Search
  • Follow NativePlanet
Share
» »ಪುರಿ ಜಗನ್ನಾಥ ಸ್ವಾಮಿಯ ದೇವಾಲಯದ ಬಗ್ಗೆ ನಿಮಗೆ ತಿಳಿಯದ 12 ವಿಷಯಗಳು

ಪುರಿ ಜಗನ್ನಾಥ ಸ್ವಾಮಿಯ ದೇವಾಲಯದ ಬಗ್ಗೆ ನಿಮಗೆ ತಿಳಿಯದ 12 ವಿಷಯಗಳು

ಪುರಿ ಜಗನ್ನಾಥ ದೇವಾಲಯವು ಹಿಂದೂಗಳಿಗೆ ಪವಿತ್ರ ತೀರ್ಥಕ್ಷೇತ್ರವಾಗಿದೆ. ಈ ದೇವಾಲಯವು ಒಡಿಶಾ ರಾಜ್ಯದ ಪುರಿಯಲ್ಲಿದೆ. ಈ ನಗರದ ಅತ್ಯಂತ ಪ್ರಸಿದ್ದಿಯ ಪುಣ್ಯ ಕ್ಷೇತ್ರ ಎಂದರೆ ಅದು ಜಗನ್ನಾಥನ ದೇವಾಲಯ. ಈ ಪುಣ್ಯ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಸಾ

ಪುರಿ ಜಗನ್ನಾಥ ದೇವಾಲಯವು ಹಿಂದೂಗಳಿಗೆ ಪವಿತ್ರ ತೀರ್ಥಕ್ಷೇತ್ರವಾಗಿದೆ. ಈ ದೇವಾಲಯವು ಒಡಿಶಾ ರಾಜ್ಯದ ಪುರಿಯಲ್ಲಿದೆ. ಈ ನಗರದ ಅತ್ಯಂತ ಪ್ರಸಿದ್ದಿಯ ಪುಣ್ಯ ಕ್ಷೇತ್ರ ಎಂದರೆ ಅದು ಜಗನ್ನಾಥನ ದೇವಾಲಯ. ಈ ಪುಣ್ಯ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಪುಣ್ಯ ಕ್ಷೇತ್ರದ ದರ್ಶನ ಪಡೆಯದಿದ್ದರೆ ತೀರ್ಥಯಾತ್ರೆಗಳು ಪೂರ್ಣಗೊಳ್ಳುವುದಿಲ್ಲ ಎಂಬ ಪ್ರತೀತಿ ಇದೆ. ಈ ದೇವಾಲಯದಲ್ಲಿ ವಿಷೇಶವಾಗಿ ಶ್ರೀ ಕೃಷ್ಣ ಮತ್ತು ವಿಷ್ಣುವನ್ನು ಆರಾಧಿಸಲಾಗುತ್ತದೆ. ಈ ದೇವಾಲಯಕ್ಕೆ ಮಧ್ವಾಚಾರ್ಯರು ಸೇರಿದಂತೆ ಹೆಸರಾಂತ ಆಚಾರ್ಯರೆಲ್ಲಾ ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಪ್ರಸಿದ್ದ ದೇವಾಲಯಗಳಾದ ರಾಮೇಶ್ವರಂ, ಬದರಿನಾಥ, ಪುರಿ ಮತ್ತು ದ್ವಾರಕ ದೇವಾಲಯಗಳ ಪೈಕಿ ಈ ಜಗನ್ನಾಥ ದೇವಾಲಯ ಒಂದಾಗಿದೆ. ಪ್ರಸುತ್ತ ಲೇಖನದಲ್ಲಿ ಈ ಪುರಿ ಜಗನ್ನಾಥನ ದೇವಾಲಯದ ಬಗ್ಗೆ ನಿಮಗೆ ತಿಳಿಯದ ಕೆಲವು ವಿಷಯಗಳ ಬಗ್ಗೆ ತಿಳಿಯಿರಿ.

