ನೆಡುಂಗುಣಂ ರಾಮ ದೇವಸ್ಥಾನದಲ್ಲಿ ರಾಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ತಿರುವಣ್ಣಮಲೈನಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನವಿದು. ಸುಮಾರು 700 ವರ್ಷಗಳಷ್ಟು ಹಳೆಯ ದೇವಸ್ಥಾನ ಇದಾಗಿದ್ದು ಹಲವಾರು ದೊರೆಗಳು ಇದರ ನವೀಕರಣ ಮಾಡಿದ್ದಾರೆ.
ದೇವಸ್ಥಾನದ ವಿಶಿಷ್ಟ ರಚನೆಯೆಂದರೆ ಶ್ರೀರಾಮನ ಮೂರ್ತಿಯನ್ನು ಕೂತ ಭಂಗಿಯಲ್ಲಿ ಸ್ಥಾಪಿಸಲಾಗಿದೆ. ಜೊತೆಗೆ ರಾಮನ ಕೈಯ್ಯಲ್ಲಿ ಧನುಸ್ಸು ಇಲ್ಲ. ಈ ಭಂಗಿಯನ್ನು ಯೋಗ ರಾಮನೆಂದು ಕರೆಯುತ್ತಾರೆ. ಮತ್ತು ರಾಮನ ಬಲಗೈ ಹೃದಯಕ್ಕೆ ಹತ್ತಿರದಲ್ಲಿದ್ದು ಗ್ನಾನಮುದ್ರೆ ಎನ್ನುತ್ತಾರೆ. ಶ್ರೀರಾಮನ ಮುಂಭಾಗದಲ್ಲಿ ಹನುಮಾನ ದೇವರು ತಾಳೆಗರಿಯಲ್ಲಿ ಬರೆದ ಬ್ರಹ್ಮ ಸೂತ್ರವನ್ನು ಪಠಿಸುತ್ತಿದ್ದಾರೆ. ಸೀತೆಯ ಪ್ರತಿಮೆಯನ್ನು ಪಕ್ಕದಲ್ಲಿಯೇ ಸಿಂಹ ಪೀಠದಲ್ಲಿ ಕೂರಿಸಲಾಗಿದೆ. ಬೇರೆಲ್ಲಿಯೂ ನೋಡಲು ಸಿಗದ ಭಂಗಿಯಲ್ಲಿ ರಾಮನ ಮೂರ್ತಿಯಿರುವುದರಿಂದ ಭಕ್ತಾಧಿಗಳ ಆಕರ್ಷಣೆ ಹೆಚ್ಚು.