Search
  • Follow NativePlanet
Share
» »ಡೇಂಜರ್…ಜುಲೈ ತಿಂಗಳಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡದಿರುವುದೇ ಉತ್ತಮ

ಡೇಂಜರ್…ಜುಲೈ ತಿಂಗಳಿನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡದಿರುವುದೇ ಉತ್ತಮ

ಮಳೆಗಾಲ ಆರಂಭವಾಗಿದೆ. ರಾಜ್ಯ, ದೇಶದ ಕೆಲವು ಪ್ರದೇಶಗಳಲ್ಲಿ ಈ ಸಮಯದಲ್ಲಿ ಭೂ ಕುಸಿತ, ಪ್ರವಾಹ, ಕೆರೆಗಳು ಕೋಡಿ ಬೀಳುವುದು, ರಸ್ತೆಗಳು ಕೊಚ್ಚಿ ಹೋಗುವುದು ಸಾಮಾನ್ಯ. ಹಾಗಾಗಿ ಈ ಅವಧಿಯಲ್ಲಿ ಪ್ರವಾಸ ಹಮ್ಮಿಕೊಳ್ಳುವವರು ಯಾವ ಸ್ಥಳಗಳಿಗೆ ಹೋಗಬೇಕು, ಹೋಗಬಾರದು ಎಂಬುದರ ಕುರಿತು ಎಚ್ಚರದಿಂದಿರಬೇಕು.

ಈಗಾಗಲೇ ಅನೇಕ ಲೇಖನಗಳಲ್ಲಿ ನಾವು ಮಳೆಗಾಲದಲ್ಲಿ ಪ್ರವಾಸ ಪ್ಲಾನ್‌ ಮಾಡುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಎಲ್ಲಿಗೆ ಹೋದರೆ ಉತ್ತಮ ಎಂಬುದರ ಕುರಿತು ಮಾಹಿತಿ ನೀಡಿದ್ದೆವು. ಆದರೆ ಈ ಲೇಖನದಲ್ಲಿ ಜುಲೈ ವೇಳೆ ಯಾವ ಸ್ಥಳಗಳಿಗೆ ಹೋಗಬಾರದೆಂಬ ಮಾಹಿತಿ ನೀಡುತ್ತಿದ್ದೇವೆ...

hill stations

ಕೇದರನಾಥ

ಕೇದಾರನಾಥದಲ್ಲಿ ಮಳೆಗಾಲ ಜುಲೈನಲ್ಲಿ ಪ್ರಾರಂಭವಾಗುತ್ತದೆ. ಹಾಗೆಯೇ ಸೆಪ್ಟೆಂಬರ್ ಮಧ್ಯದಲ್ಲಿ ಕೊನೆಗೊಳ್ಳುತ್ತದೆ. ಕೇದಾರನಾಥದಲ್ಲಿ ಮಳೆಗಾಲದಲ್ಲಿ ವರುಣನ ಆರ್ಭಟ ಹೆಚ್ಚಿದ್ದು, ಭೂಕುಸಿತ ಸಾಮಾನ್ಯ. ಹಾಗಾಗಿ ಈ ಸಮಯದಲ್ಲಿ ಕೇದಾರನಾಥಕ್ಕೆ ಭೇಟಿ ನೀಡುವುದು ಸೂಕ್ತವಲ್ಲ. 2013 ರ ಪ್ರವಾಹವನ್ನು ಪರಿಗಣಿಸಿ ಇದನ್ನು ಪ್ರವಾಹ ಪೀಡಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮಾನ್ಸೂನ್ ಸಮಯದಲ್ಲಿ ದೇವಾಲಯವನ್ನು ಮುಚ್ಚಲಾಗುತ್ತದೆ. ಕೇದಾರನಾಥಕ್ಕೆ ಭೇಟಿ ನೀಡಲು ಏಪ್ರಿಲ್ ನಿಂದ ಜೂನ್ ಅತ್ಯುತ್ತಮ ಸಮಯವಾಗಿದ್ದು , ಯಾತ್ರಿಕರು ಮತ್ತು ಪ್ರವಾಸಿಗರಿಗೆ ಆಹ್ಲಾದಕರ ಅನುಭವ ನೀಡುತ್ತದೆ.

ಈ ಅವಧಿಯಲ್ಲಿ ತಾಪಮಾನವು 5 ° C ನಿಂದ 20 ° C ವರೆಗೆ ಇರುತ್ತದೆ. ಹಿಮವು ಕರಗಲು ಪ್ರಾರಂಭವಾಗುತ್ತದೆ ಮತ್ತು ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಭಕ್ತರಿಗೆ ಪ್ರವೇಶವಿರುತ್ತದೆ. ಮೇ ತಿಂಗಳೂ ಜನಸಂದಣಿ ಇರುತ್ತದೆ. ಪೂಜ್ಯ ಕೇದಾರನಾಥ ದೇವಾಲಯದ ಬಾಗಿಲುಗಳು ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಆರಂಭದಲ್ಲಿ ತೆರೆದುಕೊಳ್ಳುತ್ತವೆ. ಇದು ತೀರ್ಥಯಾತ್ರೆಯ ಸೀಸನ್ ಆರಂಭವನ್ನು ಸೂಚಿಸುತ್ತದೆ. ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗಿನ ಚಳಿಗಾಲದ ಪೂರ್ವ ತಿಂಗಳುಗಳು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಲು ಮತ್ತೊಂದು ಉತ್ತಮ ಸಮಯ. ‌

