ನೀವು ಕರಾವಳಿ ಪ್ರಾಂತ್ಯದ ಕೇರಳಾಗೆ ಪ್ರವಾಸ ಹೊರಟಿದ್ದಾದರೆ, ಅದರ ಮೀನುಗಾರಿಕೆಯ ನಗರಿಯ ಚವಕ್ಕಾಡ್ ಬೀಚ್ ನೋಡದೆ ಇದ್ದಲ್ಲಿ ನಿಮ್ಮ ಪ್ರವಾಸ ಅಪೂರ್ಣವೆಂದೆ ಭಾವಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೆ ನೆಲೆಗೊಂಡಿರುವ ಸುಂದರ ಪಟ್ಟಣ ಚವಕ್ಕಾಡ್. ಇದು ಪಶ್ಚಿಮ ಘಟ್ಟಗಳಿಗೆ ಸಮಾನಾಂತರವಾಗಿ, ಅರಬ್ಬೀ ಸಮುದ್ರದ ಸುಂದರ ದಂಡೆಯಲ್ಲಿ ನೆಲೆಸಿದೆ.
ಇದು ತ್ರಿಶ್ಶೂರಿನಿಂದ ಪಶ್ಚಿಮಕ್ಕೆ 25 ಕಿ.ಮೀ ದೂರದಲ್ಲಿ ನೆಲೆಸಿದೆ. ತನ್ನಲ್ಲಿರುವ ಬೀಚುಗಳಿಗೆ ಈ ಊರು ಪ್ರಸಿದ್ಧವಾಗಿದೆ. ಅವುಗಳಲ್ಲಿ ಚವಕ್ಕಾಡ್ ಬೀಚ್ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇದು ಈ ನಗರದಿಂದ ಒಂದೆರಡು ಕಿ.ಮೀ ದೂರದಲ್ಲಿದೆ. ಚವಕ್ಕಾಡ್ ಬೀಚ್ ಆಧುನೀಕರಣದ ಭರಾಟೆಗೆ ಕಿಂಚಿತ್ತು ಸೋಕದೆ ಉಳಿದಿರುವ ಬೀಚಾಗಿ ಖ್ಯಾತಿಪಡೆದಿದೆ. ತಾಳೆ ಮರಗಳ ಸಾಲನ್ನು ಹೊಂದಿರುವ ಈ ಬೀಚ್ ಸಂಜೆಗಳಲ್ಲಿ ಅತ್ಯಂತ ಮುದನೀಡುವ ತಾಣವಾಗಿ ಹೆಸರು ಪಡೆದಿದೆ. ರೋಮನ್- ಸಿರಿಯನ್ ಪಂಥದ ಅತ್ಯಂತ ಹಳೆಯದಾದ, ಸೆಂಟ್.ಥಾಮಸ್ ರವರಿಂದ ನಿರ್ಮಾಣಗೊಂಡಿರುವ ಪಾಲಯೂರ್ ಚರ್ಚ್ ಇಲ್ಲಿನ ಹೆದ್ದಾರಿಯ ಬದಿಯಲ್ಲಿ ನೆಲೆಗೊಂಡಿದೆ. ಹಲವಾರು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಚವಕ್ಕಾಡ್ ಕಡೆಗೆ ತೆರಳುತ್ತಿರುತ್ತವೆ.


Click it and Unblock the Notifications