1. ಜಗನ್ನಾಥನ ಮೂರ್ತಿ

1. ಜಗನ್ನಾಥನ ಮೂರ್ತಿ

ಪ್ರತಿಯೊಂದು ದೇವಾಲಯದ ದೇವತೆಗಳ ವಿಗ್ರಹವನ್ನು ಕಲ್ಲು ಅಥವಾ ಲೋಹಗಳಿಂದ ಮಾಡಲಾಗುವುದು ಸಾಮಾನ್ಯ ಆದರೆ ಈ ಜಗನ್ನಾಥನನ್ನು ಮರದಿಂದ ಮಾಡಿರುವುದಾಗಿದೆ.
PC:BOMBMAN

2.ಧ್ವಜ

2.ಧ್ವಜ

ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದೆ. ಈ ಧ್ವಜವು ಯಾವಾಗಲೂ ದೇವಾಲಯದ ಹಿಂಭಾಗದಲ್ಲಿಯೇ ಹಾರಾಡುವುದು ಒಂದು ವಿಶೇಷ. ಈ ದೇಗುಲದ ಪೂಜಾರಿಗಳು ದಿನನಿತ್ಯ ಗೋಪುರದ ಮೇಲ್ಭಾಗದಲ್ಲಿರುವ ಧ್ವಜವನ್ನು ಬದಲಿಸುತ್ತಿರುತ್ತಾರೆ. ಆದರೂ ಕೂಡ ಈ ಧ್ವಜ ಎಂದಿಗೂ ತನ್ನ ದಿಕ್ಕನ್ನು ಬದಲಾಯಿಸಿಲ್ಲ.
PC:Amartyabag

3.ಸುದರ್ಶನ ಚಕ್ರ

3.ಸುದರ್ಶನ ಚಕ್ರ

ಜಗನ್ನಾಥನ ದೇವಾಲಯದ ಗೋಪುರದ ಮೇಲೆ ಒಂದು ದಿವ್ಯವಾದ ಸುದರ್ಶನ ಚಕ್ರವಿದೆ. ಈ ಚಕ್ರವು ಸುಮಾರು 20 ಅಡಿಯಿಂದ ಎತ್ತರದಲ್ಲಿದೆ. ಇಂತಹ ಸುದರ್ಶನ ಚಕ್ರದ ಚಿಹ್ನೆಯನ್ನು ನಗರದ ಹಲವಾರು ಕಡೆಗಳಲ್ಲಿ ಕಾಣಬಹುದು. ಕಾರಣ ಈ ಚಕ್ರವಿದ್ದರೆ ದುಷ್ಟ ಶಕ್ತಿಗಳು ಸುಳಿಯುವುದಿಲ್ಲ ಎಂಬುದು ಜನರ ನಂಬಿಕೆಯಾಗಿದೆ.
PC:Abhishek Barua

4.ಚಕ್ರದ ಇತಿಹಾಸ

4.ಚಕ್ರದ ಇತಿಹಾಸ

ಸಾಮಾನ್ಯವಾಗಿ ಈ ಚಕ್ರದ ಇತಿಹಾಸವು ಯಾರಿಗೂ ತಿಳಿದಿಲ್ಲ. ಈ ಚಕ್ರವು ಅತ್ಯಂತ ಭಾರವಾಗಿದ್ದು ಗೋಪುರದ ಮೇಲ್ಭಾಗದಲ್ಲಿ ಕಟ್ಟಿಸಿದ ಇಂಜಿನಿಯರ್‍ಗಳು ಹೇಗೆ ಸ್ಥಾಪನೆ ಮಾಡಿದರು ಎಂಬುದು ಈಗಲೂ ಅದು ವಿಸ್ಮಯವಾಗಿಯೇ ಉಳಿದಿದೆ. ಈ ಚಕ್ರವನ್ನು 2000 ವರ್ಷಗಳ ಹಿಂದೆ ಸ್ಥಾಪನೆ ಮಾಡಿದರು ಎನ್ನಲಾಗಿದೆ.
PC:Amartyabag

5.ಗಾಳಿ ಬೀಸುವಿಕೆ

5.ಗಾಳಿ ಬೀಸುವಿಕೆ

ಪ್ರಂಪಚದ ಯಾವುದೇ ಸ್ಥಳದಲ್ಲಿಯೂ ಗಾಳಿಯು ಹಿಂಭಾಗದಿಂದ ಬೀಸುತ್ತದೆ. ಆದರೆ ಈ ಪೂರಿ ಪುಣ್ಯ ಸ್ಥಳದಲ್ಲಿ ಗಾಳಿಯು ಮುಂಭಾಗದಿಂದ ಬೀಸುತ್ತದೆ.
PC:Krupasindhu Muduli

