Search
  • Follow NativePlanet
Share
» »ಇಲ್ಲಿಗೆಲ್ಲಾ ಹೋಗಿ ಬರಲು ಬರೀ ಎರಡೇ ದಿನ ರಜೆ ಸಾಕು!

ಇಲ್ಲಿಗೆಲ್ಲಾ ಹೋಗಿ ಬರಲು ಬರೀ ಎರಡೇ ದಿನ ರಜೆ ಸಾಕು!

ಹೆಚ್ಚಿನವರಿಗೆ ರಜೆ ಸಿಗೋದು ಭಾನುವಾರ, ಇನ್ನೂ ಕೆಲವರಿಗೆ ಶನಿವಾರ, ಭಾನುವಾರ ಎರಡೂ ದಿನ ರಜೆ ಇರುತ್ತದೆ. ಆ ಎರಡು ದಿನದಲ್ಲಿ ಎಲ್ಲಿಗೆ ಹೋಗೋದು, ಹೇಗೆ ಕಳೆಯೋದು ಎನ್ನುವ ಆಲೋಚನೆ ಬಹುತೇಕರಲ್ಲಿ ಇರುತ್ತದೆ. ಹಾಗಾಂತ ದೂರದ ಊರುಗಳಿಗೆ ಹೋಗುವಹಾಗಿಲ್ಲ. ಬರೀ ಎರಡು ದಿನದಲ್ಲಿ ಯಾವೆಲ್ಲಾ ಸ್ಥಳಗಳಿಗೆ ಹೋಗಬಹುದು ಆ ಸ್ಥಳಗಳು ಯಾವುವು ಎನ್ನುವ ಡೀಟೆಲ್ಸ್ ಇಲ್ಲಿದೆ.

ಕೈಯಲ್ಲಿ ಕಾಸಿಲ್ವಾ? ಕಡಿಮೆ ಬಜೆಟ್‌ನಲ್ಲಿ ಎಲ್ಲೆಲ್ಲಾ ತಿರುಗಾಡಬಹುದು ಗೊತ್ತಾ?

ಹಂಪಿ

ಹಂಪಿ

ಬೆಂಗಳೂರಿನಿಂದ 367 ಕಿ,ಮೀ ದೂರದಲ್ಲಿದೆ. ಯುನೆಸ್ಕೋದ ವಿಶ್ವ ಪಾರಂಪರೆಯ ಪಟ್ಟಿಯಲ್ಲಿ ಹಂಪಿ ಸೇರಿದೆ. ಐತಿಹಾಸಿಕ ಹಿನ್ನೆಯಯನ್ನು ಹೊಂದಿರುವ ಹಂಪಿಯು ಎರಡು ದಿನಗಳ ಮಟ್ಟಿಗೆ ತಿರುಗಾಡಿ ಬರಲು ಉತ್ತಮ ಸ್ಥಳವಾಗಿದೆ.
ತಲುಪುವುದು ಹೇಗೆ?
ಚಿತ್ರದುರ್ಗ ಎನ್‌ಹೆಚ್ 4 ಹೈವೇಯಲ್ಲಿ ಹೋಗಿ ಹೊಸಪೇಟೆ ತಲುಪಿ ನಂತರ ಅಲ್ಲಿದ್ದ 13 ಕಿ.ಮೀ ದೂರದಲ್ಲಿ ಹಂಪಿ ಇದೆ. ಬೆಟ್ಟ ಹತ್ತುವುದು, ಪ್ರಕೃತಿ ಸೌಂದರ್ಯವನ್ನು ನೋಡಬಹುದು.

ಊಟಿ

ಊಟಿ

PC:Sukigreen
ಬೆಂಗಳೂರಿನಿಂದ 266ಕಿ.ಮೀ ದೂರದಲ್ಲಿದೆ. ಇದನ್ನು ಕ್ವೀನ್ ಆಫ್ ಹಿಲ್ಸ್ ಎನ್ನುತ್ತಾರೆ. ಇಲ್ಲಿ ಬೊಟಾನಿಕಲ್ ಗಾರ್ಡನ್, ಡಿಯರ್ ಪಾರ್ಕ್ ಹಾಗೂ ಮ್ಯೂಸಿಯಂನ್ನೂ ನೋಡಬಹುದು. ಊಟಿಯ ವಾತಾವರಣ ಯಾರಿಗಾದರೂ ಇಷ್ಟವಾಗಲಾರದೆ ಇರಲಾರದು. ಎರಡು ದಿನಗಳ ಮಟ್ಟಿಗೆ ಊಟಿ ಫರ್‌ಫೆಕ್ಟ್ ಸ್ಥಳವಾಗಿದೆ.
ಬೆಂಗಳೂರಿನಿಂದ ಊಟಿಗೆ ಹೋಗುವುದಾದರೆ ಮೈಸೂರಾಗಿಯೂ ಬರಬಹುದು. ಹಾಗೆಯೇ ಚಾಮರಾಜನಗರವಾಗಿಯೂ ಬರಬಹುದು.

