Search
  • Follow NativePlanet
Share
» »ಮೈಸೂರು ಅರಮನೆಯ ಭವ್ಯ ದೇವಾಲಯಗಳು

ಮೈಸೂರು ಅರಮನೆಯ ಭವ್ಯ ದೇವಾಲಯಗಳು

By Vijay

ಕರ್ನಾಟಕದ ಪಾರಂಪರಿಕ ರಾಜಧಾನಿ ಎಂದೆ ಬಿಂಬಿತವಾದ ಮೈಸೂರು ನಗರದಲ್ಲಿರುವ ಅಂಬಾ ವಿಲಾಸ ಅರಮನೆ ಇಂದು ವಿಶ್ವದಲ್ಲೆ ಪ್ರಖ್ಯಾತಿಗಳಿಸಿದ ಭಾರತದ ಅದ್ಭುತ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ವರ್ಷವೊಂದಕ್ಕೆ ಐದು ಮಿಲಿಯನ್ ಗಿಂತಲೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸುಂದರ ಶಿಲ್ಪಕಲೆ ಹಾಗೂ ಕಣ್ಮನ ಸೆಳೆಯುವ ವಿನ್ಯಾಸ ಹೊಂದಿದ ಅರಮನೆಗೆ ಭೇಟಿ ನೀಡುತ್ತಾರೆಂದರೆ ನೀವೇ ಊಹಿಸಬಹುದು.

ಅರಮನೆಯು ವಿಶಾಲವಾದ ಮೈದಾನ ಹೊಂದಿದ್ದು ಕೆಲವು ವಿಶಿಷ್ಟ ದೇವಾಲಯಗಳಿಗೆ ನೆಲೆಯಾಗಿದೆ. ಹಿಂದೆ ಮೈಸೂರು ಸಂಸ್ಥಾನವಿದ್ದಾಗ ಮೈಸೂರು ಅರಸರು ಈ ದೇವಾಲಯಗಳಿಗೆ ಭೇಟಿ ನೀಡಿ ಪೂಜಿಸುತ್ತಿದ್ದರು. ಅಲ್ಲದೆ ಶುಭ ಕಾರ್ಯಗಳಲ್ಲಿ ಈ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುವುದು ರಾಜ ಮನೆತನದವರ ಸಂಪ್ರದಾಯವಾಗಿತ್ತು.

ಇಂದಿಗೂ ಈ ಪರಂಪರೆ ಮುಂದುವರೆದಿದೆಯಾದರೂ ದೇವಾಲಯಗಳಿಗೆ ಪ್ರವಾಸಿಗರು, ಸಾರ್ವಜನಿಕರು ಭೇಟಿ ನೀಡಬಹುದಾಗಿದೆ. ಪ್ರಸ್ತುತ ಲೇಖನದ ಮೂಲಕ, ಇಂದು ಮೈಸೂರು ಅರಮನೆ ಆವರಣಲ್ಲಿ ಭೇಟಿ ನೀಡಬಹುದಾದ ಕೆಲವು ಸುಂದರ ದೇವಾಲಯಗಲ ಕುರಿತು ತಿಳಿಯಿರಿ.

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಶ್ವೇತ ವರಾಹಸ್ವಾಮಿ ದೇವಾಲಯ : ಮೈಸೂರು ಸಂಸ್ಥಾನದಲ್ಲಿ ಚಿಕ್ಕದೇವರಾಜ ಒಡೆಯರ್ ಅವರ ಆಡಳಿತವಿದ್ದ ಸಂದರ್ಭದಲ್ಲಿ ಶ್ವೇತ ವರಾಹಸ್ವಾಮಿ ದೇವಾಲಯದ ನಿರ್ಮಾಣ ಹೊಯ್ಸಳ ಶೈಲಿಯಲ್ಲಿ ಮಾಡಲಗಿದೆ. ವರಾಹಸ್ವಾಮಿಗೆ ಮುಡಿಪಾದ ಈ ದೇವಾಲಯವು ತನ್ನ ಅದ್ಭುತವಾದ ಗೋಪುರ, ಶಿಲ್ಪಕಲೆ, ಕೆತ್ತನೆ ಹಾಗೂ ಅಲಂಕಾರಿಕ ಖಂಬಗಳಿಂದ ನೋಡುಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Lexicofreak

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಇನ್ನೊಂದು ಉಲ್ಲೇಖದ ಪ್ರಕಾರ, ಮೈಸೂರಿನ ಮೊದಲ ದೀವಾನರಾಗಿದ್ದ ದೀವಾನ್ ಪೂರ್ಣಯ್ಯನವರಿಂದ ಕೃಷ್ಣರಾಜ ಒಡೆಯರ್ ಅವರಿಗಿದ್ದ ಆಸೆಯ ಫಲವಾಗಿ ಮಾಡಲಾಗಿದೆಯಂತೆ. ಇದಕ್ಕಾಗಿ ಶಿವಮೊಗ್ಗದಲ್ಲಿ ಪಾಳು ಬಿದ್ದಿದ್ದ ಹೊಯ್ಸಳ ದೇವಾಲಯವೊಂದ ಅವಶೇಷಗಳನ್ನು ಇದರ ನಿರ್ಮಾಣದಲ್ಲಿ ಬಳಸಲಾಗಿದೆಯಂತೆ.

