ ರಾಷ್ಟ್ರೀಯ ಉದ್ಯಾನವನಗಳನ್ನು ಮಳೆಗಾಲದಲ್ಲಿ ನೋಡುವುದೇ ಚೆಂದ…

ಭಾರತದಲ್ಲಿ ಭೇಟಿ ನೀಡಲು ಪ್ರವಾಸ ಸ್ಥಳಗಳಿಗೇನು ಕೊರತೆಯಿಲ್ಲ. ಅದು ಕಡಲತೀರದ ತಾಣವಾಗಲಿ ಅಥವಾ ಗಿರಿಧಾಮವಾಗಲಿ ಅಥವಾ ವನ್ಯಜೀವಿ ಅಭಯಾರಣ್ಯವಾಗಲಿ...ಹಲವಾರು ಆಯ್ಕೆಗಳಿದ್ದು, ನಿಮ್ಮ ರಜೆಯನ್ನು ನೀವು ಒಂದು ಅಥವಾ ಎರಡು ವರ್ಷಗಳ ಕಾಲ ಕಾಯ್ದಿರಿಸಬಹುದು. ಆದರೆ ನಿಮ್ಮ ಪ್ರಯಾಣದ ಅನುಭವವನ್ನು ಸ್ಮರಣೀಯವಾಗಿಸಲು ನೀವು ಬಯಸಿದರೆ ಸೀಸನ್ ಪ್ರಕಾರ ಪ್ರಯಾಣಿಸಿಬೇಕು. ಬೇಕಾದರೆ ಒಂದು ಪ್ಲಾನ್‌ ಮಾಡಿ. ಈಗ ಹೇಗಿದ್ದರೂ ಮಳೆಗಾಲ. ಈ ಸಂದರ್ಭದಲ್ಲಿ ಪರ್ವತ ಪ್ರದೇಶಗಳಿಗೆ ಭೇಟಿ ನೀಡುವುದರಿಂದ ಫನ್‌ ಮಾಡಲಂತೂ ಸಾಧ್ಯವೇ ಇಲ್ಲ. ಆದರೆ ಈ ಸೀಸನ್‌ನಲ್ಲಿ ಅನೇಕ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡುವುದು ಸೂಕ್ತ. ಅವು ಯಾವುವು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಲೇಖನ ಓದಿ...

kabininp1

ಕಬಿನಿ ರಾಷ್ಟ್ರೀಯ ಉದ್ಯಾನವನ

ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿರುವ ಕಬಿನಿ ರಾಷ್ಟ್ರೀಯ ಉದ್ಯಾನವನವೂ ಸೇರಿದೆ. ಇದು ದಕ್ಷಿಣ ಭಾರತದ ಅತ್ಯಂತ ಸುಂದರವಾದ ರಾಷ್ಟ್ರೀಯ ಉದ್ಯಾನವನವಾಗಿದೆ. ಕರ್ನಾಟಕ ರಾಜ್ಯದಲ್ಲಿರುವವರು ಈ ರಾಷ್ಟ್ರೀಯ ಉದ್ಯಾನವನವನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಸುತ್ತಮುತ್ತಲಿನ ಹಸಿರು ಮತ್ತು ಶಾಂತಿಯುತ ಪರಿಸರ ವಿಶೇಷವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಉದ್ಯಾನವನದಲ್ಲಿರುವ ಕಬಿನಿ ನದಿಯಲ್ಲಿ ದೋಣಿ ವಿಹಾರವನ್ನೂ ಆನಂದಿಸಬಹುದು. ಜಂಗಲ್ ಸಫಾರಿ ಸಮಯದಲ್ಲಿ ಕಬಿನಿ ರಾಷ್ಟ್ರೀಯ ಉದ್ಯಾನವನದಲ್ಲಿ ಅನೇಕ ಪ್ರಾಣಿಗಳನ್ನು ಕಾಣಬಹುದು.

