Search
 • Follow NativePlanet
Share
ಮುಖಪುಟ » ಸ್ಥಳಗಳು » ತಿರುಪತಿ » ಆಕರ್ಷಣೆಗಳು » ಬಾಲಾಜಿ ದೇವಸ್ಥಾನ

ಬಾಲಾಜಿ ದೇವಸ್ಥಾನ, ತಿರುಪತಿ

7

ಶ್ರೀ ವೆಂಕಟೇಶ್ವರ ದೇವಾಲಯ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಧಾರ್ಮಿಕ ಕೇಂದ್ರ. ಇದು ವೆಂಕಟಾ ತಿರುಮಲ ಗುಡ್ಡದ ಏಳನೆ ತುದಿಯಲ್ಲಿದೆ. ಸ್ವಾಮಿ ಪುಷ್ಕರಣಿ ನದಿಯ ದಕ್ಷಿಣಕ್ಕಿದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮಾದರಿಯಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ. ದೇವಾಲಯದ ಒಟ್ಟು ವ್ಯಾಪ್ತಿ 2.2 ಎಕರೆಯಷ್ಟಿದೆ. ಇಲ್ಲಿ ಎಂಟು ಅಡಿ ಎತ್ತರವಾದ ದೇವ ವೆಂಕಟೇಶ್ವರನ ವಿಗ್ರಹವಿದ್ದು, ಚಿನ್ನದ ಲೇಪನವುಳ್ಳ ಡೋಮ್‌ ('ಆನಂದ ನಿಲಯ ದಿವ್ಯ ವಿಮಾನ' ಎಂದು ಕರೆಯಲಾಗುತ್ತದೆ) ನಿಂದ ಆವೃತವಾಗಿದೆ. ಮೂರ್ತಿಯ ಕಣ್ಣುಗಳ ನಡುವೆ ಕೆಂಪು ಬಣ್ಣದ ತಿಲಕ ಇದೆ. ಈ ತಿಲಕಕ್ಕೆ ಅರೆ ಹರಳು ಹಾಗೂ ಮುತ್ತುಗಳನ್ನು ಅಂಟಿಸಲಾಗಿದೆ. ನಂಬಿಕೆಯ ಪ್ರಕಾರ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಭಕ್ತರು ವೆಂಕಟಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಕಾಣಿಕೆ ಸಲ್ಲಿಸಬೇಕು.ಈ ಮನಮೋಹಕ ದೇವಸ್ಥಾನವು ಪ್ರಪಂಚದಲ್ಲೆ ಶ್ರೀಮಂತಮಯ ಮತ್ತು ಹೆಚ್ಚು ಪ್ರಖ್ಯಾತಿಯ ಯಾತ್ರಾ ಕ್ಷೇತ್ರಗಳಲ್ಲೊಂದಾಗಿದೆ.

ಪ್ರತಿದಿನ ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ 50,000 ದಿಂದ 1 ಲಕ್ಷದವರೆಗೆಂದರೆ ನೀಮಗೆ ಖಂಡಿತವಾಗಿಯೂ ಅಚ್ಚರಿಯಾಗದೆ ಇರಲಾರದು. ಇನ್ನು ಹಬ್ಬ-ಹರಿದಿನ ಮತ್ತು ಬ್ರಹ್ಮೋತ್ಸವಂ ನಂತಹ ವಿಶೇಷ ದಿನ್ಗಳಲ್ಲಂತೂ ಈ ಸಂಖ್ಯೆಯು 500,000 ದ ವರೆಗೂ ತಲುಪುತ್ತದೆ!