ಚಿತ್ರಕೃಪೆ: G41rn8

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಲಕ್ಷ್ಮೀರಮಣಸ್ವಾಮಿ ದೇವಾಲಯ : ಎರಡನೇಯ ಚಾಮರಾಜ ಒಡೆಯರ್ (1478-1513) ಅವರ ಸಮಯದಲ್ಲಿ 1499 ರಲ್ಲಿ ಈ ದೇವಾಲಯದ ಪ್ರತಿಷ್ಠಾಪನೆಯಾಯಿತು. ಈ ದೇವಾಲಯ ಇಲ್ಲಿ ಕಂಡುಬರುವ ದೇವಾಲಯಗಳಲ್ಲೆ ಅತಿ ಪುರಾತನವಾದುದು.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಈ ದೇವಾಲಯ ಮೈಸೂರು ಅರಮನೆಯ ಇತಿಹಾಸದಲ್ಲೆ ಮಹತ್ವದ ಸ್ಥಾನ ಪಡೆದಿದೆ, ಕಾರಣ, ಮೂರನೇಯ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ವಿಧಿ ವಿಧಾನಗಳು ಈ ದೇವಾಲಯದಲ್ಲೆ ನಡೆದಿದ್ದವು.

ಚಿತ್ರಕೃಪೆ: Aastha lall

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ತ್ರಿನಯನೇಶ್ವರಸ್ವಾಮಿ ದೇವಾಲಯ : ರಾಜಾ ಒಡೆಯರ್ ಅವರ ಆಡಳಿತ ಸಮಯಕ್ಕೂ ಮುಂಚೆಯೆ ಈ ದೇವಾಲಯದ ನಿರ್ಮಾಣವಾಗಿದೆ. ಮೊದಲು ಇದರ ನಿರ್ಮಾಣವಾದಾಗ ಇದು ಅರಮನೆ ಮೈದಾನದ ಹೊರಗಿತ್ತು.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ನಂತರ ಒಂದನೇಯ ಕಂಠೀರವ ನರಸರಾಜರ ಆಡಳಿತದಲ್ಲಿ ಅರಮನೆ ಆವರಣವನ್ನು ವಿಸ್ತರಿಸಲಾಯಿತು. ಹೀಗಾಗಿ ಈ ದೇವಾಲಯವು ಅರಮನೆಯ ಆವರಣದೊಳಗಿನ ದೇಗುಲಗಳಲ್ಲಿ ಒಂದಾಯಿತು.

