ಪಡವೇಡು ರೇಣುಕಾಂಬಾ ದೇವಸ್ಥಾನ ಪಡವೇಡು ಪಟ್ಟಣದಲ್ಲಿದೆ ಮತ್ತು ತಿರುವಣ್ಣಾಮಲೈನಿಂದ 7ಕಿಮೀ ದೂರದಲ್ಲಿದೆ. ಶಕ್ತಿ ಸ್ಥಳಗಳಲ್ಲಿ ಇಧು ಒಂದು. ಸೋಮನಾಥಲಿಂಗವು ಇಲ್ಲಿದೆ.
ಐತಿಹ್ಯಗಳ ಪ್ರಕಾರ, ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮ ತನ್ನ ತಂದೆ ಋಷಿ ಜಮದಗ್ನಿಯ ಆದೇಶದಂತೆ ತನ್ನ ತಾಯಿ ರೇಣುದೇವಿಯ ತಲೆಯನ್ನು ಕತ್ತರಿಸುತ್ತಾನೆ. ಮತ್ತು ತಂದೆಯ ಬಳಿ ತಾಯಿಯ್ನು ಬದುಕಿಸಿಕೊಡುವಂತೆ ವರ ಕೇಳುತ್ತಾನೆ. ಅದರಂತೆ ಜಮದಗ್ನಿ ಮಹರ್ಷಿ ತಾಯಿಯ ರುಂಡವನ್ನು ದೇಹಕ್ಕೆ ಜೋಡಿಸುವಂತೆ ಹೇಳುತ್ತಾನೆ. ರೇಣುಕಾದೇವಿಯ ತಲೆಯನ್ನು ತೊಳೆಯುವ ಮಹಿಳೆಯ ದೇಹಕ್ಕೆ ಜೋಡಿಸಿಬಿಡುತ್ತಾನೆ. ಇವಳನ್ನೇ ಇಲ್ಲಿ ಪಡವೇಡು ದೇವಸ್ಥಾನದಲ್ಲಿ ರೇಣುಕಾಂಬಾ ದೇವಿಯಾಗಿ ಪೂಜಿಸಲಾಗುತ್ತದೆ.


Click it and Unblock the Notifications