Search
  • Follow NativePlanet
Share
» »ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಎಸೆದಿದ್ದು ಈ ಬಾವಿಯಲ್ಲಿಯೇ

ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಎಸೆದಿದ್ದು ಈ ಬಾವಿಯಲ್ಲಿಯೇ

ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಆಗಂ ಬಾವಿಯು ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವನ್ನು ಹೊಂದಿದೆ. ಅಶೋಕ ನ ಕಾಲಕ್ಕೆ ಸೇರಿದ ಈ ಬಾವಿಯಲ್ಲಿ ಸಾಕಷ್ಟು ರಹಸ್ಯಗಳಡಗಿವೆ. ಈ ವರೆಗೂ ಈ ಬಾವಿಯ ನೀರು ಆವಿಯಾಗಿಲ್ಲ ಯಾಕೆ? ಅಶೋಕನ ಖಜಾನೆ ಈ ಬಾವಿಯಲ್ಲಿ ಅಡಗಿದೆಯೇ? ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಈ ಬಾವಿಯೊಳಗೆ ಎಸೆದಿದ್ದು ಯಾಕೆ? ಹೀಗೆ ಸಾಕಷ್ಟು ಪ್ರಶ್ನೆಗಳು ಈ ಬಾವಿಯ ಸುತ್ತ ಸುತ್ತುತ್ತವೆ.

ಬ್ರಿಟಿಷ್ ಸಂಶೋಧಕನೊಬ್ಬ ಹುಡುಕಿದ ಬಾವಿ

ಬ್ರಿಟಿಷ್ ಸಂಶೋಧಕನೊಬ್ಬ ಹುಡುಕಿದ ಬಾವಿ

1902-03ರಲ್ಲಿ ಬ್ರಿಟಿಷ್ ಸಂಶೋಧಕ ಲಾರೆನ್ಸ್ ವಾರ್ಡೇಲ್ ಎನ್ನುವವನು ಈ ಬಾವಿಯನ್ನು ಕಂಡುಹಿಡಿದನು. ಆಗ ಅಲ್ಲಿ ಸಾಕಷ್ಟು ಮೂರ್ತಿಗಳು ಕಾಣಸಿಕ್ಕಿದ್ದವು. 750 ವರ್ಷಗಳ ಹಿಂದೆ ಯಾವುದೇ ಮುಸ್ಲಿಂ ಪದಾಧೀಕಾರಿ ಪಾಟ್ನಾ ಪ್ರವೇಶ ಮಾಡಿದ್ರೆ ಮೊದಲಿಗೆ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಈ ಬಾವಿಯಲ್ಲಿ ಎಸೆಯಬೇಕಿತ್ತು. ಯಾವುದೇ ಸ್ಥಳೀಯ ಕಳ್ಳ ಕಳ್ಳತನದಲ್ಲಿ ಸಫಲನಾದರೆ ಕೆಲವು ದೃವ್ಯಗಳನ್ನು ಆ ಬಾವಿಯಲ್ಲಿ ಹಾಕುತ್ತಿದ್ದರು.

ನಮ್ಮ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಿವು, ಇಲ್ಲಿ ವಾಹನ ಚಲಾಯಿಸುವುದು ಡೇಂಜರ್‌!

ಯಾವತ್ತೂ ಬರಿದಾಗೋದಿಲ್ಲ

ಯಾವತ್ತೂ ಬರಿದಾಗೋದಿಲ್ಲ

Nandanupadhyay

ಈ ಬಾವಿಯನ್ನು ಸಾಮ್ರಾಟ ಅಶೋಕನ ಕಾಲದಲ್ಲಿ 272-232 ಇಸವಿಯಲ್ಲಿ ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಈ ಬಾವಿಯ ವಿಶೇಷತೆ ಎಂದರೆ ಎಷ್ಟೇ ಬರಗಾಲ ಬಂದರೂ ಈ ಬಾವಿಯ ನೀರು ಬತ್ತೋದಿಲ್ಲ. ಹಾಗೆಯೇ ಎಷ್ಟೇ ನೆರೆ ಬಂದರೂ ಈ ಬಾವಿಯ ನೀರು ಹೆಚ್ಚುವುದಿಲ್ಲ. ಮಳೆಗಾಲದಲ್ಲಿ ಈ ಬಾವಿಯ ನೀರಿನ ಮಟ್ಟ 1 ರಿಂದ 1.5ಫೀಟ್ ಹೆಚ್ಚುತ್ತದೆ.

ನೀರಿನ ಬಣ್ಣ ಬದಲಾಗುತ್ತದೆ

ನೀರಿನ ಬಣ್ಣ ಬದಲಾಗುತ್ತದೆ

ಇದರ ಇನ್ನೊಂದು ವಿಶೇಷತೆ ಎಂದರೆ ನೀರಿನ ಬಣ್ಣ ಬದಲಾಗುತ್ತಾ ಇರುತ್ತದೆ. ಇನ್ನು ಈ ಬಾವಿಯ ನೀರಿನ ಆಳವನ್ನು ತಿಳಿಯಲು ಸಾಕಷ್ಟು ಪ್ರಯಾಸಗಳು ನಡೆಸಲಾಯಿತು, ಕೊನೆಗೆ ಪುರಾತತ್ವ ವಿಭಾಗವು ಈ ಬಾವಿಯ ಆಳವು 105 ಫೀಟ್ ಎಂದು ನಿರ್ಧರಿಸಿದೆ. ಆ ಕಾಲದಲ್ಲಿ ಬರೀ 20 ಫೀಟ್ ಅಗೆದರೆ ಸಾಕು ನೀರು ದೊರೆಯುತ್ತಿತ್ತು. ಹೀಗಿರುವಾಗ ಇದು ಬಹಳ ಆಳವಾದ ಬಾವಿಯಾಗಿದೆ.

ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?

ಗಂಗಾ ಸಾಗರದಿಂದ ಸೇರಿದೆ

ಗಂಗಾ ಸಾಗರದಿಂದ ಸೇರಿದೆ

Manoj

ಈ ಬಾವಿಯು ಬಗ್ಗೆ ಇನ್ನೊಂದು ಮಾನ್ಯತೆ ಇದೆ, ಅದೇನೆಂದರೆ ಈ ಬಾವಿಯು ಗಂಗಾಸಾರದಿಂದ ಸೇರಿದೆ. ಹಾಗಾಗಿ ಈ ಬಾವಿಯ ನೀರು ಯಾವತ್ತೂ ಆವಿಯಾಗೋದಿಲ್ಲ. ಹಿಂದೊಮ್ಮೆ ಬ್ರಿಟಿಷರ ಊರುಗೋಲು ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿ ಬಿದ್ದಿರುತ್ತದೆ. ಅದು ಹರಿದುಕೊಂಡು ಬಂದು ಪಾಟಲೀಪುತ್ರದ ಬಾವಿಯ ನೀರಿನಲ್ಲಿ ತೇಲಲಾರಂಭಿಸಿತು. ಇಂದಿಗೂ ಆ ಕೋಲನ್ನು ಕೋಲ್ಕತ್ತಾದ ಮ್ಯೂಸಿಯಂನಲ್ಲಿ ಕಾಣಬಹುದು.

ಅಶೋಕನ ಖಜಾನೆ ಇತ್ತು

ಅಶೋಕನ ಖಜಾನೆ ಇತ್ತು

ಈ ಬಾವಿಯ ಒಳಗೆ ಸಾಮ್ರಾಟ ಅಶೋಕನ ಖಜಾನೆ ಇದೆ ಎನ್ನಲಾಗುತ್ತದೆ. ಈ ಬಾವಿಯ ಒಳಗೆ ಸಣ್ಣ ಸಣ್ಣ 9 ಬಾವಿಗಳಿವೆ. ಕೊನೆಯ ಬಾವಿಯಲ್ಲಿ ಅಶೋಕ ಬಚ್ಚಿಟ್ಟಿರುವ ಖಜಾನೆ ಇದೆ ಎನ್ನಲಾಗುತ್ತದೆ. ಅಶೋಕನ ಸಾಮ್ರಾಜ್ಯ ಕುಮಾರಾರದಿಂದ ಜೋಡಲ್ಪಟ್ಟಿದೆ. ಇಲ್ಲಿ ಸುರಂಗದ ಮೂಲಕ ಖಜಾನೆಯನ್ನು ಇಡಲಾಗಿದೆ ಎನ್ನುತ್ತಾರೆ.

ಬೆಂಗಳೂರಿನ ದೊಡ್ಡಮಾಕಳಿಯಲ್ಲಿ ವಾರಾಂತ್ಯ ಕಳೆಯಲು ಏನೇನಿದೆ ಒಮ್ಮೆ ನೋಡಿ


99 ಸಹೋದರ ಹೆಣ ಹಾಕಿದ್ದ ಅಶೋಕ

99 ಸಹೋದರ ಹೆಣ ಹಾಕಿದ್ದ ಅಶೋಕ

ಇನ್ನೊಂದು ಕಥೆಯ ಪ್ರಕಾರ ಅಶೋಕನು ರಾಜನಾಗಲು ತನ್ನ 99 ಸಹೋದರರನ್ನು ಹತ್ಯೆ ಮಾಡಿ ಅವರ ಮೃತದೇಹವನ್ನು ಈ ಬಾವಿಯೊಳಗೆ ಹಾಕಿದ್ದನು. ಅಶೋಕನು ತನ್ನ ವಿರೋಧಿಗಳನ್ನು ಹತ್ಯೆ ಮಾಡಿ ಮೃತದೇಹವನ್ನು ಆ ಬಾವಿಯೊಳಗೆ ಹಾಕುತ್ತಿದ್ದನು ಎನ್ನಲಾಗುತ್ತಿತ್ತು.

ಶೀತಲ ಮಾತೆ ಮಂದಿರ

ಶೀತಲ ಮಾತೆ ಮಂದಿರ

ಈ ಬಾವಿಯ ಸಮೀಪದಲ್ಲೇ ಇದೆ ಶೀತಲ ಮಾತೆಯ ಮಂದಿರ. ಹಾಗಾಗಿ ಮೊದಲು ಈ ಬಾವಿಗೆ ಪೂಜೆ ಸಲ್ಲಿಸಿ ನಂತರ ಶೀತಲಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ಸಾಕಷ್ಟು ಜನರು ಈ ಬಾವಿಯ ಪೂಜೆ ಮಾಡಲು ಆಗಮಿಸುತ್ತಾರೆ. ಈ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಸಂತಾನ ಪ್ರಾಪ್ತಿಯ ಇಚ್ಛೆ ಈಡೇರುತ್ತದೆ ಎನ್ನಲಾಗುತ್ತದೆ.

ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X