ತೌಬಲ್ ನ ಪ್ರಮುಖ ವ್ಯಾಪಾರಿ ಕೇಂದ್ರವಾದ ಸುಗ್ನು, ಸುಗ್ನು-ಇಂಫಾಲ್ ರಾಜ್ಯ ಹೆದ್ದಾರಿ ಮೂಲಕ ಮಣಿಪುರದ ರಾಜಧಾನಿಯೊಂದಿಗೆ ಸಂಪರ್ಕ ಹೊಂದಿದೆ. ಸುಗ್ನು ಇಂಫಾಲ್ ನಿಂದ 74 ಕಿ. ಮೀ ದೂರದಲ್ಲಿದೆ. ಇದಲ್ಲದೆ, ಇಂಫಾಲ್ ನದಿ ತೀರದಲ್ಲಿರುವ ಸುಗ್ನು ಹಚ್ಚಹಸಿರಿನಿಂದ ಸುತ್ತುವರೆದಿದ್ದು, ತೌಬಲ್ ನ ವೈಶಿಷ್ಟ್ಯವಾದ ಗುಡ್ಡಗಳು ಸುಗ್ನುವಿನ ಅಂದವನ್ನು ಇನ್ನೂ ಹೆಚ್ಚಿಸುತ್ತವೆ.
ತೌಬಲ್ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಸುಗ್ನು ಕೂಡ ಸೇರಿದೆ. ಇಲ್ಲಿನ ಇತರ ಕ್ಷೇತ್ರಗಳೆಂದರೆ, ಲಿಲೊಂಗ್,ವನ್ಗ್ಖೆಮ್, ತೌಬಲ್,ಹಇರೋಕ್, ಖಂಗಬೋಕ್, ವನ್ಗ್ಜಿಂಗ್ ತೆಂಥ, ಕಕ್ಚಿಂಗ್, ವಬಗೈ ಮತ್ತು ಹಿಯನ್ಗ್ಲಂ.
ತೌಬಲ್ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಸುಗ್ನುವಿನ ಜನಸಂಖ್ಯೆ, 2001 ರ ಸಮೀಕ್ಷೆ ಪ್ರಕಾರ, 4500 ಆಗಿತ್ತು. ಮೂಲಭೂತ ಸೌಕರ್ಯಗಳಾದ ಪ್ರಾಥಮಿಕ ಶಾಲೆ ಮತ್ತು ಆರೋಗ್ಯ ಕೇಂದ್ರಗಳು ಸುಗ್ನುವಿನಲ್ಲಿವೆ.


Click it and Unblock the Notifications