ತಲುಪುವ ಮಾರ್ಗ: ಕಬಿನಿಯನ್ನು ವಿಮಾನ, ರೈಲು ಅಥವಾ ರಸ್ತೆ ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು. ಬೆಂಗಳೂರು, ಮೈಸೂರು ಅಥವಾ ಇತರ ಹತ್ತಿರದ ನಗರಗಳಿಂದ ಕಬಿನಿಯನ್ನು ತಲುಪಲು ಅತ್ಯಂತ ಅನುಕೂಲಕರ ಮತ್ತು ಜನಪ್ರಿಯ ಮಾರ್ಗವಾಗಿದೆ. ಭಾರತದ ಉತ್ತರ ಭಾಗದಿಂದ ಪ್ರಯಾಣಿಸುವವರು ವಿಮಾನದ ಮೂಲಕ ಬೆಂಗಳೂರು ಅಥವಾ ಕೊಯಮತ್ತೂರು ತಲುಪಬಹುದು.

valleyofflowers3

ಉತ್ತರಾಖಂಡದಲ್ಲಿರುವ ಫ್ಲವರ್‌ ವ್ಯಾಲಿ

ಉತ್ತರಾಖಂಡದಲ್ಲಿರುವ ಫ್ಲವರ್‌ ವ್ಯಾಲಿಗೆ ಭೇಟಿ ನೀಡಬೇಕೆಂದರೆ ಮಳೆಗಾಲದಲ್ಲಿ ತೆರಳಿ. ಏಕೆಂದರೆ ನಿಮಗೆ ನಿಜವಾದ ಮಜಾ ಸಿಗುವುದು ಮಳೆಯ ಸಮಯದಲ್ಲಿ ಮಾತ್ರ. ಏಕೆಂದರೆ ಈ ಋತುವಿನಲ್ಲಿ ಇಡೀ ಕಣಿವೆಯು ಹೂವುಗಳಿಂದ ತುಂಬಿರುತ್ತದೆ. ಈ ಕಣಿವೆಯು 15 ದಿನಗಳಿಗೊಮ್ಮೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಇಲ್ಲಿನ ಸೌಂದರ್ಯವಂತೂ ಉತ್ತುಂಗದಲ್ಲಿರುತ್ತದೆ. ಈ ಸ್ಥಳಕ್ಕೆ ಹೋಗುವುದರಿಂದ ನೀವು ವಿಭಿನ್ನ ರೀತಿಯ ಅನುಭವವನ್ನು ಅನುಭವಿಸುವಿರಿ. ಹೆಚ್ಚು ಕಡಿಮೆ ಸುಮಾರು 500 ಜಾತಿಯ ಹೂವುಗಳನ್ನು ಇಲ್ಲಿ ಕಾಣಬಹುದು.

ತಲುಪುವ ಮಾರ್ಗ: ಹೂಗಳ ಕಣಿವೆಗೆ ತೆರಳಬೇಕೆಂದರೆ ಇದು ಯಾವುದೇ ರಸ್ತೆಯಿಂದ ಸಂಪರ್ಕ ಹೊಂದಿಲ್ಲ. ದೇಶದ ಇತರ ಭಾಗಗಳಿಗೆ ಸಂಪರ್ಕ ಹೊಂದಿರುವ ಹತ್ತಿರದ ಸ್ಥಳವೆಂದರೆ ಗೋವಿಂದಘಾಟ್ (ಜೋಶಿಮಠದ ಹತ್ತಿರ). ಇದು ಹೂವಿನ ಕಣಿವೆಯಿಂದ ಸರಿಸುಮಾರು 17 ಕಿಮೀ ದೂರದಲ್ಲಿದೆ. ಇಲ್ಲಿಂದ ನೀವು ಟ್ರೆಕ್ಕಿಂಗ್ ಮೂಲಕ ಕ್ರಮಿಸಬಹುದು. ಗಂಗರಿಯಾ (ಇದು ಕಣಿವೆಯಿಂದ ಸರಿಸುಮಾರು 3 ಕಿಮೀ ದೂರದಲ್ಲಿದೆ) ಸಮೀಪಿಸುತ್ತಿರುವಾಗ, ಹೂವುಗಳ ಸುಗಂಧವು ಬರಲು ಪ್ರಾರಂಭಿಸುತ್ತದೆ ಮತ್ತು ಪ್ರವಾಸಿಗರು ಆ ಅನುಭವದಿಂದ ಮಂತ್ರಮುಗ್ಧರಾಗುತ್ತಾರೆ. ಆದರೆ ಪ್ರವಾಸಿಗರು ಹೂಗಳ ಕಣಿವೆಯನ್ನು ಪ್ರವೇಶಿಸಲು ಗಂಗಾರಿಯಾದಿಂದ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅನುಮತಿಯು 3 ದಿನಗಳವರೆಗೆ ಇರುತ್ತದೆ ಮತ್ತು ನೀವು ಹಗಲಿನ ಸಮಯದಲ್ಲಿ ಮಾತ್ರ ಚಾರಣ ಮಾಡಬಹುದು. ಉತ್ತರಾಖಂಡ ಮತ್ತು ನವದೆಹಲಿ, ಇನ್ನಿತರ ಸ್ಥಳಗಳಿಂದ ಜೋಶಿಮಠಕ್ಕೆ ಸಂಪರ್ಕವಿರುವುದರಿಂದ ಜೋಶಿಮಠವನ್ನು ತಲುಪುವುದು ಕಷ್ಟದ ಕೆಲಸವಲ್ಲ.

