ಕಪ್ಪಲ್ ಮಾತಾ ಚರ್ಚ್ ಅನ್ನು ಸೆಂಟ್ ಮೇರಿಗಾಗಿ ನಿರ್ಮಿಸಲಾಗಿದೆ. ಇದು ಹಡಗನ್ನು ಹೋಲುವ ಚರ್ಚ್ ಆಗಿದ್ದು, ಸಮುದ್ರ ದಂಡೆಯಲ್ಲಿ ನಿರ್ಮಾಣಗೊಂಡಿದೆ. ಕಡಲಿನ ಕೊರೆತದ ಕಾರಣದಿಂದಾಗಿ ಮೂಲ ಕಪ್ಪಲ್ ಮಾತಾ ಚರ್ಚ್ ನಾಶವಾಯಿತು. ಅದರ ಅವಶೇಷಗಳ ಮೇಲೆ ಈಗಿರುವ ಕಪ್ಪಲ್ ಮಾತಾ ಚರ್ಚನ್ನು 1974ರಲ್ಲಿ ನಿರ್ಮಿಸಲಾಯಿತು. ಈ ಚರ್ಚ್ ಹಲವಾರು ಕಟ್ಟು ಪಾಡುಗಳನ್ನು ಮತ್ತು ನಂಬಿಕೆಗಳಿಗೆ ನೆಲೆ ನೀಡಿದೆ.
ಇಲ್ಲಿನ ಸಂಪ್ರದಾಯದ ಪ್ರಕಾರ ಯುವತಿಯರು ಇಲ್ಲಿನ ಸಂನ್ಯಾಸಿಯರ ಮಠಕ್ಕೆ ಭೇಟಿಕೊಟ್ಟು ಒಂದು ರಾತ್ರಿಯನ್ನು ಕಳೆಯುತ್ತಾರೆ. ನಂಬಿಕೆಗಳ ಪ್ರಕಾರ ಇಲ್ಲಿನ ಸೆಲ್ಪಮಾತಾ ವಿಗ್ರಹದ ಮೇಲೆ ಒಂದು ದೀಪ ಪ್ರತ್ಯಕ್ಷವಾಗಿ ಒಂದು ಗಂಟೆ ಉರಿದಿತ್ತಂತೆ. ಇದರ ಜೊತೆಗೆ ಸೆಪ್ಟೆಂಬರ್ 18ರಂದು ಇಲ್ಲಿನ ಚರ್ಚ್ ನಲ್ಲಿ ಅತ್ಯಂತ ಶ್ರದ್ಧ ಭಕ್ತಿಗಳಿಂದ ಪ್ರಾರ್ಥನೆ ಪೂಜೆಗಳನ್ನು ನೆರವೇರಿಸುತ್ತಾರೆ.
ಈ ಚರ್ಚನ್ನು ಗೋವಾ ಮಿಷನರೀಸ್ ಕೆಲವು ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಈ ಚರ್ಚ್ ತಿರುನೆಲ್ವೇಲಿಯಿಂದ 75 ಕಿ.ಮೀ ದೂರದಲ್ಲಿರುವ ಉವರಿ ಎಂಬ ತೀರ ಪ್ರದೇಶದ ಗ್ರಾಮದಲ್ಲಿ ನೆಲೆಗೊಂಡಿದೆ.


Click it and Unblock the Notifications