ಪಾಂಡಿಚೇರಿ

ಪಾಂಡಿಚೇರಿ

PC:Sivakumar M
ಬೆಂಗಳೂರಿನಿಂದ 305 ಕಿ.ಮೀ ದೂರದಲ್ಲಿ ಪಾಂಡಿಚೇರಿ ಇದೆ. ತಮಿಳು ಮತ್ತು ಫ್ರೆಂಚ್ ಸಮಾಜಗಳ ಅದ್ಭುತ ಸಂಯೋಜನೆಯೊಂದಿಗೆ ಈ ಪ್ರಾಂತ್ಯವು ಶಾಂತವಾಗಿದೆ. ಅಲ್ಲಿ ಅರೋಬಿಂದೋ ಆಶ್ರಮವಿದೆ. ಅದಕ್ಕೂ ಭೇಟಿ ನೀಡಬಹುದು.
ತಲುಪುವುದು ಹೇಗೆ?
ಬೆಂಗಳೂರಿನಿಂದ ಪಾಂಡಿಚೇರಿಗೆ ಟ್ಯಾಕ್ಸಿ ಮಾಡಿಕೊಂಡೂ ಹೋಗಬಹುದು. ಇಲ್ಲಿ ನೀವು ಸ್ಕೂಬಾ ಡೈವಿಂಗ್‌ನ ಮಜಾ ಪಡೆಯಬಹುದು.

 ಮಂಗಳೂರು

ಮಂಗಳೂರು

PC:Premnath Kudva
ಬೆಂಗಳೂರು ಮಂಗಳೂರಿನಿಂದ 355ಕಿ.ಮೀ ದೂರದಲ್ಲಿದೆ. ಬಂದರುಗಳ ನಗರವಾಗಿರುವ ಮಂಗಳೂರು ಬೀಚ್‌ಗಳಿಂದ ಕೂಡಿದ್ದು, ಟ್ರಕ್ಕಿಂಗ್ ಕೂಡಾ ಮಾಡಬಹುದಾಗಿದೆ. ಬಸ್‌ ಮೂಲಕ ಮಂಗಳೂರು ತಲುಪುವುದು ಬೆಸ್ಟ್. ಮಂಗಳೂರಿನಲ್ಲಿ ಬೀಚ್‌ನ ಮಜಾ ಪಡೆಯುವುದರ ಜೊತೆಗೆ ಸೀ ಫುಡ್‌ನ್ನೂ ಸವಿಯಬಹುದು.

 ಕಬಿನಿ

ಕಬಿನಿ

PC:Raju Venkatesha Murthy

ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿದೆ ಕಬಿನಿ. ನಿಸರ್ಗ ಸೌಂದರ್ಯವನ್ನು ಇಷ್ಟಪಡುವವರಿಗೆ ಕಬಿನಿ ವಾರಾಂತ್ಯ ಕಳೆಯಲು ಉತ್ತಮ ಸ್ಥಳವಾಗಿದೆ. ಇಲ್ಲಿ ಬ್ಯಾಕ್‌ವಾಟರ್ ಕೂಡಾ ಇದೆ. ಎರಡು ದಿನದ ಮಟ್ಟಿಗೆ ಸಿಟಿ ಲೈಫ್‌ನಿಂದ ಬ್ರೇಕ್ ಪಡೆಯಲು ಇಲ್ಲಿಗೆ ಬರಬಹುದು. ಇಲ್ಲಿಗೆ ಬಸ್ ಮೂಲಕನೂ ಹೋಗಬಹುದು. ರೈಲ್ ಮೂಲಕಾನೂ ತಲುಪಬಹುದು.

ಬಂಡೀಪುರ

ಬಂಡೀಪುರ

PC:Praveenpb
ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿ ಬಂಡೀಪುರ ಅಭಯಾರಣ್ಯವಿದೆ. ಬಂಡಿಪುರ ರಾಷ್ಟ್ರೀಯ ಅಭಯಾರಣ್ಯ, ನಿಮಗೆ ಕಾಡಿನಲ್ಲಿ ಸಫಾರಿ ಮಾಡಬೇಕೆಂದಿದ್ದರೆ ಬಂಡೀಪುರಕ್ಕೆ ಬನ್ನಿ. ಅಳಿವಿನಂಚಿನಲ್ಲಿರುಬವ ಕೆಲವು ಪ್ರಾಣಿಗಳೂ ಇಲ್ಲಿ ಕಾಣಸಿಗುತ್ತದೆ.

 ಕೂರ್ಗ್

ಕೂರ್ಗ್

PC:Emmadi Manasvi

ಭಾರತದಲ್ಲಿರುವ ಪ್ರಸಿದ್ದ ಹಿಲ್ ಸ್ಟೇಶನ್‌ಗಳಲ್ಲಿ ಕೂರ್ಗ್ ಕೂಡಾ ಒಂದು. ಬೆಂಗಳೂರಿನಿಂದ 260 ಕಿ.ಮೀ ದೂರದಲ್ಲಿ ಕೊಡಗು ಇದೆ. ಮೋಡಗಳಿಂದ ಆವರಿಸಲ್ಪಟ್ಟ ಬೆಟ್ಟಗಳು, ಕಾಫಿ ತೋಟ, ಎಸ್ಟೆಟ್‌ಗಳು ಬೆಂಗಳೂರಿನಿಂದ 2ದಿನಗಳ ರಜೆ ಕಳೆಯಲು ಸೂಕ್ತವಾಗಿದೆ.

More News

Read more about: bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+