dachigam national park

ದಚಿಗಮ್ ರಾಷ್ಟ್ರೀಯ ಉದ್ಯಾನವನ

ಜಮ್ಮು ಮತ್ತು ಕಾಶ್ಮೀರದ ನೋಟವು ಪ್ರತಿ ಋತುವಿನಲ್ಲಿ ವಿಭಿನ್ನವಾಗಿರುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ನೀವು ಕಾಶ್ಮೀರದ ಸೌಂದರ್ಯವನ್ನು ಅನ್ವೇಷಿಸಿದ್ದರೆ, ಮಾನ್ಸೂನ್‌ನಲ್ಲಿ ಸಹ ಯೋಜನೆಯನ್ನು ಮಾಡಿ, ದಚಿಗಮ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ. ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿರುವ ದಚಿಗಮ್ ರಾಷ್ಟ್ರೀಯ ಉದ್ಯಾನವನದ ಸೌಂದರ್ಯವು ಮಳೆಗಾಲದ ಸಮಯದಲ್ಲಿ ನೋಡಲು ಯೋಗ್ಯವಾಗಿದೆ. ಚಿರತೆ, ಬೆಕ್ಕು ಮತ್ತು ಹಿಮಾಲಯನ್ ಲಾಂಗೂರ್‌ನಂತಹ ಅನೇಕ ಕಾಡು ಪ್ರಾಣಿಗಳನ್ನು ನೀವು ಹೆಚ್ಚು ಶ್ರಮವಿಲ್ಲದೆ ಉದ್ಯಾನದಲ್ಲಿ ಕಾಣಬಹುದು.

ತಲುಪುವ ಮಾರ್ಗ: ದಚಿಗಮ್ ರಾಷ್ಟ್ರೀಯ ಉದ್ಯಾನವನದಿಂದ 22 ಕಿಮೀ ದೂರದಲ್ಲಿರುವ ಶ್ರೀನಗರ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಹೇಗಿದ್ದರೂ ದೆಹಲಿ, ಚಂಡೀಗಢ, ಜಮ್ಮು, ಶ್ರೀನಗರಕ್ಕೆ ಬಸ್ಸುಗಳು ಲಭ್ಯವಿದೆ. ಇನ್ನು ಶ್ರೀನಗರ ಲೋವರ್ ದಚಿಗಮ್‌ನೊಂದಿಗೆ ಸಂಪರ್ಕಿಸುತ್ತದೆ. ಇದು ಶ್ರೀನಗರದಿಂದ 22 ಕಿ.ಮೀ. ಸಾರಿಗೆ ಸೌಲಭ್ಯಗಳು ಉತ್ತಮವಾಗಿಲ್ಲದ ಕಾರಣ ನೀವು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯುವುದು ಉತ್ತಮ. ಉದ್ಯಾನವನದಿಂದ ಶ್ರೀನಗರಕ್ಕೆ ನಿಯಮಿತ ಜೀಪ್ ಸೇವೆಗಳು ಲಭ್ಯವಿವೆ. ನೀವು ಬಸ್ ಅನ್ನು ಸಹ ತೆಗೆದುಕೊಳ್ಳಬಹುದು, ಇದು ಅಗ್ಗದ ಆಯ್ಕೆಯಾಗಿದೆ, ಆದರೆ ಕಡಿಮೆ ಆರಾಮದಾಯಕವಾಗಿದೆ. ಮೇಲಿನ ದಚಿಗಮ್ ಅನ್ನು ಕಾಲ್ನಡಿಗೆಯಲ್ಲಿ ಮಾತ್ರ ಪ್ರಯಾಣಿಸಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+