ಭಗವಂತನ ಅದ್ಭುತ ವಿಗ್ರಹ

ಈ ದೇವಸ್ಥಾನದಲ್ಲಿರುವ ಭಗವಂತನ ವಿಗ್ರಹವು ಎಲ್ಲ ರೀತಿಯಲ್ಲೂ ಕೌತುಕಭರಿತ ಮತ್ತು ಆಸಕ್ತಿದಾಯಕವಾಗಿದೆ. ದಂತಕಥೆಯ ಪ್ರಕಾರ ಈ ಎಂಟು ಅಡಿ ಎತ್ತರದ ವಿಗ್ರಹವು ಮಾನವ ನಿರ್ಮಿತವಾಗಿರದೆ, ಉದ್ಭವಮೂರ್ತಿಯಾಗಿದೆ. ಎಮರಾಲ್ಡ್ ಹೊಂದಿರುವ ಬಂಗಾರದ ಕಿರೀಟದಿಂದ ಶಿರ ಹಾಗು ದ್ವಿತಿಲಕದಿಂದ ಹಣೆಯನ್ನು ಅಲಂಕರಿಸಲಾಗಿದೆ. ಈ ತಿಲಕವು ಎರಡು ಕಣ್ಣಿನ ಭಾಗಶಃ ಭಾಗವನ್ನು ಆವರಿಸಿದ್ದು, ಕಿವಿಯಲ್ಲಿ ಬಂಗಾರದ ಓಲೆಯನ್ನು ಹಾಕಲಾಗಿದೆ. ಭಗವಂತನ ಬಲಗೈ ಮುತ್ತು-ರತ್ನಗಳ ಚಕ್ರವನ್ನು ಹೊಂದಿದ್ದು, ಎಡಗೈನಲ್ಲಿ ಶಂಖ ಹಿಡಿದಿರುವುದನ್ನು ಕಾಣಬಹುದು. ಅಷ್ಟೆ ಅಲ್ಲ, ಬಂಗಾರದೆಳೆಯ ಸಹಾಯದಿಂದ ಬಂಗಾರದ ಜರಿಯ ಬಟ್ಟೆಯನ್ನು ಭಗವಂತನ ಪ್ರತಿಮೆಗೆ ಹೊದಿಸಲಾಗಿದೆ. ಯಗ್ನ್ಯೋಪವಿತ () ಹೊಂದಿರುವ ವಿಗ್ರಹದ ಎದೆಯ ಬಲ ಭಾಗದಲ್ಲಿ ಶ್ರೀ ಲಕ್ಷ್ಮಿ ದೇವಿ ಹಾಗು ಎಡ ಭಾಗದಲ್ಲಿ ಪದ್ಮಾವತಿ ದೇವಿ ಇರುವುದನ್ನು ಕಾಣಬಹುದಾಗಿದೆ. ವಿಗ್ರಹದ ಪಾದದ ಭಾಗವು ಬಂಗಾರದ ಫ್ರೇಮ್ ನಿಂದ ಅಲಂಕರಿಸಲಾಗಿದೆ.

ಈ ಭಗವಂತನು, ಬಾಲಾಜಿ, ವೆಂಕಟೇಶ್ವರ, ವೆಂಕಟಾಚಲಪತಿ, ಶ್ರೀನಿವಾಸ ಮತ್ತು ಏಡುಕೊಂಡಲವಡ (ಏಳು ಬೆಟ್ಟಗಳ ಒಡೆಯ) ಮುಂತಾದ ಹಲವು ನಾಮಗಳಿಂದ ಪ್ರಖ್ಯಾತನಾಗಿದ್ದಾನೆ. ಇಲ್ಲಿ ಆಚರಿಸಲಾಗುವ ಎರಡು ಪ್ರಮುಖ ಉತ್ಸವಗಳೆಂದರೆ ಬ್ರಹ್ಮೋತ್ಸವಂ ಮತ್ತು ವಸಂತೋತ್ಸವಂ 

One Way
Return
From (Departure City)
To (Destination City)
Depart On
26 Jan,Wed
Return On
27 Jan,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jan,Wed
Check Out
27 Jan,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jan,Wed
Return On
27 Jan,Thu