ಮಾಮರಾ ಗುಹೈ ತಿರುವಣ್ಣಾಮಲೈನಲ್ಲಿರುವ ಹಿಂದೂ ದೇವಸ್ಥಾನ. ಮಾಮರ ಗುಹೈನ ಅರ್ಥ ಮಾವಿನ ಹಣ್ಣಿನ ಗುಹೆ ಎಂದು. ದೇವಸ್ಥಾನ ಮೂಲತಃ ಗುಹೆಯಾಗಿದ್ದು ಮಂದಿರದ ರೂಪ ನೀಡಲಾಗಿದೆ. ಹೊರನೋಟಕ್ಕೆ ಗುಹೆಯು ಮಾವಿನ ಮರದಂತೆ ತೋರುತ್ತದೆ. ಸ್ಥಳೀಯ ಹಿಂದೂ ಜನರಿಗೆ ಇದು ಧಾರ್ಮಿಕ ಮಹತ್ವವುಳ್ಳ ಸ್ಥಳ.
ಮಹರ್ಷಿ ರಮಣರು ಇಲ್ಲಿ 6 ವರ್ಷಗಳ ಕಾಲ ಧ್ಯಾನಸ್ಥರಾಗಿದ್ದರು. ಶಿವ ಮತ್ತು ಎರಡು ದೇವತೆಗಳು- ಒಟ್ಟೂ ಮೂರು ಮೂರ್ತಿಗಳು ಗುಹೆಯೊಳಗಿವೆ. ಜಗತ್ತಿನ ಅಧಿಪತಿಯೆಂದು ನಂಬುವ ಶಿವ ದೇವರ ವಿಶ್ವಂತರ ರೂಪವಿದು. ಹೆಣ್ಣು ದೇವತೆಗಳ ಮೂರ್ತಿಗಳು - ರಾಜರಾಜೇಶ್ವರಿ ಮತ್ತು ಅನ್ನಪೂರ್ಣೇಶ್ವರಿಯವರದ್ದು. ಸಿದ್ದ ಗುರುಗಳ ಲಿಂಗಗಳನ್ನು ಮಂದಿರದ ಒಳಗೆ ಪವಿತ್ರಗೊಳಿಸಲಾಗಿದೆ.


Click it and Unblock the Notifications