kullu-manali

ಕುಲು ಮನಾಲಿ

ಮನಾಲಿಯಲ್ಲಿ ಮಾನ್ಸೂನ್ ತಿಂಗಳುಗಳು ಅಂದರೆ ಜುಲೈನಿಂದ ಸೆಪ್ಟೆಂಬರ್ ಎರಡನೇ ವಾರದವರೆಗೆ ಧಾರಾಕಾರ ಮಳೆಯಾಗುತ್ತದೆ. ಇದು ಆಗಾಗ್ಗೆ ಭೂಕುಸಿತಕ್ಕೆ ಕಾರಣವಾಗಬಹುದು, ಹೀಗಾಗಿ ಹೆಚ್ಚಿನ ರಸ್ತೆಗಳನ್ನು ನಿರ್ಬಂಧಿಸಲಾಗುತ್ತದೆ. ಈ ಸಮಯದಲ್ಲಿ ಹೋಟೆಲ್ ಬೆಲೆಗಳ ಕುಸಿತದ ಆಮಿಷಕ್ಕೆ ಒಳಗಾಗದೆ ಈ ಸ್ಥಳದಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಮಾನ್ಸೂನ್‌ನಲ್ಲಿ ಮನಾಲಿಗೆ ಪ್ರವಾಸ ಆನಂದದಾಯಕವಾಗಿರುವುದಿಲ್ಲ. ಅಕ್ಟೋಬರ್ ನಿಂದ ಜೂನ್ ಮನಾಲಿಗೆ ಭೇಟಿ ನೀಡಲು ಉತ್ತಮ ಸಮಯ. ಪ್ರಕಾಶಮಾನವಾದ, ವರ್ಣರಂಜಿತ ಹೂವುಗಳು ಪೂರ್ಣವಾಗಿ ಅರಳುತ್ತವೆ.

10 ಡಿಗ್ರಿ ಸೆಲ್ಸಿಯಸ್ ಮತ್ತು 25 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದೊಂದಿಗೆ ಆಹ್ಲಾದಕರ ವಾತಾವರಣವಿರುತ್ತದೆ. ಮನಾಲಿಯಲ್ಲಿ ಹಿಮಪಾತ ನೋಡಬೇಕೆನ್ನುವವರಿಗೆ ಡಿಸೆಂಬರ್‌ನಿಂದ ಫೆಬ್ರವರಿ ಅತ್ಯುತ್ತಮ ಸಮಯ. ಮನಾಲಿಯು ತನ್ನ ಹಿಮದಿಂದ ಆವೃತವಾದ ಪರಿಸರದೊಂದಿಗೆ ಸ್ವರ್ಗದಂತೆ ಭಾಸವಾಗುತ್ತದೆ. ಪ್ರವಾಸಿಗರು ವರ್ಷವಿಡೀ ಮನಾಲಿಗೆ ಭೇಟಿ ನೀಡುತ್ತಾರೆ. ಆದರೆ ಮಾನ್ಸೂನ್ (ಜುಲೈ ನಿಂದ ಆಗಸ್ಟ್)ನಲ್ಲಿ ಭೂಕುಸಿತ ಮತ್ತು ಭೂ-ಅಡೆತಡೆಗಳಿಂದಾಗಿ ಸ್ವಲ್ಪ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತದೆ.

ಡಾರ್ಜಿಲಿಂಗ್

ಮಳೆಗಾಲದ ನಾಲ್ಕು ತಿಂಗಳಲ್ಲಿ 93-96% ಆರ್ದ್ರತೆ ಇರುತ್ತದೆ. ಇದು ಅತ್ಯಂತ ಅನಾನುಕೂಲವಾದ ಸಮಯವೆಂದೇ ಹೇಳಬಹುದು. ಭೂಕುಸಿತದ ಸಾಧ್ಯತೆಗಳೂ ಹೆಚ್ಚಿವೆ. ತಾಪಮಾನವು 15 ° C ಮತ್ತು 20 ° C ನಡುವೆ ಇರುತ್ತದೆ. ಭಾರೀ ಮಳೆಯಿಂದ ಕೆಲವು ಪ್ರವಾಸಿ ಚಟುವಟಿಕೆಗಳನ್ನು ನಿಲ್ಲಿಸಲಾಗುತ್ತದೆ. ಟಾಯ್‌ ಟ್ರೇನ್ ಮತ್ತು ಕೇಬಲ್ ಕಾರ್ ಸವಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು, ಆದರೆ ಪಟ್ಟಣವು ತುಂತುರು ಮಳೆಯಲ್ಲಿ ಸುಂದರವಾಗಿ ಕಾಣುತ್ತದೆ. ಹಸಿರು ತೋಟಗಳು ಮಳೆಯಲ್ಲಿ ಅದ್ಭುತವಾಗಿ ಕಾಣುತ್ತವೆ. ಮಂಜುಗಡ್ಡೆಯಿಂದ ಕೂಡಿದ ರಸ್ತೆಗಳು, ಬೀದಿಗಳು ಪಟ್ಟಣವು ನಿಜವೋ ವರ್ಣಚಿತ್ರವೋ ಎಂಬಂತೆ ಭಾಸವಾಗುತ್ತದೆ. ಇದು ಉದಯೋನ್ಮುಖ ಛಾಯಾಗ್ರಾಹಕರಿಗೆ ಸೂಕ್ತ ಸ್ಥಳವಾಗಿದ್ದು, ಈ ಸುಂದರವಾದ ಪಟ್ಟಣದಲ್ಲಿ ನಿಮ್ಮ ಛಾಯಾಗ್ರಹಣ ಕೌಶಲವನ್ನು ಪರೀಕ್ಷಿಸಿಕೊಳ್ಳಬಹುದು.