6.ಹಾರಾಡುವುದಿಲ್ಲ

6.ಹಾರಾಡುವುದಿಲ್ಲ

ಆಶ್ಚರ್ಯವೆಂದರೆ ಈ ಪುರಿ ಜಗನ್ನಾಥನಿರುವ ಆಲಯದಲ್ಲಿ ಯಾವ ಪಕ್ಷಿಯಾಗಲಿ, ವಿಮಾನವಾಗಲಿ ಹಾರಾಡುವುದಿಲ್ಲ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕವಾದ ಕಾರಣವನ್ನು ಇದುವರೆವಿಗೂ ಯಾರೂ ಕಂಡು ಹಿಡಿದಿಲ್ಲ ಎಂಬುದು ಮತ್ತೊಂದು ವಿಶೇಷ.
PC:ddasedEn

7 ಗೋಪುರದ ನೆರಳು

7 ಗೋಪುರದ ನೆರಳು

ಈ ದೇವಾಲಯವನ್ನು ನಿರ್ಮಿಸಿದ ಇಂಜಿನಿಯರ್‍ಗಳು ದೇವಾಲಯದ ಗೋಪುರದ ನೆರಳು ಎಂದಿಗೂ ಕಾಣಿಸುವುದಿಲ್ಲ ಇದು ಆಶ್ಚರ್ಯವಾದರೂ ಸತ್ಯ.
PC:RJ Rituraj

8.ಪ್ರಸಾದದ ರಹಸ್ಯ

8.ಪ್ರಸಾದದ ರಹಸ್ಯ

ಈ ದೇವಾಲಯದಲ್ಲಿ ಲಕ್ಷಾಂತರ ಭಕ್ತರು ದಿನನಿತ್ಯ ಭೇಟಿ ಕೊಡುತ್ತಿರುತ್ತಾರೆ. ದೇವಾಲಯದ ಪ್ರಸಾದದ ಕೊರತೆ ಎದುರಾಗಿಲ್ಲ ಹಾಗೂ ವ್ಯರ್ಥವಾಗಿಲ್ಲ.
PC:Bpkp

10.ಸಮುದ್ರ ರಹಸ್ಯ

10.ಸಮುದ್ರ ರಹಸ್ಯ

ಈ ದೇವಾಲಯದ ಸಮೀಪದಲ್ಲಿ ಒಂದು ಕಡಲ ತೀರವಿದೆ. ದೇವಾಲಯದ ಮುಖ್ಯ ದ್ವಾರಕ್ಕೆ ಬಂದಾಗ ಅಲ್ಲಿ ಸ್ಪಷ್ಟವಾಗಿ ಆ ನದಿಯ ಜುಳು ಜುಳು ಶಬ್ದವನ್ನು ಕೇಳಿಸಿಕೊಳ್ಳಬಹುದು. ಇವೆಲ್ಲವೂ ಜಗನ್ನಾಥನ ಮಹಿಮೆಯಲ್ಲದೇ ಮತ್ತೇನು?. ದೇವಾಲಯದ ಒಳಭಾಗದಲ್ಲಿ ಸ್ವಲ್ಪ ದೂರ ನಡೆದು ಮತ್ತೆ ಮರಳಿ ದೌರದ ಹತ್ತಿರ ಬಂದರೆ ಸಮುದ್ರದ ಶಬ್ದ ನಿಮಗೆ ಕೇಳಿಸುವುದಿಲ್ಲ. ಬದಲಾಗಿ ಮತ್ತೊಮ್ಮೆ ದೇವಾಲಯ ಹೊರಭಾಗದಿಂದ ಒಳಗೆ ಪ್ರವೇಶ ಮಾಡುವಾಗ ಮಾತ್ರ ಈ ಶಬ್ದ ನಿಮಗೆ ಕೇಳಿಸುತ್ತದೆ.
PC:Radeeh