ಚಿತ್ರಕೃಪೆ: HPNadig

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ : ಅರಮನೆಯ ಆವರಣದಲ್ಲಿರುವ ಇನ್ನೊಂದು ದೇವಾಲಯವಿದು. ದೇವಾಲಯದಲ್ಲಿ ದೊರೆತಿರುವ ಶಾಸನದಲ್ಲಿ ಒಡೆಯರ್ ಮನೆತನದವರ ಯದು ವಂಶದೊಂದಿಗಿರುವ ನಂಟನ್ನು ತಿಳಿಯಬಹುದಾಗಿದೆ ಎನ್ನಲಾಗಿದೆ.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಈ ದೇವಾಲಯದಲ್ಲಿ ಅಂಬೆಗಾಲಿಟ್ಟು ಸಾಗುತ್ತಿರುವ ಬಾಲ ಕೃಷ್ಣನ ಚಿತ್ರಗಳು, 40 ಕಂಚಿನ ದೇವ ದೇವತೆಯರ, ಸಂತರ ವಿಗ್ರಹಗಳು ಹಾಗೂ 19 ನೇಯ ಶತಮಾನದ ಮೂರಲ್ ಶೈಲಿಯ ವರ್ಣಚಿತ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಖಿಲ್ಲೆ ವೆಂಕಟರಮಣಸ್ವಾಮಿ ದೇವಾಲಯ : ಈ ದೇವಾಲಯದ ಹಿಂದೆ ರೋಚಕ ವಿಷಯವಿದೆ. ಹೈದರ್ ಅಲಿ ಹಾಗೂ ಟಿಪ್ಪುವಿನ ಪ್ರಭಾವ ಅಧಿಕಗೊಂಡ ಸಮಯದಲ್ಲಿ ಮೈಸೂರು ಅರಸರು ಹೆಚ್ಚುಕಡಿಮೆ ಶಕ್ತಿರಹಿತರಾಗಿದ್ದರು. ಆ ಸಂದರ್ಭದಲ್ಲಿ ಎರಡನೇಯ ಕೃಷ್ಣರಾಜ ಒಡೆಯರ್ ಅವರ ಪತ್ನಿ ಲಕ್ಷಮ್ಮಣ್ಣಿ ಅವರಿಗೆ ಕನಸೊಂದು ಬಿದ್ದು ಅದರ ಪ್ರಕಾರ ಬಲಮುರಿಯಲ್ಲಿರುವ ವೆಂಕಟರಮಣನನ್ನು ಅರಮನೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಮೈಸೂರು ಅರಸರು ಮತ್ತೆ ತಮ್ಮ ಹಿಂದಿನ ವೌಭವ, ಆಡಳಿತ ಪಡೆಯಬಹುದೆಂಬುದಾಗಿತ್ತು.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಭುವನೇಶ್ವರಿ ದೇವಾಲಯ : ಮೈಸೂರು ಅರಮನೆಯ ಆವರಣದಲ್ಲಿ ನಿರ್ಮಿಸಲಾದ ಕೊನೆಯ ಎರಡು ದೇವಾಲಯಗಳ ಪೈಕಿ ಇದೂ ಒಂದು. ಟಿಪ್ಪುವಿನ ಮರಣದ ನಂತರ ಮೈಸೂರು ಸಂಸ್ಥಾನ ಮತ್ತೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಕೊನೆಯದಾಗಿ ನಿರ್ಮಿಸಲಾದ ದೇವಾಲಯಗಳಲ್ಲಿ ಭುವನೇಶ್ವರಿಯ ದೇವಾಲಯವೂ ಒಂದು.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಮಹಾಲಕ್ಷ್ಮಿ ದೇವಾಲಯ : ಲಕ್ಷ್ಮಿ ದೇವಿಗೆ ಮುಡಿಪಾದ ಈ ದೇವಾಲಯವು ಮೈಸೂರು ಅರಮನೆಯ ಆವರಣದಲ್ಲಿ ಚಿಕ್ಕದೇವರಾಜ ಒಡೆಯರ್ ಅವರಿಂದ ನಿರ್ಮಿಸಲಾಗಿದೆ.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಗಾಯಿತ್ರಿದೇವಿ ದೇವಾಲಯ : ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಕೊನೆಯದಾಗಿ ನಿರ್ಮಿಸಲಾದ ಎರಡು ದೇವಾಲಯಗಳಲ್ಲಿ ಇದೂ ಒಂದು. ಒಂದು ಭುವನೇಶ್ವರಿಯ ದೇವಾಲಯವಾದರೆ ಇನ್ನೊಂದು ಗಾಯಿತ್ರಿದೇವಿಯ ದೇವಾಲಯ. ಇನ್ನೊಂದು ವಿಷಯವೆಂದರೆ ಇಲ್ಲಿನ ದೇವಾಲಯಗಳಲ್ಲಿ ಮಹಾಲಕ್ಷ್ಮಿ ಹಾಗೂ ಶ್ವೇತ ವರಾಹಸ್ವಾಮಿ ದೇವಾಲಯಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ದೇವಾಲಯಗಳು ದ್ರಾವಿಡ ಶೈಲಿಯಲ್ಲಿವೆ.

ಚಿತ್ರಕೃಪೆ: Dineshkannambadi

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಕೋಡಿ ಸೋಮೇಶ್ವರ ಸನ್ನಿಧಿ : ಶಿವನಿಗೆ ಮುಡಿಪಾದ ಶ್ರೀ ಕೋಡಿ ಸೋಮೇಶ್ವರ ಸನ್ನಿಧಿಯ ದೇವಾಲಯವನ್ನು ಮೈಸೂರು ಅರಮನೆ ಮೈದಾನದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Tamilyomen

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಆಂಜನೇಯನ ದೇವಸ್ಥಾನ : ಮೈಸೂರು ಅರಮನೆ ಆವರಣದಲ್ಲಿ ಕಾಣಬಹುದಾದ ಮತ್ತೊಂದು ಶಕ್ತಿಶಾಲಿ ದೇವಾಲಯವೆಂದರೆ ಕೋಟೆ ಶ್ರೀ ಆಂಜನೇಯನ ದೇವಸ್ಥಾನ.

ಚಿತ್ರಕೃಪೆ: Tamilyomen

ಮೈಸೂರು ಅರಮನೆ ದೇವಾಲಯಗಳು:

ಮೈಸೂರು ಅರಮನೆ ದೇವಾಲಯಗಳು:

ಮೈಸೂರು, ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು

ಚಿತ್ರಕೃಪೆ: Kiranravikumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X