ತಿರುಮಲ, ತಿರುಪತಿ

ತಿರುಪತಿಗೆ ಅತ್ಯಂತ ಸಮೀಪವಾಗಿರುವ ತಿರುಮಲ ಗುಡ್ಡಗಾಡು ಪ್ರದೇಶ ವ್ಯಾಪ್ತಿಗೆ ಬರುತ್ತದೆ. ಅತ್ಯಂತ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಇಲ್ಲಿದೆ. ಸಮುದ್ರ ಮಟ್ಟದಿಂದ ಈ ದೇವಾಲಯವಿರುವ ಗುಡ್ಡ  3200 ಅಡಿ ಎತ್ತರವಿದ್ದು ಏಳು ಶೃಂಗಗಳನ್ನು ಒಳಗೊಂಡಿದೆ. ಈ ಏಳು ಗುಡ್ಡದ ತುದಿಗಳು ಆದಿಶೇಷನ ಏಳು ಹೆಡೆಯನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕ ಹೆಸರಿದೆ. ನರೇಂದ್ರ, ನೀಲಾದ್ರಿ, ಸಹ್ಯಾದ್ರಿ, ಅಂಜನಾದ್ರಿ, ಗರುಡಾದ್ರಿ, ವೃಷಭಾದ್ರಿ ಹಾಗೂ ವೆಂಕಟಾದ್ರಿ ಇವುಗಳ ಹೆಸರಾಗಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಏಳನೇ ಗುಡ್ಡ ಅಂದರೆ ವೆಂಕಟಾದ್ರಿ ಬೆಟ್ಟದಲ್ಲಿದೆ. ತಿರುಮಲ ಶಬ್ಧವು ಎರಡು ಶಬ್ಧಗಳ ಬೆಸುಗೆಯಾಗಿದೆ. 'ತಿರು' (ದೇವ) ಹಾಗೂ 'ಮಲ' (ಗುಡ್ಡಗಳ ತುತ್ತತುದಿ). ಇದರ ಒಟ್ಟಾರ್ಥ ದೇವರ ಗುಡ್ಡ ಅಥವಾ ದೇವರ ಬೆಟ್ಟ ಎಂದಾಗುತ್ತದೆ. ಇದು ಕೂಡ ದ್ರಾವಿಡ ಭಾಷೆಯ ಶಬ್ಧದ ಅರ್ಥವಾಗಿದೆ.

Please Wait while comments are loading...