10.ಸ್ವಾಧಿಷ್ಟವಾದ ಪ್ರಸಾದ

10.ಸ್ವಾಧಿಷ್ಟವಾದ ಪ್ರಸಾದ

ಜಗನ್ನಾಥನ ದೇವಾಲಯದಲ್ಲಿ ಪ್ರಸಾದವನ್ನು ಕಟ್ಟಿಗೆಯನ್ನು ಬಳಸಿ ಉಲೆಯಲ್ಲಿ ಮಡಿಕೆಯಿಂದ ತಯಾರಿಸಲಾಗುತ್ತದೆ. 7 ಮಡಿಕೆಗಳಿಂದ ಪ್ರಸಾದವನ್ನು ತಯಾರಿಸಲಾಗುತ್ತದೆ.
PC:Bpkp

11. ದೇವಾಲಯದ ನಿರ್ಮಾಣ

11. ದೇವಾಲಯದ ನಿರ್ಮಾಣ

ಈಗ ಇರುವ ದೇವಾಲಯವು ಹಿಂದಿನ ಚೋಳಕಾಲದಲ್ಲಿ ಬೇರೆಯೇ ರೀತಿ ಇತ್ತು. ಪುರಿಯಲ್ಲಿ ಜಗನ್ನಾಥ ದೇವಾಲಯವನ್ನು ಮೊದಲು ಸ್ಥಾಪನೆ ಮಾಡಿದವರು ಚೋಳರ ಅರಸರು, ಮೇಘಾನಂದ ಪಚ್ಚೇರಿ, ಮುಖ ಸಳ, ನಟ ಮಂಟಪ ಇನ್ನು ಹಲವಾರು. ಇದು ಎರಡನೇ ಬಾರಿ ಪುನರ್ ನಿರ್ಮಾಣ ಮಾಡಿರುವುದಾಗಿದೆ.
PC: James Fergusson

12. ದೇವರ ಮೂರ್ತಿ

12. ದೇವರ ಮೂರ್ತಿ

ಪ್ರತಿ ವರ್ಷವು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಯನ್ನು ಬದಲಾಯಿಸಲಾಗುತ್ತದೆ.
PC:Dreamodisha

13.ಸಮೀಪವಿರುವ ಸ್ಥಳಗಳು

13.ಸಮೀಪವಿರುವ ಸ್ಥಳಗಳು

ಪುರಿಯಲ್ಲಿ ಜಗನ್ನಾಥ ಸ್ವಾಮಿಯೇ ಅಲ್ಲದೇ ಸಮೀಪದಲ್ಲಿ ಮಾರ್ಕಂಡೇಶ್ವರ ದೇವಾಲಯ, ಲಕ್ಷ್ಮಿ ದೇವಾಲಯ, ಲೋಕನಾಥ ದೇವಾಲಯ, ಚಿಲಿಕ ಸರೋವರ ಇನ್ನೂ ಹಲವಾರು ಸ್ಥಳಗಳಿಗೆ ನೀವು ಭೇಟಿ ನೀಡಬಹುದು.
PC:RathajatrawpurI

14.ಉತ್ತಮವಾದ ಸಮಯವೆಂದರೆ

14.ಉತ್ತಮವಾದ ಸಮಯವೆಂದರೆ

ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಲು ಉತ್ತಮವಾದ ಸಮಯವೆಂದರೆ ಬೇಸಿಗೆಯ ಕಾಲದಲ್ಲಿ ಮಾರ್ಚ್‍ನಿಂದ ಮೇ, ಚಳಿಗಾಲದಲ್ಲಿ ಜೂನ್ ನಿಂದ ಸೆಪ್ಟೆಂಬರ್, ಮಳೆಗಾಲದಲ್ಲಿ ಅಕ್ಟೋಬರ್‍ನಿಂದ ಫ್ರೆಬ್ರವರಿ.
PC:Scalebelow

15. ಪ್ರವೇಶ ಸಮಯ

15. ಪ್ರವೇಶ ಸಮಯ

ಪ್ರತಿ ದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆ ಈ ಜನ್ನಾಥನ ದರ್ಶನವನ್ನು ಪಡೆಯಬಹುದು.
PC:Ben30ghosh

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+