haridwar temple

ಹರಿದ್ವಾರ

ಜುಲೈ ತಿಂಗಳ ಆಗಮನವು ಹರಿದ್ವಾರದ ಹವಾಮಾನದ ಮಾದರಿಯಲ್ಲಿ ಬದಲಾವಣೆಯನ್ನು ತರುತ್ತದೆ. ಮಳೆ ಪರಿಸರವನ್ನು ರಿಫ್ರೆಶ್ ಮಾಡುತ್ತಲೇ ಇರುತ್ತದೆ. ಈ ಸಮಯದಲ್ಲಿ ನೀವು ವಸತಿ ಮತ್ತು ಪ್ರವಾಸ ಪ್ಯಾಕೇಜ್‌ಗಳಲ್ಲಿ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಯ ಡೀಲ್‌ಗಳನ್ನು ಪಡೆಯಬಹುದು. ಆದರೆ ಆಗಸ್ಟ್‌ನಲ್ಲಿ ದಟ್ಟ ಕಪ್ಪು ಮೋಡಗಳು ಆಕಾಶದಲ್ಲಿ ಪ್ರಾಬಲ್ಯ ಸಾಧಿಸುತ್ತವೆ ಎಂಬುದನ್ನು ನೆನಪಿಡಿ. ಇದರಿಂದಾಗಿ ಪವಿತ್ರ ಭೂಮಿ ಭಾರೀ ಮಳೆಯಿಂದ ಕೂಡಿರುತ್ತದೆ. ಮಳೆಯು ವಾತಾವರಣಕ್ಕೆ ಪ್ರಶಾಂತವಾದ ಸ್ಪರ್ಶವನ್ನು ನೀಡುತ್ತದೆ. ಮಳೆ ಪ್ರಿಯರಿಗೆ ಬೆಸ್ಟ್‌ ಅನಿಸಿದರೂ ಹೊರಾಂಗಣದಲ್ಲಿ ಪ್ರಯಾಣಿಸುವಾಗ ಮಳೆಯಿಂದ ಎಚ್ಚರದಿಂದಿರುವುದು ಅವಶ್ಯಕ.

shimlasunset

ಶಿಮ್ಲಾ

ಜುಲೈ ಮತ್ತು ಸೆಪ್ಟೆಂಬರ್ ನಡುವೆ ಶಿಮ್ಲಾ ಮಳೆಯಿಂದ ತೋಯ್ದು ಹೋಗಿರುತ್ತದೆ. ಕೆಲವೊಮ್ಮೆ ಮಳೆ ಅಕ್ಟೋಬರ್ ಮಧ್ಯದವರೆಗೆ ವಿಸ್ತರಣೆಯಾಗುತ್ತದೆ. ಈ ಪ್ರದೇಶವು ಭಾರೀ ಮಳೆಯನ್ನು ಪಡೆಯುತ್ತದೆ. ಹಾಗಾಗಿ ಇದು ಪ್ರವಾಸೋದ್ಯಮಕ್ಕೆ ಸರಿಯಾದ ಸಮಯವಲ್ಲ. ಏಕೆಂದರೆ ಇಲ್ಲಿ ಆಗಾಗ್ಗೆ ಭೂಕುಸಿತ ಸಂಭವಿಸುತ್ತದೆ. ಆದ್ದರಿಂದ, ಇದು ಆಫ್‌ಸೀಸನ್ ಎಂದು ಪರಿಗಣಿಸಲಾಗುತ್ತದೆ. ಕಡಿಮೆ ಬಜೆಟ್‌ನಲ್ಲಿ ಶಿಮ್ಲಾವನ್ನು ಅನ್ವೇಷಿಸಲು ಬಯಸುವ, ರಿಸ್ಕ್‌ ಎದುರಿಸುವ ಪ್ರವಾಸಿಗರಿಗೆ ಇದು ಸೂಕ್ತ ಸಮಯವೆಂದು ಹೇಳಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+